AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಕುಟುಂಬದವರ ಮಾತುಗಳು ಕಿರಿಕಿರಿ ಎನಿಸಬಹುದು

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 16) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Horoscope: ದಿನಭವಿಷ್ಯ, ಕುಟುಂಬದವರ ಮಾತುಗಳು ಕಿರಿಕಿರಿ ಎನಿಸಬಹುದು
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 16, 2023 | 12:30 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಡಿಸೆಂಬರ್ 16) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:40 ರಿಂದ 11:04ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 ರಿಂದ 03:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:51 ರಿಂದ 08:15ರ ವರೆಗೆ.

ಸಿಂಹ ರಾಶಿ : ಇನ್ನೊಬ್ಬರಿಗೆ ನಿಮ್ಮಿಂದಾದ ನೋವನ್ನು ಸರಿ‌ ಮಾಡಿಕೊಳ್ಳುವಿರಿ. ಸಾಂತ್ವನದಿಂದ ಸ್ನೇಹವು ಮೊದಲಿನಂತಾಗುವುದು.‌ ನಿಮ್ಮ ಅತಿಯಾದ ನಂಬುಗೆಯು ಇಂದು ಹುಸಿಯಾಗಬಹುದು. ಸಂತಾನಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಟೀಕೆಗಳು ನಡೆಯುವುದು. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಮಾರ್ಗದರ್ಶನವಾಗಲಿದೆ. ನಿಮ್ಮ ಇಷ್ಟದವರನ್ನು ಭೇಟಿಯಾಗಿ ಕೆಲವು ಸಮಯ ಸಂತೋಷದಿಂದ ಕಳೆಯುವಿರಿ. ಯಾರಂದಲೋ ಪ್ರೇರಿತರಾದ ನಿಮಗೆ ಸಾಮಾಜಿಕ ಕಾರ್ಯವು ಹಿಡಿಸುವುದು. ಉದ್ಯಮದ ವಿಷಯದಲ್ಲಿ ಸಲ್ಲದ ಮಾತುಗಳು ಕೇಳಿಬರಬಹುದು.‌ ಸಂಪತ್ತಿನ ಮೇಲೆ ನಿಮಗೆ ಮೋಹವು ಕಡಿಮೆ ಇರುವುದು. ವಂಚಿಸಿದವರಿಗೆ ಪ್ರತಿವಂಚನೆಯನ್ನು ಮಾಡಲು ಸಮಯವನ್ನು ನಿರೀಕ್ಷಿಸುತ್ತಿರುವಿರಿ. ಆಶಿಸ್ತಿನ ಕೆಲಸಕ್ಕೆ ಹಿರಿಯರು ನಿಂದಿಸಬಹುದು. ಅಪರಿಚಿತ ವ್ಯಕ್ತಿಗಳು ಸಾಲಕ್ಕಾಗಿ ದೂರವಾಣಿಯ ಮೂಲಕ ಪದೆ ಪದೆ ಪೀಡಿಸಬಹುದು.

ಕನ್ಯಾ ರಾಶಿ : ಸ್ಥಿರವಾದ ಮನಃಸ್ಥಿತಿಯಿಂದ ಹೊಸದೇನನ್ನಾದರೂ ಆರಂಭಿಸುವಿರಿ. ಜನರೊಂದಿಗೆ ಸೌಹಾರ್ದವಾದ ಮಾತುಕತೆಗಳಿಂದ ಪ್ರೀತಿಯು ಹುಟ್ಟುವುದು. ಕುಟುಂಬದವರ ಮಾತುಗಳು ಕಿರಿಕಿರಿ ಎನಿಸಬಹುದು. ನಿಮ್ಮ ತಾಳ್ಮೆಯು ಇಂದು ಕಡಿಮೆಯಾಗಿ ಏನಾದರೂ ಹೇಳುವಿರಿ. ಹಣದ ಉಳಿತಾಯದಲ್ಲಿ ಜಿಪುಣರಂತೆ ತೋರುವುದು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಕ್ಕುವ ಸೂಚನೆ ಬರಲಿದೆ. ಸಾಲವು ಮುಗಿಯುತು ಎಂದುಕೊಳ್ಳುತ್ತಿದ್ದಂತೆ ಇನ್ನೊಂದು ಆರಂಭವಾಗಬಹುದು. ಬಂಧುಗಳಿಂದ ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮಗೆ ಸಿಕ್ಕ ಅಶುಭ ಸೂಚನೆಯಿಂದ ಭಯವಾಗಬಹುದು.‌ ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುವಿರಿ. ಇಷ್ಟು ದಿನ ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಇಂದು ನಿರ್ವಹಿಸಲು ಕಷ್ಟವಾದೀತು. ಅದಕ್ಕೆ‌ ಒತ್ತಡವು ಮುಖ್ಯ ಕಾರಣವಾಗಲಿದೆ‌.

ತುಲಾ ರಾಶಿ : ನಿಮ್ಮವರ ಅಶಿಸ್ತಿನ ಕೆಲಸವನ್ನು ನೀವು ಸರಿ ಮಾಡಬೇಕಾಗುವುದು.‌ ಕಾಮಗಾರಿಗಳ ವಿಚಾರದಲ್ಲಿ ದೂರು ಬರಬಹುದು. ಬಳಕೆಯಾಗದ ಭೂಮಿಯಿಂದ ಮಾರಾಟ ಮಾಡಿ ಆದಾಯವನ್ನು ಪಡೆಯುವಿರಿ. ಹಣಕ್ಕಾಗಿ ಇನ್ನೊಬ್ಬರಿಗೆ ಮಾನಸಿಕ ಒತ್ತಡವನ್ನೂ ಹಿಂಸೆಯನ್ನೂ ಕೊಡುವಿರಿ. ಹೂಡಿಕೆಯ ಕಡೆ ಅಧಿಕ ಆಲೋಚನೆ ಮಾಡುವಿರಿ. ಗೌಪ್ಯವಾಗಿ ನಿಮಗೆ ಹಣವು ಸಿಗಲಿದೆ‌. ಅದನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಸಮಯವನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳಿಗೆ ಹೇಳಿ. ಮನೆಯಲ್ಲಿ ಇದ್ದು ಕೆಲಸ ಮಾಡುವವರಿಗೆ ಬಂಧನದಂತೆ ಅನ್ನಿಸಬಹುದು. ದಾನದಿಂದ ನಿಮಗೆ ಪ್ರಶಂಸೆಯು ಸಿಗುವುದು. ಆಭರಣಗಳನ್ನು ಖರೀದಿಸುವ ಇಚ್ಛೆ ಇದ್ದರೆ ಖರೀದಿಸಬಹುದು. ಸಲ್ಲದ ಮಾತುಗಳನ್ನಾಡಿ ಅನಂತರ ಪಶ್ಚಾತ್ತಾಪಪಡುವಿರಿ.‌ ನಿಮ್ಮ ವಿವಾಹದ ಮಾತುಕತೆಯಿಂದ ನಿಮಗೆ ಖುಷಿಯಾಗುವುದು.

ವೃಶ್ಚಿಕ ರಾಶಿ : ಆದಾಯವು ಕಡಿಮೆ ಇದ್ದರೂ ಖರ್ಚನ್ನು ಮಾಡಲು ಯಾವುದೇ ಹಿಂಜರಿಕೆ ಇರದು.‌ ಹಣವು ಹೆಚ್ಚಾಗುತ್ತದೆ ಎಂಬ ಸ್ಥೈರ್ಯವು ಇರುವುದು. ಅಂದುಕೊಂಡ ಕಾರ್ಯವು ಮುಗಿಯುತ್ತ ಇರುವಾಗಲೇ ಯಾರಾದರೂ ಅಡ್ಡಿ ಮಾಡುವರು. ಸ್ನೇಹಿತರ ಸಲಹೆಯ ಆಧಾರದ ಮೇಲೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಿರಿ. ಯಾರನ್ನೋ ಮೆಚ್ಚಿಸಲು ಹೋಗಿ ನಿಮ್ಮ ಸಮಯವು ವ್ಯರ್ಥವಾದೀತು. ಸಂದರ್ಭದಲ್ಲಿ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಆಪ್ತರ ಜೊತೆಗಿನ ಬಿಚ್ಚು ಮನಸ್ಸಿನ ಮಾತುಕತೆಯಿಂದ ನಿಮ್ಮ ಭಾರವಾದ ಮನಸ್ಸು ಹಗುರಾಗುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಬಾರದು. ಇಂದು ಸ್ತ್ರೀಯರಿಂದ ಸುಖವನ್ನು ಅನುಭವಿಸುವಿರಿ. ನಿಮ್ಮ ತ್ಯಾಗಬುದ್ಧಿಯಿಂದ ಪ್ರಶಂಸೆಯು ಸಿಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ