Horoscope 22 Nov: ದಿನಭವಿಷ್ಯ, ಈ ರಾಶಿಯವರು ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ, ಶುಭ ಸೂಚನೆಯೂ ಇರಲಿದೆ

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 22 Nov: ದಿನಭವಿಷ್ಯ, ಈ ರಾಶಿಯವರು ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ, ಶುಭ ಸೂಚನೆಯೂ ಇರಲಿದೆ
ಇಂದಿನ ರಾಶಿಭವಿಷ್ಯImage Credit source: iStock Photo
Follow us
| Edited By: Rakesh Nayak Manchi

Updated on: Nov 22, 2023 | 12:00 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 22 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಧ್ರುವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:19 ರಿಂದ 01:44ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:03 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ 12:19ರ ವರೆಗೆ.

ಮೇಷ ರಾಶಿ: ಭವಿಷ್ಯದ ಬಗ್ಗೆ ನಿಮಗೆ ಅತಿಯಾದ ಗಂಭೀರತೆ ಇರದು.‌ ಎಲ್ಲವನ್ನೂ ಖುಷಿಯಿಂದ ಕಳೆಯುವ ಆಲೋಚನೆ ಇರಲಿದೆ. ನಿಮಗೆ ಕೊಟ್ಟಿದ್ದನ್ನು ಮರಳಿ ಕೊಡುವಿರಿ.‌ ಇನ್ನೊಬ್ಬರಿಗೆ ಆಕರ್ಷಿತರಾಗುವಿರಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆಚಾತುರ್ಯದಿಂದ ಏನನ್ನೂ ಮಾಡಲು ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗದು. ನಿಮ್ಮ ಆಪ್ತರ ಜೊತೆ ಕೆಲವು ರಹಸ್ಯವನ್ನು ಹೇಳಿಕೊಳ್ಳುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯಕ ಬೇಕು. ಹೊಸ ಉದ್ಯಮಕ್ಕೆ ಅವಕಾಶವು ಸಿಗಬಹುದು. ವಿವಾಹದ ವಿಚಾರದಲ್ಲಿ ಒಳ್ಳೆಯದಾಗುವುದು. ನಿಮ್ಮ‌ ಮೇಲೆ‌ ನಿಮಗೆ ಪೂರ್ಣ ವಿಶ್ವಾಸವಿರದು.

ವೃಷಭ ರಾಶಿ: ನಿಶ್ಚಯವಾದ ವಿವಾಹವು ಹಿತಶತ್ರುಗಳಿಂದ ತಪ್ಪಬಹುದು. ವಸ್ತುವನ್ನು ಕಳೆದುಕೊಳ್ಳುವಿರಿ. ಯಾವುದನ್ನೂ ನೀವು ನಿಶ್ಚಿತವಾಗಿ ಮಾಡಲಾರಿರಿ. ನಿಮ್ಮದಾದ ಸ್ವಂತ ಉದ್ಯೋಗವನ್ನು ಉಳಿಸಿಕೊಳ್ಳಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು.‌ ನಿಮ್ಮರ ಬಗ್ಗೆ ನಿಮಗೆ ಸಕಾರಾತ್ಮ‌ಕ‌ ಭಾವವು ಇರದು. ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ. ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಏರಿಕೆ. ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಯೋಗವು ಬರಬಹುದು. ನಿಮ್ಮ ಸ್ವಭಾವವನ್ನು ಬೇಕೆಂದೇ ಬದಲಿಸಿಕೊಳ್ಳುವಿರಿ. ಚಿಂತೆಯಿಂದ ನಿದ್ರೆಯು ಬಾರದು.

ಮಿಥುನ ರಾಶಿ: ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪೂರ್ಣ ಪ್ರಮಾಣದ ತೊಡಗುವಿಕೆ ಇದ್ದರೂ ಫಲಿತಾಂಶವು ಅಷ್ಟಾಗಿ ಸಿಗದು. ಸಾಮಾಜಿಕ ತಾಣದಿಂದ ಯಾರದ್ದಾದರೂ ಪರಿಚಯವಾದೀತು. ನಿಮ್ಮ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ. ಮನೆಯವರನ್ನು ಕರೆದುಕೊಂಡು ಪ್ರಯಾಣ ಮಾಡುವಿರಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು. ಅಗಬೇಕಾದ ಕಾರ್ಯಕ್ಕೆ ಒತ್ತಡವನ್ನು ಹೇರಿ ಮಾಡಿಸಿಕೊಳ್ಳುವಿರಿ. ಸಂಗಾತಿಯ ಆದಾಯವನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗುವುದು.

ಕಟಕ ರಾಶಿ: ಪ್ರೀತಿಯಲ್ಲಿ ಇದ್ದುಕೊಂಡು ನಿಮ್ಮ ಆರ್ಥಿಕ‌ಸ್ಥಿತಿಯನ್ನು ಹಾಳುಮಾಡಿಕೊಳ್ಳುವಿರಿ. ಅಕಾಸ್ಮಾತ್ ಸಾಲದಿಂದ ನಿಮ್ಮ ದೊಡ್ಡ ಆಲೋಚನೆಗಳು ಸಂಕುಚಿತವಾಗುವುವು. ನಿಮ್ಮ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಮಕ್ಕಳ ಬಗ್ಗೆ ಅನವಶ್ಯಕ ಅನುಮಾನ ಹಾಗೂ ಅಪವಾದವನ್ನು ಮಾಡುವ ಸನ್ನಿವೇಶವು ಬರಬಹುದು. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಿರಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ. ಅನಿರೀಕ್ಷವಾಗಿ ಬರುವ ಕಾರ್ಯದ ಒತ್ತಡಕ್ಕೆ ಸಿಕ್ಕಿಕೊಳ್ಳುವಿರಿ. ಧ್ಯಾನದ ಅವಶ್ಯಕತೆ ಇದೆ ಎಂದು ಅನ್ನಿಸಬಹುದು. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯವು ಅಲ್ಪ ಸಿಗುವುದು.

ಸಿಂಹ ರಾಶಿ: ಕಛೇರಿಯಲ್ಲಿ ನಿಮ್ಮ‌ ಕೆಲಸವನ್ನು ಕಂಡು ಅಪಹಾಸ್ಯ ಮಾಡಬಹುದು. ರಾಜಕೀಯದ ಆಸಕ್ತಿಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ.‌ ಸತತ ಪ್ರಯತ್ನದಿಂದ ಆದಾಯ ಹಾಗೂ ಖರ್ಚನ್ನು ಸರಿಯಾಗಿ ತೂಗಿಸಲು ತಿಳಿಯುವಿರಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಬಂಧುಗಳು ನಿಮ್ಮ ಹತ್ತಿರ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು. ಮನಸ್ಸಿನ ಕಿರಿಕಿರಿಯಿಂದ ಕೋಪವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕಿ ಕಾಯುತ್ತ ಕುಳಿತಿರುವಿರಿ. ಸಂಗಾತಿಯ ಕೋಪವನ್ನು ಶಾಂತಗೊಳಿಸಲು ಬೇರೆ ಬೇರೆ ಉಪಾಯವನ್ನು ಮಾಡುವಿರಿ. ಇನ್ನೊಬ್ಬರನ್ನು‌ ಅನುಕರಿಸಿ ಹಾಸ್ಯ ಮಾಡುವಿರಿ. ಕಲಾವಿದರು ಸ್ವತಂತ್ರರಾಗಲು ಇಷ್ಟಪಡುವರು.

ಕನ್ಯಾ ರಾಶಿ: ಸಹೋದ್ಯೋಗಿಗಳ ಜೊತೆ ವಾಗ್ವಾದಕ್ಕೆ ಇಳಿಯಬೇಕಾಗಬಹುದು. ಸರಳ ವಿಷಯಗಳನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಉತ್ತಮ‌ ದಿನದ ನಿರೀಕ್ಷೆಯಲ್ಲಿ ಇರುವ ನಿಮಗೆ ಬೇಸರವಾದೀತು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಹೇಳದೇ ಮೌನದಿಂದ ಇರುವಿರಿ. ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡುವುದು. ಯಾರ ಮಾತನ್ನೂ ಕೇಳುವ ತಾಳ್ಮೆ ಇರದು. ನಿಮ್ಮ ಮಾತನ್ನು ಕೇಳಲು ಆಸಕ್ತಿ ಇರದು. ಇನ ಮೇಲೆ ಆರ್ಥಿಕ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡಿ. ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಿರಿ. ಬಂಧುಗಳ ಮಾತಿನಿಂದ ಅಸಮಾಧನವು ಇರುವುದು. ಮನಸ್ಸು ಚಂಚಲವಾಗಬಹುದು.

ತುಲಾ ರಾಶಿ: ಸ್ವಾವಲಂಬಿಯಾಗಿರುವ ನಿಮ್ಮ ಕನಸು ಪೂರ್ಣವಾಗಿ ನನಸಾಗದು. ಯಾವುದೋ ಶುಭಸೂಚನೆಯು ಇರಲಿದೆ. ನಿಮ್ಮ ಆಲೋಚನೆಯು ವಾಸ್ತವಕ್ಕಿಂತ ಭಿನ್ನವಾಗಿ ಕಾಣಿಸುವುದು. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಹಿರಿಯರಿಗೆ ಅಗೌರವದಿಂದ ಮಾತನಾಡಿ, ಅನಂತರ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌ ಮಕ್ಕಳ‌ ಮೇಲೆ‌ ನಿಮ್ಮ ಮೋಹವು ಅತಿಯಾಗಿದ್ದು ಅದು ಬಂಧನವೂ ಆಗಬಹುದು. ಅಸಾಮಾನ್ಯ ಕಾರ್ಯವನ್ನು ಮಾಡಲು ಬಹಳ ಉತ್ಸಾಹವಿರುವುದು. ನಿಮ್ಮ ಹಣದ ಅಭಾವವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಹಲವು ಒತ್ತಡದಿಂದ ನಿಮಗೆ ಕೆಲಸವು ಸೂಚಿಸದೇ ಹೋದೀತು.

ವೃಶ್ಚಿಕ ರಾಶಿ: ಆಪ್ತರ‌ ಮಾತಿನ ಮೇಲೆ‌ ಇಂದು ಪೂರ್ಣವಾದ ನಂಬಿಕೆ ಇರದು. ಆಸ್ತಿಯ ವಿಚಾರಗಳನ್ನು ಸಂಬಂಧಿಸಿದವರ ಜೊತೆ ಹಂಚಿಕೊಳ್ಳಿ. ಇಂದಿನ ನಿಮ್ಮ ಮಾತಿನಿಂದ ದ್ವೇಷವನ್ನು ಸಾಧಿಸಬಹುದು. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವು ಪೂರ್ಣವಾಗಬಹುದು. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ನಡೆಯಲಿದ್ದು ತೀರ್ಮಾನವಾಗದು. ಓಡಾಟದ ಸಮಯದಲ್ಲಿ ನಿಮ್ಮ‌ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಕಳೆದುಕೊಂಡ ವಸ್ತುವಿನ ಮೌಲ್ಯವು ನಿಮಗೆ ಗೊತ್ತಾಗದೇ ಹೋಗುವುದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಮನೆಗೆ ಬಂದ ಅತಿಥಿಯನ್ನು ಸತ್ಕಾರಿಸುವಿರಿ. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಸಹೋದರಿಯ ವಿಚಾರದಲ್ಲಿ ನಿಮಗೆ ಅಸಮಾಧಾನವಾಗುವುದು. ಸಂಗಾತಿಯ ಜೊತೆ ಪ್ರವಾಸಿಗರು ಹೋಗುವಿರಿ.

ಧನು ರಾಶಿ: ತಂದೆಯ ಜೊತೆ ಮನಸ್ತಾಪವು ಬರಬಹುದು. ಅದನ್ನು ಮುಂದುವರಿಸುವ ಪ್ರಯತ್ನ‌ವನ್ನು ಮಾಡಬೇಡಿ. ಹಿರಿಯರ ಆಶೀರ್ವಾದವನ್ನು ಪಡೆದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ನಿಮ್ಮ ಸೋಲನ್ನು ನೀವು ಸಹಜವಾಗಿ ಒಪ್ಪಿಕೊಳ್ಳಲಾರಿರಿ. ರಾಜಕೀಯವಾಗಿ ಬೆಳೆಯಲು ಬಹಳ ಆಸಕ್ತಿಯನ್ನು ತೋರುವಿರಿ. ಕಛೇರಿಯಲ್ಲಿ ಸ್ತ್ರೀಯರ ಅಲ್ಪ ಸಹಕಾರವು ಸಿಗುವುದು. ಸಂಗಾತಿಯ ಅನೇಕ ವಿಚಾರಗಳು ನಿಮಗೆ ತಿಳಿಯದೇ ಇರುವುದು.

ಮಕರ ರಾಶಿ: ಸಂಗಾತಿಯ ಪ್ರೀತಿಯನ್ನು ಪೂರ್ಣವಾಗಿ ಪಡೆದುಕೊಳ್ಳಲು ಆಗದು. ನೂತನ ಗೃಹನಿರ್ಮಾಣಕ್ಕೆ ಬಂಧುಗಳಿಂದ ಅಲ್ಪ ಸಹಾಯವು ದೊರೆಯಬಹುದು. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನ ಇರದು. ವಾಹನ ಖರೀದಿಯಲ್ಲಿ ಮೋಸವಾಗುವುದು. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ‌. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿ. ನಿಮ್ಮ ಅಹಂ ಭಾವವನ್ನು ಇತರರು ಆಡಿಕೊಂಡಾರು.

ಕುಂಭ ರಾಶಿ: ನಿಮ್ಮ ಬಗ್ಗೆ ನಿಮಗೇ ನಕಾರಾತ್ಮಕ ಭಾವವು ಬರಬಹುದು. ಆಲಸ್ಯವನ್ನು ಇನ್ನೊಬ್ಬರಿಂದ ರೂಢಿಸಿಕೊಳ್ಳುವಿರಿ. ಪ್ರಾಮಾಣಿಕತೆಗೆ ಯೋಗ್ಯವಾದ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿ ಇರುವುದು. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಉದ್ಯೋಗವು ನಿಮಗೆ ಸಾಕೆನಿಸಿ ಕೈ ಬಿಡಬಹುದು.‌ ಆಸ್ತಿ ಖರೀದಿಯನ್ನು ಮಾಡಲು ಅವಕಾಶವು ಸಿಗಬಹುದು. ಅನಿರೀಕ್ಷಿತವಾಗಿ ಉಡುಗೊರೆಯನ್ನು ಆಪ್ತರಿಂದ ಪಡೆಯುವಿರಿ. ಇಷ್ಟಪಟ್ಟವರ ಭೇಟಿಯು ಮನಸ್ಸಿಗೆ ಹಿತವೆನಿಸುವುದು. ಕೆಲವು ಸಮಸ್ಯೆಯನ್ನು ನೀವಾಗಿಯೇ ತಂದುಕೊಳ್ಳುವಿರಿ.

ಮೀನ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ನಿಮಗೆ ಅಧಿಕ ಒತ್ತಡ ಬರಬಹುದು. ಪಾಲುದಾರಿಕೆಯಿಂದ ಪರಸ್ಪರ ಕಲಹವಾಗಬಹುದು. ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗಬಹುದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ನಿಮ್ಮ ಹಾಸ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ವಾಗ್ವಾದವೇ ಆಗಿ ಮನಸ್ಸು ಮುರಿಯಬಹುದು. ನಿಮಗೆ ವಿರೋಧಿಗಳ ಭಯವು ಕಾಡುವ ಸಾಧ್ಯತೆ ಇದೆ.

-ಲೋಹಿತಶರ್ಮಾ – 8762924271 (what’s app only)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್