ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 27ರ ದಿನಭವಿಷ್ಯ

Daily Numerology February 27: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 27ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 27ರ ದಿನಭವಿಷ್ಯ
ದಿನ ಭವಿಷ್ಯ
Image Credit source: Pinterest
ಸ್ವಾತಿ ಎನ್​ಕೆ Edited By:

Updated on: Feb 27, 2026 | 12:10 AM

ದುರ್ಗಾ ಸಪ್ತಶತಿಯನ್ನು ಶ್ರವಣ ಮಾಡಿ. ಕೌಟುಂಬಿಕ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಅದರಿಂದ ಹೊರಬರುವಂಥ ಮಾರ್ಗೋಪಾಯ ಗೋಚರ ಆಗಲಿವೆ. ಇನ್ನು ವ್ಯವಹಾರದಲ್ಲಿ ಹಿನ್ನಡೆ ಕಾಣುತ್ತಿದ್ದರೆ ಲಾಭದಾಯಕ ಆಗುವಂಥ ಮಾರ್ಗದರ್ಶನ, ಸಲಹೆ ದೊರೆಯುತ್ತವೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಬಹಳ ದಿನಗಳ ನಂತರ ನಿಮ್ಮ ಮನಸ್ಸಿಗೆ ಹತ್ತಿರ ಆದವರನ್ನು ಭೇಟಿ ಆಗುವ ಯೋಗ ಈ ದಿನ ಇದೆ. ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಡಯಟ್ ಅಂದರೆ ಆಹಾರ ಪಥ್ಯದ ವಿಚಾರಕ್ಕೆ ಆದ್ಯತೆಯನ್ನು ನೀಡಲಿದ್ದೀರಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ತಜ್ಞರನ್ನೇ ಭೇಟಿ ಆಗಿ, ಅವರಿಂದ ಸಲಹೆ ಪಡೆಯುವ ಬಗ್ಗೆ ಕೂಡ ಚಿಂತನೆ ನಡೆಸಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ವಿಜ್ಞಾನಿಗಳು, ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಸರ್ಕಾರದ ಪ್ರಾಜೆಕ್ಟ್ ವೊಂದರ ಭಾಗವಾಗಿ ಅಥವಾ ಮುನ್ನಡೆಸುವಂತೆ ಕೇಳಿಕೊಳ್ಳಬಹುದು. ಚಾಲನೆಯನ್ನು ವೃತ್ತಿಯಾಗಿ ಮಾಡುತ್ತಾ ಇರುವವರು ವಾಹನ ಚಾಲನೆ ಮಾಡುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವ ಎಚ್ಚರಿಕೆಗಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಬೆನ್ನು ಬಿದ್ದ ವ್ಯಕ್ತಿಯೊಬ್ಬರು ಇಡೀ ದಿನ ಮಾನಸಿಕವಾಗಿ ಕಿರಿಕಿರಿ ಮಾಡಲಿದ್ದಾರೆ. ಅದರಲ್ಲೂ ವಯಸ್ಸಿನಲ್ಲಿ ಹಿರಿಯರು ಅಂತಲೋ ಅಥವಾ ಸಮಸ್ಯೆಯಲ್ಲಿ ಇರುವವರು ಎಂಬ ಅನುಕಂಪ ತೋರಿಸಿ, ಸಹಾಯದ ಭರವಸೆ ನೀಡುವ ಮಾತುಗಳನ್ನು ಆಡುವುದೇ ಸಮಸ್ಯೆಯಾಗಿ ನಿಮ್ಮನ್ನು ಕಾಡಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಬೆಳ್ಳಿಯಿಂದ ತಯಾರಿಸಿದ ಒಡವೆ, ತಟ್ಟೆ- ಲೋಟಗಳನ್ನು ಖರೀದಿ ಮಾಡುವ ಯೋಗ ಈ ದಿನ ಇದೆ.

ಲೇಖನ- ಸ್ವಾತಿ ಎನ್.ಕೆ.

ಸ್ವಾತಿ ಎನ್​ಕೆ

ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.

Follow Us