AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahu Transit 2026: ವರ್ಷಾಂತ್ಯದ ರಾಹು ಸಂಕ್ರಮಣ, ಈ ನಾಲ್ಕು ರಾಶಿಯವರಿಗೆ ಎದುರಾಗಲಿದೆ ಕಠಿಣ ಸವಾಲುಗಳು!

ಈ ವರ್ಷಾಂತ್ಯದಲ್ಲಿ ರಾಹು ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ನಾಲ್ಕು ರಾಶಿಗಳಾದ ಮೇಷ, ಕರ್ಕಾಟಕ, ಕುಂಭ ಮತ್ತು ಮೀನ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಆರ್ಥಿಕ ಸಂಕಷ್ಟ, ಆರೋಗ್ಯ ಸಮಸ್ಯೆಗಳು, ಉದ್ಯೋಗದಲ್ಲಿ ವಿರೋಧ ಮತ್ತು ಕೌಟುಂಬಿಕ ಕಲಹಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ತಾಳ್ಮೆ ಮತ್ತು ಎಚ್ಚರಿಕೆ ಅತೀ ಮುಖ್ಯ.

Rahu Transit 2026: ವರ್ಷಾಂತ್ಯದ ರಾಹು ಸಂಕ್ರಮಣ, ಈ ನಾಲ್ಕು ರಾಶಿಯವರಿಗೆ ಎದುರಾಗಲಿದೆ ಕಠಿಣ ಸವಾಲುಗಳು!
ರಾಹು ಸಂಚಾರImage Credit source: Getty Images
ಅಕ್ಷತಾ ವರ್ಕಾಡಿ
|

Updated on: Aug 20, 2026 | 4:19 PM

Share

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು ದೋಷಪೂರಿತ ಗ್ರಹ ಎಂದು ಕರೆಯಲಾಗುತ್ತದೆ. ರಾಹುವಿನ ಪ್ರತಿಯೊಂದು ಸಂಚಾರವೂ ಹನ್ನೆರಡು ರಾಶಿಗಳ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಈ ವರ್ಷದ ಅಂತ್ಯದ ವೇಳೆಗೆ ರಾಹು ತನ್ನ ರಾಶಿಯನ್ನು ಬದಲಾಯಿಸಿ ಮತ್ತೊಂದು ರಾಶಿಗೆ ಪ್ರವೇಶಿಸಲಿದ್ದು, ಇದರ ಪರಿಣಾಮವಾಗಿ ಮುಖ್ಯವಾಗಿ ನಾಲ್ಕು ರಾಶಿಗಳ ಜಾತಕದವರು ಹಲವು ರೀತಿಯ ಕಷ್ಟ-ನಷ್ಟಗಳನ್ನು ಎದುರಿಸಬೇಕಾಗಬಹುದು.

ಮೇಷ ರಾಶಿ:

ಮೇಷ ರಾಶಿಯವರು ಈ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಅರ್ಹ ಫಲಿತಾಂಶ ಸಿಗುವುದಿಲ್ಲ. ಆರ್ಥಿಕ ಹಿನ್ನಡೆಯ ಜೊತೆಗೆ ಆರೋಗ್ಯದಲ್ಲೂ ಏರಿಳಿತಗಳು ಉಂಟಾಗಬಹುದು. ಆದ್ದರಿಂದ ಈ ಸಮಯದಲ್ಲಿ ಯಾವುದೇ ಹೊಸ ಸಾಹಸ ಅಥವಾ ಹೊಸ ಕೆಲಸಗಳಿಗೆ ಕೈಹಾಕದಿರುವುದು ಉತ್ತಮ, ಇಲ್ಲವಾದಲ್ಲಿ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳಬಹುದು.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರು ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಎಚ್ಚರಿಕೆಯಿಂದ ಇಡಬೇಕಾಗಿದೆ. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆಗಳು ತೀವ್ರಗೊಳ್ಳುವ ಸಾಧ್ಯತೆಯಿದೆ. ಆದಾಯದ ಹರಿವು ಸಂಪೂರ್ಣವಾಗಿ ಕಡಿಮೆಯಾಗಲಿದ್ದು, ವಿಶೇಷವಾಗಿ ತಲೆನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಈ ಸಮಯದಲ್ಲಿ ತಾಳ್ಮೆಯಿಂದ ಇರುವುದು ಅತ್ಯಗತ್ಯ.

ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

ಕುಂಭ ರಾಶಿ:

ಕುಂಭ ರಾಶಿಯವರಿಗೆ ಸರ್ವತ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಎಷ್ಟೇ ಶ್ರಮಪಟ್ಟು ವ್ಯಾಸಂಗ ಮಾಡಿದರೂ ನಿರೀಕ್ಷಿತ ಫಲಿತಾಂಶ ಸಿಗದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಬಹುದು. ಕೆಲಸದ ಸ್ಥಳದಲ್ಲೂ ಸಹೋದ್ಯೋಗಿಗಳಿಂದ ಅಥವಾ ಮೇಲಾಧಿಕಾರಿಗಳಿಂದ ವಿರೋಧ ಎದುರಾಗಲಿದ್ದು, ಕಚೇರಿಯಲ್ಲಿ ತೊಂದರೆಗಳು ಹೆಚ್ಚಾಗಲಿವೆ. ನಿಮ್ಮ ತಾಳ್ಮೆಯೇ ಈ ಸಮಯದಲ್ಲಿ ನಿಮ್ಮ ಬಲವಾಗಿರುತ್ತದೆ.

ಮೀನ ರಾಶಿ:

ಮೀನ ರಾಶಿಯವರಿಗೆ ಹಲವು ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡು ಉತ್ತಮ ಸಮಯವೆನಿಸಿದರೂ, ಕೆಲವು ಸಮಸ್ಯೆಗಳು ಬೆನ್ನುಬಿಡುವುದಿಲ್ಲ. ವಿಶೇಷವಾಗಿ ಕುಟುಂಬದಲ್ಲಿ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೊಡ್ಡ ಜಗಳವಾಗಿ ಮಾರ್ಪಟ್ಟು, ಮನಃಶಾಂತಿಯನ್ನು ಭಂಗಗೊಳಿಸಬಹುದು. ಇದು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಸಾಧ್ಯತೆಯಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us