ದಿನ ಭವಿಷ್ಯ: ಇಂದು ಈ ರಾಶಿಯವರು ಪಡೆಯಬೇಕಾದುದನ್ನು ಕಾನೂನಾತ್ಮಕವಾಗಿ ಪಡೆಯುವರು…

Horoscope Today 26 August : ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಬುಧವಾರದಂದು ವಿವಾದ, ಧಾರ್ಮಿಕ ಆಚರಣೆ, ವಸ್ತುಸ್ಥಿತಿಯ ಅವಲೋಕನ, ಆರ್ಥಿಕತೆಯ ಆತಂಕ, ನಿರುದ್ಯೋಗದಿಂದ ಮನಸ್ತಾಪ, ಸ್ಪರ್ಧೆಯಲ್ಲಿ ಗೆಲವು, ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಪಡೆಯಬೇಕಾದುದನ್ನು ಕಾನೂನಾತ್ಮಕವಾಗಿ ಪಡೆಯುವರು...
ದಿನ ಭವಿಷ್ಯ
Edited By:

Updated on: Aug 26, 2026 | 12:06 AM

ಮೇಷ ರಾಶಿ:

ನಿಮ್ಮ ಉತ್ಸಾಹವೇ ಸಮಸ್ಯೆಗಳಿಗೆ ರಾಮಬಾಣ. ನಿಮಗೆ ಸ್ವಂತ ಉದ್ಯೋಗದ ಮೇಲೆ ಇರಬೇಕಾದ ಕಾಳಜಿಯು ಅನ್ಯ ಕಾರಣದಿಂದ‌ ಕಡಿಮೆಯಾಗಿ ನಷ್ಟವನ್ನು ಅನುಭವಿಸಬೇಕಾದೀತು. ಬಂದಿದ್ದನ್ನು ಎದುರಿಸುವ ಮನೋಬಲ ಹಾಗೂ ದೇಹಬಲ ಚೆನ್ನಾಗಿರುವುದು. ಯಾರೋ ಕೆಲವರಿಗಾಗಿ ನೀವು ಬದಲಾಗುವುದು ಬೇಡ. ಅಪರೂಪದ ಸ್ನೇಹಿತರನ್ನು ಮನೆಗೆ ಕರೆದು ಸಂತೋಷಪಡುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ.

ವೃಷಭ ರಾಶಿ:

ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಹೋಗುವಿರಿ. ಇಂದು ನೀವು ನಿಮಗೆ ವಹಿಸಿದ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ಮಗ್ನರಾಗುವಿರಿ. ಆಸಕ್ತಿ ಇದ್ದರೂ ಅನಿವಾರ್ಯ ಕಾರಣದಿಂದ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಿರಿ. ಸ್ವೇಚ್ಛಾಚಾರದ ವರ್ತನೆಯು ನಿಮ್ಮವರಿಗೆ ಇಷ್ಟವಾಗದು. ಗೊತ್ತಿದ್ದರೂ ಏನನ್ನೂ ಹೇಳದೇ ಮೌನದಿಂದ ಇರಲು ಪ್ರಯತ್ನಿಸುವಿರಿ. ಸ್ತ್ರೀಯರಿಂದ ತೊಂದರೆಯಾಗಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ.

ಮಿಥುನ ರಾಶಿ:

ನಿಮಗೆ ಗೊತ್ತಿಲ್ಲದ ಕಾರ್ಯವನ್ನೂ ನೀವು ಒಪ್ಪಿಕೊಳ್ಳುವಿರಿ. ಮಕ್ಕಳಿಗೆ ಇಂದು ಸ್ವಲ್ಪ ಹಣವನ್ನು ಖರ್ಚುಮಾಡಬೇಕಾದೀತು. ಓಡಾಟಕ್ಕೆ ವಾಹನದ ಅವಶ್ಯಕತೆ ಬೇಕೆನಿಸಬಹುದು. ಸುಳ್ಳು ಹೇಳಿ‌ ಸ್ವಾರ್ಥವನ್ನು ಸಾಧಿಸಿಕೊಳ್ಳುವಿರಿ. ಎದುರಾಳಿಗಳ ಬಲವನ್ನು ತಿಳಿದು ವ್ಯವಹರಿಸಿ. ನಿಮ್ಮ ಆತುರವು ಇನ್ನೊಬ್ಬರಿಗೆ ಪರಿಹಾಸವಾದೀತು. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟ.

ಕರ್ಕಾಟಕ ರಾಶಿ:

ವ್ಯಾಪಾರದ ಸ್ಥಳದಲ್ಲಿ ಕಲಹವಾಗುವ ಸಾಧ್ಯತೆ ಇದೆ. ಸಮಯವನ್ನು ನೋಡಿ ನೀವು ಮಾತನಾಡುವುದು ಒಳ್ಳೆಯದು. ಎಲ್ಲ ಸಂದರ್ಭದಲ್ಲಿ ನಿಮಗೆ ಗೌರವವು ಸಿಗುತ್ತದೆ ಎಂದು ನಂಬ ಬೇಡಿ. ನಿಮ್ಮ‌ ಸ್ಥಾನವನ್ನು ಉಳಿಸಿಕೊಳ್ಳಲು ಬಹಳ ಶ್ರಮಪಡುವಿರಿ. ನಿಮ್ಮ ದೃಷ್ಟಿಯಲ್ಲಿ ಯಾವುದೂ ಸರಿಯಾಗದು. ನೀವು ಅನುಸರಿಸುವ ಕ್ರಮದಲ್ಲಿ ವ್ಯತ್ಯಾಸ ಇರಬಹುದು. ವಿವಾಹಕ್ಕೆ ಬರುವ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಮಾತುಗಳಿಂದ ನೋವಾಗಲಿದೆ.

ಸಿಂಹ ರಾಶಿ:

ಉದ್ಯೋಗಕ್ಕೆ ವಿರಾಮ‌ ಹೇಳಿದ ನಿಮಗೆ ದಿಗ್ಭ್ರಾಂತಿಯಾಗಬಹುದು. ನೀವು ಇಂದು ಮನೆಗಾಗಿ ಏನನ್ನಾದರೂ ಕೊಡಲಿದ್ದೀರಿ. ಒಳ್ಳೆಯ ವ್ಯಕ್ತಿಯನ್ನು ನೀವು ದೂರಮಾಡಿಕೊಳ್ಳುವಿರಿ. ನಿಮ್ಮ‌ಕೆಲಸಗಳು ಕೆಲವು ನಿಷ್ಪ್ರಯೋಜಕವೂ ಆಗಬಹುದು. ದೇಹದ ಅಸ್ವಾಸ್ಥ್ಯವನ್ನು ಯೋಗದ ಮೂಲಕ ಸರಿ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ನಿಮ್ಮ ನೋವಿಗೆ ನೀವೇ ಔಷಧ ಮಾಡಿಕೊಳ್ಳಬೇಕು. ಯಾರೋ ಬರುತ್ತಾರೆ ಎಂದು ಕಾಯುವುದು ಬೇಡ.

ಕನ್ಯಾ ರಾಶಿ:

ಬದ್ಧತೆಯಿಂದ ಮಾಡಿದ ಕಾರ್ಯಕ್ಕೆ ಶ್ರೇಯಸ್ಸು ನಿಮ್ಮದೇ. ಅಕಾರಣವಾದ ವಿವಾದಗಳಿಂದ ಸಮಯವು ಹಾಳಾಗಬಹುದು.‌ ಆಕಸ್ಮಿಕವಾಗಿ ಬರುವ ಸುದ್ದಿಯಿಂದ ನಿಮಗೆ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರೆ ನಿಮಗರ ಸಿಗಬಹುದು. ರಾತ್ರಿಯಲ್ಲಿ ಒಂಟಿಯಾಗಿ ಸಂಚಾರ ಮಾಡುವುದು ಬೇಡ. ಭಯದಿಂದ ಅರೋಗ್ಯ ಕೆಡಲಿದೆ. ದಂಪತಿಗಳು ಜೊತೆಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ. ನಿಮಗೆ ಸಾಧಿಸುವ ಛಲವು ಬರಬಹುದು.

ತುಲಾ ರಾಶಿ:

ಇಂದು ನಿಮ್ಮ ಸೇವೆಗೆ ಗೌರವವು ಸಿಗಬೇಕಾದರೂ ಸಿಗದೇ ಹೋದೀತು. ಪ್ರಭಾವಿ ವ್ಯಕ್ತಿಗಳ ಜೊತೆ ಸೆಣಸುವ ಸನ್ನಿವೇಶಗಳು ಬರಬಹುದು. ಅನಧಿಕೃತಿ ವ್ಯವಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಅಂತರಂಗವು ನಕಾರಾತ್ಮಕವಾಗಿ ಏನನ್ನಾದರೂ ಹೇಳುತ್ತಿದ್ದರೆ ಅದನ್ನು ವ್ಯಕ್ತಪಡಿಸಲು ಹೋಗಬೇಡಿ. ವಿದೇಶ ಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ. ಉಪಕಾರದ ಸ್ಮರಣೆಯಿಂದ ಉಪಕೃತಿಯವರಿಗೆ ಆನಂದ.

ವೃಶ್ಚಿಕ ರಾಶಿ:

ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಎಂದೋ ಮಾಡಿದ ಉಪಕಾರವು ಇಂದು ನಿಮ್ಮ ಕೈ ಸೇರುವುದು. ನಿಶ್ಚಿತ ಕಾರ್ಯಗಳು ಸರಿಯಾಗಿ ಆಗದೇ ಇರುವುದು ಅಸಮಾಧನಕ್ಕೆ ಮುಖ್ಯಕಾರಣವಾಗಿದೆ. ಶ್ರಮದಿಂದ ಗೆಲ್ಲವುದು ಅಸಾಧ್ಯವಾದಾಗ ಬೇರೆ ದಾರಿಗಳು ತಾನಾಗಿಯೇ ತೆರೆಯುವುದು‌. ಬಂಧುಗಳ ವರ್ತನೆಯು ನಿಮಗೆ ಬೇಸರ ತರಿಸೀತು. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನ ಮಾಡುವುದು ಬೇಡ.

ಧನು ರಾಶಿ:

ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಪರರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ಬಂಧುಗಳ ಜೊತೆ ಸಂಬಂಧವನ್ನು ಇಟ್ಟುಕೊಳ್ಳುವುದು ನಿಮ್ಮ ವರ್ತನೆಯ ಮೇಲೆ ಇರುವುದು. ಹೊಸ‌ ಕೆಲಸವನ್ನೇನಾದರೂ ಆರಂಭಿಸಿದರೆ ಅದನ್ನು ನಿಮ್ಮ ಶತ್ರುಗಳು ನಿಲ್ಲಿಸುವರು. ವಿದ್ಯಾಭ್ಯಾಸದ ಹಿನ್ನಡೆಯಿಂದ ನಿಮಗೆ ಆತಂಕ ಹೆಚ್ಚಾಗುವುದು. ಹೊಂದಾಣಿಕೆಯನ್ನು ನೀವು ಬೆಳೆಸಿಕೊಳ್ಳಬೇಕಾಗಬಹುದು. ಸ್ನೇಹಿತರು ವಂಚಿಸುವ ಸಾಧ್ಯತೆ ಇದೆ.

ಮಕರ ರಾಶಿ:

ನಿಮ್ಮ ದುರುಪಯೋಗವನ್ನು ಸ್ನೇಹಿತರು ತಪ್ಪಿಸುವರು. ಇಂದು ನೀವು ಎಲ್ಲವನ್ನೂ ಮಾಡಬಲ್ಲವರು ಎಂಬ ಅಭಿಮಾನ ಉಂಟಾಗಲಿದೆ. ಆಪ್ತರೇ ನಿಮಗೆ ನಂಬಿಕೆಗೆ ದ್ರೋಹ ಬಗೆಯಬಹುದು. ಕೇಳಬೇಕಾದುದನ್ನು ನೇರವಾಗಿ ಕೇಳಿ. ಬಹಳ ದಿನಗಳಿಂದ ಉದ್ಯೋಗವು ಸಿಗದೇ ಮಾನಸಿಕವಾಗಿ ಕುಗ್ಗುವಿರಿ. ಉತ್ತಮ ಲಾಭಕ್ಕಾಗಿ ನೀವು ಯೋಜನೆಯನ್ನು ಹಾಕುವಿರಿ. ನಿಮ್ಮ ವಸ್ತುವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಅನುಕಂಪ ಬೇಕಸದೀತು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.

ಕುಂಭ ರಾಶಿ :

ಉದ್ಯೋಗದ ಸ್ಥಳವನ್ನು‌ ಸದ್ಯ ಅನ್ವೇಷಿಸುವುದು ಬೇಡ.‌ ಒಂದು ಕಡೆ ಸುಮ್ನನೆ‌ ಕುಳಿತು ಅಭ್ಯಾಸವಿರದು. ಬೇರೆಯವರಿಗೆ ಉಪಕಾರ ಮಾಡಲು ಹೋಗಿ ನಿಮಗೆ ಸಿಗುವುದು ಕಷ್ಟ. ಯಾರಮೇಲಾದರೂ ಅಪವಾದವನ್ನು ಮಾಡುವ ಮೊದಲು ಆಲೋಚಿಸಿ. ಆಪ್ತರ ಮಾತನ್ನು ಕೇಳದೇ ಬೇಸರಿಸುವ ಸಂದರ್ಭವು ಬರಬಹುದು. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಪರಿಚಿತರ ಮೂಲಕ ನಿಮಗೆ ಅಪರಿಚಿತರ ಸಹಾಯ ದೊರೆಯುವುದು.

ಮೀನ ರಾಶಿ:

ಆಕಸ್ಮಿಕ ಭೇಟಿಯು ಪ್ರೇಮವಾಗಿ ಬದಲಾಗಬಹುದು. ಮಕ್ಕಳ ಜೊತೆ ನೀವು ಹೆಚ್ಚಿನ ಸಮಯವನ್ನು ಕಳೆಯುವಿರಿ. ಯಾರ‌ ಮಾತನ್ನೋ‌ ನಂಬಿ ನಿಮ್ಮವರ ಮೇಲೆ‌ ಅನುಪಡುವಿರಿ. ಹೊರಗಿನ ಆಹಾರವನ್ನು ತಿನ್ನಲು ನೀವು ಇಚ್ಛಿಸುವಿರಿ. ಬಂದ ಹೊಣೆಗಾರಿಕೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಆಯುಷ್ಮಾನ್, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:21 – 13:54, ಯಮಗಂಡ ಕಾಲ 07:42 – 09:15, ಗುಳಿಕ ಕಾಲ 10:48 – 12:21

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us