AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮ ಮಾತಿಗೆ ಆಕ್ಷೇಪಗಳು ಬರಬಹುದು- ಎಚ್ಚರ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಡಿಸೆಂಬರ್ 28) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Horoscope: ನಿಮ್ಮ ಮಾತಿಗೆ ಆಕ್ಷೇಪಗಳು ಬರಬಹುದು- ಎಚ್ಚರ
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 28, 2023 | 12:30 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಡಿಸೆಂಬರ್ 28) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪುನರ್ವಸು, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 01:58 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:21 ರಿಂದ 09:45ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:09 ರಿಂದ 12:34ರ ವರೆಗೆ.

ಸಿಂಹ ರಾಶಿ : ನೀವು ಗೊತ್ತಿಲ್ಲ, ಅನುಭವವಿಲ್ಲದ ಕೆಲಸಗಳನ್ನು ಮಾಡಲು ಹೋಗಬೇಕಾಗುವುದು. ಇದರಿಂದ ನಿಮಗೆ ಆತಂಕವು ಉಂಟಾಗಬಹುದು‌. ಕೆಲವನ್ನು ಅನುಭವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಸಮಯಕ್ಕಾಗಿ ನೀವು ಕಾಯುವುದು ಅನಿವಾರ್ಯವಾದೀತು. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾದೀತು. ಸ್ವಯಂಕೃತ ಅಪರಾಧದಿಂದ ನಿಮಗೆ ಕಿಂಚಿತ್ತೂ ಬೇಸರವಾಗದು. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸುವಿರಿ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸ ಕಾರ್ಯಗಳಲ್ಲಿ ತೊಡಗುವಿರಿ. ಸ್ವಲ್ಪ ಕುಟುಂಬದ ಸಮಸ್ಯೆಗಳಿಂದಾಗಿ, ಮನಸ್ಸು ಚಂಚಲವಾಗಿರುತ್ತದೆ.

ಕನ್ಯಾ ರಾಶಿ : ಇಷ್ಟವಿಲ್ಲದಿದ್ದರೂ ಜವಾಬ್ದಾರಿಗಳು ಹೋಗಿ ಬೇರೆ ಜವಾಬ್ದಾರಿಯನ್ನು ನಿರ್ವಹಿಸಬೇಕಾದೀತು. ನಿಮ್ಮ ಮಾತುಗಳನ್ನು ಉಳಿಸಿಕೊಳ್ಳಲು ಶ್ರಮದ ಅಗತ್ಯವಿದೆ. ತಾಯಿಯಿಂದ ಆರ್ಥಿಕ ಸಹಾಯವನ್ನೂ ಸಿಗಲಿದ್ದು ತೃಪ್ತಿದಾಯಕವಾಗಲಿದೆ‌. ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ನಿಮ್ಮ ಮಾತಿಗೆ ಆಕ್ಷೇಪಗಳು ಬರಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡುತ್ತವೆ. ಮನಸ್ಸು ಅನೈತಿಕ ಚಟುವಟಿಕೆಗಳಿಂದ ವಿಮುಖವಾಗಬಹುದು. ನಿಮಗೆ ಸಂಬಂಧವಿಲ್ಲದ ವಿಚಾರದ ಬಗ್ಗೆ ಯಾರು ಏನೇ ಅಂದರೂ ಚಿಂತೆ ಬೇಡ.

ತುಲಾ ರಾಶಿ : ಇಂದು ಹಣಕಾಸಿನ ಕ್ರಮಬದ್ದ ಹೂಡಿಕೆ ಮತ್ತು ಖರ್ಚುಗಳ ಬಗ್ಗೆ ಸಂಗಾತಿಯ ಜೊತೆ ಚಿಂತನೆ ನಡೆಸುವಿರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಇಂದು ಅನಿರೀಕ್ಷಿತ ಪ್ರಶಂಸೆ ಹಾಗು ಗೌರವಗಳು ಸಿಗಲಿವೆ. ಆಲಸ್ಯದಿಂದ ಹೊರಬರುವ ಮನಸ್ಸಾಹುವುದು. ಭಾವನಾತ್ಮಕ ಚಿಂತನೆಗಳು ನಿಮ್ಮ ಮೇಲೆ‌ ಸಕಾರಾತ್ಮಕ ಪರಿಣಾಮವನ್ನು ನೀಡಬಹುದು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಆಕ್ಷೇಪಗಳು ಎಲ್ಲವು ಮುರಿದು ಬೀಳಬಹುದು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಇಂದು ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯುವಿರಿ. ಆದರೆ ಕೆಲವು ತಪ್ಪುಗ್ರಹಿಕೆಯಿಂದಾಗಿ ಅಸಮಾಧಾನ ಇರಲಿದೆ. ಇಂದಿನ ಉದ್ಯಮವು ನಿಮ್ಮ ಹಿಡಿತದಲ್ಲಿ ಇರುತ್ತದೆ. ಲಾಭವೂ ಹೆಚ್ಚಾಗುವುದು. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.

ವೃಶ್ಚಿಕ ರಾಶಿ : ನಿಮ್ಮ ಯೋಜನೆಯ ಮುಖ್ಯ ಕೆಲಸಗಳು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ನಿಮಗೆ ನಿರಾಳವೆನಿಸಬಹುದು. ಪರಸ್ಥಳ ವಾಸದಿಂದ ನಿಮಗೆ ಕಸಿವಿಸಿಯಾಗುವ ಸಾಧ್ಯತೆ ಇದೆ. ಹಿರಿಯರ ಮಾತುಗಳು ನಿಮ್ಮನ್ನು ಕಾಡಬಹುದು. ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ಈ ಕಾರಣದಿಂದಾಗಿ ಜನರಿಂದ ಟೀಕೆ ಬರುವುದು. ಇಂದು, ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಈ ಕಾರಣದಿಂದಾಗಿ ಜನರು ನಿಮ್ಮನ್ನು ಕಂಡು ನಗುವರು. ಖರ್ಚು ಆದಾಯಕ್ಕಿಂತ ಹೆಚ್ಚಾಗುತ್ತದೆ.

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್