Horoscope: ಈ ರಾಶಿಯವರ ದಾಂಪತ್ಯದಲ್ಲಿ ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 24) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Horoscope: ಈ ರಾಶಿಯವರ ದಾಂಪತ್ಯದಲ್ಲಿ ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 24, 2023 | 12:30 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಡಿಸೆಂಬರ್ 24) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:43 ರಿಂದ 11:07 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:56 ರಿಂದ 03:20ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:55 ರಿಂದ 08:19ರ ವರೆಗೆ.

ಸಿಂಹ ರಾಶಿ : ಮಾಧ್ಯಮದಲ್ಲಿ ಕಾರ್ಯ ಮಾಡುವವರಿಗೆ ಒತ್ತಡಗಳು ಎಂದಿಗಿಂತ ಹೆಚ್ಚು ಇರುವುದು. ಅಪರಿಚಿತರ ಜೊತೆ ಅತಿಯಾದ ಸ್ನೇಹವು ಬೆಳೆಯಬಹುದು. ನಂಬಿಕೆಯಲ್ಲಿ ದ್ರೋಹವಾಗಿದ್ದು ಯಾರನ್ನು ನಂಬಬೇಕು ಎನ್ನುವ ಗೊಂದಲ, ಹತಾಶೆಗಳು ಕಾಣಿಸುವುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ ಬೇಡ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಸಣ್ಣ ವಿಚಾರಕ್ಕೆ ಯಾರನ್ನೋ ದ್ವೇಷ‌ ಮಾಡುವುದು ಸರಿಯಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕು.

ಕನ್ಯಾ ರಾಶಿ : ಹೊಸ ಸ್ನೇಹಿತರ ಬಳಗದಿಂದ ನಿಮಗೆ ಸಂತೋಷವು ಸಿಗುವುದು. ಉದ್ಯೋಗದ ಮಿತ್ರರು ಎಲ್ಲಿಗಾದರೂ ಹೋಗುವ ಯೋಜನೆಯನ್ನು ಮಾಡಿಕೊಂಡು ಹೊರಡುವಿರಿ. ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು. ರಾಜಕೀಯ ಏರಿಳಿತವನ್ನು ನೀವು ಊಹಿಸುವುದು ಕಷ್ಟವಾದೀತು. ಸಾಲದಿಂದ ಬಿಡುಗಡೆ ಸಿಕ್ಕ ಕಾರಣ ಕುಟುಂಬದಲ್ಲಿ ಸೌಖ್ಯವಿರುವುದು. ಎಲ್ಲ ಕೆಲಸಗಳೂ ಅಪೂರ್ಣವಾಗಿದ್ದು ನಿಮಗೆ ಅಸಮಾಧನ ಇರುವುದು. ಸಮಾಜಿಕ ಕಾರ್ಯವನ್ನೂ ಪರಿಚಿತರ ಜೊತೆ ಭಾಗವಹಿಸಿ ಮಾಡುವಿರಿ.

ತುಲಾ ರಾಶಿ : ಸ್ತ್ರೀಯರು ತಮ್ಮ ಕೌಶಲವನ್ನು ತೋರಿಸುವರು. ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಯಾರಸದರೂ ಅಸತ್ಯವನ್ನು ಆಡಿದರೆ ಅದನ್ನು ಸರಳವಾಗಿ ಕಂಡು ಹಿಡಿಯುವಿರಿ.‌ ಅನಿಶ್ಚಿತ ಕೆಲಸದಲ್ಲಿ ಆದಾಯವನ್ನು ಹೆಚ್ಚು ಪಡೆಯುವಿರಿ. ವೈದ್ಯರು ಇಂದು ತಮ್ಮ ಕೆಲಸಗಳನ್ನು ಬದಲಾಯಿಸಿಕೊಳ್ಳುವ ಸ್ಥಿತಿಯು‌ ಬರಬಹದು. ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವುದು ಉತ್ತಮ. ಸಂಶೋದನೆಯ ಅಂಶಗಳು ನಿಮಗೆ ಇಷ್ಟವಾಗಬಹುದು.

ವೃಶ್ಚಿಕ ರಾಶಿ : ಖಾಸಗೀ ಉದ್ಯೋಗಿಗಳು ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗುವರು. ನಿಮ್ಮ ಅಪನಂಬಿಕೆಗಳನ್ನು ಯಾರ ಮೇಲೂ ಹೇರುವುದು ಬೇಡ.‌ ಇಷ್ಟದ ಕಾರ್ಯವು ಸಿದ್ಧಿಯಾಗಿ ನಿಮಗೆ ಉತ್ಸಾಹವು ಹೆಚ್ಚಾಗುವುದು. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ. ಬಂಧುಗಳ ಮೇಲೆ‌ ಊಹಾಪೋಹಗಳನ್ನು ಇಟ್ಟುಕೊಳ್ಳುವಿರಿ. ನೀವು ಮಾಡುವ ವೃತ್ತಿಯಲ್ಲಿ ಗೊಂದಲವಿದ್ದರೆ ಅನುಭವಗಳನ್ನು ಕೇಳಿ ಮಂದುವರೆಯಿರಿ. ಸಂಗಾತಿಯ ಕೆಲವು ಮಾತುಗಳಿಂದ ನಿಮಗೆ ಬೇಸರವಾಗುವುದು.