ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 22ರ ದಿನಭವಿಷ್ಯ

Daily Numerology February 22: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 22ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 22ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Feb 22, 2026 | 12:30 AM

ಸ್ವಯಂವರ ಪಾರ್ವತಿ ಮಂತ್ರದ ಶ್ರವಣ, ಪಠಣವನ್ನು ಮಾಡಿ. ಯಾರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಥವಾ ದಂಪತಿ ಮಧ್ಯೆ ವಿರಸ ಇದೆ ಅಂಥವರಿಗೆ ಸಮಸ್ಯೆಯಿಂದ ಹೊರಬರುವ ಮಾರ್ಗೋಪಾಯ ಗೋಚರಿಸುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮಿಂದ ಹಲವರಿಗೆ ಈ ದಿನ ಅನುಕೂಲ- ಸಹಾಯ ಒದಗಿಬರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಕ್ತಿಯೊಬ್ಬರ ಬಳಿ ಶಿಫಾರಸು ಮಾಡಿದರೆ ತನಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ನಿಮ್ಮನ್ನು ಹುಡುಕಿಕೊಂಡು ಬಂದು ಸಹಾಯ ಕೇಳಬಹುದು. ಅಥವಾ ಇದೊಂದು ವಿಚಾರವನ್ನು ಹೇಳಬೇಡಿ ಎಂದು ಮನವಿ ಮಾಡುವ ಸಾಧ್ಯತೆ ಕೂಡ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸಾಮಾಜಿಕ ಮಾಧ್ಯಮಗಳಲ್ಲಿ ಬರುವಂಥ ಜಾಹೀರಾತು ನೋಡಿ, ಯಾವುದೇ ವಸ್ತುವನ್ನು ಖರೀದಿ ಮಾಡಬೇಡಿ. ಏಕೆಂದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ. ಇನ್ನು ನವ ವಿವಾಹಿತರಿದ್ದಲ್ಲಿ ಹಣಕಾಸು ವಿಷಯಗಳಲ್ಲಿ ಪಾರದರ್ಶಕವಾಗಿ ಇರುವುದು ಬಹಳ ಉತ್ತಮ ಹಾಗೂ ಕ್ಷೇಮ. ತಾತ್ಕಾಲಿಕವಾಗಿ ಅಂದುಕೊಂಡಿದ್ದ ಜವಾಬ್ದಾರಿಯೊಂದು ಕಾಯಂ ಆಗಿ ನಿಮ್ಮ ಮೇಲೇ ಬರುವ ಎಲ್ಲ ಅವಕಾಶಗಳು ಇವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಸಮಯ, ಶ್ರಮ, ಹಣ, ಪ್ರಯತ್ನ ಹೀಗೆ ಮುಖ್ಯವಾದದ್ದನ್ನು ತಮ್ಮ ಅನುಕೂಲಕ್ಕಾಗಿ ಇತರರು ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಬಲವಾಗಿ ನಿಮಗೆ ಅನಿಸುವುದಕ್ಕೆ ಶುರುವಾಗಲಿದೆ. ನಿಮ್ಮಲ್ಲಿ ಯಾರು ಟ್ಯೂಷನ್ ಹೇಳಿಕೊಡುವುದರ ಮೂಲಕ ಆದಾಯವನ್ನು ಗಳಿಸುತ್ತಿದ್ದೀರೋ ಅಂಥವರಿಗೆ ಕೆಲವು ಸಮಯ ಪಾಠ ಮಾಡುವುದು ಅಸಾಧ್ಯ ಎಂಬ ಸನ್ನಿವೇಶ ನಿರ್ಮಾಣ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.