Daily Horoscope: ಈ ರಾಶಿಯವರ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್​ 09: ವ್ಯಾಪಾರವನ್ನು ಮಿತವಾದ ಲಾಭದಲ್ಲಿ ಮಾಡಿ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಅಸಮಾಧಾನದ ವಾತಾವರಣವು ಉಂಟಾಗಬಹುದು. ಕಛೇರಿಯ ಸಮೂಹ ಕಾರ್ಯದಲ್ಲಿ ನೀವು ಪೂರ್ಣವಾಗಿ ಭಾಗಿಯಾಗಲಾರಿರಿ. ಹಾಗಾದರೆ ಅಕ್ಟೋಬರ್​ 09ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 09, 2024 | 12:15 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶೋಭನ​, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ12:20 ರಿಂದ 01:49, ಯಮಘಂಡ ಕಾಲ ಬೆಳಗ್ಗೆ 07:53ರಿಂದ 09:22ರವರೆಗೆ, ಗುಳಿಕ ಕಾಲ ಬೆಳಗ್ಗೆ 10:51 ರಿಂದ 12:20 ರವರೆಗೆ.

ಸಿಂಹ ರಾಶಿ : ಪರೋಪಕಾರವು ಉತ್ತಮವಾದ ಗುಣವಾದರೂ ಅದು ವಿಷಕಾರಿ ಸರ್ಪದಂತೆ ಆಗಬಹುದು. ಬಹು ದಿನಗಳ ವಿವಾಹದ ಚಿಂತೆಯು ನಿಮ್ಮಿಂದ ದೂರಾಗುವುದು. ಲಾಭವು ಇಲ್ಲದ ಪ್ರಯಾಣವು ನಿಮಗೆ ಬೇಸರವನ್ನು ತರಿಸಬಹುದು. ನಿಮಗೆ ಪ್ರಶಂಸೆಯ ಜೊತೆ ಹೆಚ್ಚಿನ ಜವಾಬ್ದಾರಿಗಳೂ ಬರಬಹುದು. ಮಕ್ಕಳಿಂದ ನಿಮಗೆ ಪ್ರೀತಿ ಸಿಗಬಹುದು. ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಖುವುದು ನಿಮಗೆ ಕಷ್ಟವಾದೀತು. ಇಬ್ಬರೂ ಒಪ್ಪಿಕೊಂಡ ಸಂಗಾತಿಗಳು ದೂರವಾಗುವ ಸಾಧ್ಯತೆಯೂ ಇದೆ. ಜೊತೆಗಾರರು ನಿಮ್ಮ ಕಂಡು ಹಾಸ್ಯ ಮಾಡಬಹುದು. ಸಂಗಾತಿಗಾಗಿ ಏನನ್ನಾದರೂ ಕೊಡಬೇಕು ಎನಸಿಬಹದು. ಅಧಿಕ ಖರ್ಚನ್ನು ನೀವು ನಿಯಂತ್ರಿಸುವುದು ಒಳ್ಳೆಯದೇ. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು. ನೀವು ವಿನಾಕಾರಣ ಯಾರನ್ನೂ ಇಷ್ಟಪಡಲಾರಿರಿ.

ಕನ್ಯಾ ರಾಶಿ : ನಿಮ್ಮವರ ಮೇಲೆ ನಿಮಗೆ ಸಂದೇಹವು ಆರಂಭವಾಗುವುದು. ಇಂದು ನಿಮ್ಮ‌ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವಿರಿ. ಮಾತನಾಡುವಾಗ ಹೆಚ್ಚು ಸ್ಪಷ್ಟತೆ ಇರಲಿ. ಹಣಕಾಸಿನ ಲೆಕ್ಕಾಚಾರದಲ್ಲಿ ನಿಮಗೆ ಕೆಲವು ಗೊಂದಲಗಳು ಬರಬಹುದು. ಯಾರಾದರೂ ನಿಮ್ಮ ಬಳಿ ಅಮೂಲ್ಯವಾದ ವಸ್ತುಗಳನ್ನು ಜೋಪಾನ ಮಾಡಿ ಇಡಲು ಹೇಳಬಹುದು. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ಸರಿಯಾಗಿ ಇರಲಿ. ಅಧಿಕಲಾಭಕ್ಕಾಗಿ ಏನನ್ನಾದರೂ ಮಾಡಲು ಹೋಗುವುದು ಬೇಡ. ಶತ್ರುಗಳು ನಿಮ್ಮ ಕಾರ್ಯವನ್ನು ತಪ್ಪಿಸಲು ಹುಟ್ಟಿಕೊಳ್ಳಬಹುದು. ವಿದ್ಯಾರ್ಥಿಗಳು ಮನೆಯವರು ಹಾಕಿಕೊಟ್ಟ ಚೌಕಟ್ಟನ್ನು ಮೀರಲಾರರು. ನಿಮ್ಮ ವಿದ್ಯೆಗೆ ಯೋಗ್ಯವಾದ ಉದ್ಯಮವನ್ನು ಅನ್ವೇಷಣೆ ಮಾಡುವಿರಿ. ನಿಮ್ಮ‌ ನಿಜಸ್ವರೂಪ ಗೊತ್ತಾಗಬಹುದು. ನಿಮ್ಮ ಸಂಬಂಧಿಕರಿಂದ ಭವಿಷ್ಯಕ್ಕೆ ಉತ್ತಮ ಸಲಹೆಯನ್ನು ಪಡೆಯಬಹುದು.

ತುಲಾ ರಾಶಿ : ಮನೆಯಲ್ಲಿ ಯಾರಾದರೂ ನಿಮ್ಮನ್ನೇ ಗುರಿಯಾಗಿಸಿಕೊಂಡು ಮಾತನಾಡಬಹುದು. ತುರ್ತಾಗಿ ಸ್ಥಳ ಬದಲಾವಣೆ ಮಾಡಬೇಕಾಗಬಹುದು. ಬಹು ದಿನಗಳಿಂದ ಇದ್ದ ನಿರುದ್ಯೋಗ ಸಮಸ್ಯೆಯು ಇಂದು ದೂರಾಗಿ, ಬೇಸರವೂ ಕಳೆಯಬಹುದು. ಭೂಮಿಯು ಲಾಭವಾಗುವಂತೆ ಇದ್ದರೂ ಕೈ ತಪ್ಪಿ ಹೋಗಬಹುದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು. ಒಳ್ಳೆಯ ವಸ್ತುವಿನ ಲಾಭವಾಗುವುದು. ಅವ್ಯವಹಾರದಿಂದ ಭಯವಾಗಬಹುದು. ಯಾರನ್ನೂ ನೀವು ಕೆಳಮಟ್ಟದಲ್ಲಿ ಕಾಣಲು ಬೇಡ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ‌ ಜೊತೆ ತರಳುವಿರಿ. ಸ್ಥಾನಚ್ಯುತಿಯ ಭಯವು ನಿಮ್ಮನ್ನು ಕಾಡಬಹುದು.‌ಮನೆಯ ಸಂದರ್ಭವನ್ನು ನೆನೆದು ದುಃಖಿಸಬಹುದು. ಬಂಧುಗಳು ನಿಮ್ಮನ್ನು ಅಳೆಯಬಹುದು. ಇಂದು ನೀವು ಕೆಲಸದಿಂದ ವಿರಾಮವನ್ನು ಪಡೆಯುವ ಯೋಚನೆ ಬರುವುದು. ಸ್ನೇಹಿತರ ಅಸಹಕಾರವು ನಿಮಗೆ ಬೇಸರ ಕೊಡಬಹುದು.

ವೃಶ್ಚಿಕ ರಾಶಿ : ವಿದ್ಯಾರ್ಥಿಗಳು ಅಭ್ಯಾಸದ ವಿಷಯದಲ್ಲಿ ಮೈಮರೆಯಬಹುದು. ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ಅಸೂಯೆಯು ನಿಮ್ಮ ಇತರ ಕೆಲಸಗಳನ್ನು ನಷ್ಟ ಮಾಡಿಸುವುದು. ಸ್ನೇಹಿತರ ಸಹಾಯವು ನಿಮಗೆ ಬಲವನ್ನು ತಂದುಕೊಡುವುದು. ಪ್ರಭಾವೀ ವ್ಯಕ್ತಿಗಳು ನಿಮ್ಮನ್ನು ಆಕರ್ಷಿಸಬಹುದು. ದಾಂಪತ್ಯದಲ್ಲಿ ಮಧುರ ಕ್ಷಣಗಳು ಇರಲಿವೆ. ಎಲ್ಲವನ್ನೂ ತಿಳಿದುಕೊಂಡೂ ನೀವು ಮುಂದೆ ಸಾಗಲು ಭಯಪಡುವಿರಿ. ಕೆಲವರ ಮಾತು ನಿಮ್ಮನ್ನು ನಿಷ್ಕ್ರಿಯಗೊಳಿಸಬಹುದು. ವ್ಯಾಪಾರವನ್ನು ಮಿತವಾದ ಲಾಭದಲ್ಲಿ ಮಾಡಿ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಅಸಮಾಧಾನದ ವಾತಾವರಣವು ಉಂಟಾಗಬಹುದು. ಕಛೇರಿಯ ಸಮೂಹ ಕಾರ್ಯದಲ್ಲಿ ನೀವು ಪೂರ್ಣವಾಗಿ ಭಾಗಿಯಾಗಲಾರಿರಿ. ಯಾರದೋ ಮಾತಿಗೆ ವಶವಾಗುವ ಸಾಧ್ಯತೆ ಇದೆ. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ತಪ್ಪಾದ ಆಚರಣೆಯನ್ನು ಮಾಡುವುದು ಬೇಡ.