AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಜಾಗರೂಕತೆ ಇರಲಿ

ಸೆಪ್ಟೆಂಬರ್​ 11,​ 2024ರ​​ ನಿಮ್ಮ ರಾಶಿಭವಿಷ್ಯ:ಇಂದು ನಿರುದ್ಯೋಗಿಗಳಿಗೆ ಒಂದೊಂದೆ ಚಿಂತೆ ಕಾಡುವುದು. ವ್ಯಾಪಾರದಲ್ಲಿ ಉತ್ತಮ‌ ಫಲಿತಾಂಶಕ್ಕಾಗಿ ಕಾಯುವಿರಿ. ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದು. ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದು ಅಪಮಾನವೆನಿಸಬಹುದು. ಹಾಗಾದರೆ ಸೆಪ್ಟೆಂಬರ್​ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಜಾಗರೂಕತೆ ಇರಲಿ
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 11, 2024 | 12:15 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 12:29 ರಿಂದ ಸಂಜೆ 02:01, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:57 ರಿಂದ 12:29ರ ವರೆಗೆ.

ಮೇಷ ರಾಶಿ : ಇಂದು ನಿಮ್ಮ. ವ್ಯವಹಾರದಲ್ಲಿ ಅನಗತ್ಯ ಚರ್ಚೆಯನ್ನು ತಪ್ಪಿಸಿ. ಉದ್ಯೋಗಕ್ಕಾಗಿ ಇಲ್ಲಿಂದ ಅಲ್ಲಿಗೆ ಅಲೆಯಬೇಕಾಗುತ್ತದೆ. ಪರಿಚಿತರನ್ನು ಅತಿಯಾಗಿ ನಂಬುವುದೂ ಮಾರಕವಾಗಬಹುದು. ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುವ ಜನರು ತಮ್ಮ ಮೇಲಧಿಕಾರಿಯಿಂದ ಟೀಕೆಗೆ ಒಳಗಾಗಬಹುದು. ಪ್ರೇಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿ. ಸಣ್ಣಪುಟ್ಟ ಸಮಸ್ಯೆಗಳತ್ತ ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗುವುದು. ಎಚ್ಚರಿಕೆಯಿಂದ ಯೋಚಿಸಿದ ಅನಂತರ ನಿಮ್ಮ ವ್ಯಾಪಾರ ಯೋಜನೆಯನ್ನು ರಹಸ್ಯವಾಗಿ ಕೈಗೊಳ್ಳಿ. ಯಾರು ಏನು ಹೇಳಿದರೂ ಕೇಳಬೇಡಿ. ಇಂದು ವಾಹನ ಖರೀದಿಸುವುದನ್ನು ತಪ್ಪಿಸಿ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು ಆಪ್ತತೆಯೂ ಬೆಳೆದು, ವಿನಾಕಾರಣ ದೂರವೂ ಆಗಬಹುದು. ಹಿರಿಯರ ಜೊತೆಗಿನ ಮಾತುಕತೆ ನಿಮಗೆ ಪ್ರಯೋಜನಕಾರಿಯಾಗಲಿದೆ.

ವೃಷಭ ರಾಶಿ : ಧಾರ್ಮಿಕ ಆಸಕ್ತಿಯಲ್ಲಿ ಕೊರತೆ ಕಾಣಿಸುವುದು. ಉದ್ಯಮ ಕ್ಷೇತ್ರದಲ್ಲಿ ಹೊಸ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ವ್ಯಾಪಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಣದ ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಬಳಸಿ. ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಜನರು ಗಮನಾರ್ಹ ಯಶಸ್ಸು ಕಾಣುವರು. ಪ್ರೀತಿಯ ವಿಚಾರದಲ್ಲಿ ಪ್ರಾಮಾಣಿಕವಾಗಿರುವುದು ಮುಖ್ಯ. ಇಂದು ಅನುಪಯುಕ್ತ ವಿಷಯಗಳ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ. ಕಚೇರಿಯ ಒತ್ತಡವನ್ನು ನಿಮ್ಮ ಮನೆಗೆ ತರುವುದು ಬೇಡ. ಇಂದು ನೀವು ನಿಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ವಾಹನ ಸಂಚಾರದಲ್ಲಿ ಜಾಗರೂಕತೆ ಇದ್ದರೂ ಅಪಘಾತ ಸಾಧ್ಯತೆ ಇದೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕೊರತೆಯಿಂದ ಹಿನ್ನಡೆ. ಕುಟುಂಬದಲ್ಲಿ ಕಲಹದ ಕಾರಣ ಕೆಲಸ ಕಾರ್ಯವು ವಿಳಂಬವಾಗುವುದು. ತಾಳ್ಮೆಯಿಂದ ಎಲ್ಲವನ್ನೂ ಮಾಡುವ ಅನಿವಾರ್ಯತೆಯೂ ಇರುವುದು.

ಮಿಥುನ ರಾಶಿ : ಇಂದು ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಆತ್ಮೀಯತೆ ಹೆಚ್ಚಾಗಬಹುದು. ಸರ್ಕಾರದಿಂದ ಆಗುವ ಕಾರ್ಯವು ಅಪೂರ್ಣವಾಗಿಯೇ ಇರುವುದು. ಕಳೆದು ಹೋದ ಬಗ್ಗೆ ಹೆಚ್ಚು ಯೋಚಿಸಿ ಮಾತನಾಡಬೇಡಿ. ಇದರಿಂದ ನಿಮ್ಮ ಸಂಗಾತಿಗೆ ನೋವಾಗಬಹುದು. ನಿಮ್ಮ ಸಂಗಾತಿಯನ್ನು ಯಾವುದೇ ಷರತ್ತುಗಳಿಲ್ಲದೇ ನೋಡಿಕೊಳ್ಳಿ. ಉದ್ಯೋಗಕ್ಕಾಗಿ ಅಲೆದಾಡುವ ಜನರಿಗೆ ಇಂದು ಉದ್ಯೋಗ ದೊರೆಯಲಿದೆ. ಭೂವ್ಯವಹಾರವು ರಾಜಕೀಯ ತಿರುವನ್ನು ಪಡೆಯಬಹುದು. ಚಾಂಚಲ್ಯದ ಸ್ವಭಾವವು ನಿಮ್ಮ ನಿಯಂತ್ರಣಕ್ಕೆ ಬರಬೇಕಿದೆ. ಉದ್ಯಮದಲ್ಲಿ ಹೊಸ ಸಹವರ್ತಿಗಳು ಸಿಗುವರು. ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಅಲಂಕಾರದ ಬಗ್ಗೆ ಹೆಚ್ಚಿನ ಗಮನವಿರಲಿದೆ. ಜನರು ತಮ್ಮ ಮೇಲಧಿಕಾರಿಯಿಂದ ಪ್ರೋತ್ಸಾಹವನ್ನು ಪಡೆಯುವರು.

ಕರ್ಕಾಟಕ ರಾಶಿ : ಇಂದು ನಿರುದ್ಯೋಗಿಗಳಿಗೆ ಒಂದೊಂದೆ ಚಿಂತೆ ಕಾಡುವುದು. ವ್ಯಾಪಾರದಲ್ಲಿ ಉತ್ತಮ‌ ಫಲಿತಾಂಶಕ್ಕಾಗಿ ಕಾಯುವಿರಿ. ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದು. ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದು ಅಪಮಾನವೆನಿಸಬಹುದು. ನಿಮ್ಮ ಒಳ್ಳೆಯ ಮತ್ತು ಕೆಟ್ಟ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಜೀವನ ಸಂಗಾತಿಯನ್ನು ಬೆಂಬಲಿಸಿ. ಸಾಧ್ಯವಾದಷ್ಟು. ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ಇಂದು ನಿಮ್ಮ ಸಂಬಂಧವು ಪೋಷಕರ ಬೆಂಬಲವನ್ನು ಪಡೆಯಬಹುದು. ನೀವು ರಾಜಕೀಯದಲ್ಲಿ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಪಡೆಯಬೇಕಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬರುವುದು. ಸಮಾಜದಲ್ಲಿ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ