Horoscope Today June 21, 2024: ಶುಕ್ರವಾರದ ದಿನಭವಿಷ್ಯದಲ್ಲಿ ನಿಮ್ಮ ರಾಶಿ ಫಲಾಫಲ ತಿಳಿದುಕೊಳ್ಳಿ
2024 ಜೂನ್ 21 ದಿನ ಭವಿಷ್ಯ: ಶುಕ್ರವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಜೂನ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶುಕ್ಲ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:58 ರಿಂದ 12:35ರ ವರೆಗೆ, ಯಮಘಂಡ ಕಾಲ 15:49ರಿಂದ 17:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:43ರಿಂದ ಬೆಳಗ್ಗೆ 09:20ರ ವರೆಗೆ.
ಮೇಷ ರಾಶಿ :ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಅಪರಿಚಿತರು ನಿಮ್ಮನ್ನು ಕಾಣಬೇಕೆಂದು ಬಂದು ಉದ್ಯೋಗದಲ್ಲಿ ಪಾಲುದಾರಿಕೆಯ ಪ್ರಸ್ತಾಪ ಮಾಡುವರು. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವಿರಿ. ಸದಾ ಉದ್ವೇಗದಲ್ಲಿಯೇ ಇರುವ ನಿಮಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು. ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ಬೇಡವೆಂದರೂ ನಿಮಗೇ ಬರಲಿದೆ. ಮನೆಯಲ್ಲಿ ಕಛೇರಿಯ ವಿಷಯವಾಗಿ ಜಗಳವೂ ನಡೆಯಬಹುದು. ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ಸರಿಯಾಗುವ ತನಕ ತಾಳ್ಮೆ ಇರಲಿ. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.
ವೃಷಭ ರಾಶಿ :ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಆರ್ಥಿಕಸ್ಥಿತಿಯು ಅಭಿವೃದ್ಧಿ ಹೊಂದಿದರೂ ಯಾವುದೋ ಕಾರಣಕ್ಕೆ ಅದು ಖಾಲಿಯಾಗುವುದು. ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿಸಿರಿಕೊಳ್ಳಿ. ನಂಬಿಕೆಯನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯೂ ಆಗಲಿದೆ. ಕೋಪದಿಂದ ಏನನ್ನಾದರೂ ಹೇಳಿ ಅನಂತರ ಮುಜುಗರವನ್ನು ಅನುಭವಿಸುವಿರಿ. ತಾಳ್ಮೆ ನಿಮಗೆ ಬಹಳ ಮುಖ್ಯವಾಗಲಿದೆ. ಸರ್ಕಾರದ ಕೆಲಸವು ಮುಂದಿನವಾರಕ್ಕೆ ಹೋಗಲಿದೆ. ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಪಕ್ಷಪಾತದಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ.
ಮಿಥುನ ರಾಶಿ :ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗುವುದು. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದರೆ ನಿಮ್ಮ ಬೆಲೆಯೇ ಕಡಿಮೆಯಾಗುವುದು. ಒಮ್ಮೆ ಹೇಳಿ ಸುಮ್ಮನಾಗಿ. ಹೂಡಿಕೆ ಮಾಡಿದ ಹಣದಿಂದ ಜೀವನ ನಡೆಸುವ ಸ್ಥಿತಿ ಬಂದಿದೆ ಎಂದು ಸಂಕಟಪಡುವಿರಿ. ಕೆಲವು ದಿನ ಹೀಗೆ ಇರಲಿದೆ. ದೈವದಲ್ಲಿ ಭಕ್ತಿಯಿಡಿ. ಯಾರ ಮೇಲೇ ಕುತಂತ್ರ ಮಾಡುವ ಅವಶ್ಯಕತೆ ಇಲ್ಲ. ನಿಮಗೆ ಸಿಗಬೇಕಾದುದು ಸಿಕ್ಕೇ ಸಿಗುತ್ತದೆ. ಸಿಗಲಿಲ್ಲವೆಂದರೆ ನಿಮ್ಮದಲ್ಲ ಅದು ಎಂದರ್ಥ. ಅಧಿಕಾರವನ್ನು ಸಂತೋಷಪಡಿಸಲು ಏನನ್ನಾದರೂ ಮಾಡುವಿರಿ. ಭೂಮಿಯ ವ್ಯವಹಾರ ಸದ್ಯ ಬೇಡ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ. ಮೂರ್ತಿಯಾಗಲು ಪೆಟ್ಟು ತಿನ್ನಬೇಕಾಗುವುದು.
ಕರ್ಕ ರಾಶಿ :ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರಲಿದೆ. ಬೇಸರಿಸಬೇಕಿಲ್ಲ. ಮುಂಬರುವ ದಿನಗಳು ಅವನ್ನೆಲ್ಲ ಸರಿದೂಗಿಸುವುದು ಅಧಿಕಾರಿಗಳು ನಿಮ್ಮ ಕಾರ್ಯವನ್ನು ಕಂಡು ಪ್ರಶಂಸಿಸುವರು. ಸಮಾರಂಭಗಳಿಗೆ ಅಹ್ವಾನ ಬರಬಹುದು. ರಾಜಕೀಯಕ್ಷೇತ್ರದವರು ಉತ್ತಮ ತಂತ್ರವನ್ನು ಈಗಿನಿಂದಲೇ ರೂಪಿಸಿಕೊಳ್ಳುವುದು ಉತ್ತಮ. ಕೊನೆಯ ಕ್ಷಣದವರೆಗೆ ಕಾಯಬೇಕಿಲ್ಲ. ಕಲಾವಿದರು ಕಲಾಪ್ರದರ್ಶನಕ್ಕೆ ವಿದೇಶಕ್ಕೆ ತೆರಳಬಹುದು. ಬೇಕಾದ ವ್ಯವಸ್ಥೆಯ ಜೊತೆ ಹೋಗಿ. ನಿಮ್ಮನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಹಣವೂ ಗೊತ್ತಾಗದಂತೆ ಖಾಲಿಯಾದೀತು. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು.
ಸಿಂಹ ರಾಶಿ :ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸಬೇಕಾಗುವುದು. ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ನಿಮ್ಮ ಕೆಲಸದ ಬಗ್ಗೆ ನಿಮ್ಮ ಗಮನವಿರಲಿ. ಇನ್ನೊಬ್ಬರ ಕುರಿತು ಟೀಕೆ ಮಾಡುವುದನ್ನು ನಿಲ್ಲಿಸಿ. ಅಶ್ಲೀಷಪದಗಳನ್ನು ಬಳಸಿ ಮನೆಯಲ್ಲಿ ಬೈಗುಳ ತಿನ್ನುವಿರಿ. ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವಿರಿ. ಕಛೇರಿಯ ಹಾಗೂ ಮನೆಯ ಕೆಲಸವನ್ನು ನಿಭಾಯಿಸುವುದು ನಿಮಗೆ ಕಷ್ಟವೇ. ಆದರೂ ಅನಿವಾರ್ಯವಾಗಿರುತ್ತದೆ. ಉದಾಸೀನದಿಂದ ಅವಕಾಶದಿಂದ ವಂಚಿತರಾಗುವಿರಿ. ಕಾರ್ಯಕ್ಕಾಗಿ ಇಂದಿನ ಓಡಾಟವು ವ್ಯರ್ಥವೇ ಸರಿ. ನಿನ್ನೆಯ ಘಟನೆಯನ್ನು ನೆನಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು.
ಕನ್ಯಾ ರಾಶಿ :ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಇಷ್ಟು ವರ್ಷದ ಪರಿಶ್ರಮವು ಇಂದು ವ್ಯರ್ಥವಾಗುವುದು. ವಿಶೇಷವಾಗಿ ವಿದ್ಯಾರ್ಥಿಗಳು ಈ ವಿಚಾರದಲ್ಲಿ ಹತಾಶೆಗೊಳ್ಳುವರು. ಭವಿಷ್ಯಕ್ಕೆ ಹಣವನ್ನು ಹೂಡುವ ಮನಸ್ಸಿದ್ದರೂ ಹಣದ ಕೊರತೆ ಇರಲಿದೆ. ಸ್ನೇಹಿತರ ಜೊತೆ ಭೋಜನಕೂಟ ಏರ್ಪಾಡಾಗಲಿದೆ. ನಿಮ್ಮ ಕಲ್ಮಶ ಮನಸನ್ನು ಯಾರಿಗೂ ತೋರಿಬೇಡಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗುವುದು. ಪ್ರೇಯಸಿಯನ್ನು ಕಾಣದೇ ಬೇಸರಿಸುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಉತ್ತಮ. ಬೇಡವಾದುದರ ಬಗ್ಗೆ ಆಸೆ ಬೇಡ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.
ತುಲಾ ರಾಶಿ :ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ. ದುಃಖಿಸದೇ ಧೈರ್ಯದಿಂದ ಮುಂದಿನ ಕಾರ್ಯದ ಕಡೆ ಗಮನವಿರಲಿ. ಉನ್ನತ ಅಧಿಕಾರಕ್ಕೆ ಹೋಗುವ ಸಂಭವಿದ್ದರೂ ಹಿತಶತ್ರುಗಳ ಪಿತೂರಿಯಿಂದ ಅಥವಾ ಹಿಂದೆಂದೋ ಆಡಿದ ಮಾತಿನ್ನೇ ಇಟ್ಟುಕೊಂಡು ನಿಮಗೆ ಹುದ್ದೆಯನ್ನು ಕೊಡದೇಹೋಗಬಹುದು. ಯಾರನ್ನೂ ನಿಯಂತ್ರಿಸಲು ಹೋಗುವುದು ಬೇಡ. ಕೈಗೆ ಸಿಗಲಾರರು. ನೀವು ಬೀಳಲೆಂದೇ ಸ್ತ್ರೀಯೋರ್ವಳು ದೊಡ್ಡ ಕಂದಕವನ್ನು ಕೊರೆದಿರುವಳು. ಹೇಳಬೇಕಾದುದನ್ನು ನೇರವಾಗಿ ಸಂಕ್ಷೇಪವಾಗಿ ಹೇಳಿ. ಸಿಟ್ಟು ಬರುತ್ತದೆ ಎಂದು ಗೊತ್ತಿದ್ದರೂ ಅದನ್ನು ನಿಗ್ರಹಿಸಲು ಶ್ರಮವಹಿಸದೇ ಇರುವುದು ವಿಷಾದಕರ ಸಂಗತಿಯಾಗುವುದು. ಸ್ನೇಹಿತರ ನಡುವೆ ಸೈದ್ಧಾಂತಿಕ ಭಿನ್ನತೆ ಬರುವುದು. ಸಂಗಾತಿಯಿಂದ ಧನಸಹಾಯವನ್ನು ಪಡೆಯುವಿರಿ. ಉದ್ಯೋಗವನ್ನು ಬಿಡುವ ಆಲೋಚನೆ ಇದ್ದು, ಮನೆಯ ಸ್ಥಿತಿಯನ್ನು ಕಂಡು ಈ ತೀರ್ಮಾನಕ್ಕೆ ಬನ್ನಿ.
ವೃಶ್ಚಿಕ ರಾಶಿ :ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಮನೆಯಲ್ಲಿ ನಡೆಯುವ ಕಲಹದಿಂದ ನೀವು ಬೇಸರಗೊಳ್ಳಬಹುದು. ನಿಮ್ಮ ಮಾತನ್ನೇ ಎಲ್ಲರೂ ಪಾಲಿಸಬೇಕು ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಿ. ಅನಿವಾರ್ಯದ ಪ್ರಯಾಣವು ನಿಮ್ಮನ್ನು ಹೈರಾಣ ಮಾಡುವುದು. ಆರ್ಥಿಕವಾದ ಹೂಡಿಕೆಯತ್ತ ನಿಮ್ಮ ಗಮನ ಹರಿಸುವಿರಿ. ಗೃಹನಿರ್ಮಾಣ ಯೋಜನೆಯನ್ನು ಮನೆಯವರ ಜೊತೆ ಸೇರಿ ಸಿದ್ಧಪಡಿಸುವಿರಿ. ನಿಮ್ಮ ಕುಟುಂಬ ಸದಸ್ಯರಿಗೆ ಸಮಯ ನೀಡಿ. ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು. ಆಯ್ಕೆಗಳ ವಿಚಾರದಲ್ಲಿ ನೀವು ಹಿಂದುಳಿಯಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ.
ಧನು ರಾಶಿ :ಇಂದು ಸುಮ್ಮನೆಯೂ ಯಾರನ್ನೂ ಅಪಮಾನ ಮಾಡುವುದು ಬೇಡ. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಮಾತಿನಿಂದಲೇ ಇಂದು ನೀವು ಕೆಲಸವನ್ನು ಮಾಡುವಿರಿ. ಸಾಲಕೊಟ್ಟ ಹಣವು ಬರುತ್ತದೆ ಎಂಬ ನಿರೀಕ್ಷೆಯು ಸುಳ್ಳಾಗಬಹುದು. ದುಂದುವೆಚ್ಚ ಮಾಡಿದ ಕಾರಣ ಮನೆಯಲ್ಲಿ ಕಲಹವಾಗಬಹುದು. ಕಛೇರಿಗೆ ವಿಳಂಬವಾಗಿ ಹೋಗಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಅದು ಸೋತ ಅನಂತರ ಅರಿವಾದೀತು. ಖುಷಿಯಾಗಿರು ಅನೇಕ ವಿಚಾರಗಳನ್ನು ಬಿಟ್ಟು ದುಃಖದ ಸಂಗತಿಯನ್ನೇ ನೆನೆಯುವಿರಿ. ನಿಮ್ಮ ಸೋಲು ನಿಮಗೆ ಅಪಮಾನಕರವಾಗಲಿದೆ. ಅನಿರೀಕ್ಷಿತವಾಗಿ ಹಣವು ಖಾಲಿಯಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು. ವಿದೇಶದ ಜೊತೆಗೆ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾದೀತು.
ಮಕರ ರಾಶಿ :ಇಂದು ಸಂಗಾತಿಯು ನಿಮ್ಮ ಬಗ್ಗೆ ಆಡಿದ ಸಕಾರಾತ್ಮಕ ಮಾತುಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ವೇಗವಾಗಿ ಹಣದಲ್ಲಿ ಅಭಿವೃದ್ಧಿಯ ಕಾಣುವ ಬಗ್ಗೆ ಬಯಕೆ ಇರವುದು. ಮಾತಿಗಾಗಿ ಮಾತು ಬೆಳೆಯಬಹುದು. ಅದು ಮತ್ತೇನೋ ಆಗುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಏನನ್ನಾದರೂ ಕಳೆದುಕೊಳ್ಳುವ ಭೀತಿ ಇರುವುದು. ಅಭ್ಯಂಗಸ್ನಾನದ ಬಯಕೆಯಾಗುವುದು. ತಲೆ ಗಟ್ಟಿ ಇದೆ ಎಂದು ಬಂಡೆಗೆ ಹೋಗಿ ಕುಟ್ಟಲಾಗದು. ನಿಮ್ಮ ಇತಿಮಿತಿಗಳನ್ನು ನೋಡಿ ಮುಂದುವರಿಯಿರಿ. ನಿಮ್ಮಿಂದ ಸಾಲ ಪಡೆದವರ ಜೊತೆ ವಿವಾದವಾಗಬಹುದು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯುಳ್ಳವರಾಗುವಿರಿ. ಸ್ತ್ರೀಯರಿಂದ ನಿಮ್ಮಬಗ್ಗೆ ಸುಳ್ಳು ಅಪವಾದಬರಬಹುದು. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.
ಕುಂಭ ರಾಶಿ :ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತನಾಡಿಕೊಳ್ಳಬಹುದು. ಯಾರಿಗೂ ಸಲಹೆಯನ್ನು ಕೊಡಲು ಇಂದು ಹೋಗಬೇಡಿ. ಆರ್ಥಿಕಮೂಲಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ. ಉತ್ತಮ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವಾದರೆ ಅನಂತರ ದುಃಖಿಸಿ ಪ್ರಯೋಜನವಾಗದು. ಕುಲಕಸುಬನ್ನು ಕಲಿಯುವ ಮನಸ್ಸಾದೀತು, ಮುಂದುವಿರಿಸಿ. ಅಧ್ಯಾಪನ ವೃತ್ತಿಯಲ್ಲಿ ಇದ್ದವರಿಗೆ ವಿದ್ಯಾರ್ಥಿಗಳು ಉಡುಗೊರೆಯೊಂದನ್ನು ನೀಡುವರು. ನಿಮಗೆ ಯಾರಾದರೂ ಪ್ರೇರಣೆಯಾಗಬಹುದು. ನಿಮ್ಮಿಂದ ಆಶೀರ್ವಾದವನ್ನು ಪಡೆದುಕೊಳ್ಳುವರು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.
ಮೀನ ರಾಶಿ :ಇಂದು ನಿಮ್ಮ ಹಣದ ವಿಚಾರವಾಗಿ ಸಣ್ಣ ಕಲಹಗಳು ಸಂಗಾತಿಯ ನಡುವೆ ನಡೆಯಬಹುದು. ವೃತ್ತಿಯಲ್ಲಿ ನಿಮಗೆ ಸಂತೋಷದ ವಾತಾವರಣವು ಇರಲಿದೆ. ನಿಮಗಿಂದು ಪ್ರೀತಿಯನ್ನು ಕಳೆದುಕೊಳ್ಳತ್ತೇನೋ ಎಂಬ ಭಯವಿರಲಿದೆ. ಅನುಕೂಲವಿದ್ದರೆ ದೂರದಲ್ಲಿರುವ ತಂದೆ-ತಾಯಿಯರನ್ನು ಭೇಟಿ ಮಾಡಿ ಬನ್ನಿ. ನಿಮ್ಮ ಮನೆಯಯಿಂದ ನೀವು ಇಷ್ಟಪಡುವ ಪ್ರಾಣಿಯು ಕಾಣೆಯಾಗಬಹುದು. ನಿಮ್ಮ ಸಂಗಾತಿಯು ನೀವು ಪ್ರೀತಿ ತೋರಿಸಿಲ್ಲವೆಂದು ಸಿಟ್ಟಾಗಬಹುದು. ಆದಷ್ಟು ಸಮಯವನ್ನು ಅವರಿಗೆ ಕೊಡಿ, ಖುಷಿಪಡಿಸಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣಮಾಡಬೇಡಿ. ದೈವಕೃಪೆ ಸ್ವಲ್ಪ ಕಡಿಮೆ ಇದ್ದು ಅದನ್ನು ಹೆಚ್ಚು ಮಾಡಿಕೊಳ್ಳಿ. ಎಲ್ಲದಕ್ಕೂ ಇನ್ನೊಬ್ಬರನ್ನು ಬೊಟ್ಟುಮಾಡಿ ತೋರಿಸುವುದು ಸರಿಯಾಗದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು.
-ಲೋಹಿತ ಹೆಬ್ಬಾರ್ – 8762924271 (what’s app only)