ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಭರಣೀ, ಯೋಗ : ಐಂದ್ರ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:12 ರಿಂದ 03:42ರ ವರೆಗೆ, ಯಮಘಂಡ ಕಾಲ ಬೆಗ್ಗೆ 06:42 ರಿಂದ 08:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:42 ರಿಂದ 11:12 ರ ವರೆಗೆ.
ಮೇಷ ರಾಶಿ: ಇಂದು ನಿಮ್ಮ ಶಕ್ತಿಯ ಬಗ್ಗೆ ಸಂದೇಹಬರುವುದು. ಯಶಸ್ಸು ಬರುವಷ್ಟು ಶ್ರಮವಿರುವುದು. ನಿಮ್ಮ ಕೋಪದ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿ. ಕಚೇರಿಯಲ್ಲಿ ಎಲ್ಲರ ಜೊತೆ ಉದ್ವೇಗವಿಲ್ಲದೇ ವರ್ತಿಸಿ. ನಿಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡಿ. ಕಲಹವನ್ನು ಮಾಡುವಾಗ ವಿವೇಚನೆ ಇರಲಿ. ಬಂಧುಗಳ ಆಗಮನವಾಗಲಿದೆ. ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳಬೇಕಾಗುವುದು. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ.
ವೃಷಭ ರಾಶಿ: ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಮನವು ಅಧಿಕವಾಗಿ ಇರುವುದು. ನಿಮ್ಮ ಪ್ರೀತಿಪಾತ್ರರ ಜೊತೆ ಉಡುಗೊರೆಯನ್ನು ಹಂಚಿಕೊಳ್ಳುವಿರಿ. ಹಿರಿಯರ ಜೊತೆ ಮಾತನಾಡುವಾಗ ವಿನಯವಿರಲಿ. ನಿಮ್ಮ ಶತ್ರುಗಳನ್ನು ನಿಗ್ರಹಿಸಲು ಸಮಯದ ಪ್ರತೀಕ್ಷೆಯಲ್ಲಿಬಿರುವಿರಿ. ಅನಿರೀಕ್ಷಿತವಾಗಿ ಬರುವ ಉದ್ಯೋಗಾವಕಾಶ ನಿಮ್ಮದಾಗಿಸುವತ್ತ ಪ್ರಯತ್ನಶೀಲರಾಗುವಿರಿ. ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಮಿತ್ರರ ಸಹಾನುಭೂತಿಯು ನಿಮಗೆ ಉತ್ಸಾಹವನ್ನು ಕೊಡುವುದು. ಉತ್ತಮವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ.
ಮಿಥುನ ರಾಶಿ: ನಿಮ್ಮ ದೈಹಿಕ ನ್ಯೂನತೆಯನ್ನು ಸವಾಲಾಗಿ ಕಾಣಬಹುದು. ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಬರುವಂತೆ ನಡೆದುಕೊಳ್ಳುವಿರಿ. ಮಿತ್ರರ ಸಹಕಾರವನ್ನು ನೀವು ಅಪೇಕ್ಷಿಸುವುದಿಲ್ಲ. ಇತರ ಅನುಭವವೂ ನಿಮಗೆ ಪಾಠವಾಗುವುದು. ಹಠದ ಸ್ವಭಾವದಿಂದ ಹೊರಬನ್ನಿ. ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ಸಮಯವನ್ನು ನೀವು ಸರಿಯಾಗಿ ಯೋಜಿಸಿಕೊಂಡು ಕಾರ್ಯವನ್ನು ಮಾಡುವಿರಿ. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಯಾರ ಜೊತೆಗೂ ನೇರವಾದ ಮಾತುಗಳನ್ನು ಆಡದೇ ಕುಹಕವಾಡುವಿರಿ. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು.
ಕರ್ಕ ರಾಶಿ: ನಿಮ್ಮ ಅಗೌರವದ ನಡವಳಿಕೆಯು ಸಂಗಾತಿಯ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅಗೌರವ ಮತ್ತು ಯಾರನ್ನಾದರೂ ಲಘುವಾಗಿ ತೆಗೆದುಕೊಳ್ಳುವುದು ಸಂಬಂಧವನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ. ಪ್ರೀತಿಯ ಭಾವನೆಗಳಿಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಉದ್ಯೋಗ ನಷ್ಟದ ಭೀತಿಯು ಇರಬಹುದು. ಎಂದೋ ಪಡೆದ ಸಾಲದ ಮರುಪಾವತಿಯನ್ನು ಮಾಡಬೇಕಾಗಿಬರಬಹುದು. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೊಡುವ ಯೋಚನೆಯಲ್ಲಿಯೇ ಇರುವಿರಿ. ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ನಿಮ್ಮ ಮೇಲೆ ಸಹಾನುಭೂತಿ ಇರಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ.
ಸಿಂಹ ರಾಶಿ: ಇಂದು ನಿಮ್ಮ ತಂದೆಯ ಸಲಹೆಯು ನಿಮ್ಮ ಕೆಲಸದ ಜೀವನಕ್ಕೆ ಹೆಚ್ಚು ಪ್ರಯೋಜನವಾಗಬಹುದು. ಸ್ನೇಹಿತರು ಮತ್ತು ಕುಟುಂಬದಿಂದ ಬೆಂಬಲ ಮತ್ತು ಪ್ರೀತಿಯನ್ನು ನಿರೀಕ್ಷಿಸಿ, ಪಡೆದುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ವ್ಯವಹರಿಸುವುದು ಸವಾಲಿನ ಸಂಗತಿಯಾಗಿದ್ದರೂ ನೆನಪುಗಳು ನಿಮ್ಮ ದಿನವನ್ನು ಚೆನ್ನಾಗಿರಿಸುವುವು. ನಿಮಗೆ ಇಂದು ಸಿಗುವ ಅನಿರೀಕ್ಷಿತವಾದ ಉತ್ತಮ ಅವಕಾಶದಿಂದ ಸಂತೋಷವಾಗುವುದು. ಪ್ರಯತ್ನಿಸುವ ಕಾರ್ಯವು ಯಶಸ್ಸಿನ ಕಡೆಗೆ ಸಾಗುತ್ತಿದೆಯೇ ಎನ್ನುವುದು ಗಮನಿಸಿ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ಸುಳ್ಳು ಮಾತಿನಿಂದಾಗಿ ನಂಬಿಕೆಯನ್ನು ಕಳೆದುಕೊಳ್ಳಬಹುದು. ಅಪರಿಚಿತರಿಗೆ ಮಾಡಿದ ಸಹಾಯವು ದುರುಪಯೋಗವಾಗುವುದು. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಬರಬಹುದು.
ಕನ್ಯಾ ರಾಶಿ: ನಿಮಗೆ ಸ್ನೇಹಿತರ ವರ್ತನೆಯಿಂದ ಅಸಮಾಧಾನವಾಬಹುದು. ಸಿಟ್ಟಿಗೇಳುವ ಸಂದರ್ಭವು ಬರಬಹುದಾದರೂ ಶಾಂತವಾಗಿರಲು ಪ್ರಯತ್ನಿಸಿ. ಸಂಗಾತಿಗೆ ತೊಂದರೆಯಾಗಲು ಬಿಡುವುದಿಲ್ಲ. ಅನಗತ್ಯ ಸಂಕಟವನ್ನು ತಪ್ಪಿಸುವತ್ತ ಗಮನಹರಿಸಿ. ಆರ್ಥಿಕವಾಗಿ, ಇಂದು ಮಿಶ್ರ ದಿನವಾಗಿದೆ. ನೀವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರೆ ನೀವು ಆರ್ಥಿಕ ಲಾಭವಾಗುವುದು. ವಾಹನವನ್ನು ಖರೀದಿಸುವ ಯೋಚನೆಯು ದಟ್ಟವಾಗಿ ಇರಬಹುದು. ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ನಿಜವಾದರೂ, ಅದಕ್ಕೂ ವಿಧಾನವಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ. ನಿಮ್ಮ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ