
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವೃದ್ಧಿ, ಕರಣ : ವಣಿಜ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:38 – 09:14, ಯಮಗಂಡ ಕಾಲ 10:49 – 12:25, ಗುಳಿಕ ಕಾಲ 14:01 – 15:37
ಮೇಷ ರಾಶಿ: ವಾಹನ ಖರೀದಿ, ಚಿತ್ತದಲ್ಲಿ ಏಕಾಗ್ರತೆ ಬರುವುದು ಕಷ್ಟ. ಮನಸ್ಸು ಬಿಚ್ಚಿ ಹೇಳುವುದು ಸುಲಭದ್ದಲ್ಲ. ಇನ್ನೊಬ್ಬರಿಗೆ ಅಪಮಾನವಾಗುವಂತೆ ಇಂದಿನ ನಿಮ್ಮ ಮಾತು ಇರಬಹುದು. ಮರ ಕೆಲಸದವರಿಗೆ ಲಾಭ ಕಡಿಮೆ ಇದ್ದೀತು. ನಾಲ್ಕಾರು ಕಡೆಗಳಿಂದ ಹಣವನ್ನು ಪಡೆಯಲು ಬಂದರೂ ಅವರ ಕಣ್ತಪ್ಪಿಸಿ ದೂರಾಗುವಿರಿ. ಸ್ನೇಹಿತರು ನಂಬಿಕೆಗೆ ದ್ರೋಹ ಬಗೆಯಬಹುದು. ಖರೀದಿಯ ವೇಳೆ ಅಸಲಿ ನಕಲಿಗಳ ಬಗ್ಗೆ ಅರಿವು ಇರಲಿ.
ವೃಷಭ ರಾಶಿ: ಇಂದು ನಾನಾ ಕಡೆಗಳಿಂದ ಅಧಿಕ ಖರ್ಚುಗಳು ಹುಡುಕಿಕೊಂಡು ಬರಬಹುದು, ಜಾಗರೂಕರಾಗಿರಿ. ನಿತ್ಯಕರ್ಮವನ್ನು ಮಾಡಲು ಆಲಸ್ಯವು ಬರಬಹುದು. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾದೀತು. ಹೆಚ್ಚು ಮಾತುಕತೆಗಳು ತಂದೆಯ ಜೊತೆ ಆಡಬಹುದು. ಹೂಡಿಕೆಯಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡುವಿರಿ. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ.
ಮಿಥುನ ರಾಶಿ: ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ಕೃಷಿಕರಿಗೆ ಉತ್ತಮ ಧನಾಗಮನದಿಂದ ನೆಮ್ಮದಿ ಎನಿಸಿಬಹುದು. ಸಜ್ಜನರ ಸಹವಾಸವನ್ನು ಮಾಡುವ ಅವಕಾಶ ಸಿಗಲಿದೆ. ಮನಶ್ಚಾಂಚಲ್ಯವಿದ್ದರೆ ಧ್ಯಾನವನ್ನು ಮಾಡಬೇಕಾದೀತು. ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬಂದೀತು. ಸಹೋದರರ ನಡುವೆ ಘರ್ಷಣೆ ಮತ್ತೆ ಮತ್ತೆ ಬರಬಹುದು. ಉತ್ಪಾದನಾ ವಲಯದ ಉದ್ಯಮದಲ್ಲಿ ಹಿನ್ನಡೆಯಾಗಲಿದೆ. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು.
ಕರ್ಕಾಟಕ ರಾಶಿ: ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ಧಾರ್ಮಿಕ ಆಚಾರವಂತರಿಗೆ ಆಚರಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿದೆ. ನಿಮ್ಮ ಕೆಲಸವು ಪರಿಣಾಮದ ಮೇಲೆ ನಿಂತಿದೆ. ಉನ್ನತ ಹುದ್ದೆಯಲ್ಲಿರುವ ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿ ವರ್ಗದಿಂದ ಆಪಾದನೆಗಳು ಬರಬಹುದು. ಆರೋಗ್ಯದಲ್ಲಿ ಸುಧಾರಣೆ ಇದ್ದರೂ ಉತ್ಸಾಹದಿಂದ ಹೆಚ್ಚಿನ ಕೆಲಸವನ್ನು ಮಾಡಬೇಡಿ. ಬಂಧುವರ್ಗವು ನಿಮ್ಮನ್ನು ಸೇರಸಿಕೊಳ್ಳದೇ ಇದ್ದೀತು.
ಸಿಂಹ ರಾಶಿ: ಇಂದು ನೀವು ಮಂಗಲ ಕಾರ್ಯಗಳಿಂದ ಉತ್ಸಾಹವನ್ನು ಪಡೆದುಕೊಳ್ಳುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧವು ಆಕಸ್ಮಿಕವಾಗಿ ಬಂದು ಶೀಘ್ರವಾಗಿ ವಿವಾಹವು ಆಗುವುದು. ವ್ಯವಹಾರದಿಂದ ಉತ್ತಮ ಸಂಬಂಧವು ನಷ್ಟವಾಗಬಹುದು. ಆನಾರೋಗ್ಯಕ್ಕೆ ನೀವೇ ಔಷಧಿಯನ್ನು ಕೊಟ್ಟುಕೊಳ್ಳುವುದು ಉಚಿತವಲ್ಲ. ಉದ್ಯೋಗಸ್ಥರಿಗೆ ಉನ್ನತ ಅವಕಾಶ ಸಿಗಲಿದೆ. ಗೆಲುವನ್ನು ಇವರು ನಿರೀಕ್ಷಿಸಬಹುದು. ಸಂತಾನದ ವಿಚಾರದಲ್ಲಿ ಶುಭ ಸೂಚನೆ ಇಂದು ನಿಮಗೆ ಸಿಗಲಿದೆ.
ಕನ್ಯಾ ರಾಶಿ: ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಬರುವುದು. ಪ್ರೇಮಿಯಿಂದ ನಿಮಗೆ ಧನಸಹಾಯ ಸಿಗಲಿದೆ. ಆದರೆ ಇದರಿಂದ ಅನಂತರ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವಿರಿ. ಇದು ನಿಮಗೆ ಮುಜುಗರವನ್ನೂ ಉಂಟುಮಾಡೀತು. ನಿಮ್ಮ ದೊಡ್ಡ ಸ್ಥಾನ ಇಂದು ನಗಣ್ಯವೆನಿಸಬಹುದು. ಅನ್ಯರು ನಿಮ್ಮ ಖಾಸಗಿ ವಿಚಾರಗಳಿಗೆ ಮನೆಯವರು ಮೂಗು ತೂರಿಸಿದರೆ ಸಿಟ್ಟುಗೊಳ್ಳುವಿರಿ. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವಿರಿ.
ತುಲಾ ರಾಶಿ: ಇಂದು ನಿಮ್ಮ ಶತ್ರುಗಳು ಜಯಗಳಿಸಿ ನಿಮ್ಮನ್ನು ಛೇಡಿಸಬಹುದು. ಸರ್ಕಾರಿ ಕಚೇರಿಯಲ್ಲಿ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಸಮಯಕ್ಕಾಗಿ ಕಾಯಬೇಕಾಗಬಹುದು. ಅಪೂರ್ಣತೆಯನ್ನು ಯಾರಿಗೂ ತಿಳಿಸುವ ಮನಸ್ಸಾಗದು. ಇಂದು ನೀವು ಹಣಕಾಸಿನ ವಿಚಾರದಲ್ಲಿ ನಿಷ್ಠುರದಿಂದ ವರ್ತಿಸಿದರೆ ಮಾತ್ರ ಲಾಭಗಳಿಸುವ ಸಾಧ್ಯತೆ ಇದೆ. ಸಾಲ ಪಡೆದವರ ಹುಡುಕಾಟವನ್ನು ಮಾಡುವಿರಿ. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯೂ ಇರುವುದು.
ವೃಶ್ಚಿಕ ರಾಶಿ: ನಿಮ್ಮ ಆದಾಯ ಚೆನ್ನಾಗಿದ್ದು, ಖರ್ಚುಗಳು ಆತಂಕಕ್ಕೆ ತಳ್ಳಬಹುದು. ಪರಿಚಿತರ ಪ್ರಭಾವದಿಂದ ವೃತ್ತಿಯಲ್ಲಿ ಮುನ್ನಡೆಯುವಿರಿ. ವೈಯಕ್ತಿಕ ಸ್ಥಾನಮಾನಗಳು ಹೆಚ್ಚಾಗಬಹುದು. ನೂತನ ಗೃಹ ನಿರ್ಮಾಣಕ್ಕೆ ಹಣದ ಹೊಂದಿಸುವಿಕೆಯಲ್ಲಿ ಮಗ್ನರಾಗುವಿರಿ. ಯೋಗವಿರುವತನಕ ಎಲ್ಲವೂ ಚೆನ್ನಾಗಿಯೇ ಇರುವುದು. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ದುರಾಸೆಯಿಂದ ಇರುವ ವಸ್ತುಗಳೂ ನಷ್ಟವಾಗುವುದು. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು.
ಧನು ರಾಶಿ: ಇಂದು ಪ್ರಮುಖ ವಿಚಾರಗಳಲ್ಲಿ ಹೆಚ್ಚು ವಿವೇಕಪೂರ್ವಕವಾಗಿ ಮುನ್ನಡೆಯುವು ಉತ್ತಮ. ವಿವೇಕಪೂರ್ಣವಾದ ಮಾತುಗಳಿಂದ ನಿಮ್ಮನ್ನು ಸರಿದಾರಿಗೆ ತರುವುದು ಕಷ್ಟವಾದೀತು. ನಿಮ್ಮಿಂದ ಸರ್ಕಾರದ ಅಧಿಕಾರಿಗಳು ಸಲಹೆ ಪಡೆಯುವರು, ಬೇಕಾದ ಸಹಾಯವನ್ನು ಮಾಡುವಿರಿ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯವೂ ಸಿಗಬಹುದು. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಬರುವುದು.
ಮಕರ ರಾಶಿ: ದಾಂಪತ್ಯದಲ್ಲಿ ಪ್ರೇಮಸಲ್ಲಪವು ಎಂದಿಗಿಂತ ಜೋರಾಗಿ ಇರಲಿದೆ. ಇಂದು ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಮಾಡಿ ಮುಗಿಸುವರು. ಸಮಾರಂಭದಲ್ಲಿ ನೀವು ಗುರುತಿಸಿಕೊಳ್ಳಲು ಬಯಸುವಿರಿ. ಯಾರಾದರೂ ಒಬ್ಬರೂ ತಲೆಬಾಗಲೇಬೇಕಾದೀತು. ಸಮಯಪಾಲನೆಗೆ ನೀವು ಪ್ರಸಿದ್ಧರಾಗುವಿರಿ. ಮೆಟ್ಟಿಲೇರಿವ ಆ ಕಡೆಗೆ ಗಮನ ಬೇಕು. ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ.
ಕುಂಭ ರಾಶಿ: ಪ್ರಯತ್ನವಿಲ್ಲದೇ ಯಾವುದೂ ಸಾಧ್ಯವಾಗದು ಎನ್ನುವ ಮಾತನ್ನು ಮನನ ಮಾಡಿಕೊಳ್ಳಿ. ಇಂದು ನಿಮ್ಮ ವ್ಯಾಪರಗಳು ಸುಲಲಿತವಾಗಿ ನಡೆದರೂ ಲಾಭದಲ್ಲಿ ಸ್ವಲ್ಪ ಕೊರತೆ ಎದ್ದು ಕಾಣುವುದು. ಎಲ್ಲರಿಗೂ ಸಲ್ಲುವಂತಾಗುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಮುಖ್ಯವಾಗಿ ಬೇಕಾಗುವುದು. ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳುವಿರಿ. ಗುರಿಯೊಂದುಕಡೆ ಗಮನ ಒಂದು ಕಡೆ ಆಗುವ ಸಾಧ್ಯತೆ ಇದೆ. ಬಂಧುಗಳೇ ನಿಮಗೆ ಹಿತವೆನಿಸುವುದು.
ಮೀನ ರಾಶಿ: ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ. ಅನ್ಯರಿಂದ ಮೆಚ್ಚುಗೆಯನ್ನು ನೀವು ನಿರೀಕ್ಷಿಸಿದ್ದು ತಪ್ಪಾಗುವುದು. ಇಂದು ನೀವು ಅಚ್ಚರಿಯ ಕಾರ್ಯ ಸಾಧನೆ ಮಾಡಲಿದ್ದೀರಿ. ಇದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ. ಕೆಲಸವನ್ನು ವಹಿಸಿಕೊಂಡು ಮಾಡುವ ಗುತ್ತಿಗೆದಾರರಿಗೆ, ಕಲಾವಿದರಿಗೆ ಇಂದು ಸಕಾಲವಾಗಿದೆ. ಸುಲಭವಾಗಿ ಯಾವುದೂ ಸಾಧ್ಯವಿಲ್ಲ ಎಂಬ ಸತ್ಯ ನಿಮ್ಮ ಅರಿವಿಗೆ ಬರುವುದು. ಎದುರಿಸಬಹುದಾದ ಸಮಸ್ಯೆಗೆ ಧೈರ್ಯದಿಂದ ಮುನ್ನುಗ್ಗಿ ಸರಿ ಮಾಡಿಕೊಳ್ಳಿ.
ಲೋಹಿತ್ ಹೆಬ್ಬಾರ್ – 8762924271 (what’s app only)