Horoscope: ದಿನಭವಿಷ್ಯ, ಈ ರಾಶಿಯವರು ಆತ್ಮವಿಶ್ವಾಸದಿಂದ ಇಂದಿನ‌ ದಿನವನ್ನು ಕಳೆಯುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಈ ರಾಶಿಯವರು ಆತ್ಮವಿಶ್ವಾಸದಿಂದ ಇಂದಿನ‌ ದಿನವನ್ನು ಕಳೆಯುವಿರಿ
ರಾಶಿಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Nov 14, 2023 | 12:30 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಮಧ್ಯಾಹ್ನ 03:08 ರಿಂದ 04:34ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:25 ರಿಂದ 10:51ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:43ರ ವರೆಗೆ.

ಸಿಂಹ ರಾಶಿ: ರಪ್ತು ವ್ಯವಹಾರದಲ್ಲಿ ಹಿನ್ನಡೆಯಾಗುವುದು. ನೌಕರರ ಬಗ್ಗೆ ನಿಮಗೆ ನಂಬಿಕೆ ಕಡಿಮೆ ಆಗಲಿದೆ. ಬಾಲಿಶ ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ಹೇಳುವುದು. ಅಪಾತ್ರರಿಗೆ ನಿಮ್ಮ ವಸ್ತುವನ್ನು ಗೊತ್ತಿಲ್ಲದೇ ಕೊಡುವಿರಿ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ಅಪರಿಚಿತರಿಗೆ ಮಾಡಿದ ಸಹಾಯವು ದುರುಪಯೋಗವಾಗುವುದು. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಬರಬಹುದು. ಯಾರನ್ನೂ ಅವಲಂಬಿಸದೇ ನಡೆಯಬೇಕು ಎನ್ನುವ ಹಠವು ಬರುವುದು. ಪ್ರಶಂಸೆಯು ಇಲ್ಲದೇ ಕೆಲಸದಲ್ಲಿ ನಿಮ್ಮ ಆಸಕ್ತಿಯು ಕಡಿಮೆ‌ ಆಗಬಹುದು. ನಿಮ್ಮ ಕಾರ್ಯಕ್ಕೆ ಮಕ್ಕಳಿಂದ ವಿರೋಧವು ಇರಲಿದೆ. ಸ್ಥಳ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಬೇಕಾದೀತು.

ಕನ್ಯಾ ರಾಶಿ: ನಿಮ್ಮ ಆಸೆಯನ್ನು ಪೂರೈಸುವಂತೆ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವಿರಿ.‌ ಹಳೆಯ ಬಯಕೆಯನ್ನು ಇಡೇರಿಸಿಕೊಂಡು ಖುಷಿಪಡುವಿರಿ. ಸಹೋದ್ಯೋಗಿಯೊಬ್ಬನಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ರತ್ನ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ.‌ ನಿಮ್ಮ‌ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು. ಯಾರ ಮೇಲೂ ಹಿಡಿತ ಸಾಧಿಸುವ ಪ್ರಯತ್ನವು ಬೇಡ. ಸಮಯ ಮಾತ್ರ ವ್ಯರ್ಥವಾಗಬಹುದು. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸುವಿರಿ. ಕೃಷಿಕರು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವರು. ನಿಮ್ಮ ನಿರ್ಲಕ್ಷ್ಯದಿಂದ ಭೂಮಿಯ ಸ್ವಲ್ಪ ಭಾಗವನ್ನು ಕಳೆದುಹೋಗಬಹುದು. ಕಾನೂನಿಗೆ ಶರಣಾಗುವಿರಿ.

ತುಲಾ ರಾಶಿ: ಆತ್ಮವಿಶ್ವಾಸದಿಂದ ಇಂದಿನ‌ ದಿನವನ್ನು ಕಳೆಯುವಿರಿ. ಮಾತುಗಳೂ ಅತಿಯಾಗಿರುವುದು. ಅಹಾರದಲ್ಲಿ ಮಿತಿ ಇರಲಿ. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ನೆಮ್ಮದಿ ಇರುವುದು. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸಿದೆ. ನಿಮ್ಮ ಅಸಮಾಧಾನವನ್ನು ಅಸ್ಥಾನದಲ್ಲಿ ಹೊರಹಾಕಿ ಮುಜುಗರಕ್ಕೆ ಒಳಗಾಗುವಿರಿ. ಬಂಧುಗಳಿಂದ ನಿಮಗೆ ಪ್ರಶಂಸೆಯು ಸಿಗುವುದು. ತಂದೆಯ ಮೇಲೆ‌ ನಿಮ್ಮ‌ ಗೌರವವು ಅಧಿಕಾಗಿದ್ದು ಅನಿರೀಕ್ಷಿತ ಉಡುಗೊರೆಯನ್ನು ಕೊಡುವಿರಿ. ಯಾರ ವಸ್ತುವನ್ನು ಕಸಿದುಕೊಳ್ಳುವ ಹಂತಕ್ಕೆ ಹೋಗುವುದು ಬೇಡ.

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಅಡೆತಡೆಗಳು ಎದುರಾಗಬಹುದು. ನಿಮ್ಮ ಸಮತೋಲನ ಮನಃಸ್ಥಿತಿಯು ಕ್ಲಿಷ್ಟ ಸಂದರ್ಭವನ್ನು ಲೀಲಾಜಾಲವಾಗಿ ದಾಟಿಸುವುದು. ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಡಬಹುದು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಲು ಹಿಂಜರಿಯುವಿರಿ. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ. ಮನಸ್ಸಿಗೆ ಬೇರಸವಾಗುವ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ. ನಿಮಗೆ ಖುಷಿ ಕೊಡುವ ಸಂಗತಿಯ ಕಡೆಗೆ ಗಮನಹರಿಸಿ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗದ ಭಡ್ತಿಯು ಸಿಗಲಿದೆ. ಯಾವ ಜವಬ್ದಾರಿಯನ್ನೂ ಪಡೆಯಲು ಹಿಂಜರಿಯುವುದಿಲ್ಲ. ನಿಮ್ಮ ವಾಹನವನ್ನು ಬದಲಾಯಿಸುವ ಸಾಧ್ಯತೆ ಇದೆ.‌

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ