Horoscope: ರಾಶಿಭವಿಷ್ಯ, ಈ ರಾಶಿಯವರು ಎಚ್ಚರವಾಗಿರಿ, ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ಎಚ್ಚರವಾಗಿರಿ, ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ
ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Nov 14, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ ನಿಮ್ಮ ರಾಶಿ ಭವಿಷ್ಯ (Horoscope) ಹೇಗಿದೆ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದೆಯೇ. ಹಾಗಾದರೆ ಇಂದಿನ (2023 ನವೆಂಬರ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ ಎಂಬುದು ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಮಧ್ಯಾಹ್ನ 03:08 ರಿಂದ 04:34ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:25 ರಿಂದ 10:51ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:43ರ ವರೆಗೆ.

ಧನು ರಾಶಿ: ಯಾರ ಜೊತೆಗೂ ಸ್ಪರ್ಧೆಗೆ ಇಳಿಯುವ ಮನಸ್ಸು ಮಾಡುವುದು ಬೇಡ. ನಿಮ್ಮ ಬಗ್ಗೆ ಯಾರಾದರೂ ಅಸೂಯೆಪಡಬಹುದು. ಉದ್ಧಟತನದ ಮಾತುಗಳಿಂದ ನಿಮ್ಮ ಸ್ವಭಾವವು ಸ್ಪಷ್ಟವಾಗುವುದು. ಅತಿಯಾದ ದೇಹದಂಡನೆಯಿಂದ ನಿಮಗೆ ಆಯಾಸವಾಗಲಿದೆ. ಕೊಟ್ಟ ಹಣವನ್ನು ನೀವು ಪುನಃ ಕೇಳುವಿರಿ. ನಿಮ್ಮಿಂದ ಸಹಾಯವನ್ನು ಪಡೆದ ಹಿರಿಯರು ಆಶೀರ್ವದಿಸುವರು. ಇದರಿಂದ ಸಂತೋಷವಾಗಲಿದೆ. ಸ್ನೇಹಿತರ ಸಹವಾಸದಿಂದ ದುರಭ್ಯಾಸವನ್ನು‌ಕಲಿಯವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಹಣವನ್ನು ಪಡೆದು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ಸುಲಭ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ನಂಬಿಕೆಯನ್ನು ಕಳೆದುಕೊಳ್ಳುವವ ಪ್ರಸಂಗವು ಬರಬಹುದು. ಉದ್ಯಮವನ್ನು ಮುನ್ನಡೆಸಲು ಉತ್ತಮ ವ್ಯಕ್ತಿಗಳ ಅನ್ವೇಷಣೆ ಮಾಡುವಿರಿ. ಅತಿಯಾದ ಶ್ರದ್ಧೆಯಿಂದ ದೇವರ ಆರಾಧನೆಯನ್ನು ಮಾಡುವಿರಿ.

ಮಕರ ರಾಶಿ: ಮಾನಸಿಕ‌ ಸ್ಥೈರ್ಯವು ಬಹಳ ಮುಖ್ಯವಾಗುವುದು. ಶೂನ್ಯದಿಂದ ಆರಂಭಿಸುವ ಕಲೆ ನಿಮಗೆ ಗೊತ್ತಿದೆ. ನಿರೀಕ್ಷಿತ ಗೌರವವು ನಿಮಗೆ ಸಿಗಲಿದೆ.‌ ಇಂದಿನ ಕೆಲವು ಮಾತುಗಳನ್ನು ನೀವು ನಿರ್ಲಕ್ಷಿಸುವಿರಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು. ಹಳೆಯ ಸ್ನೇಹಿತೆಯ ಸಖ್ಯವಾಗಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸುವುದು ಉತ್ತಮ. ಹೊಸ ಉದ್ಯೋಗದ ಅಭಿವೃದ್ಧಿಗೆ ದೇವರಲ್ಲಿ ಶರಣಾಗುವಿದರಿ. ಪ್ರಯತ್ನಗಳು ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯು ತಾನಾಗಿಯೇ ಬರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವಂತೆ ಮಾಡುವ ಹೊಣೆಗಾರಿಕೆ ಇರಲಿದೆ. ಹಿರಿಯರಿಂದ ಮಾರ್ಗದರ್ಶನವು ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಓಡಾಟವು ವ್ಯರ್ಥಯವಾಗುವುದು. ಸ್ವತಂತ್ರವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುವಿರಿ.

ಕುಂಭ ರಾಶಿ: ಯಾವುದೋ ಚಿಂತೆಯಲ್ಲಿ ಇರುವ ಕಾರಣ ಮಾನಸಿಕ ಸ್ಥಿತಿಯು ನಿಮ್ಮ ಹಿಡಿತದಲ್ಲಿ ಇರದು. ಎಲ್ಲದಕ್ಕೂ ಕೋಪವನ್ನು ಮಾಡಿಕೊಳ್ಳುವಿರಿ. ಹಳೆಯ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ. ವಾಹನದಿಂದ ಗಾಯವಾಗುವ ಸಾಧ್ಯತೆ ಇದೆ. ನಿಮಗೆ ಬೇಕಾದ ವಾತಾವರಣದಲ್ಲಿ ಇರುವುದು ಇಷ್ಟವಾಗುವುದು. ನಿಮ್ಮ ಕನಸನ್ನು ಸಕಾರ‌ ಮಾಡಿಕೊಳ್ಳಲು ಪ್ರಗತಿಯಲ್ಲಿ ಇರುವಿರಿ. ಸಹೋದರನ ಜೊತೆ ಸಣ್ಣ ವಿಷಯಕ್ಕೆ ವಿವಾದವಾಗಬಹುದು.‌ ಕಾರ್ಯದ ಅನಿವಾರ್ಯತೆಯು ಎದ್ದು ಕಾಣಿಸುವುದು. ಪರಿಚಿತರ ನಡುವೆ ಸಾಹೋದರ್ಯಭಾವವು ಇರುವುದು.

ಮೀನ ರಾಶಿ: ನಿಮ್ಮ ಸ್ಥಾನವನ್ನು ಬಿಟ್ಟುಕೊಡುವ ಮನಸ್ಸು ಮಾಡುವಿರಿ. ಹೊಸತನದ ಅಪೇಕ್ಷೆಯು ಅತಿಯಾಗಿ ಇರುವುದು. ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು. ಇನ್ನೊಬ್ಬರ ಜವಾಬ್ದಾರಿಯನ್ನು ನೀವು ಕಸಿದುಕೊಳ್ಳುವ ಆಲೋಚನೆ ಮಾಡುವಿರಿ. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ‌ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ. ಎಲ್ಲದಕ್ಕೂ ಕೂಡಲೇ ಉತ್ತರವನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಅಧಿಕಾರದ ಮಾತುಗಳು ಅಹಂಕಾರದ ಮಾತಾಗುವುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಕಾರವನ್ನು ಮಾಡುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ