AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ತಾತ್ಕಾಲಿಕ ಸ್ಥಾನದಿಂದ ಚ್ಯುತರಾಗುವ ಭೀತಿ

Horoscope Today 22 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಶನಿವಾರದಂದು ವಿವಾದಕ್ಕಾಗಿಯೇ ಮಾತುಕತೆ, ಜೀವನದಲ್ಲಿ ನಿರುತ್ಸಾಹ, ಶತ್ರುವಿನ ಶಂಕೆ, ತಪ್ಪಿಗೆ ಹೊಣೆ, ಆರ್ಥಿಕ ಕಳಂಕ, ಒಪ್ಪಂದದ ಸಡಿಲಿಕೆ, ಆದಾಯ ಮೂಲ‌ಬದಲು ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ತಾತ್ಕಾಲಿಕ ಸ್ಥಾನದಿಂದ ಚ್ಯುತರಾಗುವ ಭೀತಿ
ಭವಿಷ್ಯImage Credit source: Getty images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 22, 2026 | 1:30 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ಮೂಲಾ, ಯೋಗ : ಐಂದ್ರ, ಕರಣ : ಬವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:16 – 10:49, ಯಮಗಂಡ ಕಾಲ 13:56 – 15:29, ಗುಳಿಕ ಕಾಲ 06:09 – 07:42.

ಮೇಷ ರಾಶಿ: ಇಂದು ನೀವು ಅತಿಥಿಗಳ ಕಡೆ ಗಮನ ಕೊಡದೆ ಅವರಿಗೆ ಬೇಸರ ಮಾಡುವಿರಿ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ಸಂಗಾತಿಯ ಮಾತನ್ನು ನೆರವೇರಿಸುವುದು ಕಷ್ಟವಾಗಬಹುದು. ಬೇಸರಕ್ಕೆ ಸಾಂತ್ವನದ ಮಾತುಗಳು ಬಹಳ ಉಪಯುಕ್ತವಾಗಲಿದೆ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ಅಧ್ಯಾತ್ಮಕ್ಕೆ ಸಂಬಂಧಿಸಿದ ಚರ್ಚೆಯನ್ನು ನಿಮ್ಮ ಜೊತೆ ವಿವಾದಕ್ಕಾಗಿ ಮಾಡುವರು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ.

ವೃಷಭ ರಾಶಿ: ಇಂದು ನಿಮಗೆ ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಯಾರನ್ನೋ ಪ್ರಶಂಸಿಸಿದ ಮಾತ್ರ ನೀವು ಚಿಕ್ಕಘಘ ವರ್ಗರಾಗ ಲಾರಿ ಒಂದಾದಮೇಲೊಂತೆ ಬರುವ ಕೆಲಸಗಳು ನಿಮಗೆಇದ್ದ ಘಘಘಗ ಒತ್ತಡವಾಗಲಿದೆ. ಅನಗತ್ಯ ಓಡಾಟವನ್ನು ನಿಲ್ಲಿಸಿ. ಇದು ನಷ್ಟದ ಓಡಾಟವೇ ಆಗಲಿದೆ. ದೇಹವನ್ನು ನೀವು ದಂಡಿಸುವಿರಿ. ಆದಷ್ಟು ತಾಳ್ಮೆಯಿಂದ ಇರುವುದು ಮುಖ್ಯ. ಕೆಲವು ವಿರೋಧವನ್ನು ನೀವು ಸಹಿಸಿಕೊಳ್ಳಲು ತಯಾರಿರಬೇಕು.

ಮಿಥುನ ರಾಶಿ: ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಉತ್ಸಾಹಕ್ಕೆ ಭಂಗ ಬರುವ ಸನ್ನಿವೇಶವನ್ನು ನೀವು ಎದುರಿಸುವಿರಿ. ನೀವು ಇನ್ನೊಬ್ಬರ ಜೊತೆ ಮಾತನಾಡುವುದು ಇಷ್ಟವಾಗದು. ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ. ಪ್ರಖ್ಯಾರ ದೇವಾಲಯದಲ್ಲಿ ನೀವು ಸೇವೆ ಸಲ್ಲಿಸುವಿರಿ. ಮೂಲಧನವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ.

ಕರ್ಕಾಟಕ ರಾಶಿ: ಎಲ್ಲ ಸಮಸ್ಯೆಗೂ ಒಂದೇ ರೀತಿಯ ಪರಿಹಾರವಿಲ್ಲ‌. ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು. ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನೂತನ ಉದ್ಯೋಗವನ್ನು ಅರಸುತ್ತಿರುವಿರಿ. ಈಗಾಗಲೇ ಉದ್ಯೋಗದಲ್ಲಿ ಇರುವವರು ವೇತನವನ್ನು ಹೆಚ್ಚಿಸಲು ವಿನಂತಿಸಲಿದ್ದೀರಿ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ತುಡಿತವಿದ್ದು ಮಾರ್ಗದರ್ಶನ ಹಾಗೂ ಸಹಾಯದ ಕೊರತೆ ಇರಲಿದೆ. ಯಾವುದನ್ನೂ ಮನಸ್ಸಿನಲ್ಲಿ ಅತಿಯಾಗಿ ಅಂದುಕೊಳ್ಳುವುದು ಬೇಡ.

ಸಿಂಹ ರಾಶಿ: ಯಾರನ್ನೋ ಮೆಚ್ಚಿಸಲು ನಿಮ್ಮ ಸಮಯವನ್ನು ವ್ಯಯಿಸಬೇಕಾಗುವುದು. ದುರಾಸೆಯಿಂದ ಸಂಕಷ್ಟವನ್ನು ಹೆಚ್ಚು ಮಾಡಿಕೊಳ್ಳುವಿರಿ. ಯಾರಿಗಾದರೂ ಯೋಗ್ಯರಿಗೆ ದಾನವನ್ನು ಮಾಡಿ. ನಿಮ್ಮವರಿಗೆ ನೀಡಿದ ಹಣವನ್ನು ಪಡೆಯಲು ಬಹಳ ಸಾಹಸ ಪಡುವಿರಿ. ಸಂಗಾತಿಯನ್ನು ನೀವು ಅಲಕ್ಷಿಸುವ ಸಾಧ್ಯತೆ ಇದೆ. ಮೌನದಿಂದ ಇರುವುದು ಒಳ್ಳೆಯದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲವನ್ನೂ ಪ್ರಾರಬ್ಧ ಎಂದು ಸುಮ್ಮನಾಗುವುದಕ್ಕಿಂತ ಭಿನ್ನವಾಗಿ ಯೋಚಿಸುವಿರಿ.

ಕನ್ಯಾ ರಾಶಿ: ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸುವ ಸರಳ ಉಪಾಯವಾಗಿದೆ. ನಿಮಗೆ ಪರಿಹರಿಸಿಕೊಳ್ಳಲು ಕಷ್ಟವಾದ ಸಮಸ್ಯೆಯನ್ನು ನೀವು ಅನುಭವಿಗಳ ಅಥವಾ ಆಪ್ತರ ಜೊತೆ ಹಂಚಿಕೊಳ್ಳಿ. ಸಜ್ಜನಿಕೆಯನ್ನು ತೋರಿಸಲು ಹೋಗಿ ಕಷ್ಟಕ್ಕೆ ಸಿಕ್ಕಿಕೊಳ್ಳುವಿರಿ. ಕಾನೂನಾತ್ಮಕ ಗೆಲವು ಬಂದರೂ ಎದರಾಳಿಗಳು ಸಮ್ಮನಿರರು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ನಿಮಗೆ ಬೇಸರವಾಗಬಹುದು. ಧಾರ್ಮಿಕತೆಯಲ್ಲಿ ಅನಿರೀಕ್ಷಿತವಾಗಿ ಭಾಗವಹಿಸುವಿರಿ. ಸುಮ್ಮನೇ ಖರ್ಚಿಗೊಂದು ದಾರಿಯಾಗುದು.

ತುಲಾ ರಾಶಿ: ನೀವು ಇಂದು ಬುದ್ಧಿವಂತರಾದರೆ ಸಾಲದು. ಅದನ್ನು ಪ್ರಯೋಗಿಸುವ ಚಾಣಾಕ್ಷತೆಯೂ ಬೇಕು. ಯಾವುದನ್ನೂ ಕೊಂಡುಕೊಳ್ಳಬಹುದು. ಆದರೆ ನೆಮ್ಮದಿ ಸುಖವನ್ನು ಖರೀದಿಸಲಾಗದು. ಇರುವುದರಲ್ಲಿ ನೆಮ್ಮದಿಯಿದೆ.‌ ಕೆಲಸದಲ್ಲಿ ಉತ್ಸಾಹ ಕಡಿಮೆ ಎನಿಸಿದಾಗ ಸ್ವಲ್ಪ ಸಮಯ ಬೇರೆ ಕಾರ್ಯದಲ್ಲಿ ಮಗ್ನರಾಗಿ. ಕಛೇರಿಯ ಒತ್ತಡವನ್ನು ನೀವು ಕಳೆದುಕೊಳ್ಳಲು ಇಚ್ಛಿಸುವಿರಿ. ತಾನು ಮಾಡಿದ್ದನ್ನು ತಾನೇ ಉಣ್ಣಬೇಕು ಎಂಬ ಸತ್ಯ ಅರಿವಿಗೆ ಬರುವುದು. ಹಿರಿಯರ ಮಾತನ್ನು ನಿರ್ಲಕ್ಷಿಸದೇ ಪಾಲಿಸಿ.

ವೃಶ್ಚಿಕ ರಾಶಿ: ಅನಧಿಕೃತ ವಿಚಾರಕ್ಕೆ ನೀವು ಮನಸ್ಸು ಮಾಡುವುದು ಬೇಡ. ಒಮ್ಮೆಲೇ ದೊಡ್ಡ ಯೋಚನೆಯನ್ನು ಕಾರ್ಯಗತಗೊಳಿಸುವುದು ಬೇಡ. ನೀವು ಮೊದಲು ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಯಾವ ಕಾರ್ಯವನ್ನೇ ಮಾಡಿದರೂ ದಾಖಲೆಗಳು ಅತ್ಯವಶ್ಯಕ. ಪೂರ್ಣವಾಗಿ ಅರ್ಥವಾದಮೇಲೆ ಮುಂದುವರಿಯಿರಿ. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ.

ಧನು ರಾಶಿ: ಪಾಲಕರಿಗೆ ನಿಮ್ಮನ್ನು ದೂರ ಕಳುಹಿಸುವುದು ಕಷ್ಟವಾದೀತು. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಮನೆಯಲ್ಲಿ ಆಡಿದ ಮಾತುಗಳಿಂದ ನೀವು ಹೊರಬರಲು ಸಮಯಬೇಕಾದೀತು. ಉದ್ಯೋಗದ ಕಾರ್ಯಕ್ಕೆ ಹೊರವಲಯಕ್ಕೆ ಹೋಗುವಿರಿ. ಸಂಗಾತಿಯ ಮೇಲೆ ಅನುಮಾನದ ದೃಷ್ಟಿ ಇರಲಿದೆ‌. ಸ್ವಾರ್ಥದಿಂದ ನಿಮಗೇ ಕಷ್ಟಗಳು ಗೊತ್ತಾಗುತ್ತದೆ. ನೀವು ಮಾತನಾಡುವುದು ನಿಮ್ಮ ವೈಯಕ್ತಿಕದ್ದಾಗಿರದು. ತಾಯಿಗೆ ನೋಯಿಸದೇ ಇರಲು ಪ್ರಯತ್ನಿಸಿ.

ಮಕರ ರಾಶಿ: ತಪ್ಪು ಆಲೋಚನೆಗಳಿಂದ ಮಾಡಿದ ಕಾರ್ಯವು ತಪ್ಪಾಗಿಯೇ ಆಗುತ್ತದೆ. ಶಾರೀರಿಕ ಕೊರತೆಯನ್ನು ನೀಗಿಸಿಕೊಳ್ಳಲು ವೈದ್ಯರ ಭೇಟಿ ಮಾಡುವಿರಿ. ನೀವು ಸಂಗಾತಿಯ ಮೇಲೆ ಭಾವನಾತ್ಮಕವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಸಂಗಾತಿಯನ್ನು ಬಿಡಲು ನಿಮಗೆ ಕಷ್ಟವಾದೀತು. ಆರ್ಥಿಕ ಸ್ಥಿತಿಯನ್ನು ಬಹಳ ಪರಿಶ್ರಮದಿಂದ‌ ಸರಿಮಾಡಿಕೊಳ್ಳುವಿರಿ. ಹೊಸ ಮನೆಯ ಖರೀದಿಗೆ ಹುಡುಕಾಟ ಮಾಡುವಿರಿ. ವಿವಾದವಾಗುವ ಮಾತುಗಳನ್ನು ಆಡಬೇಡಿ.

ಕುಂಭ ರಾಶಿ: ಯಾವುದನ್ನಾದರೂ ಮೊದಲು ಬಂದಂತೆ ಸ್ವೀಕರಿಸಿ. ಅನಂತರ ಅದನ್ನು ನಿಮಗೆ ಬೇಕಾದಂತೆ ಮಾಡಿಕೊಳ್ಳಬಹುದು. ಭರವಸೆಯೇ ನಿಮಗೆ ಭವಿಷ್ಯದ ಬೆಳಕಾಗಲಿದೆ. ಮಾನಸಿಕವಾಗಿ ನೀವು ದುರ್ಬಲವಾದರೆ ಸ್ವಲ್ಪ ಸಮಯ ಏಕಾಂತವಾಗಿ ಇರಿ. ನಿಮ್ಮ ಯೋಜನೆಗಳು ಇನ್ನೊಬ್ಬರಿಗೆ ಒಪ್ಪಿಗೆಯಾಗುವಂತೆ ಇರಲಿ. ನೌಕರರ ಅಜಾಗರೂಕತೆಯಿಂದ ನಷ್ಟವಾಗಲಿದ್ದು, ಏನನ್ನೂ ಹೇಳದ ಸ್ಥಿತಿ. ಎಲ್ಲದಕ್ಕೂ ಕೂಡಲೇ ಫಲ ಸಿಗಬೇಕು ಎಂಬ ಮಾನಸಿಕತೆಯಿಂದ ಹೊರಬರಬೇಕಾಗಬಹುದು.

ಮೀನ ರಾಶಿ: ಇಂದಿನ ವ್ಯಾಪಾರದ ನಷ್ಟವನ್ನು ಸಹಿಸಿಕೊಳ್ಳುವುದು ಕಷ್ಟವಾದೀತು. ಪೂರ್ಣ ವಿವರಗಳನ್ನು ಪಡೆದು ಕಾರ್ಯಪ್ರವೃತ್ತರಾಗಿ. ಆತುರದಲ್ಲಿ ಮಾಡಿದ ಕಾರ್ಯವನ್ನೇ ಮತ್ತೆ ಮಾಡಬೇಕಾದೀತು. ನಿಮ್ಮಿಂದ ಸಹಾಯವನ್ನು ಪಡೆದರೂ ಅದನ್ನು ಮರೆಯುವ ಹಿತಶತ್ರುಗಳು ಇರಬಹುದು. ನಿಮ್ಮ ಕಾರ್ಯವನ್ನು ನಕಾರಾತ್ಮಕವಾಗಿ ತಿಳಿಯಬಹುದು. ಮನೆಯಲ್ಲಿ ನಡೆಯುವ ಘಟನೆಗಳು ಕುತೂಹಲ ತರಿಸಬಹುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ.

ಲೋಹಿತ್ ಹೆಬ್ಬಾರ್ – 8762924271 (what’s app only)

Follow Us