Horoscope: ಆಲಸ್ಯವನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ
ಅಕ್ಟೋಬರ್ 02, 2024: ವ್ಯವಹಾರದ ಪ್ರಜ್ಞೆ ಇಲ್ಲದವರ ಜೊತೆ ವ್ಯವಹಾರ ಕಷ್ಟ. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ನಿಮಗೆ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಲು ಕರೆ ಬರಬಹುದು. ಹಾಗಾದರೆ ಅಕ್ಟೋಬರ್ 02ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಬ್ರಹ್ಮ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:22 ರಿಂದ ಸಂಜೆ 01:51, ಯಮಘಂಡ ಕಾಲ ಬೆಳಿಗ್ಗೆ 07:53ರಿಂದ 09:23ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ10:52 ರಿಂದ 12:22 ರವರೆಗೆ.
ಮೇಷ ರಾಶಿ : ನಿಮ್ಮ ಇಂದಿನ ಕಾರ್ಯವು ಜನರಿಂದ ಮೆಚ್ಚುಗೆ ಪಡೆಯಬಹುದು. ಲೆಕ್ಕಾಚಾರವು ನಿಮಗೆ ಕಗ್ಗಂಟಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ನಿನ್ನೆಗಿಂತ ಉತ್ತಮವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ. ಅಜ್ಞಾನದಿಂದ ಮುಟ್ಟಿದ ಬೆಂಕಿ ಸುಡಲಾರದೇ. ನೌಕರರ ಮೇಲೆ ನಿಮಗೆ ಪಶ್ಚತ್ತಾಪ ಬರಬಹುದು. ಹಳೆಯ ವಿಚಾರಗಳನ್ನು ನೀವು ಮತ್ತೆ ಕೆದಕುವಿರಿ. ಬಾಯಿ ಮಾತಿನ ಯಾವುದನ್ನೂ ದಾಖಲೆಯಾಗಿ ಪಡೆಯದೇ ಬರಹದ ಮೂಲಕ ವ್ಯಕ್ತಪಡಿಸಿ. ಅನ್ಯರ ವಿಚಾರಗಳನ್ನು ಆಡಿಕೊಳ್ಳಲಿದ್ದೀರಿ. ನಕಾರಾತ್ಮಕ ಮಾತೇ ಆಗಿದ್ದರೂ ನಿಮ್ಮ ದೃಷ್ಟಿಕೋನ ಬದಲಾಗಲಿ. ಬಿಡಿಸಲಾಗದ ಸಮಸ್ಯೆಗಳು ನಿಮ್ಮೆದುರು ಬರಬಹುದು. ಆಪ್ತರ ಸಲಹೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಮಾತುಗಳಲ್ಲಿ ಪರಿಷ್ಕಾರವು ಇತರರಿಗೆ ಕಾಣಿಸುವುದು.
ವೃಷಭ ರಾಶಿ : ಗಂಧದ ಜೊತೆ ಗುದ್ದಾಟಮಾಡಿದರೆ ಮೈ ಸುಗಂಧವಾಗುವುದು. ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಯಶಸ್ಸು ಸಿಗದು. ಸಂಗಾತಿಯು ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ನಿಮಗೆ ಬೇಸರ ಮಾಡಬುದು. ಆಲಸ್ಯವನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ಇಂದು ನೀವು ಯಾವುದನ್ನೂ ನೇರವಾಗಿ ಹೇಳಲಾರಿರಿ. ಸಿಟ್ಟನ್ನು ಬಿಟ್ಟು ಶಾಂತವಾಗಿ ವರ್ತಿಸುವುದು ಮುಖ್ಯವಾಗುವುದು. ಹರಿವು ಇಲ್ಲದ ನೀರಿನಿಂದ ಕ್ರಿಮಿಗಳು ಉತ್ಪತ್ತಿಯಾಗುವುದು. ಕಛೇರಿಯಲ್ಲಿ ನೀವು ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಶಿಸ್ತಿನಿಂದ ಇರುವಿರಿ. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡವುವು.. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.
ಮಿಥುನ ರಾಶಿ : ದೂರದೃಷ್ಟಿಯಿಂದ ಇಟ್ಟ ಹೆಜ್ಜೆಯು ಸರಿಯಾಗಿರುವುದು. ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ. ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗಬಹುದು. ಮಾರ್ಗದಲ್ಲಿ ಕಾಲಿಗೆ ಕಲ್ಲು ತಾಕಬಹುದು. ಅದನ್ನು ಬೈದು ಪ್ರಯೋಜನವಿಲ್ಲ. ಗೊತ್ತಿಲ್ಲ ಕೆಲಸಕ್ಕೆ ಮುನ್ನುಗ್ಗುವುದು ಬೇಡ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗಿ ಇರಲಿದೆ. ಹೊಸ ಯೋಜನೆಗಳನ್ನು ಆರಂಭಿಸುವಾಗ ಆಪ್ತರ ಜೊತೆ ಚರ್ಚೆಯನ್ನು ಮಾಡಿ. ಧನದ ವ್ಯವಹಾರದಲ್ಲಿ ನಿಮಗೆ ಸರಿಯಾದ ಮಾಹಿತಿಯ ಕೊರತೆ ಇರಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆಯುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧಾನ ಇರಬಹುದು. ಮಾತನಾಡುವಾಗ ಭಯವಾಗಲಿದೆ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ನಿರ್ಮಾಣ ಮಾಡಿಕೊಳ್ಳುವಿರಿ. ನಿಮ್ಮ ಆದಾಯದ ಹೆಚ್ಚಿನ ಭಾಗವು ಸೌಂದರ್ಯಕ್ಕೆ ಹೋಗುವುದು.
ಕರ್ಕಾಟಕ ರಾಶಿ : ವ್ಯವಹಾರದ ಪ್ರಜ್ಞೆ ಇಲ್ಲದವರ ಜೊತೆ ವ್ಯವಹಾರ ಕಷ್ಟ. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ನಿಮಗೆ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಲು ಕರೆ ಬರಬಹುದು. ಸಾಲದಿಂದ ನೀವು ಮುಕ್ತರಾಗಿ ಖುಷಿಪಡುವಿರಿ. ವಿನೀತರಂತೆ ನೀವು ತೋರುವಿರಿ. ಕೃಷಿಕರು ಸ್ವಲ್ಪ ಲಾಭವನ್ನು ಪಡೆಯುವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಸರಿಯಾಗದು. ನಿಮ್ಮ ಪ್ರೇಮ ಪ್ರಕರಣವು ಹೊಸ ರೂಪವನ್ನು ಒಡೆಯುವುದು. ಚಿಕಿತ್ಸೆಯು ಫಲಕಾರಿಯಾಗದೇ ಇರಬಹುದು. ಅಧಿಕಾರಿಯುತವಾದ ವರ್ತನೆಯು ಸರಿಯಾಗದು. ದೂರ ಪ್ರಯಾಣವನ್ನು ಇಂದು ಮಾಡುವುದು ಬೇಡ. ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಕೆಲಸದ ಕುರಿತು ಗೊಂದಲ ಇರಲಿದೆ. ಯಾರದ್ದಾದರೂ ನೋವಿಗೆ ಸ್ಪಂದಿಸಿ. ಹಂಗಿನಿಂದ ಹೊರಬರಲು ನಿಮಗೆ ದಾರಿ ಸಿಗದು.