Horoscope Today 15 November : ಇಂದು ಈ ರಾಶಿಯವರ ಸ್ಥಾನವನ್ನು ತಂತ್ರದಿಂದ ಪಡೆವರು…

ನವೆಂಬರ್ 15 ರ ಇಂದಿನ ರಾಶಿ ಭವಿಷ್ಯವು ಪ್ರತಿಯೊಂದು ರಾಶಿಯ ದೈನಂದಿನ ಫಲಾಫಲಗಳನ್ನು ತಿಳಿಸುತ್ತದೆ. ನಿಮ್ಮ ಆರ್ಥಿಕ ಸ್ಥಿತಿ, ಸಂಬಂಧಗಳು, ವೃತ್ತಿ ಮತ್ತು ಆರೋಗ್ಯದ ಬಗ್ಗೆ ನಿಖರ ಮಾಹಿತಿ ಪಡೆಯಿರಿ. ಜೊತೆಗೆ, ಶುಭ-ಅಶುಭ ಕಾಲಮಾನ, ರಾಹುಕಾಲ, ಯಮಗಂಡ ಕಾಲದ ವಿವರಗಳನ್ನು ಸಹ ಇಲ್ಲಿ ಕಾಣಬಹುದು. ನಿಮ್ಮ ದಿನವನ್ನು ಉತ್ತಮವಾಗಿ ಯೋಜಿಸಲು ಈ ಜಾತಕ ಫಲಗಳು ಸಹಾಯಕವಾಗಿವೆ.

Horoscope Today 15 November : ಇಂದು ಈ ರಾಶಿಯವರ ಸ್ಥಾನವನ್ನು ತಂತ್ರದಿಂದ ಪಡೆವರು...
Horoscope November 07
Edited By:

Updated on: Nov 15, 2026 | 3:34 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಭಾನುವಾರದಂದು ಗುರಿ ಆಸೆಗೆ ಭಂಗ, ಹಳೆಯ ಅಪರಾಧ, ವಿದ್ಯುತ್ತಿನಿಂದ ಎಚ್ಚರಿಕೆ, ವಂಚನೆ, ಹಣದ ಆಗಮನ, ಅನ್ಯರ ವಿಚಾರದಲ್ಲಿ ಆಸಕ್ತಿ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಮೂಲಾ, ಯೋಗ : ಧೃತಿ, ಕರಣ : ಕೌಲವ, ಸೂರ್ಯೋದಯ – 06 – 19 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:23 – 17:49, ಯಮಗಂಡ ಕಾಲ 12:04 – 13:30, ಗುಳಿಕ ಕಾಲ 14:57 – 16:23

Loading...

ಮೇಷ ರಾಶಿ :
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊರತೆಯು ಹೆಚ್ಚು ಕಂಡುಬರುವುದು. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಅಪರಿಚಿತರ ವ್ಯಕ್ತಿತ್ವವನ್ನು ಸಂಶಯವಿಲ್ಲದೇ ಒಪ್ಪಬಹುದು. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯವಾಗುವುದು. ಶತ್ರುಗಳ ಸಂಚಿಗೆ ಬಲಿಯಾಗುವಿರಿ. ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ.

ವೃಷಭ ರಾಶಿ :
ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ನಿಮಗೆ ತೆರೆದಿರುವುದು. ಭಯಗೊಂಡಷ್ಟೂ ಸರಿದಾರಿಯಿಂದ ದೂರಾಗುವಿರಿ. ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಸಹೋದರರ ಬಾಂಧವ್ಯವು ಸಡಿಲಾಗಬಹುದು. ಸಂಗಾತಿಯಿಂದ ಪ್ರೀತಿಯು ಸಿಗಲಿದೆ. ವಿದೇಶಪ್ರಯಾಣದ ನಿರೀಕ್ಷೆಯಲ್ಲಿಯೇ ಇರುವಿರಿ‌. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ.

ಮಿಥುನ ರಾಶಿ :
ನಮ್ರತೆಯು ನಿಮ್ಮನ್ನು ಎತ್ತರಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ದುರಾಸೆ ಇದ್ದಷ್ಟೂ ಸಿಗಬೇಕಾದುದು ದೂರಾಗಬಹುದು. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ಹಣವನ್ನು ವ್ಯಯಿಸಿ ಉನ್ನತ ಅಧಿಕಾರವನ್ನು ಪಡೆಯುವಿರಿ.

ಕರ್ಕಾಟಕ ರಾಶಿ :
ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುವುದು. ರಾಜಕೀಯ ಜೀವನವು ನಿಮಗೆ ಅತಂತ್ರ ಸ್ಥಿತಿಯನ್ನು ತರಬಹುದು. ಹಣಕಾಸಿನ ಕೊರತೆಯನ್ನು ನೀವು ಕುಟುಂಬಕ್ಕೆ ಗೊತ್ತಾಗದಂತೆ ನಿರ್ವಹಿಸುವಿರಿ. ಕೆಲವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಸಿಂಹ ರಾಶಿ :
ನಿಮ್ಮ ವಿದ್ಯೆಗೆ ಉಪಯುಕ್ತವಾದ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಆಸ್ತಿಯಲ್ಲಿ ಸಮ ಪಾಲು ಸಿಗದೇ ನಿಮಗೆ ವಾದಕ್ಕಿಳಿಯುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸಣ್ಣ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡಬಹುದು.

ಕನ್ಯಾ ರಾಶಿ :
ನಿಮ್ಮ ಸುಳ್ಳು ಯಾರಿಂದಲಾದರೂ ತಿಳಿದುಬರುವುದು. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ಸರ್ಕಾರದ ಕಾರ್ಯಗಳನ್ನು ಬೇಗ ಮುಗಿಸಿಕೊಳ್ಳಲಿದ್ದೀರಿ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ನಿಮ್ಮ ಸ್ವಂತ ಕೆಲಸಕ್ಕೆ ಉದ್ಯೋಗಿಗಳನ್ನು ಬಳಸಿಕೊಳ್ಳುವಿರಿ. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ.

ತುಲಾ ರಾಶಿ :
ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ವಿದೇಶದ ಪ್ರವಾಸದಲ್ಲಿ ಇರುವವರಿಗೆ ಅಪಾಯ ಕಾಣಿಸಿಕೊಳ್ಳುವುದು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂರುವರು. ವಿವಾಹ ಸಮಾರಂಭಗಳಿಗೆ ಭೇಟಿ ಕೊಡುವಿರಿ. ಸಾಲದಿಂದ ನಿಮಗೆ ಕಿರಿಕಿರಿಯಾಗುವುದು. ನಿಮ್ಮ ಪೂರ್ಣ ಸಾಮರ್ಥ್ಯವನ್ನು ಇಂದು ತೋರಿಸಲಾರಿರಿ.

ವೃಶ್ಚಿಕ ರಾಶಿ :
ಯಾರನ್ನೂ ನೀವು ಹೀಗೆ ಎಂದು ಫಲಕವನ್ನು ಅಂಟಿಸಲು ಸಾಧ್ಯವಾಗದು. ಇಂದು ನಿಮಗೆ ಪಿತ್ರಾರ್ಜಿತ ಸಂಪತ್ತನ್ನು ಪಡೆಯುವ ಅವಕಾಶವಿರುವುದು. ಭೂಮಿಯ ಮಾರಾಟ ಮಾಡಿದ ಕಾರಣ ನಿಮ್ಮ ಜೀವನಕ್ಕೆ ಬೇಕಾದ ಸಂಪತ್ತು ಸಿಗಲಿದೆ. ಸಹನೆಯನ್ನು ಮೀರಿ ನೀವು ಇಂದು ವರ್ತಿಸುವಿರಿ. ನಿಮ್ಮ ವ್ಯಕ್ತಿತ್ವವು ಇತರರಿಗೆ ಉದಾಹರಣೆಯಾಗಬಹುದು. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ.

ಧನು ರಾಶಿ :
ನಿಮ್ಮ ಇಂದಿನ ಎಲ್ಲ ಕಾರ್ಯಗಳಿಗೂ ಟೀಕೆಗಳು ಇರಲಿದ್ದು, ಅದನ್ನು ಮನಸ್ಸಿಗೆ ತಂದುಕೊಳ್ಳುವಿರಿ. ವಿವಾಹ ಜೀವನವು ಕಷ್ಟ ಎನಿಸಬಹುದು. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಆದಂತೆ ಎಂಬ ಭಾವನೆಯು ಬರುವ ಸಾಧ್ಯತೆ ಇದೆ. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗುವಿರಿ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಆಕಸ್ಮಿಕವಾಗಿ ಕೆಲವರನ್ನು ಕಳೆದುಕೊಳ್ಳುವಿರಿ.

ಮಕರ ರಾಶಿ :
ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ಸ್ವಂತ ಕಾರ್ಯಸ್ಥಳದ ಸ್ವಚ್ಛತೆಯಲ್ಲಿ ಕಾಲಕಳೆಯುವಿರಿ. ಮನೆಯವರಿಗೆ ಹೆಚ್ಚು ಸಮಯವನ್ನು ಕೊಡುವಿರಿ. ನಂಬಿಕೆಯನ್ನು ಕಳೆದುಕೊಂಡವರ ಜೊತೆ ಪುನಃ ವ್ಯವಹಾರವು ಕಷ್ಟವಾದೀತು. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು.

ಕುಂಭ ರಾಶಿ :
ನಿಮ್ಮ ನೋವನ್ನು ಸರಿಮಾಡಿಕೊಳ್ಳದೇ ಇನ್ನೊಬ್ಬರ ಬಗ್ಗೆ ಕಾಳಜಿ ಅಧಿಕವಾಗುವುದು. ನಿಮ್ಮ ಜನಪ್ರಿಯತೆಯು ನಿಮಗೆ ಖುಷಿ ಕೊಟ್ಟೀತು. ನಿಮ್ಮ ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುತ್ತಿರುವಿರಿ. ಆಲಸ್ಯದಿಂದ ಉತ್ತಮ ವಿಚಾರಗಳನ್ನು ಕಳೆದುಕೊಳ್ಳಬೇಕಾದೀತು. ಅಸಂಬದ್ಧ ಚರ್ಚೆಗಳಿಂದ ದೂರ ಇರುವಿರಿ. ಅಧಿಕಾರಿಗಳ ನಿಕಟ ಸಂಪರ್ಕವೇ ನಿಮಗೆ ಮುಳುವಾಗಬಹುದು. ಆಸ್ತಿಯ ವಿಚಾರಕ್ಕೆ ನೀವು ಯಾವ ತೀರ್ಮಾನಕ್ಕೂ ಬರಲಾಗದು.

ಮೀನ ರಾಶಿ :
ಯಾವುದೂ ನಿಮಗೆ ಸಮಾಧಾನ ಕೊಡದು. ನಿಮ್ಮ ವ್ಯಾಪಾರದ ವಿಸ್ತಾರದ ಬಗ್ಗೆ ಪಾಲುದಾರರ ಜೊತೆ ಮಾತನಾಡುವಿರಿ. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಹೆಚ್ಚಿನ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಯಾರ ಮಾತನ್ನೂ ಕೇಳದ ಚಿತ್ತಚಾಂಚಲ್ಯವು ಇರಲಿದೆ. ಶರೀರ ಪೀಡೆಯು ಕಾಣಿಸಿಕೊಂಡೀತು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ.

-ಲೋಹಿತ್ ಹೆಬ್ಬಾರ್ – 8762924271 (what’s app only)

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us