Horoscope: ದಿನಭವಿಷ್ಯ: ಈ ರಾಶಿಯವರು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.11 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಈ ರಾಶಿಯವರು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ
ದಿನಭವಿಷ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 11, 2024 | 12:10 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮಂಗಳವಾರ (ಜೂನ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಧ್ರುವ, ಕರಣ: ವಣಿ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:47 ರಿಂದ ಸಂಜೆ 05:24ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:18 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:10ರ ವರೆಗೆ.

ಸಿಂಹ ರಾಶಿ: ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವಿದೇಶಕ್ಕೆ ಹೋಗಲು ಆಲೋಚನೆ ಮಾಡಿದ್ದರೆ ಹೊರಡಬಹುದು. ಆನಾರೋಗ್ಯದಿಂದ ಮುಕ್ತಿಸಿಗಲಿದೆ. ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ರಾಜಕಾರಣಿಗಳು ಗೆಲ್ಲುವ ತಂತ್ರವನ್ನು ಹೂಡುವರು. ನೂತನ ವಿದ್ಯುತ್ ಉಪಕರಣವನ್ನು ಖರೀದಿಸುವಿರಿ. ವಾಹನವು ರಿಪೇರಿಗೆ ಬರಲಿದೆ. ಹಣವೂ ನಷ್ಟವಾಗುವುದು. ಕಳ್ಳತನದ ಅಪವಾದವನ್ನು ಹೊತ್ತುಕೊಳ್ಳುವಿರಿ. ಸಂಗಾತಿಯ ಬೇಸರವನ್ನು ದೂರ ಮಾಡಲು ಎಲ್ಲಿಯಾದರೂ ದೂರ ಕರೆದುಕೊಂಡು ಹೋಗಿ. ಸುಂದರ ಸ್ಥಳಗಳನ್ನು ನೋಡಿಬನ್ನಿ. ದೈಹಿಕ ಶ್ರಮವು ಇಂದು ಅಧಿಕವಾಗುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಲಿದೆ. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು.

ಕನ್ಯಾ ರಾಶಿ: ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ನೆನೆದು ಹತಾಶಗೊಳ್ಳಬಹುದು. ನೀವು ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು.‌ ಆಪ್ತರ ಜೊತೆ‌ ಮನಸ್ಸು ಬಿಚ್ಚಿ ಮಾತನಾಡಿ. ಸರ್ಕಾರದ ಕೆಲಸಗಳು ನಿಧಾನವಾಗಲಿದೆ. ಮತ್ತೆ ಮತ್ತೆ ಬರುವ ಸಂಕಷ್ಟಕ್ಕೆ ದೈವಕ್ಕೆ ಮೊರೆ ಹೋಗಬೇಕಾಗುವುದು. ಪ್ರತಿಕೂಲ ವಾತಾವರಣದಲ್ಲಿಯೂ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿ ಸಿಗುವ ದಿನ. ಬಹಳ ದಿನಗಳ ಅನಂತರ ದಾಂಪತ್ಯದಲ್ಲಿ ಸಂತೋಷ ಕಾಣಿಸುವುದು. ಖಾಸಗಿ ಉದ್ಯೋಗಿಗಳಿಗೆ ತೊಂದರೆಯಾಗಬಹುದು. ಕುಟುಂಬದಲ್ಲಿ ನಿಮ್ಮನ್ನು ಸರಿಯಾಗಿ ಆದರಿಸದೇ ಇರಬಹುದು. ಸುತ್ತಾಟದಿಂದ ಆಯಾಸವಿದೆ. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಬದಲಿಸಬಹುದು.

ತುಲಾ ರಾಶಿ: ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ನೀವು ನಿಮ್ಮ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ. ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ವಾಹನ ಅಪಘಾತವು ಆಗಬಹುದು, ಜಾಗರೂಕತೆಯಿಂದ ಇರಿ. ಕೃಷಿಕರು ತಾವು ಬೆಳೆದ ಬೆಳೆಯಿಂದ ನಷ್ಟವನ್ನು ಅನುಭವಿಸುವಿರಿ. ನಿಮ್ಮನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ ವ್ಯಕ್ತಿಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ನೀವೇ ನಿರ್ಮಿಸಿಕೊಂಡ ಯಶಸ್ಸಿನ ಮೆಟ್ಟಿಲನ್ನು ಅನಾಯಾಸದಿಂದ, ಆನಂದದಿಂದ ಏರುವಿರಿ. ಅಕಾರಣ ಸಿಟ್ಟು ನಿಮ್ಮ ದಿನವನ್ನು ಹಾಳು ಮಾಡುವುದು. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ. ಹಿರಿಯರ ಪ್ರೀತಿಯು ನಿಮಗೆ ಖುಷಿಕೊಡುವುದು. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ. ನಿರೋದ್ಯೋಗ ಸಮಸ್ಯೆಯು ಕಾಡುವುದು.

ವೃಶ್ಚಿಕ ರಾಶಿ: ಇಂದು ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಧನವು ಕೈಗೆಟುಕದ ದ್ರಾಕ್ಷಿಯಂತೆ ಅನ್ನಿಸಬಹುದು. ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ನಿಮಗೆ ಬರಬೇಕಾದ ಹಣದ ಕುರಿತು ಲೆಕ್ಕವಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಯೋಗ್ಯರ ಜೊತೆ ನಿಮ್ಮ ಮಾತುಕತೆಗಳು ಇರಲಿ. ಇಲ್ಲದಿದ್ದರೆ ಅಪಮಾನವಾದೀತು. ಯಾವುದನ್ನೇ ಕಳೆದುಕೊಂಡರೂ ಇನ್ನಷ್ಟು ಉತ್ತಮವಾದುದನ್ನು ಪಡೆಯಲು ಸಂಭವಿಸಿರಬಹುದು ಎಂದು ಭಾವಿಸಿ. ಮನಸ್ಸಿನ ನೆಮ್ಮದಿಯು ಕೆಡಬಹುದು. ಆಗದೇ ಇರುವ ಕೆಲಸಕ್ಕೆ ಬೇಸರ ಬೇಡ. ವೃತ್ತಿಯಲ್ಲಿ ಆತಂಕವು ಇರಲಿದೆ. ಪ್ರಾಣಿಗಳಿಂದ ಭಯಗೊಳ್ಳುವ ಸಾಧ್ಯತೆ ಇದೆ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ. ನಿಮ್ಮ ಅನಾರೋಗ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರಿರಿ.

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್