Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರ ಮಾನಸಿಕತೆಗೆ ಹೊಂದಿಕೆಯಾಗುವ ಸಂಗಾತಿ ಸಿಗಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 11 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:07 ರಿಂದ 07:43ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ 10:53ರ ವರೆಗೆ.
ಸಿಂಹ: ಗಣ್ಯರ ಸಂಪರ್ಕವು ಹಲವು ತಿರುವುಗಳನ್ನು ಪಡೆದುಕೊಂಡೀತು. ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಮಯವೂ ಬರಬಹುದು. ನೂತನ ದಾಂಪತ್ಯದಲ್ಲಿ ಅನ್ಯೋನ್ಯತೆ ಇದ್ದರೂ ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯು ಇಬ್ಬರ ಮೇಲೂ ಇರಲಿದೆ. ವೃಥಾ ಖರ್ಚನ್ನು ಹೆಚ್ಚುಮಾಡಿಕೊಳ್ಳುವ ಕೆಲಸಕ್ಕೆ ಹೋಗಬೇಡಿ. ಅನಿವಾರ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಸಾಗಿರಿ. ದುಃಸ್ವಪ್ನಗಳು ನಿಮ್ಮನ್ನು ಕಾಡಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದರ ಜೊತೆ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಉತ್ತಮ.
ಕನ್ಯಾ: ಇಂದು ಮಾಡುವ ಕೆಲಸಗಳು ಸುಲಲಿತವಾಗಿ ಆರಂಭವಾದರೂ ಅಂತ್ಯವು ಬಹಳ ಗೊಂದಲದಿಂದ ಇರಬುಹುದು. ಅತಿಯಾದ ಧನಾತ್ಮಕ ಚಿಂತನೆಗಳು ನಿಮ್ಮನ್ನು ವಂಚನೆಗೆ ಸಿಕ್ಕಿಸಬಹುದು. ನಿಮ್ಮ ಪ್ರಭಾವವು ಉದ್ಯೋಗವಲಯಕ್ಕೆ ಗೊತ್ತಾಗಲಿದೆ. ಎದುರಿನಿಂದ ಬೆಂಬಲಿಸಿ ಹಿಂದಿನಿಂದ ನಿಮ್ಮವರೇ ಕಾಲು ಎಳೆಯುವರು. ಎಚ್ಚರದಿಂದ ಇರವುದು ಒಳ್ಳೆಯದು. ಸರ್ಕಾರಿ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಬೇಸರ ಬಂದರೂ ಬಿಡದೇ ಮುಂದುವರಿಸುವುದು ಅನಿವಾರ್ಯವಾದೀತು. ಶುಭದ ನಿರೀಕ್ಷೆಯಲ್ಲಿ ಇರುವುದು ಬಹಳ ಯೋಗ್ಯ.
ತುಲಾ: ಇಡಿಯ ದಿನವನ್ನು ಸಂತೋಷದಿಂದ ಕಳೆಯುವ ಯೋಜನೆಯನ್ನು ರೂಪಿಸಿಕೊಂಡಿರುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ಹಠವಿರಲಿದೆ. ಭೂಮಿಯ ವ್ಯವಹಾರದಲ್ಲಿ ಅನುಕೂಲಗಳು ಅಧಿಕವಾಗಿರಲಿವೆ. ನಿಮ್ಮ ಮಾನಸಿಕತೆಗೆ ಹೊಂದಿಕೆಯಾಗುವ ಸಂಗಾತಿಯು ನಿಮಗೆ ಸಿಗಬಹುದು. ತಂದೆಯ ಆರೋಗ್ಯವು ದೃಢವಾಗಿರಲಿದೆ. ಸಹೋದರನು ನಿಮ್ಮ ಬಗ್ಗೆ ಪ್ರೀತಿ ಉಳ್ಳವನಾಗುವನು. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕೆನಿಸೀತು. ದೈವವನ್ನು ನಂಬಿ, ನಿಮ್ಮ ಪ್ರಯತ್ನವನ್ನು ಮಾಡಿ.
ವೃಶ್ಚಿಕ: ನಿಮ್ಮ ಕೆಲಸದಲ್ಲಿ ಸಾವಧಾನತೆ ಅಧಿಕವಾಗಿರಬಹುದು. ಉದ್ಯಮವನ್ನು ಬಿಡುವಂತಹ ಪರಿಸ್ಥಿತಿ ಬರಬಹುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಇಂದು ಮಾಡಬೇಕಾದ ಕೆಲಸದ ಬಗ್ಗೆ ಗಮನವಿರಲಿ. ಮೊದಲು ಅದರ ಪಟ್ಟಿಯನ್ನು ಆದ್ಯತೆಯ ಪ್ರಕಾರ ರಚಿಸಿಕೊಳ್ಳಿ. ಕಲಾವಿದರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಒಂಟಿತನವನ್ನು ಇಷ್ಟಪಡುವ ನಿಮಗೆ ನಿಮ್ಮವರು ಹಾಗೆ ಇರಲು ಬಿಡಲಾರರು. ಬಂಧುಗಳು ಆಸ್ತಿಯ ವಿಚಾರವನ್ನು ಕೆದಕಿ ಕೇಳುವರು. ಸರಿಯಾದ ಉತ್ತರವನ್ನು ಹೇಳದೇ ಅವರನ್ನು ನಂಬಿಸುವಿರಿ.
-ಲೋಹಿತಶರ್ಮಾ ಇಡುವಾಣಿ