ದಿನ ಭವಿಷ್ಯ: ಇಂದು ಈ ರಾಶಿಯವರು ಅತಿ ವಿಷಕಾರಿ ಸಂದರ್ಭವನ್ನೂ ಜೀರ್ಣಮಾಡಿಕೊಳ್ಳುವರು…

Horoscope Today 23 August : ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ ಭಾನುವಾರದಂದು ಹೊಸಬರ ಸ್ನೇಹ, ಮಾತಿಗೆ ಬದ್ಧತೆ, ಅಚಾತುರ್ಯ, ಪರರಿಂದ ದುಃಖ, ಅಸ್ಥೈರ್ಯ, ನಾಯಕರ ಗತ್ತು, ಸಹಯೋಗದಿಂದ ಹೊಸ ಉದ್ಯೋಗ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಅತಿ ವಿಷಕಾರಿ ಸಂದರ್ಭವನ್ನೂ ಜೀರ್ಣಮಾಡಿಕೊಳ್ಳುವರು...
ದಿನ ಭವಿಷ್ಯ
Edited By:

Updated on: Aug 23, 2026 | 12:08 AM

ಮೇಷ ರಾಶಿ:

ನಿಮ್ಮ ನೋವನ್ನು ಶತ್ರುಗಳು ಸಕಾರಾತ್ಮಕವಾಗಿ ತೆಗೆದುಕೊಳ್ಳಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಬೇಕಾದುದನ್ನು ಪಡೆಯಲು ದಾಕ್ಷಿಣ್ಯವು ನಿಮಗೆ ಅಡ್ಡ ಬರಬಹುದು. ಇದ್ದಕಿದ್ದಂತೇ ಏನನ್ನಾದರೂ ಆಲೋಚಿಸಲಿದ್ದೀರಿ.‌ ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಿಮ್ಮ ನಡೆ ಇರಲಿದೆ. ಮಂದಗತಿಯಲ್ಲಿ ನಿಮ್ಮ ಇಂದಿನ ಕೆಲಸಗಳು ಸಾಗಬಹುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಜಯದಿಂದ ಬೀಗುವುದು ಬೇಡ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು.

ವೃಷಭ ರಾಶಿ:

ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ನಿಮಗೆ ಸುರಕ್ಷಿತ ಸ್ಥಳದಲ್ಲಿ ಇದ್ದು ಬೇಸರವಾಗಬಹುದು. ಉದ್ಯೋಗಕ್ಕೆ ಸೇರಲು ಬೇಕಾದ ತಯಾರಿಯಲ್ಲಿ ನೀವು ಇರುವಿರಿ. ಏಕಾಂತವನ್ನು ಬಯಸಿದರೂ ಇರಲು ನಿಮಗೆ ಅಸಾಧ್ಯವಾದೀತು. ಹಣ ಸಂಗ್ರಹಕ್ಕೆ ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ಯಾರ ಜೊತೆಗಾದರೂ ಸುಮ್ಮನೇ ಚರ್ಚೆಗಿಳಿದು ಸೋಲಬೇಕಾದೀತು. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು.

ಮಿಥುನ ರಾಶಿ:

ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಸಿದ್ಧ ವಸ್ತುಗಳ ವ್ಯಾಪರದಿಂದ ಲಾಭ. ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು. ನಿಮ್ಮ ಗಟ್ಟಿ ನಿಲುವನ್ನು ಯಾರೂ ಪ್ರಶ್ನಿಸಲಾರರು. ಕಛೇರಿಯಲ್ಲಿ ನೀವು ಯಾರನ್ನೋ ಮೆಚ್ಚಿಸಲು ಹೋಗಿ ಅಪಹಾಸ್ಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ:

ಯಾವುದೇ ಆಮಿಷಕ್ಕೂ ಸುಲಭವಾಗಿ ಒಪ್ಪಲಾರಿರಿ. ಆರ್ಥಿಕತೆಯು ಸ್ವಲ್ಪ ಸುಧಾರಿಸಿದಂತೆ ಕಂಡರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಸಂಗಾತಿಯ ಮಾತು ನಿಮಗೆ ಕೋಪವನ್ನು ತರುವ ಸಾಧ್ಯತೆ ಇದೆ. ಬಂಧನದ ಭೀತಿಯಿಂದ ಮನಸ್ಸು ಖಿನ್ನವಾಗಲಿದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಅಧಿಕ ಲಾಭವನ್ನು ಪಡೆಯಬಹುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ನಿಮ್ಮ ಗುಪ್ತ ಸಮಾಲೋಚನೆಗಳು ಬಯಲಾಗಬಹುದು.

ಸಿಂಹ ರಾಶಿ:

ನಿಮಗೆ ಬೇಕಾದ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ಮನೆಯ ಕೆಲಸ ಹಾಗೂ ಕಛೇರಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟವಾದೀತು. ಅನಾಯಾಸವಾಗಿ ಲಾಭವನ್ನು ಪಡೆಯುವ ಜಾಡ್ಯವು ಬರಬಹುದು. ಗೊತ್ತಿರುವ ವಿಚಾರ ಸತ್ಯವೋ ಸುಳ್ಳೋ ಪ್ರಸ್ತುತಿಯನ್ನಂತೂ ಸರಿಯಾಗಿ ಮಾಡುವಿರಿ. ಮನೆಯವರಿಗೆ ನಿಮ್ಮ ಬದಲಾವಣೆ ಅನಿರೀಕ್ಷಿತ ಎನಿಸಬಹುದು. ಇತರ ಕೆಲಸದಲ್ಲಿ ಮಗ್ನವಾಗಿ ಮಾಡಬೇಕಾದ ಮುಖ್ಯ ಕೆಲಸವು ನಿಂತುಹೋಗಬಹುದು.

ಕನ್ಯಾ ರಾಶಿ:

ಸಜ್ಜನರ ಸೇವೆಯ ಅವಕಾಶ ನಿಮಗೆ ಸಿಗಲಿದೆ. ಕಛೇರಿಯಲ್ಲಿ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ನಿಮಗೆ ಹೊಸ ಉದ್ಯಮವನ್ನು ಆರಂಭಿಸುವ ಆಲೋಚನೆ ಇದ್ದರೂ ಸಂಪೂರ್ಣ ಧೈರ್ಯವು ನಿಮಗೆ ಸಾಕಾಗದೇ ಹೋದೀತು. ಕೆಲವರ ಮಾತು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಸಮಾಜದಲ್ಲಿ ಉತ್ತಮ‌ ಕಾರ್ಯವನ್ನು ಮಾಡಲು ನೀವು ಬಯಸುವಿರಿ. ಅನ್ವೇಷಣೆಗೆ ಹೊಸ ದಿಕ್ಕು ಕಾಣಿಸುವುದು. ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ. ಆದಾಯವನ್ನು ಹೆಚ್ಚಿಸಲು ಬೇರೆ ಮಾರ್ಗವನ್ನು ಅನ್ವೇಷಿಸುವಿರಿ.

ತುಲಾ ರಾಶಿ:

ಬಂಧುಗಳ ಬಗ್ಗೆ ನಿಮಗೆ ಕನಿಕರ ಬರುವುದು. ಅಮೂಲ್ಯವಾದ ವಸ್ತುವನ್ನು ನೀವು ಕಳೆದಕೊಳ್ಳುವ ಸಾಧ್ಯತೆ ಇದೆ. ವಾಹನದ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದೆ ನಿಮ್ಮಲ್ಲಿ ಅನಿಶ್ಚಿತತೆ ಇರಲಿದೆ. ವಿಶ್ವಾಸವನ್ನು ಪಡೆಯಲು ಶ್ರಮಿಸಿ, ಸೋಲಬಹುದು. ಸಂಶೋಧನೆಯಲ್ಲಿ ತೊಡಗಿದ್ದರೆ ಸ್ವಲ್ಪ ಹಿನ್ನಡೆಯೂ ಹಣದ ಕೊರತೆಯೂ ಆಗಬಹುದು.‌ ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ.

ವೃಶ್ಚಿಕ ರಾಶಿ:

ಉದ್ಯೋಗದಲ್ಲಿ ಸ್ಥಳಾಂತರವು ನಿಮಗೆ ಕಷ್ಟವಾದೀತು. ಆದರೆ ಅನಿವಾರ್ಯವೂ ಆಗಲಿದೆ. ವಿವಾಹಜೀವನಕ್ಕೆ ಕಾಲಿಟ್ಟ ನಿಮಗೆ ಕೆಲವು ಅಸ್ಪಷ್ಟವಾದ‌ ನಡತೆಯಿಂದ ದಿಗ್ಭ್ರಾಂತರಾಗುವ ಸಾಧ್ಯತೆ ಇದೆ. ನಿಮ್ಮ ಬಳಿ ಬಂದು ಕ್ಷಮಾಪಣೆ ಕೇಳಿದಲ್ಲಿ ಕ್ಷಮಿಸುವ ದೊಡ್ಡತನವನ್ನು ತೋರಿಸಿ.‌ ಬಹಳ ದಿನಗಳ ಅನಂತರ ಉದ್ಯೋಗಕ್ಕೆ ಸೇರಿಕೊಳ್ಳುವ ಅವಕಾಶ ಸಿಗಲಿದೆ. ವಾಹನದಿಂದ‌ ಬಿದ್ದು ಪೆಟ್ಟುಮಾಡಿಕೊಳ್ಳಬಹದು. ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ.

ಧನು ರಾಶಿ:

ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ದೈವಾನುಗ್ರಹಕ್ಕೆ ಕಠಿಣವಾದ ಕಾರ್ಯವನ್ನೂ ಮಾಡುವಿರಿ. ನಿಮ್ಮ ಆರೋಗ್ಯವನ್ನು ವಿಚಾರಿಸಲು ಬಂಧುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಸಂಗಾತಿಯ ಮನಸ್ತಾಪವನ್ನು ಸಮಯವನ್ನು ನೋಡಿ ಸರಿಮಾಡುವಿರಿ. ಕಾರ್ಯ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ. ನಿಮ್ಮ ಶ್ರಮದ ಲಾಭವನ್ನು ಮತ್ಯಾರಾದರೂ ಪಡೆಯಬಹುದು.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

ಮಕರ ರಾಶಿ:

ಉದ್ಯೋಗಕ್ಕೆ ವಿದಾಯ ಹೇಳುವ ಸಂದರ್ಭವು ಬರಬಹುದು. ನಿಮ್ಮ ನೆಚ್ಚಿನವರ ಭೇಟಿಯಾಗುವ ಸಂದರ್ಭ ಬಂದರೂ ಕಾರಣಾಂತರಗಳಿಂದ ತಪ್ಪಿಹೋಗಬಹುದು. ನಿಮಗೆ ಸಹಕರಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿ. ನಿಮಗೆ ನಿಮ್ಮ‌ ವಂಶದ ಕಾರಣದಿಂದ ಗೌರವ ಸಿಗಬಹುದು. ಕೆಲಸಗಳಿಗೆ ಪ್ರಂಶಸೆ ಸಿಗಲಿದೆ. ಅತಿಯಾದ ವೈಭವೀಕರಣದಿಂದ ನಿಮಗೆ ಕಷ್ಟವಾಗವುದು ಬೇಡ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು.

ಕುಂಭ ರಾಶಿ:

ಆರ್ಥಿಕವಾಗಿ ನೀವು ಸುಧಾರಣೆ ಕಾಣಬೇಕು ಎಂದಿದ್ದರೂ ನೀವು ಆಲಸ್ಯದಿಂದ ಹೊರಬರಬೇಕಾದೀತು.‌ ಉತ್ಸಾಹದ ಕೊರತೆ ಅತಿಯಾಗಿ ತೋರುವುದು. ಸಹನೆಯನ್ನು ನಿಯಂತ್ರಿಸಲು ಸಾಧ್ಯವಾಗದು. ಅಧಿಕಾರದ ಮಾತು‌ ಇಂದು‌ ನಡೆಯದೇ ಇದ್ದೀತು. ವೇತನವನ್ನು ಹೆಚ್ಚಿಸಲು ನೀವು ವಿನಂತಿ ಮಾಡಿಕೊಳ್ಳಬಹುದು. ಸಜ್ಜನರಿಗೆ ಭೋಜನವನ್ನು ಹಾಕಿಸಿ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ.

ಮೀನ ರಾಶಿ:

ಹೂಡಿಕೆಯ ಹಣವೇ ನಿಮಗೆ ಧೈರ್ಯವನ್ನು ಕೊಡುತ್ತದೆ. ನಿಮ್ಮ ಅತಿಯಾದ ಉತ್ಸಾಹವು ಯಾರಾದರೂ ನೋಡಿ ಆಡಿಕೊಳ್ಳಬಹುದು‌. ನಿಮ್ಮ ಕಾರ್ಯಕೌಶಲವು ಸಹೋದ್ಯೋಗಿಗಳಿಗೆ ತಿಳಿಯಬಹುದು. ಆರೋಪ ಪ್ರತ್ಯಾರೋಪಕ್ಕೆ ವೃತ್ತಿಯಲ್ಲಿ ಅವಕಾಶ ತೆರೆಯುವುದು. ಮಿತ್ರರಿಗೋಸ್ಕರ ಸ್ವಲ್ಪವನ್ನು ತ್ಯಾಗಮಾಡುವಿರಿ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ಅದಷ್ಟು ಕಡಿಮೆ ಮಾತನಾಡಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವೈಧೃತಿ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:02 – 18:35, ಯಮಗಂಡ ಕಾಲ 12:22 – 13:55, ಗುಳಿಕ ಕಾಲ 15:29 – 17:02

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:07 am, Sun, 23 August 26

Loading...
Unable to load recommendations.
Follow Us