Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರನ್ನು ಕೆಲವರು ದಾರಿ ತಪ್ಪಿಸಬಹುದು ಎಚ್ಚರ!

14 ಮಾರ್ಚ್​​​ 2025: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಅಧಿಕ ಉಪಯೋಗದಿಂದ ವಸ್ತುಗಳು ಹಾಳಾಗುವುವು. ನಿಮಗೆ ಇಂದು ಸಿಗುವ ಅನಿರೀಕ್ಷಿತವಾದ ಉತ್ತಮ ಅವಕಾಶದಿಂದ ಸಂತೋಷವಾಗುವುದು. ಮಾರ್ಚ್​​​ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರನ್ನು ಕೆಲವರು ದಾರಿ ತಪ್ಪಿಸಬಹುದು ಎಚ್ಚರ!
ಈ ರಾಶಿಯವರನ್ನು ಕೆಲವರು ದಾರಿ ತಪ್ಪಿಸಬಹುದು ಎಚ್ಚರ!
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 14, 2025 | 12:10 AM

ಬೆಂಗಳೂರು, ಮಾರ್ಚ್ 14:​ ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶೂಲಿ ಕರಣ : ಭದ್ರ, ಸೂರ್ಯೋದಯ – 06 – 42 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:12 – 12:42, ಯಮಘಂಡ ಕಾಲ 15:42 – 17:12, ಗುಳಿಕ ಕಾಲ 08:12 – 09:42.

ಮೇಷ ರಾಶಿ: ನಿಮ್ಮ ವಿಕಾಸಕ್ಕೆ ಬೇಕಾದ ದಾರಿಯನ್ನು ಹುಡುಕುವಿರಿ. ಮಕ್ಕಳಿಂದ ಏನನ್ನಾದರೂ ನಿರೀಕ್ಷಿಸಬಹುದು. ‌ವೇಷಭೂಷಣದಿಂದ ನೀವು ದೊಡ್ಡ ವ್ಯಕ್ತಿಗಳಂತೆ ಕಾಣಿಸಿಬಹುದು. ಕಲಹವನ್ನು ಮಾಡುವಾಗ ವಿವೇಚನೆ ಇರಲಿ. ಬಂಧುಗಳ ಆಗಮನವಾಗಲಿದೆ. ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಹೊಂದಾಣಿಕೆ ಕಷ್ಟವಾದರೂ ಅನಿವಾರ್ಯವಾಗಬಹುದು. ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳಬೇಕಾಗುವುದು. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ‌ ಮನೋಗತವನ್ನು ಅರಿತುಕೊಳ್ಳುವಿರಿ. ಹಿರಿಯರ ಜೊತೆ ವರ್ತನೆಗಳು ಬಿಗುಮಾನದಿಂದ ಇರಲಿದೆ.

ವೃಷಭ ರಾಶಿ: ಯಂತ್ರಗಳು ಅನಿರೀಕ್ಷಿತ ದುರಸ್ತಿಗೆ ಬರಬಹುದು. ನಿಮ್ಮ ಶತ್ರುಗಳನ್ನು ನಿಗ್ರಹಿಸಲು ಸಮಯದ ಪ್ರತೀಕ್ಷೆಯಲ್ಲಿಬಿರುವಿರಿ. ಅನಿರೀಕ್ಷಿತವಾಗಿ ಬರುವ ಉದ್ಯೋಗಾವಕಾಶ ನಿಮ್ಮದಾಗಿಸುವತ್ತ ಪ್ರಯತ್ನಶೀಲರಾಗುವಿರಿ. ಪಿತ್ರಾರ್ಜಿತ ಆಸ್ತಿಗೆ ಸೂಕ್ತ ವ್ಯವಸ್ಥೆಯನ್ನು ಮಾಡುವಿರಿ. ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು ಸೂಕ್ತ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಮಿತ್ರರ ಸಹಾನುಭೂತಿಯು ನಿಮಗೆ ಉತ್ಸಾಹವನ್ನು ಕೊಡುವುದು. ದಿನದ ಆದಾಯ ಇದ್ದವರಿಗೆ ಶುಭ. ಉತ್ತಮವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ. ಮನೆಯ ಕೆಲಸದಲ್ಲಿ ಅಧಿಕ ಸಮಯವನ್ನು ಕಳೆಯುವಿರಿ. ವ್ಯತ್ಯಾಸವನ್ನು ಸರಿದೂಗಿಸವ ಕಲೆ ಬರಬಹುದು.

ಮಿಥುನ ರಾಶಿ: ಸಾಲವನ್ನು ಹಿಂದಿರುಗಿಸಲು ಕೊಟ್ಟ ಸಮಯಾವಕಾಶ ಮುಗಿಯುವುದು. ನಿಮ್ಮ ಅನಿರೀಕ್ಷಿತ ಲಾಭದಿಂದ ಅಹಂಕಾರ ಬರುವ ಸಾಧ್ಯತೆ ಇದೆ. ಮಿತ್ರರ ಸಹಕಾರವನ್ನು ನೀವು ಅಪೇಕ್ಷಿಸುವುದಿಲ್ಲ. ಕಳ್ಳತನದ ಭೀತಿಯಲ್ಲಿ ಇರುವಿರಿ. ಇತರ ಅನುಭವವೂ ನಿಮಗೆ ಪಾಠವಾಗುವುದು. ಹಠದ ಸ್ವಭಾವದಿಂದ ಹೊರಬನ್ನಿ. ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ನ್ಯಾಯಕ್ಕೆ ಸಮ್ಮತವಾದ ಕಾರ್ಯವನ್ನು ಮಾಡಿ. ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಬರಬಹುದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಕೂಡಿ ಬಾಳುವ ಬಗ್ಗೆಯೇ ಹೆಚ್ಚು ಒಲವು ತೋರಿಸುವಿರಿ. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಯಾರ ಜೊತೆಗೂ ನೇರವಾದ ಮಾತುಗಳನ್ನು ಆಡದೇ ಕುಹಕವಾಡುವಿರಿ.‌ ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ನಿಮ್ಮ ಚಿಂತನೆಗಳು ನಿಮಗೆ ಮಾತ್ರ ಸರಿ ಎನಿಸುವುದು.

ಕರ್ಕಾಟಕ ರಾಶಿ: ನೀವು ಅಂದುಕೊಂಡ ತಿರುವು ಬರಲು ಇನ್ನೂ ಬಹಳ ದೂರ ಸಾಗಬೇಕಿದೆ. ಇಂದು ಸಾಧಿಸಬೇಕೆಂದುಕೊಂಡ ವ್ಯವಹಾರದಲ್ಲಿ ಅಡೆತಡೆಗಳು ಬರಬಹುದು. ಪ್ರೀತಿಯ ಭಾವನೆಗಳಿಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಉದ್ಯೋಗ ನಷ್ಟದ ಭೀತಿಯು ಇರಬಹುದು. ಎಂದೋ ಪಡೆದ ಸಾಲದ ಮರುಪಾವತಿಯನ್ನು ಮಾಡಬೇಕಾಗಿಬರಬಹುದು. ಶತ್ರುಬಾಧೆಯನ್ನು ನಿವಾರಿಸಿಕೊಳ್ಳಲು ಕಷ್ಟವಾದೀತು. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೊಡುವ ಯೋಚನೆಯಲ್ಲಿಯೇ ಇರುವಿರಿ. ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮ ಬಗ್ಗೆ ಇರುವ ಭಾವವನ್ನು ಬದಲಿಸಬೇಕಿದೆ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ನಿಮ್ಮ ಮೇಲೆ ಸಹಾನುಭೂತಿ ಇರಬಹುದು. ಕೊಡು ಕೊಳ್ಳುವುದರಲ್ಲಿ ಸಮಾನತೆ ಇರಲಿ. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ಕೆಲವು ಸಮಸ್ಯೆಯನ್ನು ನೀವಾಗಿಯೇ ತಂದುಕೊಳ್ಳುವಿರಿ.

ಸಿಂಹ ರಾಶಿ: ಅಧಿಕ ಉಪಯೋಗದಿಂದ ವಸ್ತುಗಳು ಹಾಳಾಗುವುವು. ನಿಮಗೆ ಇಂದು ಸಿಗುವ ಅನಿರೀಕ್ಷಿತವಾದ ಉತ್ತಮ ಅವಕಾಶದಿಂದ ಸಂತೋಷವಾಗುವುದು. ತಂದೆ ಮತ್ತು ತಾಯಿಯರ ವಿಚಾರದಲ್ಲಿ ನಿಮಗೆ ಕರುಣೆ ಅತಿಯಾಗಿರುವುದು. ಪ್ರಯತ್ನಿಸುವ ಕಾರ್ಯವು ಯಶಸ್ಸಿನ ಕಡೆಗೆ ಸಾಗುತ್ತಿದೆಯೇ ಎನ್ನುವುದು ಗಮನಿಸಿ. ಯಾವುದೇ ಪೂರ್ವನಿರ್ಧಾರವಿಲ್ಲದೇ ವಿದೇಶ ಪ್ರಯಾಣ ಮಾಡುವಿರಿ. ಅಪಾತ್ರರಿಗೆ ನಿಮ್ಮ ವಸ್ತುವನ್ನು ಗೊತ್ತಿಲ್ಲದೇ ಕೊಡುವಿರಿ. ಇಂತಹ ದಾನದಿಂದ ಪ್ರಯೋಜನವಾಗದು. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ಸುಳ್ಳು ಮಾತಿನಿಂದಾಗಿ ನಂಬಿಕೆಯನ್ನು ಕಳೆದುಕೊಳ್ಳಬಹುದು. ಅಪರಿಚಿತರಿಗೆ ಮಾಡಿದ ಸಹಾಯವು ದುರುಪಯೋಗವಾಗುವುದು. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಬರಬಹುದು. ಯಾರನ್ನೂ ಅವಲಂಬಿಸದೇ ನಡೆಯಬೇಕು ಎನ್ನುವ ಹಠವು ಬರುವುದು.

ಕನ್ಯಾ ರಾಶಿ: ಇಂದು ರೋಗಬಾಧೆಯಿಂದ ಹೊರಬರುವುದು ಕಷ್ಟವಾದೀತು. ಉದ್ಯೋಗಸ್ಥ ಮಹಿಳೆಯರು ಅನಾರೋಗ್ಯದದಿಂದ ಉದ್ಯಮವನ್ನು ಬಿಡಬಹುದು. ವಾಹನವನ್ನು ಖರೀದಿಸುವ ಯೋಚನೆಯು ದಟ್ಟವಾಗಿ ಇರಬಹುದು‌. ಆಹಾರ ವ್ಯವಸ್ಥೆಯನ್ನು ಮಾಡುವವರಿಗೆ ಹೆಚ್ಚಿನ‌ ಪ್ರಯತ್ನವನ್ನು ಮಾಡಬೇಕಾಗಿಬರಬಹುದು. ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ವಿಶ್ವಾಸದಿಂದ ಕೊಟ್ಟ ಸಾಲಕ್ಕೆ ಬೆಲೆ ಇರಲಿ. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ನಿಜವಾದರೂ, ಅದಕ್ಕೂ ವಿಧಾನವಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ರತ್ನ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ.‌ ನಿಮ್ಮ‌ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು. ಯಾರ ಮೇಲೂ ಹಿಡಿತ ಸಾಧಿಸುವ ಪ್ರಯತ್ನವು ಬೇಡ. ಸಮಯ ಮಾತ್ರ ವ್ಯರ್ಥವಾಗಬಹುದು.