ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತನ್ನವರಿಂದಲೇ ದುಃಖ ಪಡೆಯಬೇಕಾಗುವುದು

Daily Horoscope 20 February: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿ ಶುಕ್ರವಾರ ದೃಢತೆ, ಅಚಾತುರ್ಯ, ಪ್ರವಾಸ, ಹತಾಶೆ, ಮಿತವಾದ ಮಾತು, ವ್ಯಾಪಾರದ ಚಿಂತೆ, ಶಿಸ್ತು, ಬಲಪ್ರದರ್ಶನ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತನ್ನವರಿಂದಲೇ ದುಃಖ ಪಡೆಯಬೇಕಾಗುವುದು
ದಿನ ಭವಿಷ್ಯ
Edited By:

Updated on: Feb 20, 2026 | 12:55 AM

ಮೇಷ ರಾಶಿ:

ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳುವಿರಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಆಹಾರದಿಂದ ಆರೋಗ್ಯ ಕೆಡುವುದು. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು.

ವೃಷಭ ರಾಶಿ:

ಪ್ರೀತಿಯ ವಿಷಯದಲ್ಲಿ ಪರಿಚಿತರ ಜೊತೆ ಚರ್ಚಿಸುವಿರಿ. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಸ್ವಲ್ಪಮಟ್ಟಿನ ಲಾಭವಾಗುವುದು. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಇನ್ನೊಬ್ಬರ ವಸ್ತುವನ್ನು ನೀವು ಇಟ್ಟುಕೊಳ್ಳಲಿದ್ದೀರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು.

ಮಿಥುನ ರಾಶಿ:

ಪರರ ಸ್ವತ್ತನ್ನು ಯಾವುದಾದರೂ ರೀತಿಯಲ್ಲಿ ಪಡೆಯುವ ಯೋಚನೆ ಬರಬಹುದು. ಕಾರ್ಯದ ನಿರುತ್ಸಾಹವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡಿಕೊಳ್ಳುವಿರಿ. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಹೂಡಿಕೆಯನ್ನು ಮಾಡಲು ಎಲ್ಲರಿಂದ ಮಾಹಿತಿಯನ್ನು ಸಂಗ್ರಹಿಸುವಿರಿ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶೆ.

ಕರ್ಕಾಟಕ ರಾಶಿ:

ನಿಮ್ಮ ಬಗ್ಗೆ ನೀವೇ ಪ್ರಶಂಸೆ ಮಾಡಿಕೊಳ್ಳುವಿರಿ. ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರಲು ನೋಡುವಿರಿ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ಪೂರ್ಣಪ್ರಮಾಣದ ಕೃಷಿಯಲ್ಲಿ ತೊಡಗುವ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು.

ಸಿಂಹ ರಾಶಿ:

ತಿಳಿವಳಿಕೆ ಇಲ್ಲದೇ ಮಾತನಾಡಿ ಅಪಹಾಸ್ಯಕ್ಕೆ ಸಿಲುಕುವಿರಿ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕತ್ತಲೆಯಲ್ಲಿ ಗುದ್ದಾಟ ಮಾಡಿ ಆಯಾಸ ಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಕಾಳಜಿಗೆ ನೀವು ಮನಸೋಲುವಿರಿ. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದಿನ ಕಾರ್ಯ ಬೆಟ್ಟವನ್ನು ಬಗೆದು ಇಲಿಯ ತನ್ನ ಹಿಡಿದಂತೆ ಆಗಬಹುದು.

ಕನ್ಯಾ ರಾಶಿ:

ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು. ಸಪಕ್ವವಾದ ಮನಸ್ಸಿಗೆ ಏನು ಹೇಳಿದರೂ ಪ್ರಯೋಜನವಾಗದು. ಪ್ರೀತಿಯು ನಿಮಗಾಗದವರ ಮೂಲಕ ಎಲ್ಲರಿಗೂ ತಿಳಿಯುವುದು. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಕೃಷಿಕರ ವಸ್ತುಗಳು ಕಾಣೆಯಾಗಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ.

ತುಲಾ ರಾಶಿ:

ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು. ಎಷ್ಟೇ ಸೌಕರ್ಯವಿದ್ದರೂ ಇನ್ನಷ್ಟು ಬೇಕೆನಿಸಬಹುದು. ಅತಿಥಿಗಳ ಆಗಮನದಿಂದ ನಿಮ್ಮ ಯೋಜನೆಗಳು ಅಸ್ತವ್ಯಸ್ತ. ಕಠೋರ ಮಾತುಗಳು ನಿಮ್ಮರಿಗೆ ಇಷ್ಟವಾಗದು. ನಿಮ್ಮ ಬಗ್ಗೆ ಸಲ್ಲದ್ದನ್ನು ಹೇಳಬಹುದು. ಇದು ನಿಮಗೆ ಸಾಧನೆಗೆ ಪ್ರೇರಣೆಯೂ ಆಗಬಹುದು. ಹತ್ತಾರೂ ಆಲೋಚನೆಗಳು ಒಂದಾದಮೇಲೆ ಒಂದರಂತೆ ಬಂದು ನಿಮ್ಮ ದಿನಚರಿಯನ್ನು ಹಾಳು ಮಾಡಬಹುದು.

ವೃಶ್ಚಿಕ ರಾಶಿ:

ಯಾವುದನ್ನೂ ವ್ಯರ್ಥ ಎಂದು ಭಾವಿಸದೇ ಸಕಾರಾತ್ಮಕವಾಗಿ ಇರಿ. ಏಕಕಾಲದಲ್ಲಿ ಅನೇಕ ವಿಚಾರಗಳ ಚಿಂತನೆಯನ್ನು ನಡೆಸುವಿರಿ. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ಸಾಲದಿಂದ ಮುಕ್ತನಾಗಲು ನೀವು ಮಾಡುವ ಕಾರ್ಯ ವಿಫಲವಾಗುಬುದು. ಭೂಮಿಯ ಬಗ್ಗೆ ಆಸಕ್ತಿಯು ಕಡಿಮೆಯಾಗಲಿದೆ. ಕಛೇರಿಯಲ್ಲಿ ನಿಮ್ಮದಾದ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವಿರಿ. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ.

ಧನು ರಾಶಿ:

ನಿಮ್ಮ ಎಲ್ಲಾ ಶ್ರಮದಾಯಕ ಯೋಜನೆ ಮತ್ತು ಸಂಘಟನೆಯು ಅಂತಿಮವಾಗಿ ಫಲವನ್ನು ನೀಡಲಿದೆ. ದೈಹಿಕ ಕ್ರೀಡೆ ಹಾಗೂ ಚಟುವಟಿಕೆಗಳಲ್ಲಿ ಜಯ. ವಿಶೇಷವಾಗಿ ಇಂದು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಒಬ್ಬರಾದರೂ ತಾಳ್ಮೆಯಿಂದ ಇರಬೇಕಾದೀತು. ಅನ್ಯರು ನೆನಪಿಟ್ಟುಕೊಳ್ಳುವ ಯಾವುದಾದರೂ ಕಾರ್ಯವನ್ನು ಮಾಡುವಿರಿ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಿಮ್ಮ ಬಹಳ ದಿನದ ಕೂಡಿಟ್ಟ ಹಣವು ಕ್ಷಣಾರ್ಧದಲ್ಲಿ ಖಾಲಿಯಾಗಲಿದ್ದು ನಿಮಗೆ ಬೇಸರ ತರಿಸೀತು.

ಮಕರ ರಾಶಿ:

ವೃತ್ತಿ ಜೀವನದಲ್ಲಿ ಗೌರವವನ್ನು ಮತ್ತು ಇರುವುದಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆಯಬೇಕು ಎನಿಸುವುದು. ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ನಿಮ್ಮ ಕಣ್ಣಿಗೆ ಬೀಳಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಗೃಹನಿರ್ಮಾಣವು ನಿಮಗೆ ಅನಿವಾರ್ಯವಾದೀತು. ಬಾಡಿಗೆ ಮನೆಯ ಕಿರಿಕಿರಿಯು ನಿಮಗೆ ಸಾಕಾಗಿ ಹೋಗುವುದು. ಮುನ್ನೋಟ ಸರಿಯಾಗಿದ್ದರೆ ಎಲ್ಲವೂ ನಿಮಗೆ ಜೊತೆಗಾವುದು.

ಕುಂಭ ರಾಶಿ:

ಪರಿಚಿತರ ನಡುವೆ ಆದ ಕಲಹವು ವಿಪರೀತಕ್ಕೆ ಹೋಗುವುದು. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ಅದಕ್ಕಾಗಿ ಅವರ ಜೊತೆ ಮನಸೋ ಇಚ್ಛೆ ವರ್ತಿಸುವುದು ಬೇಡ. ಅವರಿಗೆ ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ. ಗ್ರಾಹಕರಿಂದ ಮೆಚ್ಚುಗೆ ಸಿಗಲಿದೆ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ನಿಮ್ಮ ಸುತ್ತಲೂ ನಡೆಯುವುದನ್ನು ಹತ್ತಿರದಿಂದ ಗಮನಿಸಿ, ನೀವು ನಿಮ್ಮನ್ನು ಸರಿಯಾಗಿ ಕಂಡುಕೊಳ್ಳಿ.

ಮೀನ ರಾಶಿ:

ಧಾರ್ಮಿಕ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಮಾಡುವ ಯೋಜನೆಯನ್ನು ಅನೇಕರ ಜೊತೆಗೂಡಿ ಚರ್ಚಿಸುವಿರಿ. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ. ಅಪರಿಚಿತ ಸ್ತ್ರೀಯನ್ನು ಕಂಡು ಮೋಹಗೊಳ್ಳುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ಸಂಗಾತಿಗೆ ಬೇಕಾದ ಸಹಕಾರವನ್ನು ಖುಷಿಯಿಂದ ಮಾಡುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭ ಕಾಲ : ರಾಹು 11:10 – 12:38, ಯಮಗಂಡ ಕಾಲ 15:34 – 17:02, ಗುಳಿಕ ಕಾಲ 08:15 – 09:43

-ಲೋಹಿತ ಹೆಬ್ಬಾರ್ – 8762924271 (what’s app only)