Daily Horoscope: ಈ ರಾಶಿಯವರಿಗೆ ಸಹಾಯ ಕೇಳಲು ಮುಜುಗರವಾದೀತು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್​ 03: ಇಂದು ನಿಮ್ಮ ಕೋಪವನ್ನು ನಿಯಂತ್ರಣಕ್ಕೆ ತಂದುಕೊಳ್ಳುವಿರಿ. ನಿಮ್ಮ ನಡವಳಿಕೆಯಯನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುವಿರಿ. ಸಂಗಾತಿಯ ಜೊತೆ ಕಲಹವಾಡಿ ಅನಂತರ ಪಶ್ಚಾತ್ತಾಪಪಡುವಿರಿ‌. ಹಾಗಾದರೆ ಅಕ್ಟೋಬರ್​ 03ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರಿಗೆ ಸಹಾಯ ಕೇಳಲು ಮುಜುಗರವಾದೀತು
ಈ ರಾಶಿಯವರಿಗೆ ಸಹಾಯ ಕೇಳಲು ಮುಜುಗರವಾದೀತು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 03, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಚಿತ್ರಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:20, ಯಮಘಂಡ ಕಾಲ ಬೆಳಿಗ್ಗೆ 06:24ರಿಂದ 07: 53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:52 ರವರೆಗೆ.

ಸಿಂಹ ರಾಶಿ: ಸಂಗಾತಿಯ ಮನೋಭಾವವನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಅಧಿಕಾರ ಮತ್ತು ಸಂಪತ್ತು ಪ್ರದರ್ಶನಕ್ಕೆ ಅಲ್ಲ ಎಂಬುದು ತಿಳಿಯುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆಯಾಗಲಿದೆ. ನಿಮಗೆ ಸಹಾಯವನ್ನು ಕೇಳಲು ಮುಜುಗರವಾದೀತು. ವ್ಯಾಪಾರದ ಸಲುವಾಗಿ ದೂರಪ್ರಯಾಣವನ್ನು ಮಾಡಬೇಕಾಗಬಹುದು. ನೀವಾಗಿಯೇ ಸ್ವಂತ ನಿರ್ಧಾರಕ್ಕೆ ಬರುವವರೆಗೆ ನಿಮಗೆ ಕಷ್ಟವಾಗುವುದು.‌ ಇಂದು ನೀವು ಒತ್ತಡ ಮಾಡಿಕೊಳ್ಳಬಾರದೆಂದು ಅಂದುಕೊಂಡಿದ್ದರೂ ಸಂದರ್ಭವು ಅದೇ ರೀತಿ ಬರುವುದು. ಆರೋಗ್ಯವನ್ನು ಗಟ್ಟಿಯಾಗಿಸಿಕೊಳ್ಳಲು ನೀವು ಪ್ರಯತ್ನಿಸಬೇಕು.‌ ಉಳಿತಾಯವನ್ನೂ ಖರ್ಚನ್ನು ಸಮಾನವಗಿ ಕಾಣುವುದು ಕಷ್ಟ. ಉದ್ಯಮದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸುವಿರಿ. ನಿಮ್ಮ ನೌಕರರು ನೀವು ಹೇಳಿದ ಕೆಲಸವನ್ನು ಸರಿಯಾಗಿ ಮಾಡದೇ ಇರಬಹುದು. ನಿಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಯಾರದೋ ಮಾತಿನಿಂದ ಸ್ಥೈರ್ಯವನ್ನು ಕಳೆದುಕೊಳ್ಳುವಿರಿ.

ಕನ್ಯಾ ರಾಶಿ: ವ್ಯವಹಾರವನ್ನು ಹಾಗಿಯೇ ನೋಡುವುದುನ್ನು ಕಲಿಯಿರಿ. ಸಂಬಂಧಗಳು ಸಂಬಂಧಗಳಾಗಿಯೇ ಇರಲಿ. ಮಕ್ಕಳ ಅನಾರೋಗ್ಯದ ಕಾರಣ ಅವರ ಜೊತೆ ಇರಬೇಕಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ಪಾಲಕರಿಗೆ ಆತಂಕವಾಗಬಹುದು. ಸ್ನೇಹಿತರಿಂದ ಉಡುಗೊರೆಗಳು ಸಿಗಬಹುದು. ತಾಯಿಯ ಪ್ರೀತಿಯು ನಿಮಗೆ ಹೆಚ್ಚು ಸಿಗುವುದು. ಇಂದು ನಿಮ್ಮ ಕೋಪವನ್ನು ನಿಯಂತ್ರಣಕ್ಕೆ ತಂದುಕೊಳ್ಳುವಿರಿ. ನಿಮ್ಮ ನಡವಳಿಕೆಯಯನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುವಿರಿ. ಸಂಗಾತಿಯ ಜೊತೆ ಕಲಹವಾಡಿ ಅನಂತರ ಪಶ್ಚಾತ್ತಾಪಪಡುವಿರಿ‌. ನಿಮ್ಮ ಕಾರ್ಯದ ಸಫಲತೆಗೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸಿ. ನಿಮ್ಮ ಯೋಜನೆಯನ್ನು ಸರಿಯಾಗಿ ನಿರ್ವಹಿಸಲು ಕಷ್ಟವಾದೀತು. ನಿಮಗೆ ಸಮ್ಮಾನಗಳು ಸಿಗುವ ಸಾಧ್ಯತೆ ಇದೆ. ಮಕ್ಕಳ ಜೊತೆ ಇಂದು ಕಾಲವನ್ನು ಕಳೆಯುವುದು ನಿಮಗೆ ಇಷ್ಟವಾದೀತು. ಸಣ್ಣ ವಿಚಾರದಲ್ಲಿ ನಿಮಗೆ ಇನ್ನೊಬ್ಬರ ಜೊತೆ ಕಲಹವಾದೀತು. ಒಳ್ಳೆಯ ಸಮಯವನ್ನು ನೀವು ನಿರೀಕ್ಷಿಸುವಿರಿ. ನ್ಯಾಯವಾದಿಗಳು ಒತ್ತಡದಲ್ಲಿ ಇರುವರು. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು.

ತುಲಾ ರಾಶಿ; ಚಾಣಾಕ್ಷತನದಿಂದ ಗಿಟ್ಟಿಸಿಕೊಂಡ ಅಧಿಕಾರವು ಸಮಯಮಿತಿಯಲ್ಲಿ ಇರುತ್ತದೆ. ಪ್ರೇಮಪ್ರಕರಣವು ನಿಮಗೆ ದುಃಖವನ್ನು ಕೊಟ್ಟೀತು. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪವು ಬರಲಿದೆ. ಶತ್ರುಗಳೂ ನಿಮಗೆ ಉಪದೇಶ ಮಾಡುವರು. ಮಕ್ಕಳಿಗಾಗಿ ನೀವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನೀವು ಬಹಳ ಅನಾದರ ತೋರುವುರಿ. ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆಯು ಇರಲಿದೆ. ನಿಮಗೆ ಬರುವ ಸಮಸ್ಯೆಗಳು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡಿಕೊಳ್ಳುವಿರಿ. ಆರೋಗ್ಯವು ನಿಮಗೆ ವರವಾಗಿದ್ದರೂ ಅದು ಕೆಲವು ಸಮಯ ತೊಂದರೆಯನ್ನು ಕೊಡುವುದು. ನಿಮ್ಮವರನ್ನು ನೀವು ಮರೆಯುವಿರಿ. ಒಳ್ಳೆಯವರ ಸಹವಾಸವು ಸಿಗಬಹುದು. ಕೆಲವನ್ನು ನೀವು ಬಿಟ್ಟುಕೊಡುವುದೇ ಸೂಕ್ತ. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿ ಸುಮ್ಮನಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು.

ವೃಶ್ಚಿಕ ರಾಶಿ: ನಿಮ್ಮ ಮಾತುಗಳು ಚಾಣಾಕ್ಷತನದಂತೆ ಇರುವುದು. ನಿಮ್ಮ ಸಾಧನೆಯನ್ನು ಹಂಚಿಕೊಳ್ಳುವಿರಿ‌. ಯೋಗ್ಯ ಪುರಸ್ಕಾರ, ಮಾತುಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಮೋಸವಾಗಲಿದ್ದು, ಅದರಲ್ಲೂ ನಿಮ್ಮವರೇ ಅದನ್ನು ಮಾಡಿದ್ದು ಎಂಬ ವದಂತಿಯು ನಿಮಗೆ ಸಹಿಸಲು ಅಸಾಧ್ಯವಾದುದಾಗಿದೆ. ನಿಮ್ಮ ಸಣ್ಣ ವ್ಯಾಪಾರವೂ ಆದಾಯದ ಮೂಲವಾಗಬಹುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗಲಿದೆ. ಯಾರಾದರೂ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು. ಮಾತಿನ ನಿಯಂತ್ರಣವು ತಪ್ಪಿ‌ಹೋಗಲಿದೆ. ವಿಳಂಬಕ್ಕಾಗಿ ನೀವು ವ್ಯಥೆ ಪಡಬೇಕಾದೀತು. ನಿಮಗೆ ಧೈರ್ಯವನ್ನು ತುಂಬಲು ಸಂಗಾತಿಯ ಸಹಾಯವನ್ನು ಪಡೆಯಿರಿ. ಬಂಧುಗಳು ನಿಮ್ಮ ಮನೆಗೆ ಬರಲಿದ್ದಾರೆ. ನಿದ್ರಾಹೀನತೆಯಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು. ಅನಪೇಕ್ಷಿತ ಖರ್ಚನ್ನು ಮಾಡಬೇಕಾದೀತು. ನಿಮ್ಮನ್ನು ನೀವು ಕುಗ್ಗಿಸಿಕೊಳ್ಳುವುದು ಬೇಡ. ಮಕ್ಕಳ ಬಗ್ಗೆ ಸ್ವಲ್ಪ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು.

ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ
ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ