ಹೂಡಿಕೆ ಮಾಡುವ ಮೊದಲು ಆಳವಾಗಿ ಪರಿಶೀಲಿಸಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ ಬುಧವಾರ ನಯವಂಚಕತೆ, ಸಂಗಾತಿಯ ಭಿನ್ನಮತ, ಉದ್ಯಮದ ವಿಸ್ತಾರ, ಪರಸ್ಪರ ನಿಂದನೆ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ : ಆಯುಷ್ಮಾನ್, ಕರಣ: ಶಕುನಿ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 03 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ12:35 – 14:12, ಯಮಘಂಡ ಕಾಲ 07:44 – 09:21, ಗುಳಿಕ ಕಾಲ 10:58 – 12:35
ಮೇಷ ರಾಶಿ: ನಯವಾದ ಮಾತುಗಳು ವ್ಯಾಪಾರದಲ್ಲಿ ಸಹಜ. ಇಂದು ನಿಮಗೆ ಗೊತ್ತಿಲ್ಲದೇ ಸುಕೃತವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ಸೇರಿಸುವುದು. ಕೆಲವೇ ಕೆಲವು ಮಿತ್ರರ ಬಳಗವನ್ನು ಹೊಂದಿರುವಿರಿ. ನಿಮಗೆ ಎಂದು ಯಾರ ಬಳಿಯೂ ಏನನ್ನೂ ಹೇಳಬೇಕು ಎಂದು ಅನ್ನಿಸದಿರಬಹುದು. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ. ಹೂಡಿಕೆ ಮಾಡುವ ಮೊದಲು ಆಳವಾಗಿ ಪರಿಶೀಲಿಸಿ. ಸಂಗಾತಿಯ ಮಾತನ್ನು ಉಳಿಸಿಕೊಳ್ಳುವಿರಿ. ಕೆಲಸ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡುವುದು ಉತ್ತಮ. ವೈಯಕ್ತಿಕ ಜೀವನವನ್ನು ಕೆಲವರು ಅನುಸರಿಸಲು ಇಷ್ಟಪಡಬಹುದು. ನೀವಂದಕೊಂಡಿದ್ದೇ ಸತ್ಯ ಎಂಬುದನ್ನು ಬಿಟ್ಟು ಸಂತೋಷದದಿಂದ ಮಾತನಾಡಿ. ನಗುಮುಖವು ನಿಮ್ಮನ್ನು ಮತ್ತಷ್ಟು ಆಪ್ತವಾಗಿಸೀತು. ಪ್ರಾಮಾಣಿಕವಾದ ಪ್ರಯತ್ನವು ಇರಲಿ. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ. ಫಲವೂ ಉತ್ತಮವಾದುದೇ ಸಿಗುವುದು. ಹೆಚ್ಚಿನ ನೀರಿಕ್ಷೆಯನ್ನು ಮಾಡಿ ಕೊರಗಬೇಡಿ ಆನಂತರದ ಜೀವನದಲ್ಲಿ. ನೀವು ಯಾರಿಂದಲೂ ಸಲಹೆಯನ್ನು ಪಡೆಯಲು ಇಷ್ಟಪಡುವುದಿಲ್ಲ.
ವೃಷಭ ರಾಶಿ: ಕಾಲಕ್ಕೆ ತಕ್ಕಂತೆ ಯೋಗ್ಯವಾದ ಪರಿವರ್ತನೆ ಅವಶ್ಯಕ. ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ. ಅತಿಯಾದ ಪ್ರಯಾಣದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಎಲ್ಲ ಹಾದಿಗಳೂ ನಿಮ್ಮದೇ ಆಗಿದ್ದರೂ ಒಂದು ಹಾದಿಯಲ್ಲಿ ಮಾತ್ರ ನಡೆಯಲು ಸಾಧ್ಯ. ನಿಮ್ಮ ಚೈತನ್ಯವನ್ನು ಸದ್ವಿನಿಯೋಗಿಸಿ. ಖರ್ಚುಗಳನ್ನು ನಿಯಂತ್ರಿಸಿ ಮತ್ತು ಮನೆಯ ಸುಧಾರಣೆಯ ಬಗ್ಗೆ ಯೋಚಿಸಿ. ವೈವಾಹಿಕ ಜೀವನದಲ್ಲಿ ಅಸಾಧಾರಣ ಕ್ಷಣಗಳಾಗಲಿದ್ದು, ಪ್ರೀತಿಪಾತ್ರರಿಗೆ ಅಗತ್ಯವಾದ ಸಮಯವನ್ನು ನೀಡಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಬಂಧುಗಳ ನಡುವೆ ಭಿನ್ನಾಭಿಪ್ರಾಯವು ಬರಲಿದೆ. ಬರುವ ಹಣದ ನಿರೀಕ್ಷೆಯಲ್ಲಿ ಇರುವುದು ಬೇಡ. ನಿಮ್ಮವರ ಆರೋಗ್ಯದ ಬಗ್ಗೆ ಗಮನಕೊಡುವಿರಿ. ರಾಜಕೀಯಕ್ಕೆ ಪ್ರವೇಶಿಸಬೇಕು ಎನ್ನುವ ಹಂಬಲ ಪೂರ್ಣವಾಗದೇ ಇರಬಹುದು. ಸಕಾರಾತ್ಮಕ ಚಿಂತನೆಯನ್ನು ಮಾಡಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ.
ಮಿಥುನ ರಾಶಿ: ರಪ್ತಿನ ಮಾತುಕತೆಗಳು ಕೈಗೂಡಲಿದ್ದು, ಉದ್ಯೋಗವು ವಿಸ್ತೃತವಾಗಲಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ನಿಮ್ಮ ಎಂದಿನ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ನಿಮಗೆ ಯಾರಿಂದಲಾದರೂ ಕೆಲಸವಾಗಬೇಕಿದ್ದರೆ ಪ್ರೀತಿಯಿಂದ ಹೇಳಿ, ಅನಾಯಾಸವಾಗಿ ಆಗುವುದು. ಸ್ನೇಹಿತರ ಭೇಟಿ ಉತ್ಸಾಹಭರಿತವಾಗಿದ್ದು, ಯುವಕರು ಶೈಕ್ಷಣಿಕ ಸಲಹೆ ಪಡೆಯಬಹುದು. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವಾಗ ಗೊಂದಲಗಳು ತಲೆದೋರುವ ಸಾಧ್ಯತೆ ಇದೆ. ನೀವಿಂದು ನಿಮ್ಮ ಗುರುಗಳನ್ನು ಕಾಣಬೇಕೆನಿಸಿ ಅವರನ್ನು ಭೇಟಿಯಾಗಲು ಇಚ್ಛಿಸುವಿರಿ. ಕೆಲಸಗಳನ್ನು ನಿರಾಸಕ್ತಿಯಿಂದ ಮಾಡಬೇಡಿ. ಪಾಲುದಾರಿಕೆ ನಿಮಗೆ ಸರಿಯಾಗದು. ಸಮಾಜದ ಬಗ್ಗೆ ಚಿಂತಕರಾಗಿದ್ದರೆ ಅತಿಥಿಯಾಗಿ ನೀವು ಇರುವಿರಿ. ಒತ್ತಾಯಕ್ಕೆ ನೀವು ಕಾರ್ಯವನ್ನು ಮಾಡಬೇಕಾಗುವುದು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.
ಕರ್ಕಾಟಕ ರಾಶಿ: ಸಂಗಾತಿಯ ಮಾತು ಭಿನ್ನಮತವೆನಿಸಿದರೂ ಸತ್ಯವೆಂದು ಅನಂತರ ಗೊತ್ತಾಗುವುದು. ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿಹರೊಯವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಸಂಬಂಧಗಳಿಗಿಂತ ಹೆಚ್ಚಿನ ಪ್ರಾಶಸ್ತ್ರ ನೀಡಬಾರದು. ಪ್ರೀತಿಪಾತ್ರರಿಂದ ವಿಶೇಷ ಆಶ್ಚರ್ಯ ಸಿಗಬಹುದು. ಇದರಿಂದ ನಿಮ್ಮ ದಿನ ಹತ್ತಿರದವರ ಸಮ್ಮುಖದಲ್ಲಿ ಸಂತೋಷವಿರಲಿದೆ. ಯಾರದೋ ಕಾರ್ಯವನ್ನು ನಿಮ್ಮದೆಂದು ಬಿಂಬಿಸುವುದು ಬೇಡ. ಸರ್ಕಾರದಿಂದ ಲಾಭವನ್ನು ಪಡೆಯದೇ ಸ್ವಂತವಾಗಿ ಉದ್ಯೋಗವನ್ನು ನಡೆಸುತ್ತೇನೆಂಬ ನಿರ್ಧಾರ ಮಾಡಲಿದ್ದೀರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ, ಹಣವನ್ನು ಖಾಲಿ ಮಾಡುವಿರಿ. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ.
ಸಿಂಹ ರಾಶಿ: ಇನ್ನೊಬ್ಬರಿಗಾಗಿ ಸಾಲವನ್ನು ಒಡೆಯುವಿರಿ. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಇನ್ನೊಬ್ಬರನ್ನು ಗೌರವಿಸುವ ಅಭ್ಯಾಸದಿಂದ ನಿಮಗೆ ಶ್ರೇಷ್ಠವಾದ ಮಾರ್ಗವು ತೆರೆದುಕೊಳ್ಳಬಹುದು. ಸಂಶಯಾಸ್ಪದ ವ್ಯಕ್ತಿಗಳಿಂದ ದೂರವಿರಿ. ಪ್ರಾಣಿಗಳ ಜೊತೆ ಒಡನಾಟ ಜಾಸ್ತಿಯಾಗಿರುವುದು. ಪ್ರೀತಿಯನ್ನು ಹೊಸ ರೀತಿಯಲ್ಲಿ ಅನುಭವಿಸಲು ಆಪ್ತರ ಭೇಟಿಯ ಅವಕಾಶ ದೊರೆಯುತ್ತದೆ. ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥವಾಗಬಹುದು. ವಾಹನ ಚಾಲನೆ ವೇಳೆ ಆತುರ ಬೇಡ. ಖರ್ಚು ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಪ್ರಪಂಚದಲ್ಲಿ ಹೆಚ್ಚು ಪ್ರಗತಿ ಕಾಣುವಿರಿ. ಇಂದು ನಿಮ್ಮ ದೃಷ್ಟಿಯಲ್ಲಿ ಎಲ್ಲರೂ ತಪ್ಪಿತಸ್ಥರೇ. ನಿಮ್ಮ ವಿದ್ಯಾಭ್ಯಾಸ ಮಟ್ಟ ಬಹಳ ಕೆಳಗಿದೆ ಎಂದು ಮನವರಿಕೆ ಆಗುವುದು. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದರೆ, ಇಂದು ನಿಮಗೆ ಅದೃಷ್ಟವನ್ನು ತರಬಹುದು. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ.
ಕನ್ಯಾ ರಾಶಿ: ಪರಸ್ಪರ ಅಪವಾದದಿಂದ ಕಲಹ. ಮನಸ್ತಾಪದಿಂದ ಸರ್ವ ಕಾರ್ಯವೂ ನಾಶ. ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಆರ್ಥಿಕ ಸ್ಥಿತಿ ಸುಧಾರಿಸಿದರೂ ಖರ್ಚುಗಳ ಮೇಲೆ ನಿಯಂತ್ರಣ ಅಗತ್ಯ. ಪ್ರೇಮಜೀವನದಲ್ಲಿ ಹೊಸ ಉತ್ಸಾಹ ದೊರೆಯುತ್ತಿದ್ದು, ಸಂಗಾತಿಯೊಂದಿಗೆ ವಿಶೇಷ ಕ್ಷಣಗಳನ್ನು ಅನುಭವಿಸುವ ಅವಕಾಶ ಸಿಗಲಿದೆ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದರೂ ಖರ್ಚು ಅದನ್ನು ಮೀರಿರುತ್ತದೆ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಇತರರು ಸೋಲಬಹುದು. ಕೃಷಿಯಲ್ಲಿ ಬದಲಾವಣೆಯನ್ನು ಮಾಡಲು ಆಲೋಚಿಸುವಿರಿ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಸಾಹಿತ್ಯಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು.




