Horoscope Today 16 July: ಇಂದು ಈ ರಾಶಿಯವರಿಗೆ ಎಲ್ಲವೂ ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಿರುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ ಬುಧವಾರ ವಿದ್ಯಾಭ್ಯಾಸದಲ್ಲಿ ಆತ್ಮವಿಶ್ವಾಸ, ಅನುರೂಪದ ಸಂಗಾತಿ, ಉನ್ನತ ಸ್ಥಾನದಲ್ಲಿ ಭೀತಿ, ಇಚ್ಛಾಶಕ್ತಿಯ ಕೊರತೆ ಇವೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಗ್ರೀಷ್ಮ, ಸೌರ ಮಾಸ: ಕರ್ಕಾಕಟ, ಮಹಾನಕ್ಷತ್ರ: ಪುನರ್ವಸು, ವಾರ: ಬುಧ, ತಿಥಿ : ಷಷ್ಠೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಶೋಭನ, ಕರಣ: ಗರಜ, ಸೂರ್ಯೋದಯ – 06 : 12 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:48 – 17:26, ಯಮಘಂಡ ಕಾಲ09:17 – 10:54, ಗುಳಿಕ ಕಾಲ 12:32 – 14:10
ಇಂದಿನಿಂದ ದಕ್ಷಿಣಾಯನ ಆರಂಭವಾಗಿಲಿದ್ದು, ಸೂರ್ಯನ ಗತಿ ದಕ್ಷಿಣಕ್ಕೆ ಬರಲಿದ್ದು. ಹಗಲಿನ ಪ್ರಮಾಣ ಕಡಿಮೆ, ರಾತ್ರಿಯ ಪ್ರಮಾಣ ಹೆಚ್ಚಿರುವುದು. ಹಬ್ಬಗಳು ಇನ್ನು ಆರಂಭವಾಗುವುವು. ಸ್ವರ್ಗದ ದ್ವಾರ ಇಂದು ಮುಚ್ಚಲಿದೆ ಎಂಬ ಮಾತು ಜನಜನಿತವಾಗಿರುವುದು. ಮಹಾವಿಷ್ಣುವು ಯೋಗನಿದ್ರೆಯಲ್ಲಿ ಈಗಾಲೇ ಇದ್ದಾಗಿದೆ. ಈ ದಿನ ಅಯನ ಸಂಕ್ರಮಣವೂ ಆಗಿರುವ ಕಾರಣ, ದೇವತೋಪಾಸನೆಯಿಂದ ಮನಸ್ಸನ್ನು ನಿರ್ಮಲವಾಗಿಸಿ, ಭಕ್ತಿಯಿಂದ ಇಷ್ಟದೇವರನ್ನೂ ಕುಲದೇವರನ್ನೂ ಆರಾಧಿಸಿ.
ಮೇಷ ರಾಶಿ: ಅಪರಿಚಿತ ಇಂದು ಒಂದೇ ಕಾರ್ಯವನ್ನು ಮತ್ತೆ ಮಾಡಬೇಕಾಗುವುದು. ಮಧ್ಯ ಸಣ್ಣ ವಿರಾಮವನ್ನು ನೀವು ಬಯಸುವಿರಿ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಏಕತಾನತೆಯನ್ನು ತಪ್ಪಿಸಲು ಹೊಸತನ್ನು ರೂಪಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ನಿದ್ರಾಭಂಗವಾಗಿ ಕಾರ್ಯದಲ್ಲಿ ಅನಾಸಕ್ತಿ ಕಾಣಿಸುವುದು. ವಿದ್ಯಾರ್ಥಿಗಳು ಆತ್ಮವಿಶ್ವಾಸ ತುಂಬಿಕೊಳ್ಳುವರು. ದೀರ್ಘಾವಧಿಯ ಯೋಜನೆಗೆ ಒಪ್ಪಂದ ಮಾಡಿಕೊಳ್ಳುವಿರಿ. ಅತಿಯಾದ ಆಸೆಯಿಂದ ನೀವು ವ್ಯಾಪಾರದಲ್ಲಿ ಅಪಾಯವನ್ನು ತಂದುಕೊಳ್ಳುವಿರಿ. ಮಕ್ಕಳು ಸ್ವತಂತ್ರವಾಗಿ ದುಡಿಯಲು ಉಪಯೋಗವಾಗುವಂತೆ ಮಾಡುವಿರಿ. ಎಲ್ಲ ಸಂದರ್ಭದಲ್ಲಿ ಒಂದೇ ರೀತಿಯ ಭಾವನೆ ಬೇಡ. ಸಂಗಾತಿಯ ವಿಚಾರವನ್ನು ಇನ್ನೊಬ್ಬರ ಬಳಿ ಹೇಳಿ ಸಮಾಧಾನ ಪಡುವಿರಿ. ನಿಮ್ಮವರ ಬಗ್ಗೆ ದೂರು ಬರಬಹುದು. ನಗಣ್ಯ ಮಾಡದೇ ವಿಚಾರಿಸುವಿರಿ. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ.
ವೃಷಭ ರಾಶಿ: ಮರೆತು ಹೋದ ವಿಚಾರವು ಯಾವುದೋ ಕಡೆಯಿಂದ ನಿಮ್ಮನ್ನು ಎಚ್ಚರಿಸುವುದು. ನಿಮ್ಮ ನಿಶ್ಚಿತವಾದ ಯೋಜನೆಯನ್ನು ಬದಲಾಯಿಸುವಿರಿ. ಉದ್ಯಮಿಗಳಿಗೆ ಮಾರುಕಟ್ಟೆ ಸ್ಪರ್ಧೆಯು ಹೆಚ್ಚಿರಬಹುದು. ಉದ್ವಿಗ್ನವು ಉಂಟಾಗ ಸಂದರ್ಭಗಳಲ್ಲಿ, ನಿಮ್ಮ ಕೋಪವನ್ನು ನಿಯಂತ್ರಿಸಿ. ಅವಿವಾಹಿತರು ಸರಿಯಾದ ಅನುರೂಪ ಸಂಗಾತಿಯನ್ನು ಕಂಡುಕೊಳ್ಳುವರು. ಕುಟುಂಬ ಬಂಧನದಿಂದ ಬಿಡುಗಡೆ ಅನಿಸುವುದು. ಕೃಷಿಯಲ್ಲಿ ಏನಾದರೂ ಮಾಡುವ ಕನಸು ಕಂಡು ಕಾರ್ಯಪ್ರವೃತ್ತರಾಗುವಿರಿ. ದಾಂಪತ್ಯದಲ್ಲಿ ಪರಸ್ಪರ ತಪ್ಪುಗ್ರಹಿಕೆಗಳನ್ನು ಹೊಂದಿರುವ ಸಾಧ್ಯತೆ ಇದೆ. ನವವಿವಾಹಿತರು ಸಂತಸದ ಸುದ್ದಿಯನ್ನು ಕೊಡುವರು. ನೀವು ಕೆಲಸದಲ್ಲಿ ಬದಲಾವಣೆಗಳನ್ನು ಗಮನಿಸಿ. ಇದು ನಿಮಗೆ ಅನುಕೂಲಕರ ಪರಿಣಾಮಗಳನ್ನು ಉಂಟುಮಾಡಬಹುದು. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಮಾನಸಿಕತೆಯಲ್ಲಿ ನೀವು ಇರುವಿರಿ. ನಿಮ್ಮ ಮೇಲೆ ವಿರೋಧಿಗಳ ಆಕ್ರಮಣವು ಆಗಬಹುದು. ಬೇಡದಿದ್ದರೂ ಸಹಾಯವು ನಿಮ್ಮ ಪಾಲಿಗೆ ಬರುವುದು.
ಮಿಥುನ ರಾಶಿ: ಬರಬೇಕಾದ ಹಣ ಕೈ ಸೇರುವವರೆಗೂ ಮೌನವಹಿಸಿ. ನಿಮ್ಮ ಬಗ್ಗೆ ಅಪರಿಚಿತರು ಪ್ರೀತಿ ತೋರಿಸಿದರೆ ಮುಜುಗರವಾಗುವುದು. ಯಾರನ್ನೇ ಆದರೂ ಅವರನ್ನು ಒಂದು ಹಂತದವರಗೆ ಮಾತ್ರ ಒಳಗೆ ಕರೆಯುವುದು ಸೂಕ್ತ. ನಿಮ್ಮ ಪ್ರಣಯ ಜೀವನವು ಉತ್ತಮವಾಗಿ ಬದಲಾಗಬಹುದು. ನಿಮ್ಮ ಪ್ರಣಯವು ಸಂಗಾತಿಯ ಜೊತೆ ಅಭಿವ್ಯಕ್ತವಾಗುವ ಸಾಧ್ಯತೆ ಇದೆ. ಪ್ರೀತಿಸುವವರಿಗೆ ಸ್ವಲ್ಪ ಸಮಯ ಕೊಡಬೇಕಾಗುವುದು. ಸುಮ್ಮನೇ ಮಾತನಾಡುವ ಚಪಲವು ಅಧಿಕವಾಗುವುದು. ನಿಮ್ಮ ಸಾಮರ್ಥ್ಯಗಳನ್ನು ಸುಧಾರಿಸಲು ಇದು ಒಂದು ಅವಕಾಶವಾಗಿರುತ್ತದೆ. ಪ್ರಯಾಣದ ಲೆಕ್ಕಾಚಾರ ತಲೆಕೆಳಗಾಗಬಹುದು. ಯಾರಾದರೂ ನಿಮಗೆ ಒಳ್ಳೆಯ ಹೊಸ ಮಾರ್ಗದರ್ಶನವನ್ನು ನೀಡಬಹುದು. ಅಧಿಕ ಅಲಂಕಾರದಿಂದ ಆಕರ್ಷಣೆ ಹೋಗಬಹುದು. ನಿಮ್ಮ ಕೌಶಲ್ಯದಿಂದಾಗಿ ನೀವು ಇಂದಿನ ದೊಡ್ಡ ಸಭೆಯನ್ನು ಉತ್ತಮವಾಗಿ ನಿರ್ವಹಿಸಬಹುದು. ವಿದೇಶಿ ಕಂಪೆನಿ ಉದ್ಯೋಗವನ್ನು ಬಯಸುವಿರಿ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು. ಹೊಂದಾಣಿಕೆಯ ಕಡೆ ನಿಮ್ಮ ಗಮನವಿರಲಿ.
ಕರ್ಕಾಟಕ ರಾಶಿ: ಜೀವನಕ್ಕೆ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳುವಿರಿ. ಇಂದು ನಿಮ್ಮ ಪ್ರೇಮವು ಸ್ನೇಹಿತರ ಮೂಲಕ ಸಫಲವಾಗುವುದು. ಕೆಲಸದ ಸ್ಥಳದಲ್ಲಿ ಹಿರಿಯರು ಮಾರ್ಗದರ್ಶನ ಪಡೆಯಿರಿ. ಸಹೋದರರ ಸಹಾಯದಿಂದ ನಿಮ್ಮ ವೃತ್ತಿಪರ ಯಶಸ್ಸಿಗೆ ಕಾರಣವಾಗುವುದು. ವಿದೇಶದಿಂದ ಆಗಮನವಾಗಲಿದ್ದು ವಾತಾವರಣದ ಹೊಂದಾಣಿಕೆ ಕಷ್ಟವಾಗುವುದು. ಹಠದಿಂದ ಯಾವ ಕಾರ್ಯವನ್ನೂ ಮಾಡಲು ಹೋಗವುದು ಬೇಡ. ತಪ್ಪಾದರೆ ಎಲ್ಲರೂ ಆಡಿಕೊಳ್ಳುವರು. ವ್ಯಾಪಾರದ ಉದ್ದೇಶಗಳಿಗಾಗಿ ವಿದೇಶ ಪ್ರವಾಸವು ಈ ದಿನ ಅನುಕೂಲಕರ. ನಿಮ್ಮ ಸಂಗಾತಿಯ ಜೊತೆ ಭಿನ್ನಾಭಿಪ್ರಾಯ, ಕೋಪ, ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗಬಹುದು. ನಿಮ್ಮ ಪಾಲುದಾರಿಕೆಯಲ್ಲಿ ನಿಮ್ಮ ಗಮನ ಅಗತ್ಯವಾಗಿ ಬೇಕು. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ವೃತ್ತಿ, ಹಣಕಾಸು ಮತ್ತು ಸಂಬಂಧಕ್ಕೆ ಬಂದಾಗ ವಿಷಯಗಳನ್ನು ಹೆಚ್ಚು ಯೋಚಿಸಬೇಡಿ. ಚಿತ್ತವೃತ್ತಿಗಳು ನಿಮ್ಮನ್ನು ಸುಮ್ಮನೆ ಇರಲು ಬಿಡದು. ಇಂದು ತಲ್ಲೀನರಾಗಿ ಎಲ್ಲ ಕಾರ್ಯವನ್ನು ಮಾಡುವಿರಿ.
ಸಿಂಹ ರಾಶಿ: ಉನ್ನತ ಸ್ಥಾನವನ್ನ ಕಳೆದುಕೊಳ್ಳುವ ಭೀತಿ ಕಾಡುವುದು. ಇಂದು ನೀವು ನಿಶ್ಚಿಂತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳುವಿರಿ. ಕುಟುಂಬದಲ್ಲಿ ನಡೆಯಲಿರುವ ವಿವಾಹ ಕಾರ್ಯದ ಓಡಾಟವಿರುವುದು. ಇಂದು ನೀವು ಉತ್ತಮ ಆರ್ಥಿಕ ಪ್ರಗತಿಯನ್ನು ಹೊಂದಿದ್ದು ನೀವು ಹೇಳಿದ ರೀತಿಯಲ್ಲಿಯೇ ಎಲ್ಲವೂ ನಡೆಯುವುದು. ನಿಮ್ಮ ಪ್ರಯತ್ನಗಳು ನಿಮ್ಮ ಆತ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಹಣದ ವ್ಯವಹಾರವು ಸಂಬಂಧವನ್ನು ದೂರ ಮಾಡುವುದು. ಕೃತಜ್ಞತೆಯು ನಿಮ್ಮ ಸ್ವಭಾವವನ್ನು ಹೇಳುತ್ತದೆ. ಸಂಯಮವನ್ನು ಕಾಪಾಡಿಕೊಳ್ಳಿ. ಒತ್ತಡವಿಲ್ಲದೆ, ನಿಮ್ಮ ಜೀವನವನ್ನು ಆನಂದಿಸಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ವಿಷಯದಲ್ಲಿ ಅನುಕೂಲಕರವಾಗಿ ಇರಲಿದೆ. ವೇಗವಾಗಿ ಹಣವನ್ನು ಗಳಿಸುವ ವಿಧಾನವನ್ನು ನೀವು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ದಾಖಲೆಗಳ ನವೀಕರಣ ವಿಚಾರದ ಕಡೆ ಗಮನ ಹೆಚ್ಚು ಇರಲಿ. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಸಾಮಾಜಿಕವಾಗಿ ಏನನ್ನಾದರೂ ಮಾಡಬೇಕು ಎಂದೆನಿಸಬಹುದು.
ಕನ್ಯಾ ರಾಶಿ: ಏನನ್ನೋ ಹುಡುಕಲು ಹೋಗಿ ಮತ್ತೇನನ್ನೋ ಪಡೆಯುವಿರಿ. ನೀವು ಇಂದು ಆಪ್ತರನ್ನೇ ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯವನ್ನು ಕೇಳಬೇಕಾಗುವುದು. ದಿನದ ಆರಂಭದಲ್ಲಿ ಗಮನಾರ್ಹ ಹಣಕಾಸಿನ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಬಹುದು. ಬಹಳ ಸಮಯ ಒಂದೆ ಕಡೆ ಕುಳಿತಿರಲಾಗದು. ಅಪರಿಚಿರ ಒಡನಾಟವು ಹೊಸ ದಿಕ್ಕಿನ ಕಡೆ ಕರೆದೊಯ್ಯುವುದು. ನಿಮ್ಮ ವೃತ್ತಿಜೀವನವು ಉತ್ತಮವಾದ ಆರಂಭವನ್ನು ಪಡೆಯಬಹುದು. ಹೊಸ ಕೆಲಸ, ಕಾರ್ಯಗಳಲ್ಲಿ ಉತ್ಸಾಹವಿರಲಿದೆ. ಇಂದು ಇರುವ ಲವಲವಿಕೆಯು ಮತ್ತು ಶಕ್ತಿಯುತವಾಗಿ ಇರಬಹುದು. ಯಾರೋ ನಿಮ್ಮನ್ನು ಆಳುವುದು ಇಷ್ಟವಾಗದು. ನಿಮ್ಮ ಶೈಕ್ಷಣಿಕ ಪ್ರಗತಿಯು ಹೆಚ್ವಲಿದೆ. ಕಾರ್ಯಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪ್ರಸ್ತುತಿ ಪಡಿಸಿ. ಇದರಿಂದ ಯೋಜನೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದು. ಬೇಕಾದಷ್ಟು ಸಂಪತ್ತಿದ್ದರೂ ಅದನ್ನು ಖರ್ಚು ಮಾಡುವ ಮನಸ್ಸು ಬಾರದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ.
ತುಲಾ ರಾಶಿ: ತಾತ್ಕಾಲಿಕವಾಗಿ ಹೊರ ಪ್ರದೇಶದಲ್ಲಿ ಇರಬೇಕಾಗುವುದು. ಇಂದು ಅವಸರದಲ್ಲಿ ಉದ್ಯೋಗದ ತೀರ್ಮಾನವನ್ನು ನೀವು ತೆಗೆದುಕೊಳ್ಳಬೇಡ. ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಹೇಳದೇ ಪರರ ವಸ್ತುವನ್ನು ಪಡೆಯುವಿರಿ. ಮಕ್ಕಳಿಂದ ನೆಮ್ಮದಿಯು ನಿಮಗೆ ಸಿಗುತಗತದೆ. ಇಂದು ವ್ಯಾಪಾರಸ್ಥರಿಗೆ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇದೆ. ನಿಮ್ಮ ಸುಧಾರಿತ ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖವನ್ನು ಉಂಟುಮಾಡುತ್ತದೆ. ನಿಮ್ಮ ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ದಿನದ ಆರಂಭದಲ್ಲಿ ನೀವು ಸ್ವಲ್ಪ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಕೃತಜ್ಞತೆಯಿಂದ ಉಪಕರಿಸಿದವರನ್ನು ನೆನಪಿಸಿಕೊಳ್ಳುವಿರಿ. ಇಂದು ನೀವು ಹೆಚ್ಚು ವಿಶ್ರಾಂತಿ ಅನುಭವಿಸಲು ಇಚ್ಛಿಸುವಿರಿ. ಇದು ನಿಮ್ಮನ್ನು ನಕಾರಾತ್ಮಕ ಭಾವನೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಲೂಬಹುದು. ಉದ್ಯೋಗದ ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ.
ವೃಶ್ಚಿಕ ರಾಶಿ: ನಿಮಗೆ ವಸ್ತುಗಳ ಮೇಲೆ ಅಧಿಕಾರಬಿದ್ದರೂ ಅದನ್ನು ಬಳಸಲಾಗದು. ಇಂದು ಸ್ನೇಹಿತರು ನಿಮಗೆ ಬೇಕಾದ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಆದಾಯವನ್ನು ಉತ್ತಮ ಮಾಡಿಕೊಳ್ಳುವಿರಿ. ಒತ್ತಡದ ತರುವ ಕೆಲಸದಿಂದ ವಿರಾಮವನ್ನು ಪಡೆಯಬೇಕಾದೀತು. ಇತ್ತೀಚಿನ ಹೂಡಿಕೆಯ ಜೊತೆ ಹಳೆಯ ಹೂಡಿಕೆಯ ಲಾಭವನ್ನು ಪಡೆಯುವಿರಿ. ವಿದೇಶದ ಉದ್ಯೋಗದಲ್ಲಿ ನಿಮಗೆ ಕಷ್ಟ ಬರುವ ಸಾಧ್ಯತೆ ಇಧೆ. ನಿಮ್ಮನ್ನು ಪರಿಚಯಿಸಿಕೊಳ್ಳಲು ನಿಮಗೆ ಮುಜುಗರವಾಗುವುದು. ಹೊಸದಾಗಿ ಕೆಲಸಕ್ಕೆ ಸೇರಿದವರು ಉತ್ತಮವಾಗಿ ಕಾರ್ಯನಿರ್ವಹಿಸಲು ಒತ್ತಡವನ್ನು ಅನುಭವಿಸಬೇಕಾದೀತು. ನಿಮ್ಮ ಕೆಲಸದ ಹೊರೆ, ಒತ್ತಡವು ನಿಮ್ಮನ್ನು ಬಹಳಷ್ಟು ಹಿಂಸೆ ಮಾಡಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮ್ಮ ಪರವಾಗಿರಬಹುದು. ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದಾಯ ಸಿಗುವುದು.
ಧನು ರಾಶಿ: ಯಾರ ಬೆಂಬಲವೂ ಅಕಾರಣವಾಗಿ ಸಿಗುವುದಿಲ್ಲ ಎಂಬುದು ಗೊತ್ತಿರಲಿ. ಇಂದು ಸಿಟ್ಟಿನ ಭರದಲ್ಲಿ ನೀವು ವಿವೇಚನೆಯನ್ನು ಕಳೆದುಕೊಳ್ಳುವ ಪ್ರಸಂಗ ಎದುರಾಗುವುದು. ಚಂಚಲ ಮನಸ್ಸಿನಿಂದ ಕಾರ್ಯವನ್ನು ಸಾಧಿಸಲಾಗದು. ನಿಮ್ಮ ಅಜ್ಞಾನದಿಂದ ನಷ್ಟವಾಗದಂತೆ ಎಚ್ಚರ ವಹಿಸಿ. ಹಿಂದಿನ ಕೆಲವು ಹಣಕಾಸಿನ ಸಮಸ್ಯೆಗಳು ಮತ್ತೆ ಕಾಣಿಸಿಕೊಳ್ಳಬಹುದು ಮತ್ತು ನಿಮ್ಮ ಗಮನವನ್ನು ಕೋರಬಹುದು. ನಿಮ್ಮ ಸಾಧನೆಯು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಬೋಧಕ ವರ್ಗದಲ್ಲಿ ಕಾರಣಾಂತರಗಳಿಂದ ಇದ್ದಕ್ಕಿದ್ದಂತೆ ಒತ್ತಡ ಬರಲಿದೆ. ಸ್ವೀಕರಿಸುವುದೂ ಕಷ್ಟವಾಗುತ್ತದೆ. ನಿಮ್ಮ ಸಾಧನೆಗೆ ಇತರರು ಮೆಚ್ಚುಗೆ ವ್ಯಕ್ತಪಡಿಸುವರು. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿವೇಕದ ಅಗತ್ಯವಿದೆ. ನಿಮ್ಮ ಮನಃಸ್ಥಿತಿಯನ್ನು ಬದಲಾಯಿಸುವ ಅತ್ಯುತ್ತಮ ತಂತ್ರವೆಂದರೆ ನಿಮ್ಮ ಶಕ್ತಿಯನ್ನು ನೀವು ಗುರುತಿಸಿಕೊಳ್ಳುವುದು. ನಿಮ್ಮ ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವಿರಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಕಳೆದುಕೊಂಡಿದ್ದನ್ನು ಹೇಗಾದರೂ ಮಾಡಿ ಪಡೆದುಕೊಳ್ಳುವಿರಿ.
ಮಕರ ರಾಶಿ: ಬಲವಾದ ನಂಬಿಕೆಯೇ ಇಂದು ನಿಮಗೆ ಚಮತ್ಕಾರ ಮೂಡಿಸುವುದು. ವ್ಯವಹಾರದಲ್ಲಿ ಮಧ್ಯವರ್ತಿಗಳಿಂದ ಕೆಲವು ತೊಂದರೆಗಳು ಎದುರಾಗುವುದು. ಕುಟುಂಬದವರ ಅನಾರೋಗ್ಯದ ಕಾಳಜಿ ಮಾಡಬೇಕಾಗುವುದು. ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಏರಿಳಿತದ ಜೊತೆ, ಅಸ್ತವ್ಯಸ್ತವಾಗಬಹುದು. ಭವಿಷ್ಯದ ಬಗ್ಗೆ ಈ ದಿನವನ್ನು ಆನಂದಿಸಲು, ನೀವು ಮೊದಲು ಜವಾಬ್ದಾರಿಗಳನ್ನು ಪೂರೈಸುವತ್ತ ಗಮನ ಹರಿಸಬೇಕು. ಸಂಗಾತಿಗೆ ನೇರವಾಗಿ ಹೇಳದೇ ಹೇಳಬೇಕಾದುದನ್ನು ಹೇಳುವಿರಿ. ಜೊತೆಗೆ, ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ತಾಳ್ಮೆಯ ಬಗ್ಗೆ ನಿಮಗೆ ನಿರಂತರ ಉಪದೇಶ ಬೇಕಾಗುವುದು. ಆರ್ಥಿಕವಾಗಿ ಸಂಬಂಧಿಸಿದಂತೆ ನಿರೀಕ್ಷಿತ ಲಾಭ ಮತ್ತು ಉಳಿತಾಯವನ್ನು ಕಾಣಬಹುದು. ಕೆಲವು ಸವಾಲುಗಳು ಉದ್ಭವಿಸಬಹುದು. ನಿಮ್ಮ ವಿವಾಹವು ಕಾನೂನು ವಿವಾದದ ವಿಷಯವಾಗಿದ್ದರೆ, ಅದು ಕೊನೆಗೊಳ್ಳುವ ಸಾಧ್ಯತೆಯಿದೆ. ಪ್ರಯೋಗ ವಿಭಾಗದಲ್ಲಿ ಕೆಲಸ ಮಾಡುವರು. ನೀವು ಏನು ಎಂದು ನಿಮಗೆ ಗೊತ್ತಿರಲಿ.
ಕುಂಭ ರಾಶಿ: ನಿಮ್ಮ ಎದುರಿಗೆ ಯಾರೂ ಬರುವುದನ್ನು ಇಷ್ಟಪಡಲಾರಿರಿ. ಹೂಡಿಕೆಯ ಕಾರಣದಿಂದ ನಿಮ್ಮ ಖರ್ಚನ್ನು ಆದಾಯವಾಗಿ ಪರಿವರ್ತಿಸಲು ಮಾಡಿಕೊಳ್ಳುವಿರಿ. ಹಳೆಯ ರೋಗವು ಮರುಕಳಿಸಬಹುದು. ನಿಮ್ಮ ಹಾಗೂ ಸಂಗಾತಿಯ ನಡುವೆ ಉತ್ತಮ ಸಂಬಂಧಗಳು ಇರಲಿದೆ. ನಿಂದನೆಯನ್ನು ಅತಿಯಾಗಿ ಸಹಿಸುವಿಕೆ ನಿಮ್ಮಲ್ಲಿ ಇರದು. ನಿಮ್ಮ ಸಂವಹನಕ್ಕೆ ವಿವಿಧ ಮಾರ್ಗಗಳನ್ನು ಹುಡುಕುವಿರಿ. ಒಳ್ಳೆಯ ಸಮಯವನ್ನು ಒಟ್ಟಿಗೆ ಕಳೆಯಿರಿ ಮತ್ತು ಪರಸ್ಪರರ ಭಾವನೆಗಳನ್ನು ಗ್ರಹಿಸಲು ಪ್ರಯತ್ನಿಸಿ. ಶೈಕ್ಷಣಿಕ ಉದ್ದೇಶಗಳನ್ನು ಸಾಧಿಸಲು ವಿದ್ಯಾರ್ಥಿಗಳು ಸಾಕಷ್ಟು ಪ್ರಯತ್ನಿಸುವರು. ನೀವು ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವಿರಿ. ಉದ್ಯಮದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು, ವ್ಯಾಪಾರದ ವಿಸ್ತರಣೆಯನ್ನು ಮಾಡುವಿರಿ. ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲಿತಾಂಶವನ್ನು ಕಾರಣವಾಗಬಹುದು. ದುಸ್ಸಾಹಸಕ್ಕೆ ಹೋಗಿ ಕೈ ಸುಟ್ಟುಕೊಳ್ಳುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು.
ಮೀನ ರಾಶಿ: ಆರ್ಥಿಕ ಸಬಲತೆಯೇ ಇಂದಿನ ಮೂಲ ಚಿಂತನೆಯಾಗಿದ್ದು ಅದನ್ನು ಹೆಚ್ಚಿಸುವ ಕುರಿತು ಪ್ರಯತ್ನ ಸಾಗುವುದು. ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೇ ಇಂದು ಬೇಸರವಾಗಬಹುದು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೀವು ಸರಿಯಾದ ವಿಧಾನವನ್ನು ಆಯ್ಕೆ ಮಾಡುವಿರಿ. ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು, ನೀವು ಉಪಕ್ರಮವನ್ನು ತೆಗೆದುಕೊಳ್ಳಬಹುದು. ನಿರುತ್ಸಾಹ ನಿಮ್ಮೊಳಗೆ ಬಾರದಂತೆ ನೊಕಡಿಕೊಳ್ಳಿ. ದಿನದ ಕೊನೆಯಲ್ಲಿ ಅನುಕೂಲಕರ ವಾತಾವರಣದಿಂದ ನೀವು ಆರ್ಥಿಕವಾಗಿ ಲಾಭ ಪಡೆಯಬಹುದು. ಶಿಕ್ಷಣದಿಂದ ನೀವು ಯಶಸ್ಸು ಗಳಿಸುವಿರಿ. ನಿಮ್ಮ ಸಂಗಾತಿಗೆ ಸ್ವಲ್ಪ ಹೆಚ್ಚಿನ ಗಮನ, ಪ್ರೀತಿ ನೀಡಿದರೆ ನಿಮ್ಮ ಪ್ರೀತಿಯ ಜೀವನವು ಉತ್ತಮವಾಗಿರುವುದು. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ಎಲ್ಲ ಕಾರ್ಯದಲ್ಲಿಯೂ ಶ್ರದ್ಧೆಯು ಕಡಿಮೆಯಾಗುವುದು. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮಗೆ ಆತ್ಮತೃಪ್ತಿಯು ಇರುವುದು. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ನಿಮ್ಮನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)




