Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 22ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 22ರ ಸೋವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 22ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 22, 2024 | 12:22 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 22ರ ಸೋವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಣಕಾಸಿನ ವಿಚಾರದಲ್ಲಿ ನಿಮ್ಮ ಮೇಲಿನ ಒತ್ತಡ ತೀವ್ರ ಆಗಲಿದೆ. ಈ ಹಿಂದೆ ನಿಮಗೆ ಸ್ನೇಹಿತರೋ ಅಥವಾ ಸಂಬಂಧಿಕರೋ ಜೊತೆಯಲ್ಲಿ ಇರುವುದಾಗಿ ಮಾತು ಕೊಟ್ಟಿದ್ದಲ್ಲಿ, ಅದನ್ನು ನಂಬಿಕೊಂಡು ನೀವು ಯಾವುದಾದರೂ ವ್ಯವಹಾರದಲ್ಲಿ ಇಳಿದಿದ್ದಲ್ಲಿ ಈ ದಿನ ಬಹಳ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದೀರಿ. ಕೊನೆ ಕ್ಷಣದಲ್ಲಿ ತಮ್ಮಿಂದ ನಿಮಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿಬಿಡಬಹುದು. ನೀವಾಗಿಯೇ ಆರಿಸಿಕೊಂಡ ಕೆಲಸ, ವೃತ್ತಿ, ವ್ಯಕ್ತಿಗಳಿಂದ ನಿರಾಸೆಯನ್ನು ಅನುಭವಿಸಲಿದ್ದೀರಿ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಹಿನ್ನಡೆ ಆಗಲಿದೆ. ಇನ್ನೂ ಹೊಸದಾಗಿ ಮನೆ ನಿರ್ಮಾಣ ಮಾಡುತ್ತಾ ಇರುವವರಿಗೆ ಕೆಲವು ಸಮಯ ಕೆಲಸವನ್ನೇ ನಿಲ್ಲಿಸಬೇಕಾದ ಸನ್ನಿವೇಶಗಳು ಸೃಷ್ಟಿ ಆಗಬಹುದು. ಸರ್ಕಾರದಿಂದ ತೆಗೆದುಕೊಳ್ಳಬೇಕಾದ ಪರವಾನಗಿ, ಅನುಮತಿ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಪರಿಶೀಲಿಸಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸಣ್ಣಪುಟ್ಟ ವಿಚಾರಗಳಿಗೂ ಈ ದಿನ ನಿಮಗೆ ವಿಪರೀತ ಸಿಟ್ಟು ಬರಲಿದೆ. ಯಾವ ಸ್ಥಳದಲ್ಲಿ, ಯಾರ ಮುಂದೆ, ಯಾವ ವಿಚಾರವನ್ನು ಮಾತನಾಡಬಾರದೋ ಅದೇ ವಿಚಾರವನ್ನು ಮಾತನಾಡಿ, ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಯಾರು ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರೋ ಅಂತಹವರಿಗೆ ವಿಪರೀತ ಕೆಲಸದ ಒತ್ತಡ ಬೀಳಲಿದೆ. ಸರಿಯಾದ ಜನರ ಸಹಾಯ ದೊರೆಯದೆ ಅಥವಾ ಅಗತ್ಯ ಸಂಖ್ಯೆಯ ಮಾನವ ಸಂಪನ್ಮೂಲ ಬೆಂಬಲ ದೊರೆಯದೆ ನೀವೇ ಎಲ್ಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವಂತಹವರಿಗೆ ಮೂರನೇ ವ್ಯಕ್ತಿಗಳ ಪ್ರವೇಶದಿಂದಾಗಿ ಮಾನಸಿಕ ನೆಮ್ಮದಿ ಹಾಳಾಗಬಹುದು. ನೀವು ವೃತ್ತಿನಿರತರು ಆಗಿದ್ದಲ್ಲಿ ಇತರರಿಗೆ ಯಾವುದೇ ಕೆಲಸಕ್ಕೆ ಸಂಬಂಧಪಟ್ಟಂತಹ ಗಡುವು ನೀಡುವ ಮುನ್ನ ಒಂದಕ್ಕೆ ನಾಲ್ಕು ಸಲ ಆಲೋಚನೆಯನ್ನು ಮಾಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ತಂದೆ- ತಾಯಿಯ ಆರೋಗ್ಯ ಈ ದಿನ ನಿಮಗೆ ಬಹಳ ಮುಖ್ಯವಾಗಲಿದೆ. ನಿಮ್ಮಲ್ಲಿ ಕೆಲವರು ಅವರಿಗಾಗಿಯೇ ಇನ್ಷೂರೆನ್ಸ್ ಪಾಲಿಸಿ ಖರೀದಿ ಮಾಡುವ ಯೋಗ ಇದೆ. ಇನ್ನೂ ಕೆಲವರು ತಂದೆ- ತಾಯಿಯ ಸಲುವಾಗಿ ಸಣ್ಣ ಪುಟ್ಟ ಒಡವೆಗಳನ್ನು ಅಥವಾ ಬೆಳ್ಳಿ ತಟ್ಟೆ, ಲೋಟ ಇಂಥದ್ದನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸಗಳನ್ನು ಟೆಂಡರ್ ಪಡೆದು ಮಾಡುವಂಥವರು ಒಂದು ವೇಳೆ ಈಗಾಗಲೇ ಕೆಲಸ ಮಾಡಿಯಾಗಿದೆ, ಅದರ ಹಣ ಬರಬೇಕಿದೆ ಎಂದಿದ್ದಲ್ಲಿ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ. ಸೋದರ ಸಂಬಂಧಿಗಳ ಮಕ್ಕಳ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಬೇಕಾಗುತ್ತದೆ. ಆಭರಣ ವ್ಯಾಪಾರಿಗಳು ಈಗ ಇರುವಂತಹ ವ್ಯವಹಾರವನ್ನು ವಿಸ್ತರಣೆ ಮಾಡುವುದಕ್ಕೆ ಯೋಜನೆ ರೂಪಿಸಲಿದ್ದೀರಿ. ಜಾಬ್ ಕನ್ಸಲ್ಟೆಂಟ್ ಗಳ ಮೂಲಕ ವಿದೇಶಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿಯನ್ನು ಕೇಳುವ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ನೀವು ಯಾವುದೇ ಸ್ಥಳದಲ್ಲಿ ಇದ್ದರೂ ಒಂದು ಬಗೆಯ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಮೀರಿ ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯುವುದು ಕಷ್ಟವಾಗಲಿದೆ. ಹಣಕಾಸಿನ ವಿಚಾರಗಳಲ್ಲಿ ನೀವು ಅಂದುಕೊಂಡಂಥ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಆಗುವುದಿಲ್ಲ. ಅದರಲ್ಲೂ ನೀವು ಈಗಾಗಲೇ ಕೆಲಸ ಮಾಡಿ ಆಗಿದೆ, ಅದರ ಹಣವನ್ನು ಈ ದಿನ ಕೊಡುತ್ತಾರೆ ಅಥವಾ ಇಂಥದ್ದೇ ದಿನ ಕೊಡುವುದಾಗಿ ಹೇಳುತ್ತಾರೆ ಎಂದು ನಿರೀಕ್ಷೆ ಮಾಡುತ್ತಿದ್ದಲ್ಲಿ ಅದು ಅಂದುಕೊಂಡಂತೆ ಆಗುವುದಿಲ್ಲ. ವೈಯಕ್ತಿಕ ದ್ವೇಷದ ಕಾರಣಕ್ಕೋ ಅಥವಾ ಇನ್ಯಾವುದಾದರೂ ಕಾರಣದಿಂದಲೋ ಇತರರ ಬಗ್ಗೆ ಹಗುರವಾದ ಮಾತುಗಳನ್ನು ಆಡುವುದಕ್ಕೆ ಹೋಗಬೇಡಿ. ನಿಮ್ಮ ಮಿತಿಯನ್ನು ಅರಿತುಕೊಂಡು ವರ್ತಿಸಿದಲ್ಲಿ ಹೆಚ್ಚಿನ ಸಮಸ್ಯೆಗಳು ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸುವುದು ಸಾಧ್ಯವಾಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಐಟಿ ವಲಯದಲ್ಲಿ ಕಾರ್ಯ ನಿರ್ವಹಿಸುವಂತಹವರಿಗೆ ತುಂಬಾ ಒಳ್ಳೆಯ ಸುದ್ದಿ ಕಿವಿಗೆ ಬೀಳುವ ಯೋಗವಿದೆ. ಕೆಲವು ವಾರಗಳಿಂದ ಹಿಡಿದು ಕೆಲವು ವರ್ಷಗಳ ತನಕ ಬೇರೆ ದೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ನಿಮ್ಮ ಮೇಲಧಿಕಾರಿಗಳು ತಿಳಿಸುವ ಸಾಧ್ಯತೆಗಳಿವೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ಈ ದಿನ ದೊರೆಯುವ ಸಾಧ್ಯತೆಗಳು ಬಹಳ ಹೆಚ್ಚಿವೆ. ಈ ಹಿಂದೆ ನೀವಾಗಿಯೇ ಬೇಡ ಅಂದುಕೊಂಡ ಕೆಲಸವೊಂದಕ್ಕೆ ಸಂಬಂಧಿಸಿದಂತೆ ಪ್ರಸ್ತಾವಗಳನ್ನು ತರುವ ಯೋಗ ಇದೆ. ಈಗ ಇನ್ನೂ ಹೆಚ್ಚಿನ ವೇತನ ಹಾಗೂ ಸ್ವಾತಂತ್ರ್ಯ ನೀಡುವುದಾಗಿ ನಿಮ್ಮ ಬಳಿ ಮಾತುಕತೆ ನಡೆಸಬಹುದು. ನಿಮಗೆ ಈ ದಿನ ಪ್ರಮುಖವಾದ ಎಚ್ಚರಿಕೆ ಏನೆಂದರೆ, ಕುಟುಂಬದಲ್ಲಿಯೇ ಅತ್ಯಂತ ಚಿಕ್ಕ ವಯಸ್ಸಿನ ಸದಸ್ಯರು ಯಾರಿದ್ದಾರೋ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ತನಕ ನೀವು ಪಟ್ಟಂತಹ ಶ್ರಮಕ್ಕೆ ಸಿಕ್ಕ ಪ್ರತಿಫಲ ಏನು ಎಂಬ ಬಗ್ಗೆ ಬಹಳ ಆಲೋಚನೆ ಮಾಡಲಿದ್ದೀರಿ. ನಿಮಗೆ ಬಹಳ ಆಪ್ತರಾಗಿ ಇರುವವರ ಕೆಲವು ವರ್ತನೆಯ ಬಗ್ಗೆ ತುಂಬಾ ಬೇಸರ ಆಗಲಿದೆ. ಇದಕ್ಕೆ ತಕ್ಕಂತೆ ಕೆಲವು ವ್ಯಕ್ತಿಗಳು ನಿಮ್ಮ ಆಪ್ತರ ವಿಚಾರದಲ್ಲಿಯೇ ಕೆಲವು ಆಕ್ಷೇಪಗಳನ್ನು ಸಹ ಎತ್ತಬಹುದು. ಒಂದಿಷ್ಟು ಸಮಯ ಕೊಟ್ಟು ನೋಡೋಣ ಹಾಗೂ ಇನ್ನೊಂದಿಷ್ಟು ಸಮಾಧಾನವಾಗಿ ಯೋಚಿಸೋಣ ಎಂಬ ಮನಸ್ಥಿತಿಯಲ್ಲಿ ಈ ದಿನ ನೀವು ಇರುವುದಿಲ್ಲ. ಈ ಕಾರಣದಿಂದಾಗಿ ಆಪ್ತರಿಂದ ದೂರವಾಗುವ ಯೋಗ ನಿಮ್ಮ ಪಾಲಿಗೆ ಇದೆ ಎಂದು ಹೇಳಬಹುದು. ತುರ್ತಾಗಿ ದೂರ ಪ್ರಯಾಣ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾದಲ್ಲಿ ನೀವು ಆ ಪ್ರಯಾಣ ಮಾಡಿದ ನಂತರದಲ್ಲಿ ಹೋದ ಕೆಲಸ ಆಗಬಹುದೇ ಎಂಬ ಬಗ್ಗೆ ಸರಿಯಾಗಿ ವಿಶ್ಲೇಷಿಸಿ, ವಿಚಾರಿಸಿ ಆ ನಂತರ ಮುಂದುವರಿಯಿರಿ. ಹೋಟೆಲ್ ಗಳಲ್ಲಿಯೇ ಊಟ- ತಿಂಡಿ ಮಾಡುವಂಥವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ವೇತನ ಹೆಚ್ಚಳ, ಬಡ್ತಿ ಇವುಗಳನ್ನು ನಿರೀಕ್ಷೆ ಮಾಡುತ್ತಿರುವಂತಹ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ನೀವು ಈಗ ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿಯೇ ಮನಸ್ಸಿಗೆ ಒಪ್ಪುವಂತಹ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದೀರಿ. ಇದು ಸ್ನೇಹದಿಂದ ಪ್ರೀತಿಗೆ ತಿರುಗಿ, ಮದುವೆ ತನಕ ಮುಂದುವರಿಯುವ ಯೋಗ ಇದೆ. ಇಷ್ಟು ಸಮಯ ನಿಮಗೆ ಆರ್ಥಿಕ ಬಾಧೆಗಳು ಏನಾದರೂ ಕಾಡುತ್ತಿದ್ದಲ್ಲಿ ಅವುಗಳು ನಿವಾರಣೆಯಾಗುವುದಕ್ಕೆ ಸೂಕ್ತ ಮಾರ್ಗೋಪಾಯಗಳು ದೊರೆಯಲಿವೆ. ದ್ವಿಚಕ್ರ ವಾಹನವು ಅಥವಾ ಕಾರು ಇತ್ಯಾದಿಗಳನ್ನು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಮನೆಯಲ್ಲಿ ದೇವತಾ ಕಾರ್ಯಗಳು ಆಯೋಜನೆ ಮಾಡುವ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರು ಅದರ ಉಪಕಾರ ಸ್ಮರಣೆ ಎಂಬಂತೆ ಕೆಲವು ಉಡುಗೊರೆಗಳನ್ನು ನೀಡಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೆಲವು ವ್ಯಕ್ತಿಗಳ ಜೊತೆಗೆ ಸ್ನೇಹ ಅಥವಾ ಸಂಬಂಧ ಬೇಡ ಎಂದು ಈ ದಿನ ತುಂಬ ಬಲವಾಗಿ ಅನಿಸುವುದಕ್ಕೆ ಆರಂಭವಾಗುತ್ತದೆ. ಇತರರು ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ವಿಪರೀತ ಮೂಗು ತೂರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಬೇಸರ ಉಂಟಾಗಲಿದೆ. ವಸ್ತ್ರಾಭರಣಗಳ ಖರೀದಿ ಮಾಡಬೇಕು ಎಂದುಕೊಳ್ಳುವವರು ಈ ದಿನದ ಮಟ್ಟಿಗೆ ನಿರ್ಧಾರವನ್ನು ಮುಂದಕ್ಕೆ ಹಾಕುವುದು ಉತ್ತಮ. ಮಕ್ಕಳ ಆರೋಗ್ಯ ವಿಚಾರ, ಅದರಲ್ಲೂ ಹೆಣ್ಣುಮಕ್ಕಳು ಇರುವವರು ಅವರ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಗಮನವನ್ನು ವಹಿಸಿ. ನಿಮ್ಮಲ್ಲಿ ಕೆಲವರು ಈಗ ಇರುವ ಉದ್ಯೋಗವನ್ನು ಬಿಟ್ಟು, ನಿಮ್ಮದೇ ಸ್ವಂತ ವ್ಯವಹಾರವನ್ನು ಆರಂಭಿಸಬೇಕು ಎಂದು ಯೋಚಿಸಲು ಶುರು ಮಾಡಲಿದ್ದೀರಿ. ಮನೆಯಲ್ಲಿ ಇರುವಂಥ ಕೆಲವು ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡುವ ಬಗ್ಗೆ ಆಲೋಚನೆ ಬರಲಿದೆ. ಹೊಸಬರ ಜೊತೆಗೆ ವ್ಯವಹಾರ ಮಾಡುತ್ತಿದ್ದೀರಿ ಎಂದಾದರೆ ಸಾಮಾನ್ಯಕ್ಕಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಹಲವರು ಈ ದಿನ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ನೀವು ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿ ಹೊಸ ಪ್ರಾಜೆಕ್ಟ್ ಒಂದಕ್ಕೆ ನೇತೃತ್ವ ವಹಿಸುವಂತೆ ಸೂಚಿಸುವ ಸಾಧ್ಯತೆಗಳಿವೆ. ಕೆಲವು ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಮನೆಗಳ ಪೇಂಟ್, ಮರದ ಕೆಲಸಗಳು, ಸ್ಟೀಲ್ ಕೆಲಸಗಳು ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಹೊಸದಾಗಿ ದೊಡ್ಡ ಮೊತ್ತದ ಆರ್ಡರ್ ಗಳು ದೊರೆಯುವ ಯೋಗ ಇದೆ. ಈ ದಿನ ನಿಮಗೆ ಎಚ್ಚರಿಕೆ ಏನೆಂದರೆ, ಪ್ರಮುಖ ವಿಚಾರಗಳನ್ನು ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡು ಆದ್ಯತೆಯ ಮೇಲೆ ಕೆಲಸಗಳನ್ನು ಮಾಡಿ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಡೆಡ್ ಲೈನ್ ಒಳಗಾಗಿ ಮುಗಿಸುವುದಕ್ಕೆ ಪ್ರಯತ್ನಿಸಿ. ಇತರರು ನೀಡುವ ಸಲಹೆಗಳನ್ನು ವಿಶ್ಲೇಷಿಸಿ, ತೀರ್ಮಾನ ಕೈಗೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ