ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಚಿತ್ರ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:38 ಗಂಟೆ, ರಾಹು ಕಾಲ ಬೆಳಿಗ್ಗೆ 09:26 ರಿಂದ ಸಂಜೆ 10:58, ಯಮಘಂಡ ಕಾಲ ಮಧ್ಯಾಹ್ನ 02:03 ರಿಂದ 03:35ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ.
ಸಿಂಹ ರಾಶಿ: ಸಮಯ ಕಳೆದ ಅನಂತರ ಸಹವಾಸವು ದೋಷ ಎನಿಸಬಹುದು. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ನಡೆಯು ಎಲ್ಲರಿಗೂ ಇಷ್ಡವಾಗಬಹುದು. ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸಲು ಆಲೋಚಿಸುವಿರಿ. ಹೂಡಿಕೆಯ ಪ್ರಯತ್ನ ವಿಫಲವಾಗಬಹುದು. ಇದು ವಿವಾದವಾಗಿ ಪರಿವರ್ತನೆ ಆಗಬಹುದು. ಎಚ್ಚರಿಕೆಯಿಂದ ವ್ಯವಹಾರವನ್ನು ಮಾಡುವಿರಿ. ದಯೆಯ ವಿಚಾರದಲ್ಲಿ ನೀವು ಹಿಂದೆ. ಗೌಪ್ಯತೆಯ ಸಂಪಾದನೆಯು ಅನ್ಯಮಾರ್ಗಕ್ಕೆ ದಾರಿಮಾಡಿಕೊಡುವುದು. ಮಕ್ಕಳಿಗೆ ಹಿತವಚನವನ್ನು ಹೇಳಿ ತಿದ್ದುವ ಪ್ರಯತ್ನವನ್ನು ಮಾಡುವಿರಿ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ನಿಮಗೆ ಯಾರದ್ದಾದರೂ ಮಾತು ಅಧಿಕಾರದಂತೆ ತೋರೀತು.
ಕನ್ಯಾ ರಾಶಿ: ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಹಿತಶತ್ರುಗಳಿಂದ ಇಂದಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಹಿರಿಯರಿಂದ ಬೈಗುಳವು ಸಿಗಬಹುದು. ಅತಿಯಾದ ಮಾತಿನಿಂದ ನಿಮಗೆ ಸಂಕಷ್ಟ ಬರಬಹುದು. ಖಾಸಗಿ ಸಂಸ್ಥೆಯು ನಿಮಗೆ ಒಂದು ಜವಾಬ್ದಾರಿಯುತ ಸ್ಥಾನವನ್ನು ಕೊಡಬಹುದು. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಾಹಸದಿಂದ ಏನನ್ನಾದರೂ ಮಾಡಲು ಹೋಗಬಹುದು. ಖಾಸಗಿ ಸಂಸ್ಥೆಗಳು ನಿಮ್ಮ ಕಾರ್ಯವನ್ನು ಗೌರವಿಸುವರು. ಪೂರ್ವಾಪರ ಯೋಚನೆ ಇದ್ದರೆ ಒಳ್ಳೆಯದು. ವಿದ್ಯಾಭ್ಯಾಸಕ್ಕೆ ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ. ಸುಳ್ಳಿನಿಂದ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ.
ತುಲಾ ರಾಶಿ: ಬೇರೆಯವರು ತಪ್ಪು ಮಾಡಿದ್ದಾರೆ ಎಂದು ನೀವೂ ಮಾಡಲು ಹೋದರೆ ಸಿಕ್ಕಿಬೀಳುವಿರಿ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಹೆಚ್ಚುವುದು. ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುವುದು. ಶತ್ರುಗಳು ಏನಾದರೂ ಮಾನಸಿಕ ಕಿರುಕುಳವನ್ನು ಉಂಟುಮಾಡಿಯಾರು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಲ್ಲಿ ಇರುವರು. ಸಂಗಾತಿಯನ್ನು ನೀವು ಕಡೆಗಣಿಸುವಿರಿ. ತಾಯಿಯ ಕಡೆಯಿಂದ ಉದ್ಯೋಗಕ್ಕೆ ಬೇಕಾದ ಸಹಾಯ ಸಿಗಬಹುದು. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು. ಯಾರಾದರೂ ನಿಮ್ಮ ಕಿವಿ ಕಚ್ಚಿ ಸಂಬಂಧವನ್ನು ಹಾಳುಮಾಡುವರು. ಭೋಗವಸ್ತುಗಳನ್ನು ಖರೀದಿಸಿ ಹಣವನ್ನು ವ್ಯರ್ಥಮಾಡುವಿರಿ. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸುಮ್ಮನೆ ಇದ್ದರೆ ನಿಮ್ಮನ್ನು ಹಂಗಿಸಬಹುದು.
ವೃಶ್ಚಿಕ ರಾಶಿ: ಹೊಸ ಮನೆಯಲ್ಲಿ ನಿಮಗೆ ಬೇಕಾದ ಅನುಕೂಲತೆಗಳ ಮನೆಯವರಲ್ಲಿ ಹೇಳುವಿರಿ. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಮನಸ್ಸು ಚಂಚಲವಾಗಲಿದ್ದು ಯಾವುದರ ಬಗ್ಗೆಯೂ ಏಕಾಗ್ರತೆಯಿಂದ ಇರಲು ಸಾಧ್ಯವಾಗದು. ಲಾಭವಿಲ್ಲದ ಕೆಲಸವನ್ನು ನೀವು ಮಾಡಲು ಇಚ್ಛಿಸುವುದಿಲ್ಲ. ಇಂದು ಸಮಯ ಸಿಗದೇ ಗಡಿಬಿಡಿಯಿಂದ ಕೆಲಸವನ್ನು ಮುಗಿಸುವಿರಿ. ಸಂಭ್ರಮದಲ್ಲಿ ಮನೆಯ ವಸ್ತುಗಳು ಕಾಣೆಯಾಗಬಹುದು. ನಿಮಗೆ ಗೊತ್ತಿಲ್ಲದ ವಿಚಾರಗಳನ್ನು ಯಾರಿಂದಲಾದರೂ ಕೇಳಿ ಪಡೆಯಿರಿ. ಉನ್ನತ ವ್ಯಾಸಂಗದ ಬಯಕೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ. ಇಟ್ಟುಕೊಳ್ಳಲು ಕೊಟ್ಟ ಹಣವು ಪುನಃ ಬಾರದೇ ಇದ್ದೀತು. ಒಳ್ಳೆಯ ಕಾರ್ಯಕ್ಕೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಯಾರೊಂದಿಗಾದರೂ ಸಲುಗೆಯು ಅತಿಯಾಗಬಹುದು.