ಸೆಪ್ಟೆಂಬರ್ 27ರಂದು ಹಗಲು ಇರುಳು ಸರಿಸಮ… ಶುಭಘಳಿಗೆಯ ಸಮಾಗಮ

ಕಾಲವೆಂದರೆ ಹಾಗೇ ಇಲ್ಲಿ ನೂರಾ ಅಚ್ಚರಿಗಳು‌ ಸಿಗುತ್ತಲೇ ಇರುತ್ತವೆ.‌ ಅದನ್ನು ಕಾಣುವ ಕಣ್ಣು ಬೇಕು. ಆ ಕಣ್ಣನ್ನು ಕೊಟ್ಟಿದ್ದು ಪ್ರಾಚೀನ ಮಹರ್ಷಿಗಳು.‌ ಜ್ಯೌತಿಷ ಎಂಬ ವಿದ್ಯೆಯನ್ನು ಕೊಟ್ಟು, ಅದರ ಮೂಲಕ ಕಾಲವನ್ನು ನೋಡಿ ಎಂದರು. ಇದರ ಮೂಲಕ‌ ಎಷ್ಟೋ ಲಕ್ಷ ಕಿಲೋಮೀಟರ್ ದೂರದಲ್ಲಿರುವ ಗ್ರಹಗಳ ಹಾಗೂ ನಕ್ಷತ್ರಗಳ ಗಣನೆಯನ್ನು ಕೂಡ ಮಾಡಬಹುದು. ಅಷ್ಟೇ ಅಲ್ಲ ಕಳೆದು ಹೋದ ಕಾಲವನ್ನೂ ಮುಂದೆ ಕಳೆಯಲಿರುವ ಕಾಲವನ್ನೂ ನೋಡಲು ಅನುಕೂಲವಾಗುವುದೇ ಈ ವಿದ್ಯೆಯಿಂದ.

ಸೆಪ್ಟೆಂಬರ್ 27ರಂದು ಹಗಲು ಇರುಳು ಸರಿಸಮ... ಶುಭಘಳಿಗೆಯ ಸಮಾಗಮ
ಹಗಲು ಇರುಳು
Follow us
| Updated By: ರಮೇಶ್ ಬಿ. ಜವಳಗೇರಾ

Updated on: Sep 26, 2024 | 10:38 PM

ಸೂರ್ಯನು ಗ್ರಹಗಳಿಗೆ ನಾಯಕ.‌ ಆತನನ್ನು ಜ್ಯೋತಿಷಾಂ ಪತಿಃ ಎಂದು ಕರೆದಿದ್ದಾರೆ.‌ ಎಲ್ಲ ಪ್ರಕಾಶಗಳಿಗೂ ಆತನೇ ಮೂಲ ಎಂದು. ಸಕಲವಸ್ತುಗಳಿಗೂ ಚೇತನವನ್ನು ಕೊಡುವವನೂ ಆತನೇ. ಸೃಷ್ಟಿಯ ಕೇಂದ್ರ ಅವನೇ. ಅವನಿಲ್ಲದೇ ಯಾವ ಜಗತ್ತೂ ಮುಂದುವರಿಯದು. ಹಗಲು ರಾತ್ರಿಗಳಾಗುವುದೂ ಅವನಿಂದಲೇ.

360 ಡಿಗ್ರಿಗಳ ಈ ಖಗೋಳದಲ್ಲಿ ಸೂರ್ಯನು ಒಮ್ಮೆ ಬೆಳಕು ಕೊಡುಬುದು ೧೮೦ ಡಿಗ್ರಿಗಳಿಗೆ ಮಾತ್ರ. ಇನ್ನು ಉಳಿದದ್ದು ಕತ್ತಲೆ. ಹಗಲು ಇರುಳುಗಳು ಯಾವಾಗಲೂ ಸರಿಯಾಗಿ ಇರದು.‌ ಕೆಲವು ಬಾರಿ ಹಗಲು ಹೆಚ್ಚು ರಾತ್ರಿ ಕಡಿಮೆ, ಕೆಲವು ಬಾರಿ ರಾತ್ರಿ ಹಗಲು ಕಡಿಮೆ‌ ಇರುತ್ತದೆ. ಇದು ಭಾರತದಿಂದ ಮಾತ್ರವಲ್ಲ ಎಲ್ಲ ಭೂಭಾಗ ಇದು ಇರುತ್ತದೆ. ವರ್ಷದಲ್ಲಿ ಎರಡು ಬಾರಿ ಈ ಘಟನೆ ಸಂಭವಿಸುತ್ತದೆ. ಒಂದು‌‌ ಮೀನದಿಂದ ಮೇಷಕ್ಕೆ ಸೂರ್ಯನು ಸಂಚಾರ ಮಾಡು ಸಂದರ್ಭ. ಅಂದರೆ ಸರಿ ಸುಮಾರು ಏಪ್ರಿಲ್ ತಿಂಗಳ ಸಮಯ.‌ ಇನ್ನೊಂದು ಈ ತಿಂಗಳಲ್ಲಿ.

ಮೇಷವು ರಾಶಿ ಚಕ್ರದ ಮೊದಲನೇ ರಾಶಿಯಾದರೆ ತುಲಾ ರಾಶಿಯು ಏಳನೇ ರಾಶಿಯಾಗಲಿದೆ. ಹನ್ನೆರಡು ರಾಶಿಗಳನ್ನು ಎರಡು ಭಾಗ ಮಾಡಿದರೆ ತುಲಾರಾಶಿಯು ಎರಡನೇ ಭಾಗದ ಮೊದಲ ರಾಶಿ. ಮೇಷವು ಮೊದಲೇ ಭಾಗದ ಒಂದನೇ ರಾಶಿ.‌ ಮೇಷರಾಶಿಗೆ ಹೋಗುವಾಗ ಸೂರ್ಯನು ಉತ್ತರ ಧ್ರುವದ ಕಡೆಗೆ ಹೆಚ್ಚು ಸಂಚಾರವಿದ್ದರೆ, ಈಗ ದಕ್ಷಿಣಧ್ರುವದ ಕಡೆ ಹೆಚ್ಚು ಸಂಚಾರ ಮಾಡುವನು. ಇವೆರಡೆರ ಮಧ್ಯದಲ್ಲಿ ಸೂರ್ಯನು ಬಂದಾಗ ಹಗಲು ಮತ್ತು ರಾತ್ರಿಗಳು ಸಮವಾಗಿರುತ್ತದೆ. ‌ಈ ಕಾಲವನ್ನು ವಿಷುವ’ಕಾಲ ಎನ್ನುತ್ತಾರೆ. ಆ ಕಾಲವು ದಿನಾಂಕ ೨೭ ಸಪ್ಟೆಂಬರ್ ನಲ್ಲಿ‌ನಡೆಯಲಿದೆ. ಸೂರ್ಯನು ಸರಿಯಾಗಿ ಭೂಮಧ್ಯರೇಖೆಯಲ್ಲಿ ಇರುವನು.

ಇಂತಹ‌ ಸ್ಥಿತಿಯು ಅನೇಕ ಸಂಶೋಧನೆಗೂ ಕಾರಣವಾಗುವ ಕಾಲ. ಏಕೆಂದರೆ ಬೇರೆ ಸಮಯದಲ್ಲಿ ಸೂರ್ಯನು ಹೇಗಿದ್ದಾನೆ, ಎಲ್ಲಿದ್ದಾನೆ ಎಂದು ತಿಳಿಯುವುದು ಕಷ್ಟ. ಆದರೆ ಭೂಮಿಯ ಮಧ್ಯಭಾಗಕ್ಕೆ ಬಂದಮೇಲೆ ಆತನ ಸಂಚಾರವನ್ನು ಸರಿಯಾಗಿ ಲೆಕ್ಕಿಸಬಹುದು ಎಂಬುದು ಜ್ಯೌತಿಷಜ್ಞರ ಮತ. ಹಾಗಾಗಿ ಇದನ್ನು ಅಪರೂಪದ ಕಾಲವಾಗಿಯೂ ನೋಡುತ್ತಾರೆ. ಈ ಸಮಯದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡುವುದು ಉತ್ತಮ. ದಾನಗಳನ್ನು ಮಾಡಿದರೇ ಶುಭಫಲವು ಸಿಗುವುದು.

ವರ್ಷದಲ್ಲಿ ಸಿಗುವ ಇಂತಹ ಅಪರೂಪದ ವಿದ್ಯಮಾನಗಳನ್ನು, ಸೃಷ್ಟಿಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತ ದೇವರ ಸೃಷ್ಟಿಯನ್ನು ಆಸ್ವಾದಿಸಬೇಕು.

-ಲೋಹಿತ ಹೆಬ್ಬಾರ್ – 8762924271

ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ
ಮುಡಾ ಕೇಸ್: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಸಚಿವ ಜಮೀರ್​ಗೆ ಸಂಕಷ್ಟ!
ಮುಡಾ ಕೇಸ್: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಸಚಿವ ಜಮೀರ್​ಗೆ ಸಂಕಷ್ಟ!
ಫ್ಲಿಪ್​ಕಾರ್ಟ್​​​ನಲ್ಲಿ ಬುಕ್ ಮಾಡಿದ್ರೆ ಮನೆಗೇ ಬರುತ್ತೆ ಬೈಕ್, ಸ್ಕೂಟರ್!
ಫ್ಲಿಪ್​ಕಾರ್ಟ್​​​ನಲ್ಲಿ ಬುಕ್ ಮಾಡಿದ್ರೆ ಮನೆಗೇ ಬರುತ್ತೆ ಬೈಕ್, ಸ್ಕೂಟರ್!