Horoscope Today 28 August : ಇಂದು ಈ ರಾಶಿಯವರಲ್ಲಿ ಹಣಕಾಸಿನ ವಿಚಾರದಲ್ಲಿ ವಿಶ್ವಾಸ ವೃದ್ಧಿಯಾಗಲಿದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ ಗುರುವಾರ ಹಿರಿಯರ ಹಠ, ಮಾತಿನಿಂದ ಹಣೆಪಟ್ಟಿ, ದುರ್ಗಮ ಮಾರ್ಗದಲ್ಲಿ ಪ್ರಯಾಣ, ರಹಸ್ಯ ಭೇದನ, ವ್ಯವಹಾರ ಭಾರ, ಸಂಗಾತಿಗೆ ಸಹಾಯ ಇವೆಲ್ಲ ಇಂದಿನ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಪಂಚಮೀ ನಿತ್ಯನಕ್ಷತ್ರ : ಸ್ವಾತಿ, ಯೋಗ : ಸಿದ್ಧ, ಕರಣ : ಬವ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:07 – 15:40, ಗುಳಿಕ ಕಾಲ 09:28 – 11:01 ಯಮಗಂಡ ಕಾಲ 06:21 – 07:55
ಈ ದಿನವನ್ನು ಇಲಿ ಪಂಚಮಿ ಎಂದೂ ಕರೆಯುವ ರೂಢಿ. ಗಣಪತಿ ವಾಹನವನ್ನೂ ಪೂಜಿಸುವ ಸಂಪ್ರದಾಯ ಕೆಲವೆಡೆ ಇದೆ. ಇಲಿಯನ್ನು ವಿಘ್ನ ಎಂಬುದಾಗಿ ಕರೆದು ಅದನ್ನು ಏರಿ ನಿಲ್ಲುವವನು, ಬರುವವನು ಗಣಪತಿ. ವಿಘ್ನಗಳನ್ನು ತಡೆಯುವವನು. ವಿಘ್ನಗಳು ಬಾರದೇ ಇರಲಿ ಎಂಬುದಕ್ಕೆ ಈ ದಿನವನ್ನೂ ಆಚರಿಸುವರು. ಎಲ್ಲ ಕಾರ್ಯಗಳಿಗೂ ನಿರ್ವಿಘ್ನತೆಯನ್ನು ಹರಸಲಿ.
ಮೇಷ ರಾಶಿ :
ನಿಮ್ಮ ವಸ್ತುಗಳನ್ನು ಬೇರೆಯವರ ಉಪಯೋಗಕ್ಕೆ ಕೊಡಲಾರಿರಿ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ಬೇಡದ ವಿಚಾರಕ್ಕೆ ಮೂಗು ತೂರಿಸುವುದು ಬೇಡ. ನಿಮ್ಮ ಯೋಜನೆಗೆ ಹೊಂದಿಕೆಯಾಗುವಂತಹ ವ್ಯಕ್ತಿಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚಿನ ಚರ್ಚೆಗಳನ್ನು ಮಾಡುವಿರಿ. ಆಪ್ತರ ಸಣ್ಣ ಬದಲಾವಣೆಯೂ ನಿಮಗೆ ಸಹಿಸಲು ಕಷ್ಟವಾದೀತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವರು. ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿ. ಸಿಟ್ಟುಗೊಳ್ಳದೇ ತಾಳ್ಮೆಯಿಂದ ಕಾರ್ಯವನ್ನು ಸವಾಲನ್ನು ಎದುರಿಸುವ ಕಲೆ ಗೊತ್ತಿದೆ. ನಿಮ್ಮ ಆರೋಗ್ಯದ ಸುಧಾರಣೆ ಬಹಳ ದುಬಾರಿಯಾಗಲಿದೆ. ಅನೇಕ ದಿನಗಳಿಂದ ಮಾಡಬೇಕು ಎಂದುಕೊಂಡ ಕೆಲಸವನ್ನು ನೀವು ಆರಂಭಿಸುವಿರಿ. ದಾಂಪತ್ಯದಲ್ಲಿ ಸುಖವಾಗಿರಲು ಎಲ್ಲಿಗಾದರೂ ಹೋಗಿಬರುವುದು ಉತ್ತಮ.
ವೃಷಭ ರಾಶಿ :
ಇಂದಿನ ನಿಮ್ಮ ಉಡುಗೆಯು ಅನೇಕರಿಂದ ಪ್ರಶಂಸೆಗೆ ಕಾರಣವಾಗಲಿದೆ. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ವಿಷಯ ಹಳೆಯದಾದರೂ ನಿಮ್ಮ ಬುದ್ಧಿಗೆ ಕೆಲಸವು ಸಾಕಷ್ಟು ಸಿಗುತ್ತದೆ. ಇಂದು ನೀವು ಕೆಲಸದಿಂದ ವಿಶ್ರಾಂತಿ ಪಡೆಯುವಿರಿ. ಮಕ್ಕಳು ನಿಮ್ಮ ಕೆಲಸಗಳನ್ನು ಮಾಡಿಕೊಡುವರು. ಯಾರ ಋಣವನ್ನೂ ಇಟ್ಟುಕೊಳ್ಳಲು ಬಯಸಲಾರಿರಿ. ನಿಮ್ಮ ವಿವಾಹವನ್ನು ಮಾಡಿಸಲು ಬಂಧುಗಳು ಮಾಡಿದ ಪ್ರಯತ್ನವು ನಿಷ್ಪ್ರಯೋಜಕವಾದೀತು. ಕಡಿಮೆ ಶ್ರಮದಿಂದ ಇಂದಿನ ಅನೇಕ ಕಾರ್ಯಗಳನ್ನು ಮಾಡುವಿರಿ. ರಾಜಕಾರಣದಲ್ಲಿ ನಿಮ್ಮ ಪ್ರಭಾವ ಕಡಿಮೆಯಾದೀತು. ಇಂದು ಯಾರನ್ನೂ ಬೇಗನೆ ನಂಬಲಾರಿರಿ. ಸಂಪತ್ತಿಗಾಗಿ ದುರ್ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ. ಎಷ್ಟೋ ವಿಚಾರಗಳಿಗೆ ನೀವು ನಕಾರಾತ್ಮಕ ಪ್ರತಿಕ್ರಿಯೆ ನೀಡುವಿರಿ. ಕೆಲವು ಸಂದರ್ಭದಲ್ಲಿ ಸುಮ್ಮನಿರುವುದೇ ಲೇಸು ಎಂದು ಅರಿವಾಗುವುದು. ಅವರೂ ನಿಮ್ಮ ಯಶಸ್ಸಿನ ಪಾಲುದಾರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯಾರಾದರೂ ನಿಮ್ಮ ಗುಟ್ಟನ್ನು ಹೊರಹಾಕಬಹುದು. ನಿಮ್ಮ ರಹಸ್ಯವನ್ನು ಯಾರು ಎಷ್ಟೇ ಪ್ರಯತ್ನಿಸಿದರೂ ಬಿಟ್ಟುಕೊಡಲಾರಿರಿ.
ಮಿಥುನ ರಾಶಿ :
ಕೆಲವು ಮಾತುಗಳಿಂದ ಯಾರಿಗೂ ಲೇಬಲ್ ಹಚ್ಚಿಬಿಡುವುದು ಬೇಡ. ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ನಿಮ್ಮ ದೃಷ್ಟಿ ಬದಲಾದರೆ ಎಲ್ಲವೂ ತಾನಾಗಿಯೇ ಬದಲಾಗುತ್ತದೆ. ಇಂದು ನೀವು ಸಣ್ಣ ವಿಚಾರವೆಂದು ಕಡೆಗಣಿಸಿದ್ದು ದೊಡ್ಡದಾಗಬಹುದು. ಸರಳವಿಧಾನವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ನಿಮ್ಮನ್ನು ಮೇಲೆತ್ತಿದವರಿಗೆ ನಿಮ್ಮನ್ನು ತಡೆದುಕೊಳ್ಳುವ ಶಕ್ತಿಯಿಲ್ಲದಿದ್ದರೆ, ಕೆಳಗೆ ಬೀಳಿಸಬಹುದು. ಇಂದಿನ ಹಣದ ಅವಶ್ಯಕತೆಯನ್ನು ಸಹೋದರನ ಮೂಲಕ ಪೂರೈಸಿಕೊಳ್ಳುವಿರಿ. ಆಸ್ತಿಯ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಬೇಕಾದೀತು. ನಿಮ್ಮ ಇಂದಿನ ವರ್ತನೆಗಳೇ ನೀವು ಯಾರೆಂದು ತಿಳಿಸುತ್ತದೆ. ಸರ್ಕಾರಿ ಕೆಲಸಗಳನ್ನು ಹಣದ ಮೂಲಕ ಬೇಗ ಮಾಡಿಸಿಕೊಳ್ಳುವಿರಿ. ಮಾತುಗಾರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಅವರು ಅವಕಾಶಗಳನ್ನು ಹುಡುಕುವರು. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಹಿರಿಯರ ಎದುರು ವಿನಯದಿಂದ ಮಾತನಾಡಿ.
ಕರ್ಕಾಟಕ ರಾಶಿ :
ನಾಲ್ಕು ಜನರು ಸೇರಿ ಮಾಡುವ ಕೆಲಸವು ಕಮ್ಯುನಿಕೇಷನ್ ಗ್ಯಾಪ್ ನಿಂದ ಅಸ್ತವ್ಯಸ್ತವಾಗಲಿದೆ. ಇಂದು ನಿಮ್ಮ ಅಧ್ಯಾತ್ಮದ ಆಸಕ್ತಿಗೆ ಯೋಗ್ಯವಾದ ಜನ ಹಾಗೂ ವಿಷಯ ಸಿಗಲಿದೆ. ಎಲ್ಲದಕ್ಕೂ ಉತ್ತರವಿರುತ್ತದೆಯಾದರೂ ನಿಮ್ಮ ಕಾರ್ಯವೇ ಉತ್ತರದಂತಿರಲಿ. ಈ ಕಾರಣಕ್ಕಾಗಿ ಕೆಲವರನ್ನು ಎದುರು ಹಾಕಿಕೊಳ್ಳಬೇಕಾದೀತು. ಕೃಷಿಯ ಚಟುವಟಿಕೆಯಲ್ಲಿ ಇಂದು ಆಸಕ್ತಿ ಕಡಿಮೆಯಾಗಿ ಮನೆಯಲ್ಲಿಯೇ ಇರುವಿರಿ. ಕೆಲವರ ಮಾತು ನಿಮ್ಮನ್ನು ಭ್ರಾಂತಗೊಳಿಸಬಹುದು. ದಾಯಾದಿಗಳು ನಿಮ್ಮ ಅವನತಿಯನ್ನು ಕಾಯುತ್ತ ನಿಮ್ಮ ಹಿತಶತ್ರುಗಳಾಗಿರುವರು. ನಿಮ್ಮ ಕೆಲಸಕ್ಕೆ ಯಾರ ಹಸ್ತಕ್ಷೇಪವನ್ನೂ ಬಯಸಲಾರಿರಿ. ನೀವು ಪ್ರಭಾವಿ ವ್ಯಕ್ತಿಗಳ ಮೂಲಕ ಉದ್ಯೋಗವನ್ನು ಗಟ್ಟಿ ಮಾಡಿಕೊಳ್ಳುವುದು ಉತ್ತಮ. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಇಂದು ಕೆಲಸದ ಕಾರಣಕ್ಕೆ ಏಕಾಂಗಿಯಾಗಬೇಕಾಗುವುದು.
ಸಿಂಹ ರಾಶಿ :
ನಿಮ್ಮ ಬಗ್ಗೆ ಬೇರೆ ಮೂಲಗಳಿಂದ ಬಂದ ಅನಂತರವೇ ಅಚ್ಚರಿಯಾಗಲಿದೆ. ಇಂದು ನಿಮಗೆ ಯಾವುದೋ ನಿಶ್ಚಿತ ಮೂಲದಿಂದ ಹಣ ಬರುವ ಖಾತ್ರಿ ಸಿಕ್ಕು, ಹೆಚ್ಚಿನ ಖರ್ಚು ಮಾಡುವಿರಿ. ದುರಭ್ಯಾಸವು ಎಲ್ಲರಿಂದ ನಿಮ್ಮನ್ನು ದೂರವಿಡುವುದು. ರಾಜಕೀಯ ವ್ಯಕ್ತಿಗಳು ಒತ್ತಡದ ಮೇಲೆ ಅಭಿವೃದ್ಧಿಗೆ ಗಮನ ಕೊಡುವರು. ನಿಮ್ಮ ಸ್ನೇಹಿತನ ಜೊತೆ ದೂರ ಪ್ರಯಾಣ ಮಾಡುವಿರಿ. ನಿರ್ಮಾಣದ ಕಾರ್ಯವನ್ನು ನೀವು ವಹಿಸಿಕೊಳ್ಳುವಿರಿ. ಅನಗತ್ಯ ವಿಷಯವನ್ನು ಚರ್ಚಿಸಿ ಕಾಲಹರಣ ಮಾಡುವಿರಿ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹೋಗಬೇಡಿ. ಎಲ್ಲದರಲ್ಲಿಯೂ ಇಂದು ನೀವು ನಕಾರಾತ್ಮಕ ವಿಷಯವನ್ನು ಹುಡುಕುವಿರಿ. ಪರಾವಲಂಬಿಯಾಗುವುದನ್ನು ಕಡಿಮೆ ಮಾಡಿಕೊಳ್ಳಬೇಕು. ನೌಕರರ ಜೊತೆ ಪೂರ್ವಾಗ್ರಹದಿಂದ ಪೀಡಿತರಾಗಿ ಮಾತನಾಡುವಿರಿ. ಸಿಗಬೇಕಾದವರು ಇಂದು ಸಿಗದೇ ಹೋಗುವರು. ನಿಮ್ಮ ಮಾತಿಗೆ ಸಮಜಾಯಿಷಿ ಕೊಡಲು ಹೋಗುವ ಅವಶ್ಯಕತೆ ಇಲ್ಲ.
ಕನ್ಯಾ ರಾಶಿ :
ಅನಿರೀಕ್ಷಿತವಾಗಿ ತಪ್ಪಲಿನಲ್ಲಿ ಸಿಕ್ಕಿಬೀಳುವಿರಿ. ಅಧಿಕಾರಿಗಳಿಗೆ ಬೇಕಾದುದನ್ನು ನೀಡಿ ಅವರನ್ನು ಸಂತೋಷಪಡಿಸುವಿರಿ. ಸಾಧ್ಯವಾದಷ್ಟು ನಿಮ್ಮ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿ. ಇಂದು ನೀವು ಮನೆಯಲ್ಲಿಯೇ ವಾಸ ಮಾಡಿ. ನಿಮ್ಮ ಸಂಬಂಧಿಸಿದ ವಸ್ತುಗಳು ಕಾಣೆಯಾಗಬಹುದು. ಅಧಿಕೃತ ಮಾಹಿತಿಯನ್ನು ಪಡೆದು ಮುಂದುವರಿಯುವುದು ಒಳ್ಳೆಯದು. ಇಂದು ನಿಮಗೆ ತುಂಬ ಕೆಲಸಗಳಿದ್ದರೂ ಮಾಡಲು ನಿಮಗೆ ಆದ್ಯತೆ ಎಂದು ಕೊಡಲು ಕಷ್ಟವಾದೀತು. ದಾಂಪತ್ಯದಲ್ಲಿ ನೀವು ಸುಖವನ್ನು ಅನುಭವಿಸುವಿರಿ. ನಿಮ್ಮ ಕೋಪವನ್ನು ನೀವು ನಿಯಂತ್ರಿಸುವುದು ಕಷ್ಟವಾದೀತು. ಸಣ್ಣ ಪರಿಶ್ರಮಕ್ಕೂ ನಿಮಗೆ ಉತ್ತಮ ಫಲವಿರಲಿದೆ. ಸಂಗಾತಿಗೆ ಸಂತೋಷವನ್ನು ಕೊಡುವಿರಿ. ಯಾರದೋ ಮಾತಿಗೆ ನೀವು ಚಿಂತಿತರಾಗದೇ ನಿಮ್ಮ ಕೆಲಸದಲ್ಲಿ ಮಗ್ನರಾಗುವಿರಿ. ವಿದ್ಯಾರ್ಥಿಗಳಿಗೆ ಮನೆಯಿಂದ ಹೊರಗುಳಿಯಲು ಕಷ್ಟವಾಗುವುದು. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಮನೆಯ ವಿಚಾರಕ್ಕೆ ದುಂದು ವೆಚ್ಚ ಮಾಡುವಿರಿ.
ತುಲಾ ರಾಶಿ :
ವ್ಯಾವಹಾರಿಕ ಭಾರವನ್ನು ತಗ್ಗಿಸಿಕೊಳ್ಳಿ. ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ. ಭಾವನೆ ವಿಶಾಲವಾದಷ್ಟು ನಿಮ್ಮ ವ್ಯಕ್ತಿತ್ವವೂ ವಿಶಾಲವಾಗುವುದು. ಅನವಶ್ಯಕ ವಸ್ತುಗಳನ್ನು ಖರೀದಿ ಮಾಡಿದ್ದಕ್ಕೆ ಮನೆಯಲ್ಲಿ ಸಂಗಾತಿಯ ಜೊತೆ ಕಲಹವಾಗಲಿದೆ. ಸಹೋದರರ ನಡುವೆ ಕಲಹವಾಗುವ ಸಾಧ್ಯತೆ ಇದೆ. ಕುಟುಂಬ ಶಾಂತಿಯಿಂದ ಇರಲು ಒಬ್ಬರನ್ನು ಒಬ್ಬರು ಅನುಸರಿಸಬೇಕಾದೀತು. ನೀವಿಬ್ಬರೂ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಬರುವ ತನಕ ತಾಳ್ಮೆಯಿಂದ ಕಾಯಬೇಕಾದೀತು. ನೀವು ಪ್ರಾಮಾಣಿಕತೆಯನ್ನು ತೋರಿಸಬೇಕಾದೀತು. ಸಮಯವನ್ನು ನೋಡಿ ಹೇಳಬೇಕಾದ ವಿಚಾರವನ್ನು ಹೇಳಿ. ನೀವಾಡಿದ ದುಡುಕಿನ ಮಾತು ಸಂಗಾತಿಯ ಮೇಲೆ ವಿಪರೀತ ಪರಿಣಾಮ ಬೀರುವುದು. ನಿಮಗೆ ಸೂಕ್ತವೆನಿಸಿದ ವ್ಯಕ್ತಿಗಳಲ್ಲಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು.
ವೃಶ್ಚಿಕ ರಾಶಿ :
ಪ್ರೇಮದಲ್ಲಿ ಅಪೇಕ್ಷೆಗಳು ಅಧಿಕವಾಗಲಿದೆ. ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಸಂಗಾತಿಯ ಪ್ರೀತಿಯಿಂದ ನೀವು ವಂಚಿತರಾಗಬೇಕಾದೀತು. ನಿಮ್ಮ ಅಂದಾಜನ್ನು ಮೀರಿ ಹಣವು ಖರ್ಚಾಗಬಹುದು. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವಿಷಯದಲ್ಲಿ ಗಮನಕೊಟ್ಟು ನೀವು ಯಾವುದನ್ನೂ ಸರಿಯಾಗಿ ನಿರ್ವಹಿಸಲಾಗದೇ ಒದ್ದಾಡುವಿರಿ. ನಿಮ್ಮ ವ್ಯಕ್ತಿತ್ವ ಗಟ್ಟಿಯಾಗಲು ಮಾತು ಕಡಿಮೆಯಾಗಬೇಕು. ಎಲ್ಲರ ಜೊತೆಗಿದ್ದರೂ ನಿಮಗೆ ಒಂಟಿತನವು ಕಾಡಬಹುದು. ಸತ್ಯನ್ನೇ ಹೇಳುತ್ತೇನೆಂದು ಇನ್ನೊಬ್ಬರಿಗೆ ನೋವು ಕೊಡುವುದು ಉಚಿತವಾಗಲಾರದು. ವಿದ್ಯಾರ್ಥಿಗಳಿಂದ ನಿಮಗೆ ಆಶ್ಚರ್ಯ ಇರಲಿದೆ. ಅನ್ಯರು ತೋರಿಸುವ ತಪ್ಪನ್ನು ಸುಮ್ಮನೆ ಒಪ್ಪಿಕೊಳ್ಳಿ. ನಿಮ್ಮ ಬಗೆಗಿನ ವಿಚಾರವನ್ನು ನೀವು ನಿರ್ಲಕ್ಷ್ಯ ಮಾಡುವಿರಿ. ಅಸಾಧ್ಯವಾದುದನ್ನು ಸಾಧಿಸುವ ಹುಂಬುತನ ಬೇಡ. ನಿಮ್ಮ ದಾರಿಯು ಸರಿ ಇದೆಯೇ ಎಂಬ ಯೋಚನೆಗೆ ಬಂದು ಅನಂತರ ಮುಂದುವರಿಯಿರಿ. ಒಳ್ಳೆಯ ಕಡೆಯಿಂದ ಒಳ್ಳೆಯದನ್ನೇ ನಿರೀಕ್ಷಿಸಿ. ಉತ್ಸಾಹಕ್ಕೆ ನಿಮ್ಮದೇ ಆದ ಕಾರಣವನ್ನು ಕಂಡುಕೊಳ್ಳಬೇಕು.
ಧನು ರಾಶಿ :
ಹೆಚ್ಚಿನ ಆದಾಯದ ಉದ್ಯೋಗಕ್ಕೆ ಪರೀಕ್ಷೆಯನ್ನು ಸ್ವೀಕರಿಸಬೇಕು. ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ನಿಮ್ಮ ಹೇಳಿಕೆಗಳು ಮತ್ಯಾರಿಗೋ ಅಪಾಯವನ್ನು ಕೊಡುವುದು. ನಿಮ್ಮ ನಡತೆಯನ್ನು ನೀವೇ ಗಮನಿಸಿಕೊಂಡು ಸರಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಾರ್ಯ ವೈಫಲ್ಯಕ್ಕೆ ಇನ್ನೊಬ್ಬರನ್ನು ದೂರುವುದು ಸರಿಯಲ್ಲ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ಕೆಲಸಕ್ಕೆ ಸಹಾಯ ಮಾಡುತ್ತೇನೆ ಎಂದು ಕರೆದುಕೊಂಡು ಹೋಗಿ ನಿಮ್ಮನ್ನು ವಂಚಿಸುವರು. ಒಂದೇ ಕಾರ್ಯವನ್ನು ನಂಬಿರುವುದು ಕಷ್ಟ. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಸ್ವಲ್ಪ ಅಗೌರವವೂ ಇರಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮವು ಅವಶ್ಯಕ. ಸಹೋದ್ಯೋಗಿಯನ್ನು ನೀವು ಮಿತ್ರರನ್ನಾಗಿ ಪಡೆಯುವಿರಿ. ಇನ್ನೊಬ್ಬರಿಂದ ಒಳ್ಳೆಯದನ್ನು ಕಲಿಯುವಿರಿ. ಅವಸರಕ್ಕೆ ಒಳಗಾಗಿ ಏನನ್ನಾದರೂ ಮಾಡಿಕೊಂಡೀರ, ಜಾಗರೂಕರಾಗಿರಿ. ಸರಳ ಜೀವನವನ್ನು ನೀವು ಇಷ್ಟಪಡುವಿರಿ.
ಮಕರ ರಾಶಿ :
ಹಕ್ಕು ಸ್ವಾಮ್ಯತೆಯ ಪ್ರಶ್ನೆ ನಿಮ್ಮ ವಿಚಾರಕ್ಕೆ ಬರಲಿದೆ. ಇಂದು ನಿಮ್ಮ ವಿವಾಹದ ಇಚ್ಛೆಯನ್ನು ಮನೆಯಲ್ಲಿ ಹೇಳುವಿರಿ. ಸರ್ಕಾರಿ ಕೆಲಸದಲ್ಲಿ ನಿಮಗೆ ಇಂದು ಹಿನ್ನಡೆಯಾಗಲಿದೆ. ಸೋಲನ್ನು ಒಪ್ಪಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ದುರಭ್ಯಾಸವನ್ನು ನೀವು ಮಿತ್ರರಿಂದ ಪಡೆಯುವಿರಿ. ನೀವು ಮಾಡಿದ ಸಹಾಯವು ನಿಮಗೇ ಬರುವುದು. ಎಲ್ಲರೆದುರು ಮಾತನಾಡುವ ಸಂದರ್ಭ ಬರಲಿದ್ದು ನೀವು ಮುಜಗರಗೊಳ್ಳುವಿರಿ. ಮೇಲ್ನೋಟಕ್ಕೆ ಸಣ್ಣ ಗಾಯವಾಗಿ ಕಂಡರೂ, ನೋವು ಹಿಂಸೆಯನ್ನು ಕೊಡುವುದು. ನಿಮ್ಮ ಮೇಲೆ ಸಿಟ್ಟಾಗುವ ಸಾಧ್ಯತೆಯೂ ಇದೆ. ಹೆಚ್ಚಿನ ಸಮಯವನ್ನು ಇಂದು ಪ್ರಯಾಣದಲ್ಲಿಯೇ ಕಳೆಯುವಿರಿ. ಅಸ್ವಾಭಾವಿಕ ನಡೆಗಳಿಂದ ನಿಮ್ಮವರಿಗೆ ಅನುಮಾನ ಬರಬಹುದು. ತಂದೆಯ ಮಾತನ್ನು ನೀವು ಖಂಡಿಸುವಿರಿ. ಶತ್ರುಗಳ ಭಯವು ನಿಮ್ಮನ್ನು ಕಾಡಬಹುದು. ಯಾರಿಂದಲೋ ಸಿಕ್ಕ ವಸ್ತುಗಳನ್ನು ಜೋಪಾನ ಮಾಡುವಿರಿ. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಿ.
ಕುಂಭ ರಾಶಿ :
ಯಾರ ಬಳಿಯೂ ಪೆಟ್ಟೊಂದು ತುಂಡೆರಡು ಎನ್ನುವ ರೀತಿಯಲ್ಲಿ ಮಾತನಾಡುವುದು ಬೇಡ. ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ. ಆರ್ಥಿಕತೆಯ ಪ್ರಗತಿಗೆ ಯಾರದ್ದಾದರೂ ಸಹಕಾರ ಪಡೆಯುವಿರಿ. ತುರ್ತಾಗಿ ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗಿ ಬರುವುದು. ಅಹಂಕಾರದಿಂದ ಕೂಡಿದ ಮನಸ್ಸಿನ ಜೊತೆ ಯಾರೂ ಬರುವುದಿಲ್ಲ. ನೀವು ಒಂಟಿಯಾಗುವಿರಿ. ಸರಿಯಾದ ವಿಚಾರವನ್ನು ತಿಳಿದು ಮಾತನಾಡುವುದು ಉತ್ತಮ. ಕೆಲಸಕ್ಕೆ ಉಪಯೋಗವಾಗುವಂತೆ ಹಳೆಯ ವಾಹನವನ್ನು ಯಾರದೋ ಮೂಲಕ ಪಡೆಯುವಿರಿ. ಸ್ನೇಹಿತರನ್ನು ನೀವು ಕಳೆದುಕೊಳ್ಳುವಿರಿ. ನಿಮ್ಮ ಕಾರಣದಿಂದ ಕುಟುಂಬ ನೆಮ್ಮದಿಯಿಂದ ಇದೆ ಎಂದು ಭಾವಿಸುವರು. ಯಾವ ಕ್ಷಣವನ್ನೂ ನೀವು ಮನಸ್ಸು ಖಾಲಿಯಾಗದಂತೆ ನೋಡಿಕೊಳ್ಳಿ. ಆರ್ಥಿಕ ಸಹಾಯಕ್ಕೆ ಸಿಗುವವರು ನಿಮ್ಮಿಂದ ಮತ್ತೇನನ್ನೋ ಬಯಸುವರು. ನಿಮ್ಮ ಮಾತು ನೇರವಾಗಿರಲಿ. ಇಂದು ನಿಮ್ಮ ಆಪ್ತರನ್ನು ಕಡೆಗಣಿಸುವಿರಿ. ಅಪರಿಚಿತರ ಜೊತೆ ಅನುಚಿತ ವರ್ತನೆ ಬೇಡ. ನಿಮ್ಮ ಸಿದ್ಧಾಂತವನ್ನು ಪರರ ಮೇಲೆ ಹೇರುವಿರಿ.
ಮೀನ ರಾಶಿ :
ನಿಮಗೆ ಕಟ್ಟುಪಾಡುಗಳನ್ನು ಮಾಡುವವರ ಬಗ್ಗೆ ಸಮಾಧಾನ. ಇಂದು ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಧನವ್ಯವಹಾರವನ್ನು ಜಾಗರೂಕತೆಯಿಂದ ಮಾಡಿ. ವ್ಯಾಪರವು ಮಧ್ಯಮಫಲದಿಂದ ಇರಲಿದೆ. ಹೆಚ್ಚು ಪರಿಶ್ರಮದಿಂದ ನಿಮಗೆ ಆಯಾಸವಾದೀತು. ವಿಶ್ರಾಂತಿಯನ್ನು ಒಡೆದು ಮುಂದುವರಿಯುವುದು ಉತ್ತಮ. ಯೋಜಿತ ಕಾರ್ಯದಲ್ಲಿ ಅತಿಯಾದ ಫಲಾಪೇಕ್ಷೆ ಬೇಡ. ಮನೆಯನ್ನು ಖರೀದಿಸುವುದು ಅನಿವಾರ್ಯವಾಗಿಬಿಡುವುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಖುಷಿಯಿಂದ ತೊಡಗಿಕೊಳ್ಳುವರು. ಎಲ್ಲವನ್ನೂ ನಿಮ್ಮ ಮೂಲಕವೇ ನಡೆಯಬೇಕು ಎಂಬ ಮಾನಸಿಕ ಸ್ಥಿತಿಯು ಒಳ್ಳೆಯದಲ್ಲ. ನಿಮ್ಮ ಜವಾಬ್ದಾರಿಯ ಕೆಲಸಗಳು ಸರಿಯಾಗಿ ನಡೆತುತ್ತಿದೆಯೇ ಎಂಬುದನ್ನು ಗಮನಸಿ. ಸರ್ಕಾರಿ ಕೆಲಸವನ್ನು ಅಲ್ಲಿರುವ ಆಪ್ತರ ಮೂಲಕ ಮಾಡಿಸಿಕೊಳ್ಳುವಿರಿ. ಆಪ್ತರ ಜೊತೆ ಹಳೆಯ ನೆನಪನ್ನು ಹಂಚಿಕೊಳ್ಳುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ. ಮನೆಯವರ ಮನಸ್ಸನ್ನು ನೋಯಿಸಿ ಕಾರ್ಯ ಮಾಡಲಾಗದು.
– ಲೋಹಿತ ಹೆಬ್ಬಾರ್ – 8762924271 (what’s app only)




