Horoscope Today 20 November: ಇಂದು ಈ ರಾಶಿಯವರು ದಾಂಪತ್ಯದಲ್ಲಿ ತಾಳ್ಮೆ ಕಳೆದುಕೊಳ್ಳುವರು

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ ಶುಕ್ರವಾರದಂದು ವಿವಾಹ ಸಂಭ್ರಮ, ಅಸಭ್ಯವರ್ತನೆ, ನಿಧಾನ ಕಾರ್ಯ, ಪುರುಷ ಪ್ರಯತ್ನ, ದಾಂಪತ್ಯದಲ್ಲಿ ಸುಖ, ಅಧ್ಯಯನದಲ್ಲಿ ಚುರುಕು, ಸೃಜನಾತ್ಮಕತೆ, ಉದ್ಯೋಗ ಪ್ರಾಪ್ತಿಗೆ ಪ್ರಯತ್ನ, ಯೋಜನೆಯಿಂದ ಕೀರ್ತಿ ಇವೆಲ್ಲ ಇಂದಿನ ವಿಶೇಷ.

Horoscope Today 20 November: ಇಂದು ಈ ರಾಶಿಯವರು ದಾಂಪತ್ಯದಲ್ಲಿ ತಾಳ್ಮೆ ಕಳೆದುಕೊಳ್ಳುವರು
ದಿನ ಭವಿಷ್ಯ
Edited By:

Updated on: Nov 20, 2026 | 1:06 AM

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಅನುರಾಧಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ವ್ಯಾಘಾತ, ಕರಣ : ವಣಿಜ, ಸೂರ್ಯೋದಯ – 06 – 21 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:39 – 12:05, ಯಮಗಂಡ ಕಾಲ 14:57 – 16:23, ಗುಳಿಕ ಕಾಲ 07:47 – 09:13.

ಮೇಷ ರಾಶಿ: ಯಾವುದನ್ನೇ ಒಪ್ಪಿಕೊಳ್ಳುವುದಾದರೂ ನಿಮಗೆ ಬಲವಾದ ಕಾರಣ ಬೇಕಾಗುತ್ತದೆ. ಇಂದು ನಿಮ್ಮ ವ್ಯಾಪಾರದಲ್ಲಿ ಕಠಿಣ ಶ್ರಮವಿದ್ದೂ ಕಡಿಮೆ ಲಾಭವನ್ನು ಪಡೆಯಬೇಕಾಗುವುದು. ಇಂದಿನ ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ.‌ ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಆಧ್ಯಾತ್ಮಿಕ ಚಟುವಟಿಕೆ ಮನಃಶಾಂತಿ ತರುತ್ತದೆ. ಏನಾದರೂ ಸಹಾಯವನ್ನು ನಿಮ್ಮ ಬಳಿ ಪರಿಚಿತರು ಕೇಳಿಬರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ.

Loading...

ವೃಷಭ ರಾಶಿ: ಮನೆಯ ಕಾರ್ಯಕ್ಕೆ ಅಗತ್ಯವಿರುವ ಪದಾರ್ಥಗಳನ್ನು ಖರೀದಿಸುವಿರಿ.‌ ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ನಿಮಗಾಗಿ ಕಾಯುವವರಿಗೆ ಬೇಸರ ತರಿಸಬಹುದು. ಮಧುರ ಮಾತಿನಿಂದ ಪರಿಹಾರ ಸಾಧ್ಯ. ದೂರಾಲೋಚನೆಯು ವಾಸ್ತವಕ್ಕೆ ಹತ್ತಿರವಾಗಿ ಇಲ್ಲ.

ಮಿಥುನ ರಾಶಿ: ನೀವು ಮನೆಯ ಹಿರಿಯರಿಗೆ ಗೌರವ ತರುವ ಕಾರ್ಯವನ್ನು ಮಾಡುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಒಬ್ಬರಿಗೆ ಸಹಾಯ ಮಾಡಿದರೆ ಮತ್ತೊಬ್ಬರಿಗೆ ತೊಂದರೆ. ಆರೋಗ್ಯ ವಿಚಲಿತವಾಗದಂತೆ ನೋಡಿಕೊಳ್ಳಿ. ಪರಸ್ಪರ ದುಃಖವನ್ನು ಹಂಚಿಕೊಂಡು ದಂಪತಿಗಳು ಹಗುರಾಗುವುದು. ವಾಹನ ವ್ಯವಸ್ಥೆಯಿಂದ ಅನನಕೂಲವಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ: ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ಕೆಲಸದಲ್ಲಿ ಸ್ವಲ್ಪ ಒತ್ತಡ ಇದ್ದರೂ, ದಿನಾಂತ್ಯದಲ್ಲಿ ಸುಧಾರಣೆ. ಸಂಬಂಧಗಳಲ್ಲಿ ಸೌಹಾರ್ದ. ಇನ್ನೊಬ್ಬರ‌ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಮೆಚ್ಚುಗೆಯಾಗಲಿದೆ.

ಸಿಂಹ ರಾಶಿ: ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲಾಗದೇ ಬೇಸರವಾವುವುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಹಣದ ಉಳಿತಾಯಕ್ಕೆ ಉಪಾಯದ ಅಗತ್ಯವು ಕಾಣಿಸಿಕೊಳ್ಳುವುದು. ನಿರ್ಧಾರಗಳಲ್ಲಿ ವಿಳಂಬ ಮಾಡದಿರಿ. ಕೆಲಸದಲ್ಲಿ ಹೊಸ ಅವಕಾಶಗಳ ಸುಳಿವು ಸಿಗುವುದು. ಅಧ್ಯಯನದಲ್ಲಿ ಚುರುಕುತನ ಬೇಕು.

ಕನ್ಯಾ ರಾಶಿ: ಇಂದು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಬೆಂಕಿಯ ಸಣ್ಣ ಕಿಡಿಯಾದರೂ ಅದು ಇರುವಲ್ಲಿಯೇ ಇರಬೇಕು. ನಿಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನೀವು ಯೋಚಿಸುತ್ತಿದ್ದರೆ ಯಶಸ್ವಿಯಾಗುವಿರಿ. ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರುವುದು ಇಷ್ಟವಾಗದು. ಅಧಿಕಾರಿಗಳ ವರ್ಗದಿಂದ ಗೌರವ ಸಿಗಬಹುದು.‌ ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗದು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.

ತುಲಾ ರಾಶಿ: ಮುಂದೆ ಬರುವ ಅವಕಾಶಕ್ಕೆ ಈಗಲೇ ಉದ್ಯೋಗವನ್ನು ಕೈಚೆಲ್ಲಿ ಕುಳಿತಿರುವುದು ಮೂರ್ಖತನವಾದೊಇತು. ವ್ಯಾವಹಾರಿಕ ಒಪ್ಪಂದವು ಕೊನೆಯ ಹಂತದಲ್ಲಿ ಇದ್ದು ಕೆಲವು ಅಸಮಾಧಾನಕರ ಮಾತನ್ನು ಕೇಳಬೇಕಾದೀತು. ನ್ಯಾಯಾಲಯದ ಮಾತಿಗೆ ನೀವು ತಲೆ ಬಾಗುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು.

ವೃಶ್ಚಿಕ ರಾಶಿ: ಸುಪ್ತಪ್ರಜ್ಞೆಯು ಮುಂದಾಗುವುದನ್ನು ತಿಳಿಸುವುದು. ಉದ್ವೇಗದ ಸಂದರ್ಭದಲ್ಲಿ ಕಳವಳಗೊಂಡರೆ ಇನ್ನಷ್ಟು ಅಧ್ವಾನವಾಗಬಹುದು. ಇಂದು ನೀವು ಕೆಲಸವನ್ನು ಮಾಡಲು ಪ್ರಯತ್ನಿಸಿದರೂ ಪೂರ್ಣವಾಗದು. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಂಶೋಧನೆಗೆ ನಿರ್ದಿಷ್ಟ ಗುರಿಯ ಅವಶ್ಯಕತೆ ಇರಲಿದೆ.

ಧನು ರಾಶಿ: ನಿಮಗೆ ಹಳೆಯ ಜವಾಬ್ದಾರಿಯ ಪದವಿಯೇ ಸಿಗಲಿದೆ. ಒತ್ತಡದಿಂದ ಹೊರಬರಲು ಮಾರ್ಗವು ಸಿಗಲಿದೆ. ಇಂದು ನಿಮ್ಮ ಸಂಗಾತಿಯನ್ನು ಖರೀದಿಗೆ ಕರೆದೊಯ್ಯುವಿರಿ. ಯಾರೋ ಮಾಡಿದ ಸಾಲವು ನಿಮಗೆ ಶೂಲವಾಗಬಹುದು. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ.‌ ಹೆಣ್ಣು ಮಕ್ಕಳು ತಾಯಿಯಿಂದ ಲಾಭವನ್ನು ಪಡೆಯುವರು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವ ಅಭ್ಯಾಸ ಬೇಡ.‌

ಮಕರ ರಾಶಿ: ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಯಾರಿಗೋ ನಿಮ್ಮಿಂದ ಹಣವು ಕೈತಪ್ಪಿ ಹೋಗಬಹುದು. ಹೊಸ ಪರಿಚಯದಿಂದ ಉಪಯೋಗವಾಗಲಿದೆ. ಆದರೆ ಅತಿಯಾದ ಸಂಭಾಷಣೆ ಕಲಹವಾಗಬಹುದು. ಇಂದು ಸಂಗಾತಿಯ ಪ್ರೀತಿಯಿಂದ ವಂಚಿತರಾಗುವಿರಿ.

ಕುಂಭ ರಾಶಿ: ರಾಜಕಾರಣಿಗಳಿಗೆ ಇತರರಿಂದ ತೊಳಲಾಟವು ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ಕುಟುಂಬದ ನೇರ ಮಾತುಗಳು ನಿಮಗೆ ಸಹಿಸಲು ಶಕ್ಯವಾಹದೇ ಬೇಸರಿಸುವಿರಿ. ಊಹಿಸಿದಷ್ಟು ಮಾರ್ದವವು ಸಂಗಾತಿಯ ಸ್ವಭಾವದಲ್ಲಿ ಇರದು. ಕುಟುಂಬದಲ್ಲಿ ಹಿತಕರ ಮಾತುಗಳು ಸಂತೋಷ ತರುತ್ತವೆ. ಕೆಲಸದಲ್ಲಿ ನಿಧಾನವಾದರೂ ಸ್ಥಿರತೆ ಉಳಿದುಕೊಳ್ಳುವುದು.

ಮೀನ ರಾಶಿ: ಇಂದು ಕ್ರೀಡೆಗಳು ನಿಮ್ಮ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮವನ್ನು ಕೊಡುವುದು. ನಿಮಗೆ ಸಂಬಂಧಿಸದ ವಿಚಾರಕ್ಕೆ ನೀವು ಮಧ್ಯ ಪ್ರವೇಶ ಮಾಡುವುದು ಬೇಡ.‌ ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವುದು ಉಚಿತ. ಪ್ರಯಾಣದ ಆಯಾಸವು ವಿಶ್ರಾಂತಿಯಿಂದ ದೂರಾಗುವುದು.

ಲೋಹಿತ್ ಹೆಬ್ಬಾರ್-8762924271 (what’s app only)

Published On - 1:05 am, Fri, 20 November 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us