AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೇರವಾಗಿ ನಾಮಿನೇಟ್ ಮಾಡ್ತೀನಿ’: ಎಚ್ಚರಿಕೆ ಕೊಟ್ಟ ಕಿಚ್ಚ

ಈ ಸೀಸನ್ನಿನಲ್ಲಿ ಬಿಗ್​​ಬಾಸ್​ ನಿಯಮಗಳನ್ನು ಉದ್ದೇಶ ಪೂರ್ವಕವಾಗಿ ಯಾವುದೇ ಭಯ ಇಲ್ಲದೆ ಮುರಿಯಲಾಗುತ್ತಿದೆ. ಬಿಗ್​​ಬಾಸ್ ಮಾತಿಗೂ ಸಹ ಕ್ಯಾರೇ ಎನ್ನುವುದಿಲ್ಲ ಕೆಲವರು. ಕೆಲವರಂತೂ ಬೇಕು-ಬೇಕೆಂದೇ ನಿಯಮ ಮುರಿದು ಮನೆ ಮಂದಿಗೆ ಶಿಕ್ಷೆ ಕೊಡಿಸಿದ್ದೂ ಸಹ ಇದೆ. ಕಳೆದ ಮೂರು ವಾರದಿಂದ ಇದನ್ನೆಲ್ಲ ನೋಡಿ ಸಾಕಾಗಿದ್ದ ಸುದೀಪ್ ಅವರು ಈ ಬಾರಿ ಮನೆಯ ಸದಸ್ಯರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

‘ನೇರವಾಗಿ ನಾಮಿನೇಟ್ ಮಾಡ್ತೀನಿ’: ಎಚ್ಚರಿಕೆ ಕೊಟ್ಟ ಕಿಚ್ಚ
Bigg Boss Kannada 13
ಮಂಜುನಾಥ ಸಿ.
|

Updated on: Sep 26, 2026 | 9:59 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಪಂಚಾಯ್ತಿ
  • ಸ್ಪರ್ಧಿಗಳಿಗೆ ಸುದೀಪ್ ನೇರ ಎಚ್ಚರಿಕೆ
  • ನಿಯಮ ಮುರಿದ ಸ್ಪರ್ಧಿಗಳಿಗೆ ಎಚ್ಚರಿಕೆ

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಬಹುಷಃ ಹಿಂದಿನ ಯಾವ ಸೀಸನ್ನಿನಲ್ಲೂ ಮಾಡದಷ್ಟು ನಿಯಮಗಳನ್ನು ಮುರಿಯಲಾಗುತ್ತಿದೆ. ಮೊದಲಿನ ಸೀಸನ್ನುಗಳಲ್ಲಿಯೂ ಸಹ ನಿಯಮಗಳನ್ನು ಮುರಿಯಲಾಗಿತ್ತು ಆದರೆ ಅದು ಉದ್ದೇಶ ಪೂರ್ವಕ ಆಗಿರಲಿಲ್ಲ. ಆದರೆ ಈ ಸೀಸನ್ನಿನಲ್ಲಿ ಬಿಗ್​​ಬಾಸ್​ ನಿಯಮಗಳನ್ನು ಉದ್ದೇಶ ಪೂರ್ವಕವಾಗಿ ಯಾವುದೇ ಭಯ ಇಲ್ಲದೆ ಮುರಿಯಲಾಗುತ್ತಿದೆ. ಬಿಗ್​​ಬಾಸ್ ಮಾತಿಗೂ ಸಹ ಕ್ಯಾರೇ ಎನ್ನುವುದಿಲ್ಲ ಕೆಲವರು. ಕೆಲವರಂತೂ ಬೇಕು-ಬೇಕೆಂದೇ ನಿಯಮ ಮುರಿದು ಮನೆ ಮಂದಿಗೆ ಶಿಕ್ಷೆ ಕೊಡಿಸಿದ್ದೂ ಸಹ ಇದೆ. ಕಳೆದ ಮೂರು ವಾರದಿಂದ ಇದನ್ನೆಲ್ಲ ನೋಡಿ ಸಾಕಾಗಿದ್ದ ಸುದೀಪ್ ಅವರು ಈ ಬಾರಿ ಮನೆಯ ಸದಸ್ಯರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ನಿಯಮ ಮುರಿಯುವುದರಲ್ಲಿ ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಮುಂದೆ. ಪದೇ ಪದೇ ನಿಯಮ ಮುರಿಯುತ್ತಾರೆ. ಕ್ಯಾಪ್ಟನ್ ಹೇಳುವುದು ಕೇಳುವುದಿಲ್ಲ. ಕ್ಯಾಪ್ಟನ್ ಆದೇಶ ಪಾಲಿಸುವುದಿಲ್ಲ. ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ ಮತ್ತು ಅದರ ಬಗ್ಗೆ ಕೇರ್ ಸಹ ಮಾಡುವುದಿಲ್ಲ. ಬಿಗ್​​ಬಾಸ್ ಆದೇಶಕ್ಕೂ ಸಹ ಬೆಲೆ ಕೊಡದೇ ವರ್ತಿಸುತ್ತಾರೆ. ಇದನ್ನು ಗಮನಿಸಿದ್ದ ಸುದೀಪ್ ಅವರು ಈ ವಾರ ನಿಯಮ ಮುರಿಯುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬರುತ್ತಿವೆ ಹಲವು ಹಿಟ್ ಸಿನಿಮಾ, ನಿಮ್ಮ ಆಯ್ಕೆ ಯಾವುದು?

ಈ ಬಾರಿ ಬಾತ್​​​ರೂಂ ಕ್ಲೀನಿಂಗ್ ಡ್ಯೂಟಿಯಲ್ಲಿದ್ದ ಲಿಖಿತ್ ಮತ್ತು ಯಶಸ್ ಅವರು ಬಾತ್​​​ರೂಂ ಕ್ಲೀನ್ ಮಾಡಿರಲಿಲ್ಲ. ಕ್ಯಾಪ್ಟನ್ ಸಂಗೀತಾ ಪದೇ ಪದೇ ಹೇಳಿದರೂ ಸಹ ಕೆಲಸ ಮಾಡದೆ ಉದ್ದಟತನ ಮೆರೆದಿದ್ದರು. ಹಾಗಾಗಿ ಸುದೀಪ್ ಅವರು ಲಿಖಿತ್ ಹಾಗೂ ಯಶಸ್ ಇಬ್ಬರನ್ನೂ ಸಹ ಜೈಲಿನಲ್ಲಿರಿಸಿ, ಅಲ್ಲೇ ಅವರಿಗೆ ಬುದ್ಧಿ ಹೇಳಿದರು.

ಇದು ‘ನಮ್ಮ ಮನೆ, ಇಲ್ಲಿ ನೀವು ಅತಿಥಿಗಳು ಮಾತ್ರ’ ಅದನ್ನು ಹೇಗಿಟ್ಟುಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ನೀವು ಸ್ವಚ್ಛ ಮಾಡಿಲ್ಲವೆಂದರೆ ನಾನೇ ಬಂದು ಸ್ವಚ್ಛ ಮಾಡುತ್ತೇನೆ. ನಮ್ಮ ಮನೆಯನ್ನು ಹಾಳು ಮಾಡಲು ನಾವು ಬಿಡುವುದಿಲ್ಲ’ ಎಂದರು. ಅಲ್ಲದೆ ಪದೇ ಪದೇ ನಿಯಮ ಮುರಿಯುವ, ನಿಯಮದ ಬಗ್ಗೆ ಗೌರವ ಇಲ್ಲದೇ ವರ್ತಿಸುವವರನ್ನು ನಾನು ಇಲ್ಲಿಂದಲೇ ನೇರವಾಗಿ ನಾಮಿನೇಟ್ ಮಾಡುತ್ತೇನೆ’ ಎಂದು ಎಚ್ಚರಿಕೆ ಕೊಟ್ಟರು ಕಿಚ್ಚ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ