ದಿನ ಭವಿಷ್ಯ: ಇಂದು ಈ ರಾಶಿಯವರ ಮೇಲೆ ಒತ್ತಡ ನಿರ್ಮಾಣ

Horoscope Today 01 September: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಮಂಗಳವಾರದಂದು ಪಕ್ಷಪಾತ, ಅತಿಥಿ ಸತ್ಕಾರ, ಗುಣಗ್ರಹಣ, ಧನಾಗಮ, ಅಜಾಗರೂಕತೆ, ಉದ್ಯಮದಲ್ಲಿ ಒತ್ತಡ, ವರ್ಗಾವಣೆಯ ಭೀತಿ, ವ್ಯಾಪಾರ ವಿನಿಮಯ ಇವೆಲ್ಲ ದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರ ಮೇಲೆ ಒತ್ತಡ ನಿರ್ಮಾಣ
ದಿನ ಭವಿಷ್ಯ
Image Credit source: Getty images
Edited By:

Updated on: Sep 01, 2026 | 1:00 AM

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ವೃದ್ಧಿ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:25 – 16:57, ಯಮಗಂಡ ಕಾಲ 09:15 – 10:47, ಗುಳಿಕ ಕಾಲ 12:20 – 13:52

ಮೇಷ ರಾಶಿ: ನಿಮಗೆ ಕೃತ್ರಿಮ ಮಾಡಿರುವ ಬಗ್ಗೆ ಭೀತಿ ಇರಲಿದೆ. ವಿದ್ಯಾರ್ಥಿಗಳು ಆಭ್ಯಾಸದಿಂದ ವಿಮುಖರಾಗುವಿರಿ. ಆಲಂಕಾರಿಕ ವಿಚಾರದಲ್ಲಿ ಆಸಕ್ತಿ ಹೆಚ್ಚಾಗುವುದು. ಅನಿವಾರ್ಯತೆಯನ್ನು ಸೃಷ್ಟಿ ಮಾಡಿ ಸಾಲವನ್ನು ಮಾಡಿಕೊಳ್ಳುವಿರಿ. ಅದನ್ನು ಗಮನದಲ್ಲಿ ಇಟ್ಟುಕೊಳ್ಳಿ. ತಾಯಿಯ ಜೊತೆ ಕಲಹ ಆಗುವ ಸಾಧ್ಯತೆ ಇದೆ. ಹೊರಲಾಗದಷ್ಟು ಭಾರವನ್ನು ಒಯ್ಯುವುದು ಬೇಡ. ಕೆಲವು ಅಭ್ಯಾಸವು ದುರಭ್ಯಾಸವಾಗಿ ಪರಿವರ್ತನೆ ಆಗಲಿದೆ.

ವೃಷಭ ರಾಶಿ: ಖುಷಿಯಿಂದ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮಗೆ ಬಲವಂತ ಮಾಡುವುದು ಇಷ್ಟವಾಗದು. ಸಮಾಧಾನದ ಚಿತ್ತವು ನಿಮ್ಮ ಇಂದಿನ ದಿನವನ್ನು ಚೆನ್ನಾಗಿ ಇಡುವುದು. ಪ್ರಾಣವನ್ನು ನೀವು ಆನಂದದಿಂದ ಮಾಡುವಿರಿ. ನಿಮ್ಮ ನಡೆಯು ಯಾರಿಗೂ ತಿಳಿಯದಾಗಿದೆ. ಕೆಲವು ಸನ್ನಿವೇಶಗಳ ನಿಮಗೆ ಪರೀಕ್ಷೆಯ ಕಾಲವಾಗಲಿದೆ. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸನ್ನು ಹಾಳುಮಾಡಬಹುದು.

ಮಿಥುನ ರಾಶಿ: ಇಂದು ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ನಿಮಗೆ ಸಂಬಂಧಿಸಿದ ಕೆಲಸವಷ್ಟನ್ನೇ ಮಾಡಿ. ಇನ್ನೊಬ್ಬರ ಬಗ್ಗೆ ನಿಮ್ಮ‌ ಮಾತುಗಳು ಬೇಡ. ಸಂದರ್ಭವನ್ನು ನೀವು ಸರಿಯಾಗಿ ನಿಭಾಯಿಸಲು ಕಷ್ಟವಾದೀತು. ನಿಮ್ಮ ಬಗ್ಗೆ ಅಸಂಬದ್ಧ ಮಾತುಗಳನ್ನು ಕೇಳಿ ಬೇಸರವಾಗುವುದು. ಅತಿಯಾದ ಕೋಪವು ನಿಮ್ಮ ಈ ದಿನವನ್ನು ಹಾಳುಮಾಡಬಹುದು. ಅಲ್ಲಿ ಆತಂಕದ ಸಂದರ್ಭಗಳು ಬರಬಹುದು. ತಾಳ್ಮೆಯಿಂದ ಸರಿಮಾಡಿಕೊಳ್ಳಿ. ಅತಿಥಿಗಳು ನಿಮ್ಮ ಜೀವನದ ಬಗ್ಗೆ ನಕಾರಾತ್ಮಕವಾಗಿ ಹೇಳಬಹುದು.

ಕರ್ಕಾಟಕ ರಾಶಿ: ನಿಮ್ಮ ಗಾಂಭಿರ್ಯವು ಮನೆಯಲ್ಲಿ ಹೆದರಿಕೆಯನ್ನು ತರಿಸೀತು. ಹಳೆಯ ದಾಖಲೆಗಳನ್ನು ಇಂದು ಹುಡುಕುವ ಪ್ರಯತ್ನ ಮಾಡುವಿರಿ. ಧೈರ್ಯದಿಂದ ಮುನ್ನಡದರೆ ಬರುವ ಸಂಕಷ್ಟಕ್ಕೆ ದಾರಿಯೂ ಸಿಗಲಿದೆ. ಅಶುಭ ವಾರ್ತೆಯನ್ನು ಕೇಳುವ ಮನಸ್ಸಿರದು. ಅನೇಕ ವರ್ಷಗಳ ಅನಂತರ ಆದ ಸಂತಾನವು ನಿಮಗೆ ಸಂತೋಷವನ್ನು ಕೊಡಬಹುದು. ಯಾವುದನ್ನೂ ಆಗದು ಎಂಬ ಮಾತು ನಿಮ್ಮಿಂದ ಬರುವುದು ಬೇಡ. ನೀವು ಗೌಪ್ಯವಾಗಿ ಮಾಡುವ ಧನಸಂಪಾದನೆಯು ವ್ಯಕ್ತವಾಗಬಹುದು.

ಸಿಂಹ ರಾಶಿ: ನೀವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಿಶ್ವಾಸವನ್ನು ಪಡೆಯಲು ನೀವು ಬಹಳ ಶ್ರಮವನ್ನು ವಹಿಸಬೇಕಾದೀತು. ಸರ್ಕಾರಿ ಉದ್ಯೋಗಿಗಳಾಗಿದ್ದರೆ ತೊಂದರೆಯಾಗಬಹುದು. ಬಂಧುಗಳ ಮಾತು ನಿಮ್ಮ ಉತ್ಸಾಹವು ಕುಗ್ಗಿಸಬಹುದು. ನಿಮ್ಮ ಮಕ್ಕಳಿಂದ ನೀವು ಪ್ರತ್ಯುತ್ತರವನ್ನು ಕೇಳುವಿರಿ. ಅಡುಗೆಯಲ್ಲಿ ಹೆಚ್ಚು ಆಸಕ್ತಿಯು ಇರಬಹುದು. ಇಂದು ನಿಮ್ಮ ಮುಖ್ಯ ವಿಷಯವೇ ಮರೆತುಹೋಗುವ ಸಾಧ್ಯತೆ ಇದೆ. ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡುವಿರಿ.

ಕನ್ಯಾ ರಾಶಿ: ನಿಮ್ಮದಲ್ಲದ‌ ವಸ್ತುವನ್ನು ಜೋಪಾನ‌ಮಾಡುವುದು ಅತ್ಯವಶ್ಯಕ. ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ಮಕ್ಕಳ ಜೊತೆ ಎಲ್ಲಿಗಾದರೂ ಹೋಗಿಬರುವಿರಿ. ವಿದೇಶಕ್ಕೆ ಹೋಗಿಬರಬೇಕಾಗಿಯೂ ಬರಬಹುದು. ಕ್ರೀಡೆಯಲ್ಲಿ ಹೆಚ್ಚಿನ ಉತ್ಸಾಹವು ಇರಲಿದೆ. ಸ್ವಲ್ಪ ಆಸ್ತಿಯನ್ನು ಕಳೆದುಕೊಳ್ಳಬೇಕಾದೀತು. ಆಪದ್ಧನವನ್ನು ಸಂಗ್ರಹಿಸಿಡಲು ಯೋಚಿಸುವಿರಿ. ಸಕಾರಾತ್ಮಕ ಬದಲಾವಣೆಗಳು ನಿಮ್ಮಲ್ಲಿ ಆಗಬಹುದು.

ತುಲಾ ರಾಶಿ: ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ನಿಮ್ಮ ನಡೆಯು ಕೆಲವರಿಗೆ ಅಸಮಾಧಾನವನ್ನು ಉಂಟುಮಾಡಲಿದೆ. ಪುಣ್ಯಸ್ಥಳಗಳಿಗೆ ಹೋಗಬೇಕು ಎಂದು ಅನಿಸಬಹುದು. ಹಿರಿಯರ ಒತ್ತಾಯಕ್ಕೆ ಓದುವ ವಿಷಯವು ನಿಮಗೆ ಕಷ್ಟಕರ ಎನಿಸಬಹುದು. ಬಂಧುಗಳ ಜೊತೆ ನಿಮ್ಮ ವ್ಯವಹಾರವು ಒತ್ತಡ ಪೂರ್ವಕವಾಗಿ ಇರಲಿದೆ. ಇಂದು ನೀಬು ನಿಮ್ಮದೇ ಯಾವುದೋ ಗುಂಗಿನಲ್ಲಿ ಇರುವಿರಿ.

ವೃಶ್ಚಿಕ ರಾಶಿ: ನಿಮ್ಮನ್ನು ಸಮಾರಂಭಗಳಿಗೆ ಅತಿಥಿಯಾಗಿ ಆಹ್ವಾನಿಸುವರು. ಯಂತ್ರಗಳ ವಿಚಾರದಲ್ಲಿ ತಿಳಿವಳಿಕೆ ಇದ್ದರೂ ಎಚ್ಚರಿಕೆ ಇರಲಿ. ನಿಮ್ಮ ಯೋಚನೆಯನ್ನು ಇತರರು ಲಾಭವನ್ನು ಪಡೆದುಕೊಳ್ಳಬಹುದು. ಮಕ್ಕಳ ದುಂದುವೆಚ್ಚವನ್ನು ನೋಡಿ ಸಹಿಸಲಾಗದು. ತಾನು ಕಂಡಿದ್ದು ಮಾತ್ರವೇ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ಹಿತಶತ್ರುಗಳ ಷಡ್ಯಂತ್ರಕ್ಕೆ ಬಲಿಯಾಗುವಿರಿ. ಈಗ ಮಾಡುತ್ತಿರುವ ಉದ್ಯೋಗದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು.

ಧನು ರಾಶಿ: ಉನ್ನತ ಅಧಿಕಾರಕ್ಕಾಗಿ ಅಪೇಕ್ಷೆ ಪಟ್ಟಿದ್ದರೆ ಇಂದು ಸಿಗಬಹುದು. ನೂತನ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಬಹುದು. ನೀವಾಡಿದ ಸುಳ್ಳಿನಿಂದ ನಿಮಗೇ ತೊಂದರೆಯಾಗಲಿದೆ. ನಿಮ್ಮ ವಿಚಾರವಾಗಿ ಕೆಲವು ಸಮಸ್ಯೆಗಳನ್ನು ಮನೆಯಲ್ಲಿ ಎದುರಿಸಬೇಕು. ಮನೆಯ ಸ್ವಚ್ಛತೆಗೆ ಆದ್ಯತೆ ಕೊಡುವಿರಿ. ಹದ ತಪ್ಪಿದ ಆರೋಗ್ಯದಿಂದ ಕಷ್ಟವಾದೀತು. ಯಾರನ್ನೂ ನಂಬದವರು ಇಂದು ನಂಬಿ ಮೋಸ ಹೋಗಬಹುದು. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು.

ಮಕರ ರಾಶಿ: ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಬರಲು‌ ನಿಮಗೆ ಬಹಳ ನೋವಾದೀತು. ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡುವಿರಿ.‌ ಉತ್ಸಾಹದಿಂದ ಮುಗ್ಗರಿಸುವ ಸಾಧ್ಯತೆ ಇದೆ. ಕೆಲಸದಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗಲಿದೆ. ಸಣ್ಣ ನೋವನ್ನೂ ನೀವು ನಿರ್ಲಕ್ಷ್ಯ ಮಾಡುವುದು ಬೇಡ. ನಿಮ್ಮ ಚಿಂತನೆಯನ್ನು ಸರಿಯಾದ ಕ್ರಮದಲ್ಲಿ ಮುಂದುವಿರಿಸಿ. ಸಂಕಷ್ಟ‌ ಬಂದಾದ ಎಲ್ಲದಕ್ಕೂ ಏನೋ‌ ಒಂದು ಕಾರಣವಿರಬಹುದು ಎಂದು ಸಮಾಧಾನವನ್ನು ತಂದುಕೊಳ್ಳುವಿರಿ.

ಕುಂಭ ರಾಶಿ: ನಿಮ್ಮ ಯಶಸ್ಸು ಕಂಡು ನಿಮ್ಮವರೇ ಸಂಕಟ ಪಡುತ್ತಾರೆ. ನಿಮ್ಮವರ ನೋವಿಗೆ ಸ್ಪಂದಿಸಲು ನಿಮಗೆ ಸಮಯ ಸಿಗದೇ ಹೋಗಬಹುದು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುವಿರಿ. ಪ್ರಯಾಣವನ್ನು ನೀವು ಪುಣ್ಯಸ್ಥಳಗಳಿಗೆ ಮಾಡುವಿರಿ.‌ ವರ್ಗಾವಣೆಯನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವಿರಿ. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು.

ಮೀನ ರಾಶಿ: ನಿಮ್ಮ ಸ್ಥಿರಾಸ್ತಿಯು ನಿಮ್ಮ ಕಠಿಣ ಸಮಯದಲ್ಲಿ ನೆರವಾಗಲಿದೆ. ಆರಾಮಾಗಿ ಇರಬೇಕೆಂದುಕೊಂಡರೂ ಅನೇಕ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗಬಹುದು. ಸಂಗಾತಿಯ ಜೊತೆ ಕಲಹವಾಗಬಹುದು.‌ ಒತ್ತಡದಿಂದ ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಗಮನ ಕೊಟ್ಟರೂ ಪ್ರಯೋಜನವಾಗದು. ಸುಳ್ಳಾಡುವವರ ಬಗ್ಗೆ ಅತಿಯಾದ ಕೋಪವಿರಲಿದೆ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು.

ಲೋಹಿತ್ ಹೆಬ್ಬಾರ್ – 8762924271 (what’s app only)

Loading...
Unable to load recommendations.
Follow Us