AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್​​ಗಾಗಿ ವಿಲನ್ ಆಗಲಿದ್ದಾರೆ ತೆಲುಗಿನ ಸ್ಟಾರ್ ಹೀರೋ

Rajinikanth movie: ರಜನೀಕಾಂತ್ ಅವರು ‘ಜೈಲರ್ 2’ ಮತ್ತು ‘ಧರ್ಮನ್’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಜನೀಕಾಂತ್ ನಟಿಸುತ್ತಿರುವ ‘ಧರ್ಮನ್’ ಸಿನಿಮಾ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಈ ಸಿನಿಮಾ ಅನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ವೈದ್ಯನ ಪಾತ್ರದಲ್ಲಿ ರಜನೀಕಾಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಿನಿಮಾಕ್ಕೆ ವಿಲನ್ ಆಗಿ, ತೆಲುಗಿನ ಸ್ಟಾರ್ ಹೀರೋ ಎಂಟ್ರಿ ಕೊಟ್ಟಿದ್ದಾರೆ.

ರಜನೀಕಾಂತ್​​ಗಾಗಿ ವಿಲನ್ ಆಗಲಿದ್ದಾರೆ ತೆಲುಗಿನ ಸ್ಟಾರ್ ಹೀರೋ
Dharman
ಮಂಜುನಾಥ ಸಿ.
|

Updated on: Aug 20, 2026 | 3:40 PM

Share

ಮುಖ್ಯಾಂಶಗಳು

  • ರಜನೀಕಾಂತ್ ‘ಧರ್ಮನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
  • ಈ ಸಿನಿಮಾಕ್ಕೆ ವಿಲನ್ ಆಗಿ ಸ್ಟಾರ್ ಹೀರೋ ಎಂಟ್ರಿ ಕೊಟ್ಟಿದ್ದಾರೆ.
  • ರಜನೀಕಾಂತ್​​ಗಾಗಿ ವಿಲನ್ ಆದ ಆ ಹೀರೋ ಯಾರು?

ನಾಯಕರಾಗಿ ನಟಿಸಿದವರು ತೀರ ವಯಸ್ಸಾದ ಬಳಿಕ ವಿಲನ್​ ಪಾತ್ರಗಳಲ್ಲಿ ನಟಿಸುತ್ತಾರೆ. ಆದರೆ ಇದೀಗ ತೆಲುಗಿನ ಸ್ಟಾರ್ ನಟರೊಬ್ಬರು ಇನ್ನೂ ನಾಯಕನಾಗಿ ಸಾಕಷ್ಟು ಬೇಡಿಕೆ ಇರುವಾಗಲೇ ವಿಲನ್ ಆಗಿ ನಟಿಸಲು ಸಿದ್ಧವಾಗಿದ್ದಾರೆ. ಆದರೆ ಅವರು ಈ ದಿಟ್ಟ ನಿರ್ಣಯ ಕೈಗೊಂಡಿರುವುದು ರಜನೀಕಾಂತ್ (Rajinikanth) ಅವರಿಗಾಗಿ. ತೆಲುಗಿನ ಸ್ಟಾರ್ ನಾಯಕ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ರಾಮ್ ಪೋತಿನೇನಿ ಇದೀಗ ರಜನೀಕಾಂತ್ ನಟಿಸುತ್ತಿರುವ ಹೊಸ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರಾಮ್ ಪೋತಿನೇನಿ, ತೆಲುಗಿನ ಬೇಡಿಕೆಯ ನಾಯಕ ನಟ. ಕಳೆದ 20 ವರ್ಷಗಳಿಂದಲೂ ಅವರು ತೆಲುಗಿನ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ದೇವದಾಸು’, ‘ರೆಡಿ’, ‘ನೇನು ಶೈಲಜಾ’, ‘ಇಸ್ಮಾರ್ಟ್ ಶಂಕರ್’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ರಾಮ್ ನಟಿಸಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ಆಂಧ್ರ ಕಿಂಗ್ ತಾಲ್ಲೂಕ’ ಹೆಸರಿನ ಸಿನಿಮಾ ಸಹ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಪ್ರಸ್ತುತ ಅವರು ತಮ್ಮದೇ ನಿರ್ದೇಶನದ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ನಾಯಕನಾಗಿ ಬ್ಯುಸಿ ಆಗಿರುವಾಗಲೇ ರಾಮ್ ಅವರು ವಿಲನ್ ಪಾತ್ರವನ್ನು ಒಪ್ಪಿಕೊಂಡಿರುವುದು ಅವರ ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ.

ರಾಮ್ ಪೋತಿನೇನಿ ಅವರು ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ‘ಧರ್ಮನ್’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ. ಅಶ್ವತ್ಥ್ ಮಾರಿಮುತ್ತು ನಿರ್ದೇಶನ ಮಾಡುತ್ತಿರುವ ‘ಧರ್ಮನ್’ ನಲ್ಲಿ ರಾಮ್ ಪೋತಿನೇನಿ ವಿಲನ್ ಆಗಿದ್ದು, ಅವರ ಅಭಿಮಾನಿಗಳು ಹಿಂದೆಂದೂ ನೋಡಿರದ ಭಿನ್ನ ರೀತಿಯ ಪಾತ್ರದಲ್ಲಿ ರಾಮ್ ಪೋತಿನೇನಿ ಕಾಣಿಸಿಕೊಳ್ಳಲಿದ್ದಾರೆ. ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರಿಗಾಗಿ ರಾಮ್ ಪೋತಿನೇನಿ ಈ ದಿಟ್ಟ ನಿರ್ಧಾರ ಕೈಗೊಂಡಂತಿದೆ. ‘ಧರ್ಮನ್’ ಸಿನಿಮಾನಲ್ಲಿ ರಜನೀಕಾಂತ್ ಮಾವನಾಗಿ ನಟಿಸಿದರೆ ರಾಮ್ ಪೋತಿನೇನಿ ಅಳಿಯನ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಇದನ್ನೂ ಓದಿ:ರಜನೀಕಾಂತ್​​ರ ‘ಕೊಚಾಡಿಯನ್’ ಸಿನಿಮಾ ಮರು ಬಿಡುಗಡೆ: ಕೋರ್ಟ್ ಹೇಳಿದ್ದೇನು?

‘ಧರ್ಮನ್’ ಸಿನಿಮಾನಲ್ಲಿ ರಜನೀಕಾಂತ್ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಮೊದಲ ಶೆಡ್ಯೂಲ್ ಶೂಟಿಂಗ್ ಈಗಾಗಲೇ ಮುಗಿದಿದ್ದು, ಸಿನಿಮಾದ ಎರಡನೇ ಶೆಡ್ಯೂಲ್ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ. ಚಿತ್ರೀಕರಣ ಬಹುತೇಕ ಚೆನ್ನೈನಲ್ಲಿಯೇ ನಡೆಯುತ್ತಿದ್ದು, ಬಹುತೇಕ ಚಿತ್ರೀಕರಣವನ್ನು ಸೆಟ್​​ಗಳಲ್ಲಿಯೇ ಮಾಡಲಾಗುತ್ತಿದೆ. ಅಶ್ವತ್ಥ್ ಮಾರಿಮುತ್ತು ಈ ಹಿಂದೆ ಕೇವಲ ಎರಡು ಸಿನಿಮಾ ಮಾತ್ರ ನಿರ್ದೇಶಿಸಿದ್ದು ಎರಡೂ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಅವರು ತಮಿಳಿನ ‘ಓಹ್ ಮೈ ಕಡವುಲೆ’ ಮತ್ತು ‘ಡ್ರ್ಯಾಗನ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ಮೂರನೇ ಸಿನಿಮಾ ‘ಧರ್ಮನ್’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us