AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BWF World C’ships: 15 ವರ್ಷಗಳ ಬರ ಅಂತ್ಯ; ಇತಿಹಾಸ ಸೃಷ್ಟಿಸಿದ ತ್ರಿಶಾ- ಗಾಯತ್ರಿ ಜೋಡಿ

World Badminton Championships 2026: ದೆಹಲಿಯಲ್ಲಿ ನಡೆಯುತ್ತಿರುವ 2026 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಐತಿಹಾಸಿಕ ಜಯ ಸಾಧಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ಜೋಡಿಯನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸುವುದರ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದೆ. ಇದು ಕಳೆದ 15 ವರ್ಷಗಳಲ್ಲಿ ಭಾರತ ಮಹಿಳಾ ಡಬಲ್ಸ್ ವಿಭಾಗದಲ್ಲಿ ಗೆಲ್ಲುತ್ತಿರುವ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕವಾಗಿದೆ, ಭಾರತೀಯ ಬ್ಯಾಡ್ಮಿಂಟನ್‌ಗೆ ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಪೃಥ್ವಿಶಂಕರ
|

Updated on: Aug 21, 2026 | 4:32 PM

Share
ದೆಹಲಿಯಲ್ಲಿ ನಡೆಯುತ್ತಿರುವ 2026 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಐದನೇ ದಿನದಂದು ಭಾರತದ ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸುವ ಮೂಲಕ ಸೆಮಿಫೈನಲ್​ಗೆ ಅರ್ಹತೆ ಪಡೆದಿದೆ. ಈ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದೆ.

1 / 5
ಶುಕ್ರವಾರ ನಡೆದ ರಣ ರೋಚಕ ಪಂದ್ಯದಲ್ಲಿ, ಶ್ರೇಯಾಂಕವಿಲ್ಲದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ 1 ಗಂಟೆ 9 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಚೀನಾದ ಪ್ರಬಲ ಜೋಡಿ ಜಿಯಾ ಯಿ ಫ್ಯಾನ್ ಮತ್ತು ಜಾಂಗ್ ಶು ಜಿಯಾನ್ ಅವರನ್ನು 16-21, 21-15, 21-13 ಸೆಟ್‌ಗಳಿಂದ ಸೋಲಿಸಿತು.

2 / 5
ಈ ಗೆಲುವು ಭಾರತೀಯ ಬ್ಯಾಡ್ಮಿಂಟನ್‌ಗೆ ಮಹತ್ವದ್ದಾಗಿದೆ, ಏಕೆಂದರೆ ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತ ಕಳೆದ 15 ವರ್ಷಗಳಿಂದ ಪದಕ ಗೆದ್ದಿಲ್ಲ. ಕೊನೆಯ ಬಾರಿಗೆ 2011 ರಲ್ಲಿ ಭಾರತದ  ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಕಂಚಿನ ಪದಕ ಗೆದ್ದಿತ್ತು.

3 / 5
ದೆಹಲಿಯ ಇಂದಿರಾ ಗಾಂಧಿ ಅರೆನಾದಲ್ಲಿ ನಡೆದ ಈ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಎದುರು ಮೊದಲ ಗೇಮ್​ನ ಆರಂಭದಲ್ಲಿ ಚೀನಾ ಆಟಗಾರ್ತಿಯರು 1-6 ಅಂತರದಲ್ಲಿ ಮುನ್ನಡೆ ಸಾಧಿಸಿದರು. ನಂತರ ಭಾರತೀಯ ಜೋಡಿ ಸತತ ಆರು ಪಾಯಿಂಟ್‌ಗಳನ್ನು ಗಳಿಸಿ ಅಂತರವನ್ನು 8-9ಕ್ಕೆ ಇಳಿಸಿತ್ತಾದರೂ ಚೀನಾ ಜೋಡಿ ಮೊದಲ ಗೇಮ್ ಅನ್ನು 21-16ರಿಂದ ಗೆದ್ದುಕೊಂಡಿತು.

4 / 5
ಆದರೆ ಎರಡನೇ ಗೇಮ್ ಅನ್ನು ಭಾರತದ ಜೋಡಿ 21-15ರಿಂದ ಗೆದ್ದು ಪಂದ್ಯವನ್ನು ಸಮಬಲಗೊಳಿಸಿತು. ಮೂರನೇ ಗೇಮ್‌ನಲ್ಲಿ, ಭಾರತೀಯ ಜೋಡಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ವಿರಾಮದ ವೇಳೆಗೆ 11-5 ಅಂತರದ ಮುನ್ನಡೆ ಸಾಧಿಸಿತು. ಭಾರತದ ದಾಳಿ ಮತ್ತು ಒತ್ತಡದಿಂದಾಗಿ ಚೀನಾದ ಆಟಗಾರ್ತಿಯರು ಅನಗತ್ಯ ತಪ್ಪುಗಳನ್ನು ಮಾಡಲು ಪ್ರಾರಂಭಿಸಿದರು. ಇದರ ಲಾಭ ಪಡೆದ ಭಾರತೀಯ ಜೋಡಿ ಒಂಬತ್ತು ಮ್ಯಾಚ್ ಪಾಯಿಂಟ್‌ಗಳನ್ನು ಗಳಿಸಿ ಅಂತಿಮವಾಗಿ ಪಂದ್ಯವನ್ನು 21-13 ಅಂತರದಿಂದ ಗೆದ್ದಿತು.

5 / 5
Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ

ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ

ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ

ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್

ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್

ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ

ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!

ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್