ಇಂದು ಅವಿವಾಹಿತರಿಗೆ ವಿವಾಹ ನಿಶ್ಚಯದ ಸಾಧ್ಯತೆ ಇದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ತ್ರಯೋದಶೀ ತಿಥಿ ಗುರುವಾರ ಬಂಧುಗೃಹದಲ್ಲಿ ಸತ್ಕಾರ, ಚರ್ಚಿತ ವಿಚಾರಗಳ ಜಾರಿ, ಪರಿಹಾರದಿಂದ ಸಂಕಟ ದೂರ, ಅಸ್ತವ್ಯಸ್ತ ಸ್ಥಿತಿ, ಸಹೋದರಿಯಿಂದ ಧನಸಹಾಯ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 50 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:09 – 15:43, ಗುಳಿಕ ಕಾಲ 09:28 – 11:02 ಯಮಗಂಡ ಕಾಲ 06:21 – 07:54
ಮೇಷ ರಾಶಿ: ನೀವಾಡುವ ಮಾತುಗಳು ಬೇರೆ ರೀತಿಯ ಪರಿಣಾಮವನ್ನು ಬೀರುವುದು. ಇಂದು ಅವಿವಾಹಿತರಿಗೆ ವಿವಾಹ ನಿಶ್ಚಯದ ಸಾಧ್ಯತೆ ಇದೆ. ಬಹಳ ದಿನಗಳ ಅನಂತರ ನಿಮ್ಮ ಮನೆಯಲ್ಲಿ ಸಂತೋಷದ ಸಂದರ್ಭವು ಇರುವುದು. ನಿತ್ಯ ಬಳಸುವ ವಸ್ತುವಿನಿಂದ ನಿಮಗೆ ಲಾಭವಿದೆ. ಅನ್ಯ ಕಾರ್ಯಗಳಿಗೆ ನಿಮ್ಮನ್ನು ಸೇಳೆಯುವರು. ಅತಿಥಿಗಳ ಆಗಮನವು ಅನಿರೀಕ್ಷಿತವಾಗುವುದು. ನೀವು ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು ನಿಮಗೆ ಒಮ್ಮೆಲೆ ಬಿಡಬೇಕಾದ ಸ್ಥಿತಿ ಬರಬಹುದು. ನಿಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಸಾಲ ಮಾಡಿಯಾದರೂ ಖರೀದಿಸಬೇಕಾದೀತು. ರಕ್ಷಣೆಯ ಸಹಾಯವನ್ನು ಪರಿಚಿರಿಂದ ಪಡೆಯುವಿರಿ. ಎಲ್ಲರನ್ನೂ ಹತ್ತಿರದಿಂದ ತಿಳಿಯಲು ನೀವು ಇಷ್ಟಪಡುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.
ವೃಷಭ ರಾಶಿ: ಪರಿಹಾರ ಮಾಡಿಕೊಳ್ಳಬಹುದಾದುದನ್ನು ಮೊದಲೇ ಮಾಡಿ, ಬರುವ ಸಂಕಷ್ಟದ ಪ್ರಮಾಣ ಕಡಿಮೆಯಾಗಲಿದೆ. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಎಲ್ಲದರಲ್ಲೂ ಹಿನ್ನಡೆಯಾಗುವ ನಿಮಗೆ ಆತ್ಮವಿಶ್ವಾಸ ತುಂಬಲು ಜನರ ಅವಶ್ಯಕತೆ ಇದೆ. ಕಷ್ಟದ ಕೆಲಸವನ್ನು ನೀವು ಅನಾಯಾಸವಾಗಿ ಮಾಡಿ ಮುಗಿಸುವಿರಿ. ಇಂದಿನ ನಿಮ್ಮ ಕೆಲಸವು ಪೂರ್ಣವಾಗಬಹುದು. ಧನದ ಆದಾಯವು ನಿಮ್ಮ ನಿರೀಕ್ಷೆಯನ್ನು ಪೂರ್ಣವಾಗಿ ತಲುಪುವುದು. ಬೆರೆಯದೇ ಹೋದರೆ ಗುಂಪಿನಿಂದ ದೂರವಿರುವಿರಿ. ನಿಮ್ಮ ಪ್ರಯಾಣ ಇಂದು ಬಹಳ ಕಷ್ಟಕಾರವಾದೀತು. ಯಶಸ್ಸನ್ನು ಒಡೆದು ಜೀರ್ಣಿಸಿಕೊಳ್ಳಲಾಗದಷ್ಟು ನಿಶ್ಶಕ್ತರಾಗವಿರಿ. ಹೆಚ್ಚು ಶ್ರಮದಿಂದ ಸಂಪತ್ತನ್ನು ಪಡೆಯುವಿರಿ. ಮಾಧ್ಯಮದಲ್ಲಿ ನೀವು ಇಂದು ಕಾಣಿಸಿಕೊಳ್ಳಬಹುದು. ಪಕ್ಷಪಾತದಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು. ಎಷ್ಟೇ ಪ್ರಯತ್ನಿಸಿದರೂ ಸುಮ್ಮನೆ ಇರಲು ಆಗದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ.
ಮಿಥುನ ರಾಶಿ: ಚರ್ಚಿತ ವಿಚಾರಗಳು ಪ್ರಯೋಗಕ್ಕೆ ಬರುವಾಗ ಅದರ ಸ್ವರೂಪ ಬದಲಾಗುವುದು. ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗುವುದು. ನಿಮ್ಮ ಬಗ್ಗೆ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟವೆನ್ನುವಂತೆ ಆಗುವುದು. ನೀವು ಅದನ್ನು ಕಲಿಯಲು ಇಚ್ಛಿಸುವಿರಿ. ಕಲಿಕೆ ನಿಮ್ಮದೇ ಆದ ವಿಧಾನವನ್ನು ಬಳಸಿಕೊಳ್ಳಲಿದ್ದೀರಿ. ಪ್ರೇಮದ ಸೆಳೆತಕ್ಕೆ ಸಿಲುಕುವಿರಿ. ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ. ಮನೆಯಲ್ಲಿ ಪ್ರಸ್ತಾಪ ಮಾಡಿ ನಿಮ್ಮ ಮಾರ್ಗವನ್ನು ಸರಿ ಮಾಡಿಕೊಳ್ಳಿ. ವಿದ್ಯುತ್ ಕಾರ್ಯವನ್ನು ಮಾಡುವವರು ನಿರ್ಲಕ್ಷ್ಯವನ್ನು ತೋರುವ ಸಂಭವವಿದೆ. ವ್ಯಾಪಾರದಲ್ಲಿ ಕೆಲವು ಕೊರತೆಗಳನ್ನು ನೀಗಿಸಿಕೊಂಡರೆ ನೀವು ಲಾಭವನ್ನು ಗಳಿಸಬಹುದು. ಜವಾಬ್ದಾರಿಯಿಂದ ಗ್ರಾಹಕರ ಜೊತೆ ವರ್ತಿಸಿ. ಭೂಮಿಯ ವ್ಯವಹಾರ ಸದ್ಯ ಬೇಡ. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಪೌರುಷವನ್ನು ಅಶಕ್ತರಲ್ಲಿ ತೋರಿಸುವಿರಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳುವಿರಿ. ಮೂರ್ತಿಯಾಗಲು ಪೆಟ್ಟು ತಿನ್ನುವ ಅನಿವಾರ್ಯತೆ ಇರುವುದು.
ಕರ್ಕಾಟಕ ರಾಶಿ: ಸಾಮಾಜಿಕ ಕಾರ್ಯಕ್ಕೆ ನಿಮ್ಮ ಅಲ್ಪ ಸೇವೆ ಲಭ್ಯವಾಗಲಿದೆ. ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಯಾವುದನ್ನು ಮಾಡಲೇ ಬಾರದು ಎಂದು ಮತ್ತೆ ಅಂದುಕೊಂಡಿದ್ದರೋ ಅದೇ ಆಗುವುದು. ಇಂದು ನೀವು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡಬಹುದು. ಬೇಸರದ ಸಂಗತಿಗಳು ಇಂದು ನಡೆಯುವ ಸಾಧ್ಯತೆ ಇದೆ. ವಿರೋಧದ ನಡುವೆಯೂ ನಿಮ್ಮ ಹಣವನ್ನು ಸಾಧಿಸುವಿರಿ. ನಿಮ್ಮ ಅಪೇಕ್ಷಿತ ಸುಖವು ಬಯಸಿದವರಿಗೆ ಸಿಗದು. ಹಿರಿಯರು ನಿಶ್ಚಯಿಸಿದ ಸಂಬಂಧವನ್ನು ಒಪ್ಪಿಕೊಳ್ಳುವಿರಿ. ಅಪರಿಚಿತರು ನಿಮ್ಮನ್ನು ಹುಡುಕಿಕೊಂಡು ಬರುವರು. ನಿಮ್ಮ ಮನಸ್ಸು ಎಷ್ಟೇ ಪ್ರಯತ್ನಿಸಿದರೂ ನಕಾರಾತ್ಮಕವಾಗಿ ಇರಲಿದೆ. ನಿಮ್ಮನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಹಣವೂ ಗೊತ್ತಾಗದಂತೆ ಖಾಲಿಯಾದೀತು. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಅಧ್ಯಾತ್ಮ ಶಕ್ತಿಯಿಂದ ನಿಮಗೆ ಸ್ಥೈರ್ಯ ಬರಲಿದೆ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು.
ಸಿಂಹ ರಾಶಿ: ಮನೆಯಲ್ಲಿ ಅಸ್ತವ್ಯಸ್ತತೆಯನ್ನು ಸಹಿಸಲಾಗದು. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ನಿಮ್ಮ ಇಚ್ಛಾಶಕ್ತಿಯು ನಿಮ್ಮ ಇಂದಿನ ಮೇಲಧಿಕಾರಿಗಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಸುಲಭದ ವಿಚಾರವನ್ನು ಬಹಳ ಸಂಕೀರ್ಣ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ತಟಸ್ಥರಾಗುವಿರಿ. ನಗುಮೊಗವು ಅನೇಕರ ನೋವಿಗೆ ಪರಿಹಾರವಾಗಲಿದೆ. ಭೂಮಿಯಿಂದ ಬರುವ ಲಾಭವನ್ನು ಉಳಿತಾಯ ಮಾಡುವ ಬಗ್ಗೆ ಇರುವುದು. ಕುಟುಂಬದಲ್ಲಿ ನಿಮ್ಮ ವಿಚಾರಕ್ಕೆ ಕಲಹವಾಗಬಹುದು. ಸರಿಯಾದ ಮಾಹಿತಿಯನ್ನು ಅವರಿಗೆ ನೀಡಿ. ಮಾನಸಿಕವಾಗಿ ನೀವು ದುರ್ಬಲರಾಗುವಿರಿ. ನಿನ್ನೆಯ ಘಟನೆಯನ್ನು ನೆನಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ. ಕಾನೂನಿನ ವಿಚಾರದಲ್ಲಿ ನಿರ್ದಿಷ್ಟತೆ ಇರಲಿ. ಇಂದೇ ಕಾರ್ಯವನ್ನು ಎರಡು ರೀತಿಯ ಲಾಭವಾಗುವಂತೆ ನೋಡಿಕೊಳ್ಳುವಿರಿ.
ಕನ್ಯಾ ರಾಶಿ: ಅನ್ವೇಷಣೆಯನ್ನು ಪ್ರಾಮಾಣಿಕವಾಗಿ ಮಾಡುವ ಮನಸ್ಸಾಗಲಿದೆ. ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಹೂಡಿಕೆಯು ನಿಮ್ಮ ಆರ್ಥಿಕತೆಯನ್ನು ಹೆಚ್ಚಿಸುವುದು. ಏಕಾಂಗಿಯಾಗಿ ನೀವು ಎಲ್ಲಿಗಾದರೂ ಹೋಗುವಿರಿ. ನಿಮ್ಮ ವಸ್ತುವನ್ನು ಸ್ನೇಹಿತರಿಗೆ ಕೊಟ್ಟಿದ್ದು ಅದನ್ನು ಪಡೆಯಲು ನೀವು ಕಷ್ಟ ಪಡುವಿರಿ. ಕಾನೂನಿಗೆ ಮೊರೆ ಹೋಗಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಯಾವ ಮೂಲದಿಂದ ಹಣ ಬಂದರೂ ಅದನ್ನು ಸ್ವೀಕರಿಸುವಿರಿ. ಕೆಲಸದ ಅನುಭವವಿದೆ ಎಂದು ಗೊತ್ತಾದರೆ ಎಲ್ಲದಕ್ಕೂ ನಿಮ್ಮನ್ನೇ ಕರೆಯುವರು. ಮನೆಯಿಂದ ಇಂದು ಹೊರಗೆ ಇರಬೇಕಾದೀತು. ಉದ್ಯೋಗದಲ್ಲಿ ನಿಮಗಿರುವ ಗೊಂದಲವು ಪರಿಹಾರವಾಗಿ ನಿಶ್ಚಿಂತೆಯಿಂದ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗುವುದು. ಏನನ್ನೂ ತೋರಿಸಿಕೊಳ್ಳದೇ ಜಾಣ ಕುರುಡುತನ ಈ ದಿನ ಎಲ್ಲದರಿಂದ ದಾಟಿ ಬರಬಹುದು. ಪ್ರೇಯಸಿಯನ್ನು ಕಾಣದೇ ಬೇಸರಿಸುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಉತ್ತಮ.




