Horoscope 28 Feb: ಈ ರಾಶಿಯ ಮಹಿಳೆಯರು ಇಂದು ಶುಭ ಸುದ್ದಿ ಕೇಳುವರು

Nitya Bhavishya: 2024 ಫೆಬ್ರವರಿ 28ರ ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 28 Feb: ಈ ರಾಶಿಯ ಮಹಿಳೆಯರು ಇಂದು ಶುಭ ಸುದ್ದಿ ಕೇಳುವರು
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on:Feb 28, 2024 | 6:44 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ಥಿ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:45 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:20 ರಿಂದ 09:48ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:17 ರಿಂದ 12:45ರ ವರೆಗೆ.

ಮೇಷ ರಾಶಿ: ಇಂದು ಕಾರ್ಯಕ್ಷೇತ್ರದಲ್ಲಿ ನೀವು ಮೇಲುಗೈ ಸಾಧಿಸುವಿರಿ. ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಲಾರಿರಿ. ಯೋಜನೆಗೆ ತಕ್ಕ ಆದಾಯವನ್ನು ನಿರೀಕ್ಷಿಸುವಿರಿ. ಮಹಿಳೆಯರಿಗೆ ಶುಭ ಸುದ್ದಿ ಇರಲಿದ್ದು ಬಹಳ ದಿನಗಳ ನಂತರ ನಿಮಗೆ ನಿರಾಳ ಸಿಕ್ಕಂತೆ ಆಗುವುದು. ವಸ್ತುಗಳ ಉತ್ಪನ್ನ ಮಾಡುವವರಿಗೆ ನೌಕರರ ಕೊರತೆ ಕಾಣಿಸಬಹುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು.‌ ಎಲ್ಲ ಬೇಸರಕ್ಕೂ ಅನ್ಯರೇ ಕಾರಣವಾಗಿರಲು ಸಾಧ್ಯವಿಲ್ಲ. ನಿಮ್ಮನ್ನು ಅಳೆಯುವ ಜನರ ಸಂಖ್ಯೆ ಅಧಿಕವಾದೀತು. ಎಲ್ಲರೂ ನಾನಾ ಪ್ರಶ್ನೆಗಳನ್ನು ಕೇಳುವರು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಇಂದು ಉತ್ತಮವಾಗಿದೆ.‌ ಭೋಜನದಿಂದ ಸುಖವು ಸಿಗುವುದು.

ವೃಷಭ ರಾಶಿ: ನಿಮ್ಮ‌ ಸ್ಥಾನವನ್ನು ಬಿಟ್ಟುಕೊಡಲು ನೀವು ಸಮರ್ಥರಾಗಿಲ್ಲ. ಮೋಹವು ನಿಮ್ಮನ್ನು ಕಟ್ಟಿಡುವುದು. ಸಂಪಾದನೆಯ ಕಡೆ ಮುಖಮಾಡಲು ಆಗದು. ಉದ್ಯೋಗದಲ್ಲಿ ಗೊತ್ತಾಗದೇ ನಿಮ್ಮ ಮೇಲೆ ಅಪವಾದಗಳು ಬರಬಹುದು. ಅದನ್ನು ತಾಳ್ಮೆ ತಿಳಿಸಿ, ಸರಿ ಮಾಡಿಕೊಳ್ಳುವಿರಿ. ಆರೋಗ್ಯದ ವ್ಯತ್ಯಾಸದಿಂದ ನಿಮ್ಮ ಮುಖ್ಯ ಕಾರ್ಯಗಳನ್ನು ಮಾಡಲು ಆಗದು. ವ್ಯಥೆಗಳನ್ನು ಕಳೆಯಲು ಹೊಸ ಮಾರ್ಗವನ್ನು ಅನ್ವೇಷಿಸುವಿರಿ. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ನಿಮಗೆ ನಿಮ್ಮ ಸ್ವಭಾವವು ಬದಲಾದಂತೆ ಅನ್ನಿಸೀತು. ಅನೇಕ ಲಾಭದ ಅವಕಾಶಗಳು ಸಿಗುತ್ತವೆ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.

ಮಿಥುನ ರಾಶಿ: ಇಂದು ಅಪರಿಚಿತರ ಜೊತೆ ಪುಣ್ಯ ಸ್ಥಳಗಳ ದರ್ಶನವನ್ನು ಮಾಡುವಿರಿ. ಅತಿಯಾದ ನಿದ್ರೆಯಿಂದ ನಿಮ್ಮ ಮನಸ್ಸಿಗೆ ಜಡತ್ವ ಬದಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳುವಿರಿ. ಇನ್ನೊಬ್ಬರಲ್ಲಿ ಪ್ರೀತಿ ಮೂಡುವ ಸಾಧ್ಯತೆ ಇದೆ. ಹಳೆಯ ಗೆಳೆಯರು ನಿಮಗೆ ಆಕಸ್ಮಿಕವಾಗಿ ಸಿಕ್ಕಾರು. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ಇನ್ನೊಬ್ಬರ ಭಾವಕ್ಕೆ ಸ್ಪಂದಿಸುವ ಗುಣವಿರುವುದು. ಮನಸ್ತಾಪದ ಕಾರಣ ದೂರ ಉಳಿಯಲು ಇಷ್ಟಪಡುವಿರಿ.‌ ನಾನಾ ಪ್ರಕಾರದ ಖರ್ಚುಗಳಿಂದ ಇಂದಿನ ದಿನದ ಸಮಯವು ದುಬಾರಿ ಎನಿಸಬಹುದು. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ನಿಮ್ಮನ್ನು ಯಾರಾದರೂ ಬಂಧುಗಳು ಕೇಳಿಕೊಂಡುಬರಬಹುದು.

ಕಟಕ ರಾಶಿ: ಇಂದು ನೀವು ಯಾರನ್ನಾದರೂ ಮೆಚ್ಚಿಸಿ ಕಾರ್ಯವನ್ನು ಮಾಡಬೇಕಾದೀತು. ನಿಮ್ಮ ಊಹೆಗಳು ಪೂರ್ಣಪ್ರಮಾಣದಲ್ಲಿ ಸರಿಯಾಗದು. ನಿಮ್ಮ ಕಾರ್ಯಗಳಲ್ಲಿ ಉತ್ಸಾಹವಿದ್ದರೂ ಹಿತಶತ್ರುಗಳು ನಿಮ್ಮ ಕಾರ್ಯವನ್ನು ಕಾಳು ಮಾಡಿಯಾರು. ಅಧಿಕಾರಿ ವರ್ಗದಿಂದ ನಿಮ್ಮ ಮೇಲೆ ಒತ್ತಡವು ಬರಬಹುದು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಸ್ನೇಹಿತರಿಗೆ ಕಷ್ಟವಾದೀತು. ನಷ್ಟದ ಪ್ರಮಾಣಗಳು ಅಧಿಕವಾಗಬಹುದು. ಮರೆವಿನಿಂದ ನಿಮ್ಮ ವಸ್ತುಗಳು ಕಷ್ಟವಾಗಬಹುದು. ಅಪರಿಚಿತರ ವ್ಯವಹಾರವನ್ನು ಕಡಿಮೆ ಮಾಡಿ. ನಿಮ್ಮನ್ನು ನೀವೇ ಬೈದುಕೊಳ್ಳುವ ಸ್ಥಿತಿ ಬರಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಏಕಾಂತದಲ್ಲಿ ಇರಲು ಇಷ್ಟವಾಗುವುದು.

ಸಿಂಹ ರಾಶಿ: ನಿಮ್ಮ ರಾಜಕೀಯ ನಡೆಯು ಹಾಸ್ಯಾಸ್ಪದವಾಗಬಹುದು. ನಿಮ್ಮ ಆತಂಕವನ್ನು ಯಾರ ಬಳಿಯಾದರೂ ಹೇಳಿಕೊಂಡು ನಿವಾರಿಸಿಕೊಳ್ಳಿ. ಉದ್ಯೋಗವು ನಿಮ್ಮ ವೇಗಕ್ಕೆ ಇರದೇಹೋಗಬಹುದು. ನೀವು ಗೊತ್ತಿಲ್ಲ, ಅನುಭವವಿಲ್ಲದ ಕೆಲಸಗಳನ್ನು ಮಾಡಲು ಹೋಗಬೇಕಾಗುವುದು. ಇದರಿಂದ ನಿಮಗೆ ಆತಂಕವು ಉಂಟಾಗಬಹುದು‌. ಕೆಲವನ್ನು ಅನುಭವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಸಮಯಕ್ಕಾಗಿ ನೀವು ಕಾಯುವುದು ಅನಿವಾರ್ಯವಾದೀತು. ಸ್ವಯಂಕೃತ ಅಪರಾಧದಿಂದ ನಿಮಗೆ ಕಿಂಚಿತ್ತೂ ಬೇಸರವಾಗದು. ನಿಮ್ಮ ಮಾರ್ಗವನ್ನು ಯಾವುದೇ ಕಾರಣಕ್ಕೂ ಬದಲಿಸಲಾರಿರಿ. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಇಂದಿನ ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು.

ಕನ್ಯಾ ರಾಶಿ: ಇಂದು ನಿಮ್ಮ ನಿರ್ಬಂಧಗಳು ಇತರರಿಗೆ ಒಪ್ಪಿತವಾಗದೇ ಇರಬಹುದು. ಅಮೂಲ್ಯವಾದ ವಸ್ತುಗಳನ್ನು ಖರೀದಿಸಲು ನಿಮಗೆ ಹಿಮ್ಮನಸ್ಸು ಇರುವುದು. ಸಂಗಾತಿಯ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸೋಲುವಿರಿ. ನಿಮ್ಮ ಮಾತುಗಳನ್ನು ಉಳಿಸಿಕೊಳ್ಳಲು ಶ್ರಮದ ಅಗತ್ಯವಿದೆ. ತಾಯಿಯಿಂದ ಆರ್ಥಿಕ ಸಹಾಯವನ್ನೂ ಸಿಗಲಿದ್ದು ತೃಪ್ತಿದಾಯಕವಾಗಲಿದೆ‌. ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ನಿಮ್ಮ ವರ್ತನೆಗಳ ಬಗ್ಗೆ ಆಕ್ಷೇಪ ಬರಬಹುದು. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮಕ್ಕಳ‌ ವಿಚಾರದಲ್ಲಿ ದುಂದು ವೆಚ್ಚ ಮಾಡಬೇಕಾದೀತು. ನಿಮ್ಮ ಉಡುಗೊರೆಯಿಂದ ಸಂತೋಷವಾಗಲಿದೆ.

ತುಲಾ ರಾಶಿ: ಉದ್ಯೋಗದ ಲಾಭವನ್ನು ಹೂಡಿಕೆ ಮಾಡುವಿರಿ. ನಿಮ್ಮ ಗುರಿಯ ದಿಕ್ಕು ಬದಲಾದಂತೆ ತೋರಬಹುದು.‌ ಮನೆಯ ಮಾರಾಟದಿಂದ ಆರ್ಥಿಕತೆಯು ಹೆಚ್ಚಾಗುವುದು. ಇಂದು ಹಣಕಾಸಿನ ಕ್ರಮಬದ್ದ ಹೂಡಿಕೆ ಮತ್ತು ಖರ್ಚುಗಳ ಬಗ್ಗೆ ಸಂಗಾತಿಯ ಜೊತೆ ಚಿಂತನೆ ನಡೆಸುವಿರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಇಂದು ಅನಿರೀಕ್ಷಿತ ಪ್ರಶಂಸೆ ಹಾಗು ಗೌರವಗಳು ಸಿಗಲಿವೆ. ಆಲಸ್ಯದಿಂದ ಹೊರಬರುವ ಮನಸ್ಸಾಹುವುದು. ಎರಡು ಮನಸ್ಸನ್ನು ಮಾಡಿಕೊಂಡು ಮುಂದುವರಿಯುವುದು ಬೇಡ. ಭಾವನಾತ್ಮಕ ಚಿಂತನೆಗಳು ನಿಮ್ಮ ಮೇಲೆ‌ ಸಕಾರಾತ್ಮಕ ಪರಿಣಾಮವನ್ನು ನೀಡಬಹುದು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಆಕ್ಷೇಪಗಳು ಎಲ್ಲವು ಮುರಿದು ಬೀಳಬಹುದು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಎಲ್ಲವನ್ನೂ ಸಮರಸದಿಂದ ಮಾಡುವಿರಿ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು.

ವೃಶ್ಚಿಕ ರಾಶಿ: ಇಂದು ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡುವಿರಿ. ಪಾಲುದಾರಿಕೆಯಲ್ಲಿ ಹೊಸ ಉದ್ಯೋಗವನ್ನು ಆರಂಭಿಸುವ ಯೋಚನೆ ಇರುವುದು. ನಿಮ್ಮ ಯೋಜನೆಯ ಮುಖ್ಯ ಕೆಲಸಗಳು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ನಿಮಗೆ ನಿರಾಳವೆನಿಸಬಹುದು. ಪರಸ್ಥಳ ವಾಸದಿಂದ ನಿಮಗೆ ಕಸಿವಿಸಿಯಾಗುವ ಸಾಧ್ಯತೆ ಇದೆ. ಹಿರಿಯರ ಮಾತುಗಳು ನಿಮ್ಮನ್ನು ಕಾಡಬಹುದು. ನಿಮ್ಮ ಯೋಜನೆಯು ಒಂದು ಎತ್ತರಕ್ಕೆ ಏರಿರುವುದು ಆತ್ಮಸಂತೋಷವಾಗಲಿದೆ. ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಮಕ್ಕಳನ್ನು ನೋಡಬೇಕೆನಿಸುವುದು. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು.

ಧನು ರಾಶಿ: ಇಂದು ಅನ್ಯ ಕಾರ್ಯದ ಒತ್ತಡದಿಂದ ಮುಖ್ಯ ಕೆಲಸವು ಮರೆಯಾಗಬಹುದು. ಇನ್ನೊಬ್ಬರ ಪ್ರೇರಣೆಯಿಂದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಗುವಿರಿ. ಸಾಲದಿಂದ ಮುಕ್ತರಾಗಲು ಮಿತ್ರರ ಸಹಾಯವನ್ನು ಒಡೆಯುವಿರಿ. ಯಾರದೋ ಮಾತಿನಿಂದ ನೀವು ದುಃಖಪಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚನ್ನು ನೀವು ಮಾಡಬೇಕಾಗಯವುದು. ಅನಾರೋಗ್ಯದಿಂದ ಇದ್ದರೂ ನಿಮ್ಮ ಕರ್ತವ್ಯವನ್ನು ಮಾಡುವಿರಿ. ಉದ್ಯೋಗದಲ್ಲಿ ಒತ್ತಡಗಳು ಇರುವುದುರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ಶಿಸ್ತಿನಿಂದ ನೀವು ವ್ಯವಹಾರವನ್ನು ಇಟ್ಟುಕೊಳ್ಳುವಿರಿ. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು.

ಮಕರ ರಾಶಿ: ಇಂದು ನೀವು ಅನಗತ್ಯ ವಿಚಾರಗಳಿಗೆ ಸಮಯವನ್ನು ಕೊಡುವಿರಿ. ಉದ್ಯೋಗದ ಸ್ಥಾನದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ಯಾರಿಂದಲಾದರೂ ಅಪಮಾನವಾಗಬಹುದು. ತುರ್ತು ಹಣಕಾಸಿನ ಸಮಸ್ಯೆಯು ಎದುರಾದ ಸ್ನೇಹಿತರಿಂದ ಸಂಪತ್ತನ್ನು ಪಡೆದುಕೊಳ್ಳುವಿರಿ. ನ್ಯಾಯಾಲಯದಲ್ಲಿ ನಿಮಗೆ ಜಯ ಸಿಗುವ ಸಂಭವವು ಅಸಾಧ್ಯ. ವ್ಯಾಪಾರದಲ್ಲಿ ಹಿನ್ನಡೆಯನ್ನು ಪಡೆಯಬೇಕಾಗುವುದು. ವಿದ್ಯಾಭ್ಯಾಸದ ಗಮನವು ಬೇರೆ ಕಡೆಗೆ ಹೋಗಬಹುದು. ಆತುರದ ನಡಿಗೆಯಿಂದ ನೀವು ಎಡವುವಿರಿ. ದೀರ್ಘಕಾಲದ ರೋಗದಿಂದ ಬಳಲಿಕೆಯು ನಿಮಗೆ ಅಭ್ಯಾಸವಾಗಲಿದೆ. ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಸಂಗಾತಿಯ ಎದುರು ಏನನ್ನೂ ಹೇಳದೇ ಸುಮ್ಮನಿರುವಿರಿ.

ಕುಂಭ ರಾಶಿ: ನಿಮ್ಮ ನಂಬಿಕೆಗೆ ಮೋಸವಾಗಬಹುದು. ಯಾರನ್ನೋ ನಿಮ್ಮವರನ್ನಾಗಿ ಮಾಡಿಕೊಳ್ಳುವಿರಿ. ಅಪರಿಚಿತರ ಮಾತಿಗೆ ಮರುಳಾಗಿ ಹಣವನ್ನು ಕೊಡುವಿರಿ. ನಿಮ್ಮದಾದ ಕೆಲಸವನ್ನು ನೀವು ಇಟ್ಟುಕೊಳ್ಳುವುದು ಮುಖ್ಯವಾಗಿರಲಿ. ಹೆಚ್ಚು ಖರೀದಿಯ ಆರ್ಡರ್ ಗಳು ಬರಲಿದೆ. ದೈನಂದಿನ ಕೆಲಸದಲ್ಲಿ ಬದಲಾವಣೆಯನ್ನು ನೀವು ಅಪೇಕ್ಷಿಸುವಿರಿ. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರುವ ಕಾರಣ ಮನಸ್ಸಿಗೆ ಸಿಗಬೇಕಾದ ಶಾಂತಿಯ ಕೊರೆತೆಯೂ ಇರಲಿದೆ. ದಾಂಪತ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ಮನಸ್ಸಿಗೆ ಹಿಡಸದ್ದನ್ನು ನೀವು ಮಾಡಲಾರಿರಿ. ಪಾಲುದಾರಿಕೆಯಲ್ಲಿ ಸಮಸ್ಯೆ ಕಾಣಿಸುವುದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.

ಮೀನ ರಾಶಿ: ಇಂದು ಯಾವುದಾದರೂ ದುರಭ್ಯಾಸವನ್ನು ಬೆಳೆಸಿಕೊಳ್ಳುವಿರಿ. ಆರೋಗ್ಯದ ಸ್ಥಿತಿ ಏರುಪೇರಾಗಬಹುದು. ಅಲ್ಪ ಧನ ಲಾಭದಿಂದ ಸಂತೋಷ ಸಿಗುವುದು. ಇಷ್ಟವಿಲ್ಲದಿದ್ದರೂ ತಿರುಗಾಟ ಮಾಡಬೇಕಾಗುವುದು. ಶತ್ರುಗಳನ್ನು ನಿಶ್ಶೇಷ ಮಾಡುವಿರಿ. ನಿಮ್ಮದೇ ಸ್ಥಿರಾಸ್ತಿ ವ್ಯವಹಾರದಲ್ಲಿ ನಿಮಗೆ ಅನುಕೂಲವಾಗುವಂತೆ ಆಗುವುದು. ಮಾನಸಿಕ ನೆಮ್ಮದಿಯು ನಿಮ್ಮ ಹಲವು ಕೆಲಸಗಳನ್ನು ಮಾಡಲು ಸಹಾಯಕವಾಗುವುದು. ವಾಹನದ ತೊಂದರೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು‌. ಹೇಗಾದರೂ ಮಾಡಿ ಭಯವನ್ನು ದೂರ ಮಾಡಿಕೊಳ್ಳುವಿರಿ. ತೆಗಳಿಕೆಯನ್ನು ಛಲವಾಗಿ ತೆಗೆದುಕೊಳ್ಳುವಿರಿ. ಯಾರ ಮೇಲೂ ಅವಮಾನ ಬೇಡ. ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು.‌ ಹಿಂದಿನ ತಪ್ಪುಗಳು ಪಾಠವಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಹಳೆಯ ಸ್ನೇಹವು ಮತ್ತೆ ಒಂದಾಗಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 6:43 am, Wed, 28 February 24

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ