ಈ ರಾಶಿಯವರು ಇಂದು ದಾನ ಧರ್ಮದ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪತ್ ತಿಥಿ, ಭಾನುವಾರ ಬುದ್ಧಿಯ ಪ್ರಯೋಗ, ಕೌಟುಂಬಿಕ ವಿವಾದ, ಅಪರೂಪದ ವ್ಯಕ್ತಿಗಳ ಭೇಟಿ ಇವೆಲ್ಲ ಇರಲಿದೆ. ಈ ದಿನ 30-3-25ರ ದಿನ ಯುಗಾದಿ. ನೂತನ ವರ್ಷದ ಮೊದಲ ದಿನದ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ : ರೇವತಿ, ಯೋಗ: ಐಂದ್ರ, ಕರಣ: ನಾಗವಾನ್, ಸೂರ್ಯೋದಯ 06: 30 am, ಸೂರ್ಯಾಸ್ತ 06 : 43 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:12 – 18:43, ಯಮಘಂಡ ಕಾಲ 12:37 – 14:09, ಗುಳಿಕ ಕಾಲ 15:40 – 17:12
ವಿಶ್ವಾವಸು ಎನ್ನುವ ನೂತನ ವರ್ಷ ಆರಂಭವಾಗುತ್ತಿದೆ. ಹೊಸ ಆಲೋಚನೆ, ಉತ್ತಮ ಗುಣ, ಒಳ್ಳೆಯ ಬುದ್ಧಿಯನ್ನು ದೇವರಲ್ಲಿ ಪ್ರಾರ್ಥಿಸಿದರೆ ಇಡೀ ವರ್ಷ ನೆಮ್ಮದಿ, ಸುಖ, ಸಂಭ್ರಮದಿಂದ ಇರಲು ಸಾಧ್ಯ. ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಇಡಿಯ ಪ್ರಕೃತಿಗೇ ಹೊಸ ವರ್ಷ. ಇದನ್ನು ಸಂಭ್ರಮಿಸುತ್ತ ಸ್ವಾಗತಿಸಿ, ಅವಗುಣಗಳನ್ನು ದೂರ ಮಾಡಿಕೊಳ್ಳಬೇಕು. ಸರ್ವರಿಗೂ ಯುಗಾದಿಯ ಶುಭಾಶಯ.
ತುಲಾ ರಾಶಿ: ಇಂದು ನೀವು ಹೊಸ ಉದ್ಯಮಕ್ಕೆ ಬೇಕಾದ ಸ್ಥಳದ ಅನ್ವೇಷಣೆಯಲ್ಲಿ ತೊಡಗುವಿರಿ. ದಾನ ಧರ್ಮದ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಕೋಪದ ನಿರ್ಣಯಗಳಿಂದ ಅನಂತರ ಬೇಸರ. ಸಂಯಮ ಕಳೆದುದರ ಫಲವು ತಿಳಿಯುವುದು. ಯಾವುದೇ ವ್ಯತಿರೇಕ ಸನ್ನಿವೇಶಗಳನ್ನು ನಿಭಾಯಿಸಲು ಪ್ರಯತ್ನಿಸಬೇಕಾಗುತ್ತದೆ. ಮನೆಯ ಅಲಂಕಾರದ ಬಗ್ಗೆಯೂ ನೀವು ಸಂಪೂರ್ಣ ಗಮನ ಹರಿಸುವಿರಿ. ಕುಟುಂಬದ ಸದಸ್ಯರಿಂದ ನೀವು ಆಚ್ಚರಿಯ ಉಡುಗೊರೆಯನ್ನು ಪಡೆಯಬಹುದು. ಹೆತ್ತವರ ಆಶೀರ್ವಾದವು ನಿಮಗೆ ಉತ್ಸಾಹವನ್ನು ಕೊಡಬಹುದು. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮ ನಿರ್ಧಾರವನ್ನು ಮತ್ತೋಬ್ಬರಿಗೆ ಹೇರುವುದು ಬೇಡ. ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವಿರಿ. ಆದಷ್ಟು ಸಮಾಧಾನದಿಂದ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸಿ.
ವೃಶ್ಚಿಕ ರಾಶಿ: ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಆದರೆ ನಿಮಗೆ ಆಗದವರಿಂದ ಅಪಕೀರ್ತಿ ಹರಡುವುದು. ವೈಯಕ್ತಿಕವಾಗಿ ಆರೋಗ್ಯ ಕುಂದುಬುದು, ಜಾಗರೂಕತೆ ಬೇಕು. ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ. ನೀವು ಕುಟುಂಬದ ಜೊತೆ ಹೊರಗೆ ಹೋಗಲು ಯೋಜಿಸಬಹುದು. ಆದರೆ ಕುಟುಂಬದ ಸಮಸ್ಯೆಗಳನ್ನು ಒಟ್ಟಿಗೆ ಪರಿಹರಿಸಲೂ ನೀವು ಪ್ರಯತ್ನಿಸಬೇಕು. ಇಲ್ಲದಿದ್ದರೆ ಅದು ನಿಮ್ಮ ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ. ಆಯ ಕಡಿಮೆ ವ್ಯಯ ಅಧಿಕ ಆಗಬಹುದು. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ಸದ್ಯ ತಳ್ಳಿಹಾಕುವಿರಿ. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು.
ಧನು ರಾಶಿ: ನಿಮ್ಮ ಮಾತಿನಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಿ. ನೀವು ಯಾರಿಗಾದರೂ ಭರವಸೆ ನೀಡಿದ್ದರೆ, ಅದನ್ನು ಪೂರೈಸಲು ಪ್ರಯತ್ನಿಸುವಿರಿ. ನಿಮ್ಮ ತಾಳ್ಮೆಗೆ ಇಂದು ಸಕಾಲದ ದಿನ. ನಿಮ್ಮ ವರ್ತನೆಯೇ ನಿಮ್ಮನ್ನು ಎತ್ತರಿಸುವುದು. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಅನಿರೀಕ್ಷಿತ ಭಡ್ತಿಯನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರವನ್ನು ಹಿರಿಯರು ವಿಚಾರಿಸುವರು. ನಿಮ್ಮ ಸಂಗಾತಿಯ ಜೊತೆ ಚರ್ಚಿಸಿದರೆ ಅದು ನಿಮಗೆ ಇನ್ನೂ ಉತ್ತಮವಾಗಿರುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗುವುದು. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುವರು. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡಾಡುವುದು.
ಮಕರ ರಾಶಿ: ಇಂದು ನೀವು ಕೆಲವು ಹೊಸಬರನ್ನು ಭೇಟಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಿರುವಿರಿ. ಇಂದು ಮುಖ್ಯವಾಗಿ ಯಾವುದೇ ಕಾರ್ಯಕ್ಕೆ ಆರ್ಥಿಕ ಮುಗ್ಗಟ್ಟು ಬಂದು ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆ ಇದೆ. ಆದರೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಕೈಲಾದಷ್ಟು ಪ್ರಯತ್ನಿಸುತ್ತೀರಿ. ನಿಮ್ಮ ಸಹೋದರನ ಜೊತೆ ನಿಮ್ಮ ಆಪ್ತತೆಯು ಹೆಚ್ಚಾಗುತ್ತದೆ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು. ನಿಮ್ಮ ತಂದೆಯು ಕಣ್ಣಿಗೆ ಸಂಬಂಧಿಸಿದ ತೊಂದರೆಯಿಂದ ಓಡಾಟ ಮಾಡಬೇಕು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಆಹಾರವು ಸರಿಯಾಗಿ ಸಿಗದೇ ನಿಮಗೆ ಸಂಕಟವಾಗಬಹುದು. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಒಮ್ಮನಸ್ಸು ಬರುವುದು ಕಷ್ಟವಾಗುವುದು.
ಕುಂಭ ರಾಶಿ: ಇಂದು ನೀವು ಅಗತ್ಯವಿರುವ ವಸ್ತುಗಳಿಗೆ ಸಾಕಷ್ಟು ಖರ್ಚು ಮಾಡುತ್ತೀರಿ. ಆದರೆ ನೀವು ನಿಮ್ಮ ಹಿರಿಯರ ಸಲಹೆಯನ್ನು ಪಾಲಿಸಿ ಉತ್ತಮವಾದುದನ್ನು ಪಡೆಯುವಿರಿ. ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ನೋವುಂಟಾಗಲಿದೆ. ಯಾರ ಹೊಗಳಿಕೆಗೂ ಮರುಳಾಗದಿರಿ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ನೀವು ವೈಯಕ್ತಿಕ ವಿಷಯಗಳ ಮೇಲೆ ಸಂಪೂರ್ಣ ಗಮನವನ್ನು ಹೊಂದಿದ್ದರೆ ನಿಮಗೆ ಒಳ್ಳೆಯದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಸಡಿಲಬಿಡುವುದು ಬೇಡ. ನಿಮ್ಮ ವಿರೋಧಿಗಳು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಬಂಧುಗಳಿಂದ ಕೆಲಸವು ಹಾಳಾಗಬಹುದು. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳದಿರಿ. ಸಂಗಾತಿಯ ಮಾತುಗಳು ನಿಮಗೆ ಬೇಸರ ತರಿಸಬಹುದು.
ಮೀನ ರಾಶಿ: ಸ್ನೇಹಿತರ ಒತ್ತಾಯಕ್ಕೆ ಅವರ ಜೊತೆ ನೀವು ಮನೋರಂಜನೆಯ ಕಾರ್ಯಕ್ರಮಗಳಿಗೆ ತೆರಳುವಿರಿ. ಇಂದು ಮುಖ್ಯವಾಗಿ ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಬಹುದು. ನೀವು ಇಂದು ಹೊರಗಿನವರಿಗೆ ಯಾವುದೇ ನಿಮ್ಮ ಆಂತರಿಕ ಮಾಹಿತಿಯನ್ನು ಬಹಿರಂಗಪಡಿಸಬಾರದು. ರಕ್ತ ಸಂಬಂಧಿಗಳು ಮೊದಲಿಗಿಂತ ಉತ್ತಮವಾಗಿರುತ್ತಾರೆ. ನಿಮ್ಮ ಯೋಜನೆಗಳನ್ನು ನೀವು ವೇಗವಾಗಕಸುವಿರಿ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ಇಂದು ನೀವು ದೇವರ ಆರಾಧನೆಯಲ್ಲಿ ಮಗ್ನರಾಗುವಿರಿ. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ.