
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ಮಂಗಳವಾರದಂದು ಒಮ್ಮತದಿಂದ ಕಾರ್ಯ, ವಾಕ್ ಸ್ವಾತಂತ್ರ್ಯ, ಅತಿಥಿ ಸತ್ಕಾರ, ಸ್ತ್ರೀಸಹವಾಸದಿಂದ ತೊಂದರೆ, ಪ್ರೇಮದಲ್ಲಿ ವಿಚಾರದಲ್ಲಿ ತಪ್ಪು ಗ್ರಹಿಕೆ ಇವೆಲ್ಲ ಈ ದಿನದ ಭವಿಷ್ಯ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಐಂದ್ರ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 19 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:17 – 16:49, ಯಮಗಂಡ ಕಾಲ 09:12 – 10:44, ಗುಳಿಕ ಕಾಲ 12:15 – 13:46
ಮೇಷ ರಾಶಿ :
ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ವೃದ್ಧಿಯು ಕಾಣಿಸಿ ಸಮಾಧಾನವಾಗುವುದು. ಬಂಧುಗಳ ಕಾರಣದಿಂದ ನಿಮ್ಮ ಹಣವು ಖರ್ಚಾಗಬಹುದು. ನಿಮ್ಮ ಸ್ಥಿರಾಸ್ತಿಯ ದಾಖಲೆಗಳನ್ನು ಸರಿ ಮಾಡಿಕೊಳ್ಳಿ. ಶತ್ರುಗಳನ್ನು ಸೋಲಿಸುವ ಸಂಚು ಸಫಲವಾಗಬಹುದು. ವೈಯಕ್ತಿಕ ಕೆಲಸವು ಹಾಗೇ ಇರಲಿದ್ದು ನಿಮಗೆ ಆತಂಕವಾದೀತು. ನಿಮ್ಮ ಇಂದಿನ ಒತ್ತಡವನ್ನು ನೋಡಿ ಮಾತುಕೊಡಿ. ಅಪವಾದದ ಮೂಲವನ್ನು ಹುಡುಕುವ ಪ್ರಯತ್ನ ಮಾಡುವಿರಿ.
ವೃಷಭ ರಾಶಿ :
ನಿಮ್ಮ ಹಣವು ಬಾರದೇ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ಆಲೋಚನೆಯನ್ನು ಮಾಡುವಿರಿ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಅಸಫಲರಾಗುವಿರಿ. ಏಕಪಕ್ಷೀಯ ನಿರ್ಧಾರವು ನಿಮ್ಮ ವಿರೋಧಿಗಳನ್ನು ಸೃಷ್ಟಿಸಿಕೊಳ್ಳಲು ಸಹಾಯವಾಗಲಿದೆ. ಆಲಸ್ಯದಿಂದ ಮನೆಯಲ್ಲಿ ಬೈಯಿಸಿಕೊಳ್ಳುವಿರಿ. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ.
ಮಿಥುನ ರಾಶಿ :
ನೀವು ಆರ್ಥಿಕವಾಗಿ ಸಬಲರಾಗುವತ್ತ ಗಮನವು ಇರುವುದು. ಉದ್ಯೋಗದಲ್ಲಿ ಉಂಟಾದ ಒತ್ತಡದಿಂದ ಕೆಲಸವನ್ನು ಬದಲಿಸಲು ಇಚ್ಛಿಸುವಿರಿ. ಸ್ವಂತ ಕಾರ್ಯದಲ್ಲಿ ಸಫಲತೆ ಸಂತೋಷಗಳನ್ನು ಕಾಣುವಿರಿ. ಸಿಕ್ಕ ಮೊದಲ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಶ್ರದ್ಧೆಯಿಂದ ಕೆಲಸವನ್ನು ಮಾಡುವಿರಿ. ಬಹಳ ಆತುರದಲ್ಲಿ ಇರಲಿರುವಿರಿ. ಹಳೆಯ ವಸ್ತುವನ್ನೇ ದುರಸ್ತಿ ಮಾಡುತ್ತ ಬಳಸುವಿರಿ. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ.
ಕರ್ಕಾಟಕ ರಾಶಿ :
ನಿಮ್ಮ ಸಾಮರ್ಥ್ಯದಿಂದ ಶತ್ರುಗಳ ಪೀಡಿಯು ಇಲ್ಲವಾಗುವುದು. ನಿರೋದ್ಯೋಗದಿಂದ ಬೇಸರಗೊಂಡ ನಿಮಗೆ ದೂರದ ಊರಿನಲ್ಲಿ ಕೆಲಸವು ಸಿಗಲಿದೆ. ಸಂದರ್ಭವನ್ನು ನೋಡಿಕೊಂಡು ಮಾತನಾಡುವುದು ಉಚಿತ. ಇಂದು ನಿಮ್ಮ ಕೆಲಸವನ್ನು ಬದಲಾಯಿಸಿಕೊಳ್ಳುವಿರಿ. ಸುತ್ತಿ ಬಳಸಿ ಕೊನೆಗೆ ನಿಮ್ಮಿಂದ ಹಣವನ್ನು ಪಡೆಯುವರು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು.
ಸಿಂಹ ರಾಶಿ :
ಯಾರ ಜೀವನವನ್ನೂ ಸಣ್ಣದಾಗಿ ಕಾಣುವುದು ಬೇಡ. ನಿಮ್ಮ ವಿದ್ಯೆಗೆ ಉಪಯುಕ್ತವಾದ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಮಕ್ಕಳು ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಅನಿರೀಕ್ಷಿತವಾದ ಮಿತ್ರನ ಭೇಟಿಯು ಸಂತೋಷವನ್ನು ಕೊಡಲಿದೆ. ಇಂದು ಮನೋರಂಜನೆಯ ಜೊತೆ ಕಾಲ ಕಳೆಯುವಿರಿ. ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ. ಇಂದಿನ ಅನುಭವವು ನಿಮಗೆ ಅನೇಕ ಪಾಠವನ್ನು ಕಲಿಸುವುದು. ನೌಕರರಿಗೆ ನಿಮ್ಮಿಂದ ಖುಷಿಯಾಗಲಿದೆ.
ಕನ್ಯಾ ರಾಶಿ :
ನಿಮ್ಮ ಸುಳ್ಳು ಯಾರಿಂದಲಾದರೂ ತಿಳಿದುಬರುವುದು. ಇಂದು ಕೆಲವು ವಿಚಾರಕ್ಕೆ ಹೊಂದಾಣಿಕೆಯ ಕೊರತೆ ಕಂಡು ದಾಂಪತ್ಯದಲ್ಲಿ ಕಲಹವಾಗುವುದು. ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸಬಹುದು. ವಾಹನ ಖರೀದಿಯನ್ನು ಸಾಲಮಾಡಿ ಮಾಡುವಿರಿ. ನೀವು ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶುಭಸಮಾಚಾರದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸ್ವಂತ ಕೆಲಸಕ್ಕೆ ಉದ್ಯೋಗಿಗಳನ್ನು ಬಳಸಿಕೊಳ್ಳುವಿರಿ. ಆಕಸ್ಮಿಕ ಧನಾಗಮನವಾದರೂ ಮತ್ತಾವುದೋ ರೀತಿಯಲ್ಲಿ ಹೋಗುವುದು.
ತುಲಾ ರಾಶಿ :
ನಿಮ್ಮ ಬೆಳವಣಿಗೆಗೆ ಪೂರಕವಾದ ಸಂದರ್ಭಗಳು ಬಂದರೂ ಅದನ್ನು ನಿರ್ಲಕ್ಷ್ಯ ಮಾಡುವಿರಿ. ಒಮ್ಮೆಲೆ ಬರುವ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಕಷ್ಟವಾಗುವುದು. ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ಹಣಕ್ಕೆ ಆಸೆಪಟ್ಟು ಮೋಸಹೋಗಬಹುದು. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ಸಾಲದಿಂದ ನಿಮಗೆ ಕಿರಿಕಿರಿಯಾಗುವುದು. ನಿಮ್ಮ ಪೂರ್ಣ ಸಾಮರ್ಥ್ಯವನ್ನು ಇಂದು ತೋರಿಸಲಾರಿರಿ.
ವೃಶ್ಚಿಕ ರಾಶಿ :
ಪಿತ್ರಾರ್ಜಿತ ಸಂಪತ್ತನ್ನು ಪಡೆಯುವ ಅವಕಾಶವಿರುವುದು. ಉದ್ಯೋಗವನ್ನು ಪಡೆಯುವ ಉತ್ಸಾಹದಿಂದ ಪ್ರಯಾಣ ಮಾಡುವಿರಿ. ಆದರೆ ಹತಾಶರಾಗುವಿರಿ. ಸಾಲವು ನಿಮ್ಮ ಮಾನಸಿಕಸ್ಥಿತಿಯನ್ನೇ ಬದಲಿಸೀತು. ಬಂಧುಗಳು ನಿಮ್ಮನ್ನು ಬಹಳವಾಗಿ ದೂಷಿಸುವರು. ಹೊಸ ಉದ್ಯಮವನ್ನು ಆರಂಭಿಸುವ ಯೋಜನೆಯನ್ನು ಆಪ್ತರಿಗೆ ಹೇಳಿ, ಸಹಾಯವನ್ನೂ ಬಯಸುವಿರಿ. ಸಾಲ ಮರುಪಾವತಿಯ ಆಗದೇ ಆತಂಕವಾಗಲಿದೆ.
ಧನು ರಾಶಿ :
ನಿಮ್ಮಕಾರ್ಯವನ್ನು ವೀಕ್ಷಿಸಿ ನಿಮಗೆ ಹೆಚ್ಚಿನ ಬಡ್ತಿಯನ್ನು ಖಾಸಗಿ ಸಂಸ್ಥೆ ಕೊಡಲಿದೆ. ಆರ್ಥಿಕ ಹಿನ್ನಡೆಯನ್ನು ನೀವು ಸುಧಾರಿಸಿಕೊಳ್ಳಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಇತರರಿಗೆ ಉದಾಹರಣೆಯಾಗಲಿದೆ. ಸಮಯಕ್ಕೆ ಕಾದಿದ್ದು ಸಾರ್ಥಕ ಎನಿಸಬಹುದು. ಮಾತಿನಲ್ಲಿ ಮೃದುತ್ವ ಇರಲಿ. ಭಾವನೆಗಳ ಜೊತೆ ತಮಾಷೆ ಮಾಡುವುದು ಇಷ್ಟವಾಗದು. ಸ್ನೇಹಿತರನ್ನು ಕಳೆದುಕೊಳ್ಳುತ್ತೇನೆ ಎಂಬ ಭಯವು ಕಾಡಬಹುದು. ಮನಸ್ಸಿನ ನೋವನ್ನು ನೀವೇ ಅನುಭವಿಸಿ ಕಡಿಮೆ ಮಾಡಿಕೊಳ್ಳುವಿರಿ.
ಮಕರ ರಾಶಿ :
ನಿಮಗೆ ಇಂದು ದಾನ ಕೊಡಬೇಕೆಂಬ ಮನಸ್ಸು ಬರುವುದು. ಉತ್ತಮವಾದ ವಸ್ತುವನ್ನು ಉತ್ತಮರಿಗೇ ಕೊಡಿ. ಉದ್ಯಮದಲ್ಲಿ ನಿಮ್ಮ ಚಿಂತನಾರಹಿತ ನಿರ್ಧಾರದಿಂದ ನಿಮಗೆ ನಷ್ಟವಾಗಲಿದೆ. ನಿಮ್ಮ ಎಲ್ಲ ಯೋಜನೆಯೂ ಬುಡಮೇಲಾಗಬಹುದು. ಸಂಗಾತಿಗೆ ಪ್ರೀತಿಯನ್ನು ನೀಡಿ ಖುಷಿಪಡಿಸಿ. ಕಛೇರಿಯಲ್ಲಿ ನಿಮಗೆ ಪ್ರಶಂಸೆಯು ಸಿಗಲಿದೆ. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು. ಅಸೂಯೆಪಟ್ಟರೆ ನಿಮ್ಮನ್ನೇ ನೀವು ಸುಟ್ಟಕೊಂಡಂತೆ.
ಕುಂಭ ರಾಶಿ :
ನೀವು ವಹಿಸಿಕೊಟ್ಟ ಕಾರ್ಯವನ್ನು ಮಾಡಿದ್ದು ನಿಮಗೆ ಸಂತೋಷವಾಗಲಿದೆ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಗುರಿಯನ್ನು ತಲುಪಲು ನಿಮಗೆ ಸದ್ಯಕ್ಕೆ ಅಸಾಧ್ಯ ಎನಿಸಬಹುದು. ಬಂಧುಗಳಿಂದ ಕಿರುಕುಳ ಹೆಚ್ಚಾದಂತೆ ಅನಿಸುವುದು. ಮೀತಿಮೀರುವುದರೊಳಗೆ ಬೇಕಾದುದನ್ನು ಮಾಡಿಕೊಳ್ಳಿ. ಯಾವುದರ ಮೇಲೂ ಹೆಚ್ಚಿನ ನಿರೀಕ್ಷೆ ಬೇಡ. ಅಪರಿಚಿತರು ನಿಮ್ಮನ್ನು ಟೀಕಿಸಬಹುದು. ಸ್ನೇಹಿತರು ನಿಮ್ಮ ಉದ್ಯೋಗವನ್ನು ಬದಲಿಸಲು ಬಹಳ ಒತ್ತಾಯ ಮಾಡುವರು.
ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಸೆಪ್ಟೆಂಬರ್ ತಿಂಗಳ ಮೂರನೇ ವಾರದ ಭವಿಷ್ಯ ಇಲ್ಲಿ ತಿಳಿಯಿರಿ
ಮೀನ ರಾಶಿ :
ನಿಮ್ಮ ವ್ಯಾಪಾರದ ವಿಸ್ತಾರದ ಬಗ್ಗೆ ಪಾಲುದಾರರ ಜೊತೆ ಮಾತನಾಡುವಿರಿ. ವಾಹನ ಚಾಲನೆಯಿಂದ ಅಪಘಾತ ಸಂಭವಿಸಬಹುದು. ನಕಾರಾತ್ಮಕತೆಯಿಂದ ಹೊರಬರುವುದು ಸುಲಭವಲ್ಲ. ನಿಮಗೆ ಇಂದು ಮನೆಯಲ್ಲಿಯೇ ಇರಬೇಕಾದ ಸ್ಥಿತಿಯು ಬಂದಿರುವುದರಿಂದ ಬಂಧನದಂತೆ ಅನ್ನಿಸಬಹುದು. ನೀವು ಸವಾಲನ್ನು ಸ್ವೀಕರಿಸುವ ಮನಸ್ಸು ಇರಲಿದೆ. ನಿಮ್ಮ ಕಲಹದಿಂದ ಮತ್ತಾರೋ ಪ್ರಯೋಜನ ಪಡೆದಾರು.
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 am, Tue, 15 September 26