
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಶೋಭನ, ಕರಣ : ತೈತಿಲ, ಸೂರ್ಯೋದಯ – 06 – 18 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:30 – 14:56, ಯಮಗಂಡ ಕಾಲ 06:18 – 07:44, ಗುಳಿಕ ಕಾಲ 09:11 – 10:37.
ಮೇಷ ರಾಶಿ: ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಾಣಿಕೆಯಾಗದು. ಸ್ಪರ್ಧೆಗಳಲ್ಲಿ ನಿರೀಕ್ಷಿತ ಉತ್ಸಾಹವಿಲ್ಲ. ಕಾರ್ಮಿಕ ವಲಯದಿಂದ ಗೌರವ ಸಿಗಲಿದೆ. ಮನೋಬಲವು ಯಾರಿಂದಲಾದರೂ ಕುಗ್ಗಬಹುದು. ಸಿಟ್ಟು ಮಾಡಿಕೊಂಡು ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುವಿರಿ.
ವೃಷಭ ರಾಶಿ: ನೀವು ಕೆಲಸ ಮಾಡುವ ಸಂಸ್ಥೆಯ ರಹಸ್ಯವನ್ನು ಬಿಟ್ಟುಕೊಡಲಾರಿರಿ. ನಿಮ್ಮ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ದುರಭ್ಯಾಸವನ್ನು ಇನ್ನೊಬ್ಬರಿಗೂ ಹಿಡಿಸುವ ಸಾಧ್ಯತೆ ಇದೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಅತಿಯಾದ ಚಿಂತೆ ಇರಲಿದೆ. ಸಿಕ್ಕಿದ್ದನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿದೆ. ಸುಮ್ಮನೇ ಇರುವುದು ನಿಮಗೆ ಇಂದು ಪ್ರಿಯವಾದೀತು.
ಮಿಥುನ ರಾಶಿ: ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಆಪತ್ತಿನ ಸಹಾಯಕ್ಕೆ ಪ್ರಶಂಸೆ ಸಿಗಲಿದೆ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು.
ಕರ್ಕಾಟಕ ರಾಶಿ: ಯಶಸ್ಸಿಗಾಗಿ ಏನನ್ನೂ ಮಾಡದೇ ಕರ್ತವ್ಯ ದೃಷ್ಟಿಯಿಂದ ಮಾಡಿದಾಗ ಯಶಸ್ಸನ್ನು ನಿಮ್ಮನ್ನು ಬಂದು ಸೇರುವುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ. ನಿಮ್ಮ ಅಜ್ಞಾನವನ್ನು ಕಿರಿಯರು ಬಗೆಹರಿಸುವರು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಮಾಡುವ ಕೆಲಸದಲ್ಲಿ ನಿರಂತರತೆ ಮುಖ್ಯ. ಸಂಸಾರದಲ್ಲಿ ನಿರಾಸಕ್ತಿಯು ಹೆಚ್ಚಾಗುವುದು. ಸಂಗಾತಿಯ ಜೊತೆ ನಿಮಗೆ ಸಮಯ ಕಳೆಯಲೂ ಕಷ್ಟವಾದೀತು.
ಸಿಂಹ ರಾಶಿ: ಬಂಧುಗಳ ಕಾರಣದಿಂದ ಇಂದಿನ ಕಾರ್ಯದಲ್ಲಿ ತೊಡಕುಗಳು ಕಾಣಿಸಿಕೊಳ್ಳುವುದು. ತಂದೆಗೆ ಬೇಕಾದ ಧನಸಹಾಯವನ್ನು ನೀವು ಮಾಡುವಿರಿ. ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಸಾಲವನ್ನು ಇನ್ನೊಬ್ಬರಿಗಾಗಿ ಮಾಡಬೇಕಾದೀತು. ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಸ್ತ್ರೀಸಂಬಂಧದ ವಿಷಯದಲ್ಲಿ ಆರೋಪವು ಕೇಳಿಬರಬಹುದು. ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ.
ತುಲಾ ರಾಶಿ: ಶತ್ರುಗಳ ಕಾರಣದಿಂದ ಖರ್ಚುನ್ನು ಮಾಡಬೇಕಾದ ಸ್ಥಿತಿಯು ಬರಲಿದೆ. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಎಲ್ಲರೂ ಸಂದೇಹದ ದೃಷ್ಟಿಯಿಂದ ನೋಡುವವರೇ. ಗೃಹನಿರ್ಮಾಣವು ಕಾರಣಾಂತರಗಳಿಂದ ಮುಂದೆ ಹೋಗುವುದು. ನಿಮಗೆ ಬೇಕಾದ ಅವಕಾಶವು ಸಿಗದೇ ಒದ್ದಾಡುವಿರಿ. ವಿದ್ಯುತ್ ಉಪಕರಣದಿಂದ ಅಪಾಯವು ಆಗಬಹುದು.
ವೃಶ್ಚಿಕ ರಾಶಿ: ಹಣಕ್ಕಿಂತ ಆರೋಗ್ಯ ಮುಖ್ಯವಾದ ಕಾರಣ ಅಂತಹ ಸನ್ನಿವೇಶವನ್ನು ನೀವು ಅರ್ಥಮಾಡಿಕೊಳ್ಳಬೇಕು. ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿಯು ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಸಾಮಾಜಿಕ ತಾಣದಿಂದ ಪ್ರೇಮವು ಉಂಟಾಗಬಹುದು. ಅಹಂಕಾರದ ಕಾರಣದ ಅನ್ಯೆರನ್ನು ದ್ವೇಷಿಸುವಿರಿ.
ಧನು ರಾಶಿ: ನಿಮ್ಮನ್ನು ಅಗೌರವದಿಂದ ಕಾಣುವವರ ಮೇಲೆ ಕೋಪ ಬರುವುದು. ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ವಿದ್ಯಾಭ್ಯಾಸದಲ್ಲಿ ಸಹಪಾಠಿಗಳಿಂದ ತೊಂದರೆ. ಸಂಗಾತಿಯಿಂದ ಅವಮಾನವಾಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ಸಂತೋಷ ಮಾತ್ರ ಇರದು. ಯಾರ ಯೋಗ್ಯತೆಯನ್ನೂ ಅಳೆಯಲು ಸಾಧ್ಯವಾಗದು.
ಮಕರ ರಾಶಿ: ತಾತ್ಕಾಲಿಕವಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗಲಿದ್ದು ಸ್ವಲ್ಪ ಉಸಿರಾಡುವುದಕ್ಕೆ ಅನುವುಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅತಿಯಾಗಿ ಬೇಕು. ಮೋಸದ ಜಾಲಕ್ಕೆ ಸಿಕ್ಕಿಹಾಕು ಸಾಧ್ಯತೆ ಇದೆ. ಆಭರಣ ಮೇಲೆ ಹೂಡಿಕೆಗೆ ಯೋಚನೆ. ಬರುವ ಆದಾಯವನ್ನು ಗೌಪ್ಯವಾಗಿ ಇಡುವಿರಿ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ.
ಕುಂಭ ರಾಶಿ: ಇಂದು ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟಚಾದೀತು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಬಂಧುಗಳ ನಕಾರಾತ್ಮಕ ಹೇಳಿಕೆಗಳು ನಿಮಗೆ ಉದ್ವೇಗವನ್ನು ಉಂಟಾಗಲಿದೆ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ ನಿಲುವು ಕೆಲವರಿಗೆ ಇಷ್ಟವಾಗುವುದು. ನಿಮ್ಮಲ್ಲಿ ಭೀತಿಯ ಮನೋಭಾವವು ಇರಲಿದೆ. ಅತಿಥಿಗಳ ಆಗಮನವಾಗಲಿದೆ.
ಮೀನ ರಾಶಿ: ನೀವು ಉದ್ಯಮಿಗಳ ಜೊತೆ ಹೊಸ ಯೋಜನೆಯನ್ನು ಪಡೆಯುವ ತವಕದಲ್ಲಿ ಇರುವಿರಿ. ನಂಬಿಕೆ ದ್ರೋಹಹವು ನಿಮಗಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನವು ಸಿಗಲಿದೆ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಮನಸ್ಸನ್ನು ಉದ್ವಿಗ್ನ ಮಾಡಿಕೊಳ್ಳದೇ ಶಾಂತತೆಯಿಂದ ನಿರ್ವಹಿಸಿ.
ಲೋಹಿತ್ ಹೆಬ್ಬಾರ್ – 8762924271 (what’s app only)ly)
Published On - 1:05 am, Thu, 12 November 26