Rashi Bhavishya: ಇಂದಿನ ರಾಶಿ ಭವಿಷ್ಯ, ಇಂದು ಈ ರಾಶಿಯವರಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ ಇದೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 9) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿ ಭವಿಷ್ಯ, ಇಂದು ಈ ರಾಶಿಯವರಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ ಇದೆ
ಇಂದಿನ ರಾಶಿ ಭವಿಷ್ಯImage Credit source: istock
Follow us
Rakesh Nayak Manchi
|

Updated on: May 09, 2023 | 6:00 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 9 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೂಲಾ, ಯೋಗ: ಸಿದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ಗಂಟೆ 05:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ.

ಸಿಂಹ: ಮನಸ್ಸಿದ್ದರೆ ಮಾರ್ಗ ಎನ್ನುವಂತೆ ನಿಮಗೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆ ಶುರುವಾದರೆ ಸಾಕು ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಇಷ್ಟವಾದ ವಸ್ತುವು ನಷ್ಟವಾಗಿ ಸಂಕಟಪಡಬೇಕಾದೀತು. ಸ್ನೇಹಿತರ ನಡುವೆ ವಾಗ್ವಾದ ನಡೆದು ವಿಯೋಗದಿಂದ ಮುಕ್ತಾಯವಾಗಬಹುದು. ಸ್ತ್ರೀಮೂಲದಿಂದ ಸಂಪತ್ತು ಅಥವಾ ಸಹಕಾರ ಸಿಗಬಹುದು. ತಾನಾಗಿಯೇ ಬಂದಿದ್ದನ್ನು ನೀವು ದೂರ ಮಾಡಬೇಡಿ.‌ ನಿಮಗೆ ಅದು ಅನುಕೂಲವನ್ನು ಮಾಡಿಕೊಡಲಿದೆ. ಜೀವನ ಒಂದು ಕ್ಷಣ ಸಪ್ಪೆಯಂತೆ ಅನ್ನಿಸಬಹುದು. ಗುರುವನ್ನು ಅಥವಾ ಗುರುಸಮಾನರನ್ನು ಭೇಟಿಯಾಗಿ ಹಿತವಚನವನ್ನು ಕೇಳಿ ಬನ್ನಿ. ಹೊಸ ಉತ್ಸಾಹವು ಬಂದೀತು.

ಕನ್ಯಾ: ದ್ವಂದ್ವಗಳು ಬಹಳ ನಿಮ್ಮನ್ನು ಕಾಡಲಿದ್ದು ಆಯ್ಕೆಗೆ ಬಹಳ ಕಷ್ಟ ಪಡುವಿರಿ. ಒಮ್ಮೆ ಆಯ್ಕೆ ಮಾಡಿದರೂ ಅದು ನಿಮ್ಮ ಪಾಲಿಗೆ ಕುಸುಮಮಾರ್ಗವಾಗಿರದು. ತಾಳ್ಮೆಯಿಂದ ಆಗುವ ಲಾಭವನ್ನು ಸ್ವತಃ ಅನುಭವಿಸುವಿರಿ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ವರ್ತಿಸುವರು.‌ ಕಂಡೂ ಕಾಣದಂತೆ ಇರಬೇಕಾದ ಸ್ಥಿತಿ ಬರಬಹುದು. ಕಛೇರಿಯಲ್ಲಿ ನೀವು ಇಂದು ಸ್ವತಂತ್ರರು. ನಿಮ್ಮ ನಿರ್ಧಾರವನ್ನು ಉಳಿದವರು ಗೌರವಿಸುವರು.‌ ಅದನ್ನು ಮುಂದೂ ಇಟ್ಟುಕೊಳ್ಳುವಂತೆ ಇರಬೇಕಾಗಿರುತ್ತದೆ. ಶಿವನಿಗೆ ಪ್ರಿಯವಾದ ಬಿಲ್ವಾರ್ಚನೆಯನ್ನು ಮಾಡಿಸಿ.

ತುಲಾ: ಅತಿಯಾದ ಆದಾಯವನ್ನು ಆದಿಯಲ್ಲಿಯೇ ಆಸೆ ಪಡುವುದು ಅಷ್ಟು ಅನುಕೂಲವಲ್ಲ. ಕಾಲಾಂತರದಲ್ಲಿ ಅದು ಸಾಧ್ಯವಾಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನವು ಉದ್ಯೋಗದಲ್ಲಿ ಇರಲಿ. ಪಾಲುದಾರಿಕೆಯನ್ನು ಮಾಡಿಕೊಂಡು ನೀವು ನಡೆಸುತ್ತಿರುವ ಉದ್ಯಮವನ್ನು ಮುಂದುವರಿಸಬಹುದು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳುವಿರಿ. ಗೃಹೋಪಕರಣದ ಖರೀದಿಯಿಂದ ಹಣಕಾಸು ಸ್ವಲ್ಪ ಕುಸಿಯಬಹುದು. ಲಲಿತ ಕಲೆಗಳನ್ನು ಕಲಿಯುವ ಆಸಕ್ತಿಯನ್ನು ತೋರುವಿರಿ. ವಿವಾಹವು ನಿಶ್ಚಯವಾಗುವ ಸಾಧ್ಯತೆ ಇದೆ. ಆಪತ್ತು ಬರುವ ಸೂಚನೆ ಇದ್ದರೆ ಕಾತ್ಯಾಯನಿಯನ್ನು ಸ್ಮರಣೆ ಮಾಡಿ.

ವೃಶ್ಚಿಕ: ಸ್ವಾವಲಂಬಿಯಾಗಿ ಬದುಕುವ ನಿಮ್ಮ ಸಂಕಲ್ಪ ಸಂಪೂರ್ಣ ಸಾಕಾರವಾಗದು. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಲಿದ್ದು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡೀತು. ಶಿಸ್ತುಬದ್ಧ ಜೀವನದಿಂದ ನೀವು ಸ್ವಲ್ಪ ಆಚೆ ಬರಲಿದ್ದೀರಿ. ಸಹವಾಸವು ದೋಷದಿಂದ‌ ಕೂಡಿರಲಿದೆ. ಯಾರ ಮಾತನ್ನೂ ಕೇಳದ ಸ್ಥಿತಿಯನ್ನು ನೀವು ತಂದುಕೊಳ್ಳಲಿದ್ದೀರಿ. ಆತ್ಮೀಯರು ನಿಮ್ಮನ್ನು ಮನೆಗೆ ಆಹ್ವಾನಿಸಬಹುದು. ನಿಮ್ಮ ತಪ್ಪಿಗೆ ಕಾರಣವನ್ನು ಹುಡುಕುವ ಬದಲು ವ್ಯಕ್ತಿಗಳನ್ನು ಹುಡುಕುತ್ತ ಇರುವಿರಿ. ಅನ್ಯರಿಂದ ಸಂತೋಷವನ್ನು ಪಡೆಯುವಿರಿ. ಸುಬ್ರಹ್ಮಣ್ಯನ ಸ್ತೋತ್ರ, ಭಜನೆಗಳನ್ನು ಮಾಡಿ. ಸರಿಯಾದ ಮಾರ್ಗಗಳು ಸಿಕ್ಕಾವು.

-ಲೋಹಿತಶರ್ಮಾ ಇಡುವಾಣಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ