Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 12ರ ದಿನಭವಿಷ್ಯ

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 12ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ರಾಘವೇಂದ್ರ ಸ್ವಾಮಿ ಮಠದಲ್ಲಿ ವೃಂದಾವನಕ್ಕೆ ತುಳಸಿ ಅರ್ಪಿಸುವ ಮಹತ್ವವನ್ನು ತಿಳಿಯಿರಿ. ಭರವಸೆಗಳನ್ನು ಈಡೇರಿಸುವಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 12ರ ದಿನಭವಿಷ್ಯ
Numerology Prediction
Image Credit source: google
Edited By:

Updated on: Feb 12, 2026 | 12:02 AM

ಈ ದಿನ ರಾಘವೇಂದ್ರ ಸ್ವಾಮಿ ಮಠದಲ್ಲಿನ ವೃಂದಾವನಕ್ಕೆ ಹಾಕುವುದಕ್ಕೆ ತುಳಸೀ ಮಾಲೆಯನ್ನು ತೆಗೆದುಕೊಂಡು ಹೋಗಿ ಕೊಡಿ. ಒಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ರಾಘವೇಂದ್ರ ಸ್ವಾಮಿಗಳನ್ನು ನೆನಪಿಸಿಕೊಂಡು, ದೇವರ ಮನೆಯಲ್ಲಿ ಚಿತ್ರಪಟಕ್ಕಾದರೂ ತುಳಸಿ ದಳವನ್ನು ಅರ್ಪಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈಗ ನಿಮ್ಮ ಬಳಿ ಇರುವ ಎಲ್ಲ ಮೊತ್ತವನ್ನು ಒಂದೇ ಕಡೆಗೆ ಹೂಡಿಕೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಬಳಿ ಇರುವ ವಾಹನದ ಮಾಡಿಫಿಕೇಷನ್ ಮಾಡಿಸಬೇಕು ಎಂದಿದ್ದಲ್ಲಿ ಸ್ವಲ್ಪ ಸಮಯಕ್ಕೆ ತೀರ್ಮಾನವನ್ನು ಮುಂದಕ್ಕೆ ಹಾಕಿ. ಇನ್ನು ಈಗಾಗಲೇ ಸಾಕಷ್ಟು ಮುಂದುವರಿದಿದ್ದೇವೆ, ಇನ್ನೇನಿದ್ದರೂ ಕೆಲಸ ಮಾಡಿಸುವುದಷ್ಟೇ ಬಾಕಿ ಅಂತೇನಾದರೂ ಇದ್ದಲ್ಲಿ ಟ್ರೆಂಡ್ ಒಮ್ಮೆ ನೋಡಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಆಗಲಿ, ಮಾಡಿಕೊಡುತ್ತೇನೆ ಎಂದು ನೀವಾಗಿಯೇ ಭರವಸೆ ನೀಡಿದ್ದ ಕೆಲವು ಕಾರ್ಯಗಳನ್ನು ಅಂದುಕೊಂಡ ಸಮಯದ ಒಳಗಾಗಿ ಪೂರ್ಣ ಮಾಡುವುದು ಅಸಾಧ್ಯ ಎಂಬುದು ಖಚಿತ ಆಗಲಿದೆ. ಆದರೆ ಈ ವಿಚಾರವನ್ನು ಹೇಗೆ ಹೇಳುವುದು ಎಂಬುದು ಇಕ್ಕಟ್ಟಿಗೆ ಸಿಲುಕಿಸಲಿದೆ. ಆರ್ಥಿಕ ವಿಚಾರಗಳಿಗೆ ಅಭದ್ರತೆ ಭಾವವೊಂದು ನಿಮ್ಮನ್ನು ಮುತ್ತಿಕೊಳ್ಳಲಿದೆ. ನಿಮ್ಮ ಉದ್ದೇಶ ಬದಲಿಸಿಕೊಳ್ಳುವುದಕ್ಕೆ ಸಾಧ್ಯವಿದ್ದಲ್ಲಿ ಆ ದಿಕ್ಕಿನ ಕಡೆಗೆ ಮುನ್ನಡೆಯಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮಿಂದ ಎಷ್ಟು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸ್ಪಷ್ಟ ಚಿತ್ರಣವೊಂದು ಇರಿಸಿಕೊಂಡ ನಂತರವೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಬರುವಂಥ ಕೆಲವು ಕೆಲಸಗಳು ಮೇಲ್ನೋಟಕ್ಕೆ ಬಹಳ ದೊಡ್ಡ ಲಾಭ ತಂದುಕೊಡುವಂತೆ ಅನಿಸಲಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಆಗಿರುವ ಅಥವಾ ಮುಂದೆ ಆಗುವ ಬದಲಾವಣೆಗಳ ಕಾರಣಕ್ಕೆ ನೀವು ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಲಾಭ ತಂದುಕೊಡುವುದಿಲ್ಲ.

ಲೇಖನ- ಸ್ವಾತಿ ಎನ್.ಕೆ.