Daily Horoscope: ಈ ರಾಶಿಯವರ ವ್ಯವಹಾರದಲ್ಲಿ ಇಂದು ಅಧಿಕ ಲಾಭ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್​ 02: ಭಿನ್ನ ಮನಸ್ಸುಗಳ ಜೊತೆ ನಿಮಗೆ ಹೊಂದಾಣಿಕೆ ಅಸಾಧ್ಯನಿಮ್ಮ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇರದು. ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ಮಮಕಾರದಿಂದ ನಿಮಗೆ ತೊಂದರೆಯಾಗಲಿದೆ. ಹಾಗಾದರೆ ಅಕ್ಟೋಬರ್​ 02ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರ ವ್ಯವಹಾರದಲ್ಲಿ ಇಂದು ಅಧಿಕ ಲಾಭ
ರಾಶಿಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2024 | 12:20 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಬ್ರಹ್ಮ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:22 ರಿಂದ ಸಂಜೆ 01:51, ಯಮಘಂಡ ಕಾಲ ಬೆಳಿಗ್ಗೆ 07:53ರಿಂದ 09:23ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ10:52 ರಿಂದ 12:22 ರವರೆಗೆ.

ಸಿಂಹ ರಾಶಿ : ಪ್ರಯಾಣದಲ್ಲಿ ನಿಮಗೆ ಏನಾದರೂ ತೊಂದರೆ ಕಾಣಿಸೀತು. ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಯಾರನ್ನೋ ಸಂಶಯಿಸುತ್ತ ಇರುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿಗೆ ಹೇಳಿ.‌ ಇಂದು ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವುದು ಕಷ್ಟವಾದೀತು. ನಿಮ್ಮ ಮನಸ್ಸಿನ ಕೊಳ ತಿಳಿಯಾಗಿದ್ದರೆ ಏನು ಬಿದ್ದರೂ ಕಾಣಿಸುತ್ತದೆ. ಕಾರಣಾಂತರಗಳಿಂದ ನೀವು ಹೋಗುವ ಪ್ರಯಾಣವು ಸ್ಥಗಿತಗೊಳ್ಳಬಹುದು.‌ ಆಡಳಿತಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಆಗಬಹುದು. ದೂರ ಪ್ರಯಾಣವು ನಿಮಗೆ ಇಷ್ಟವಾದೀತು. ಪರಿಮಳದ ವೃಕ್ಷದ ಬಳಿ ನಿಂತರೆ ಅಲ್ಲಿಂದ ಬರುವ ಗಾಳಿಯೇ ನಿಮಗೆ ಸುಗಂಧವನ್ನು ಕೊಡುವುದು. ಇಂದು ಉದರಬಾಧೆಯಿಂದ ಸಂಕಟಪಡಬೇಕಾದೀತು.

ಕನ್ಯಾ ರಾಶಿ : ನಿಮ್ಮ ವಿರಾಮ ಸಮಯವನ್ನು ಯಾರಾದರೂ ಕಸಿದುಕೊಳ್ಳಬಹುದು. ಯಾರದೋ ಮಾತಿನ ಮೇರೆಗೆ ಇಂದು ಕುಟುಂಬದಲ್ಲಿ ಕಲಹವಾಗಬಹುದು. ಯಾರನ್ನೂ ನಿಮ್ಮ ಮೂಗಿನ ನೇರಕ್ಕೆ ಅಳೆಯಬಾರದು. ಇಂದು ನಿಮಗೆ ಕಛೇರಿಯ ಕೆಲಸಗಳು ಅತಿಯಾಗಿದೆ ಎಂದು ಅನ್ನಿಸಬಹುದು. ಕುರುಡಾಗಿ ಯಾರನ್ನೂ ನಂಬಲಸಹದು. ಸಂಗಾತಿಗೆ ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ನಿಮ್ಮ ಸಾಮರ್ಥ್ಯದಿಂದ ಉನ್ನತ ಹುದ್ದೆಯನ್ನು ನೀವು ಅಲಂಕರಿಸುವಿರಿ. ಭೀತಿಯಿದ್ದರೆ ಯಾವುದನ್ನೂ ಮಾಡಲಾಗದು, ಕಲಿಯಲೂ ಆಗದು. ಯಾವುದಕ್ಕಾದರೂ ಒಂದು ಮಾಪನವಿರಲಿ. ಚಂಚಲವಾದ ಮನಸ್ಸು ನಿಮಗೆ ಅನೇಕ ಒಳ್ಳೆಯ ಆಯ್ಕೆಯನ್ನು ತಪ್ಪಿಸುವುದು. ಕೃತಜ್ಞತೆಯು ನಿಮ್ಮ ಉನ್ನತ ಸ್ಥಾನಕ್ಕೆ ಕಾರಣವಾಗುವುದು.

ತುಲಾ ರಾಶಿ : ಭಿನ್ನ ಮನಸ್ಸುಗಳ ಜೊತೆ ನಿಮಗೆ ಹೊಂದಾಣಿಕೆ ಅಸಾಧ್ಯನಿಮ್ಮ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇರದು. ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ಮಮಕಾರದಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ತಪ್ಪು ತಿಳಿವಳಿಕೆಗೆ ಯಾರನ್ನೂ ದೂರುವುದು ಬೇಡ. ಹಣದ ಸಂಪಾದನೆಗೆ ಅನೇಕ ಮಾರ್ಗಗಳು ಇದ್ದರೂ ನಿಮಗೆ ಅದಾವುದೂ ಇಷ್ಟವಾಗದು. ಪಾಲುದಾರಿಕೆಯಲ್ಲಿ ಉದ್ಯೋಗವನ್ನು ಪ್ರಾರಂಭಿಸಿ.‌ ಇಂದು ನಿಮ್ಮ ಒಬ್ಬರ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವು ದೊಡ್ಡದಾಗಬಹುದು. ನಿರ್ಮಾಣದ ಕೆಲಸವು ಬಹಳ ನಿಧಾನವಾಗಬಹುದು. ಇದರಿಂದ ನಿಮ್ಮಲ್ಲಿ ಆತಂಕ ಹೆಚ್ಚಬಹುದು. ಹೆಸರು ಗಳಿಸಬೇಕು ಎಂಬ ಹಂಬಲ ಬರುವುದು. ಯಾರೋ ಮಾಡಿದ ತಪ್ಪಿಗೆ ನಿಮಗೆ ತೊಂದರೆಯಾಗಲಿದೆ. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಟ್ಟೀತು. ನಿರ್ಧಾರಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳುವಿರಿ. ಅಧಿಕಾರಿಗಳು ನಿಮ್ಮ ಬಗ್ಗೆ ತಪ್ಪಾದ ಭಾವನೆಗಳನ್ನು ಇಟ್ಟುಕೊಳ್ಳುವರು.

ವೃಶ್ಚಿಕ ರಾಶಿ : ವಿದೇಶದ ವ್ಯವಹಾರದಲ್ಲಿ ನಿಮಗೆ ವ್ಯಾಪಕತೆ ಸಿಗಲಿದೆ. ನಿಮ್ಮ ಬಳಿ ಇರುವ ಸಂಪತ್ತನ್ನು ಸಹಾಯಕ್ಕಾಗಿ ಕೊಟ್ಟು ಕಳೆದುಕೊಳ್ಳುವಿರಿ. ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದು ಹೊರಟರೂ ಅದು ಮತ್ತೆಲ್ಲೋ ಒಂದು ಕಡೆ ಹರಿದು ಹೋಗುವುದು. ಮನೆಗೆ ಬೇಕಾದ ವಸ್ತುಗಳ‌ ಪಟ್ಟಿಯು ದೀರ್ಘವಾಗಿ ಕಾಣಿಸುವುದು. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ವಂಚಿತರಾಗುವ ಸಾಧ್ಯತೆ ಇದೆ.‌ ನಿಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಇರಲಿದೆ. ನಿಮಗೆ ಗೌರವ ಸಿಗುವ ಸ್ಥಾನದಲ್ಲಿ ಮಾತ್ರ ಇರುವಿರಿ. ನಿಮ್ಮ ಗುಣಗಳನ್ನು ದುರುಪಯೋಗ ಮಾಡಿಕೊಳ್ಳುವರು. ಪ್ರೀತಿಯಿಂದ‌ ಗೆಲ್ಲುವ ನಿರ್ಧಾರವು ಒಳ್ಳೆಯದು. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ನಿಮ್ಮ ಯಾರಾದರೂ ಕೆಲಸ ವಹಿಸಿ ನಿಶ್ಚಿಂತರಾಗಬಹುದು. ಅನುಪಯುಕ್ತ ಆಹಾರವನ್ನು ಸೇವಿಸುವುದು ಬೇಡ.

ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್