ಇಂದಿನ ಖರ್ಚು ನಿಮ್ಮ ಆದಾಯವನ್ನು ಹೆಚ್ಚು ಮಾಡುತ್ತದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ತ್ರಯೋದಶೀ ತಿಥಿ ಗುರುವಾರ ಬಂಧುಗೃಹದಲ್ಲಿ ಸತ್ಕಾರ, ಚರ್ಚಿತ ವಿಚಾರಗಳ ಜಾರಿ, ಪರಿಹಾರದಿಂದ ಸಂಕಟ ದೂರ, ಅಸ್ತವ್ಯಸ್ತ ಸ್ಥಿತಿ, ಸಹೋದರಿಯಿಂದ ಧನಸಹಾಯ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 50 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:09 – 15:43, ಗುಳಿಕ ಕಾಲ 09:28 – 11:02 ಯಮಗಂಡ ಕಾಲ 06:21 – 07:54
ತುಲಾ ರಾಶಿ: ಸಾಧ್ಯಾಸಾಧ್ಯತೆಗಳ ಪರಿಶೀಲನೆಗೆ ನಿಮಗೇ ಬಿಡುವರು. ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ. ನಿಮ್ಮ ಸಮಯವನ್ನು ಸ್ನೇಹಿತರು ವ್ಯರ್ಥಮಾಡಿಯಾರು. ವೃತ್ತಿಯಲ್ಲಿ ಯಾರಾದರೂ ಕೋಪವನ್ನು ತರಿಸಬಹುದು. ಬಾಲ್ಯ ಸ್ನೇಹಿತ ಏಳ್ಗೆಯನ್ನು ಕೇಳಿ ನಿಮಗೆ ಅಸೂಯೆ ಉಂಟಾಗಬಹುದು. ವಾಹನ ಖರೀದಿಯನ್ನು ನೀವು ಮುಂದೂಡುವಿರಿ. ಧನವನ್ನು ಕೇಳಿ ಬಂದವರಿಗೆ ನೀಡಲಿದ್ದೀರಿ. ಸುಳ್ಳಾಡಿ ನೀವು ಯಾವುದಾದರೂ ಲಾಭವನ್ನು ಮಾಡಿಕೊಳ್ಳುವಿರತಿ. ಸಿಟ್ಟು ಬರುತ್ತದೆ ಎಂದು ಗೊತ್ತಿದ್ದರೂ ಅದನ್ನು ನಿಗ್ರಹಿಸಲು ಶ್ರಮವಹಿಸದೇ ಇರುವುದು ವಿಷಾದಕರ ಸಂಗತಿಯಾಗುವುದು. ಸ್ನೇಹಿತರ ನಡುವೆ ಸೈದ್ಧಾಂತಿಕ ಭಿನ್ನತೆ ಬರುವುದು. ಕೊನೆಗೂ ಮನೆಯರು ತೋರಿಸಿದ ಸಂಗಾತಿಯನ್ನೇ ವರಿಸಬೇಕಾಗುವುದು. ಕೆಲವನ್ನು ಅಳೆದು ತೂಗಿ ಮಾತಾನಾಡಿದರೆ ಮಾತ್ರ ನೀವು ಎಲ್ಲರ ಜೊತೆ ಸೌಹಾರ್ದದಿಂದ ಇರಲು ಸಾಧ್ಯ. ಸಂಗಾತಿಯಿಂದ ಧನಸಹಾಯವನ್ನು ಪಡೆಯುವಿರಿ. ಉದ್ಯೋಗವನ್ನು ಬಿಡುವ ಆಲೋಚನೆ ಇದ್ದು, ಮನೆಯ ಸ್ಥಿತಿಯನ್ನು ಕಂಡು ಈ ತೀರ್ಮಾನಕ್ಕೆ ಬರುವುದು ಉತ್ತಮ.
ವೃಶ್ಚಿಕ ರಾಶಿ: ಮೇಲಧಿಕರಿಗಳ ಜೊತೆ ಚರ್ಚೆ ಹಾಗು ಸಭೆಗಳು ನಡೆಯುವುದು. ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಇನ್ನೊಬ್ಬರ ಏಳ್ಗೆಯನ್ನು ಕಂಡು ಮನಸ್ಸಿನಲ್ಲಿ ಸಂಕಟಪಡುವಿರಿ. ಹಿರಿಯರಿಗೆ ಎದುರಾಡುವುದನ್ನು ಕಡಿಮೆ ಮಾಡಿ. ಮಾತಿನಿಂದ ನೀವು ಅನೇಕ ಉತ್ತಮವಾದ ವಿಷಯವನ್ನು ಕಳೆದುಕೊಳ್ಳುವಿರಿ. ಕೋಪವನ್ನು ಆದಷ್ಟು ನಿಯಂತ್ರಣಕ್ಕೆ ತಂದುಕೊಳ್ಳಿ. ಸ್ವಹಿತಾಸಕ್ತಿಯನ್ನು ಬೆಳೆಸಿಕೊಳ್ಳಯವುದು ಮುಖ್ಯ. ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿರದಂತೆ ವರ್ತಿಸುವಿರಿ. ಆ ಸಮಯಕ್ಕೆ ನಿಮಗೆ ಇಷ್ಟವಾದ ಸಂಗತಿಯನ್ನು ಮಾಡಿ. ನಿಮ್ಮ ಹಣವೇ ಆದರೂ ಸಮಯಕ್ಕೆ ಸರಿಯಾಗಿ ಸಿಗದೇಹೋಗಬಹುದು. ನೀವು ಇಂದು ಸೌಂದರ್ಯಕ್ಕೆ ಮನಸೋಲುವಿರಿ. ಅನಪೇಕ್ಷಿತ ವಿಷಯವನ್ನು ಮರೆತುಬಿಡಿ. ಆಯ್ಕೆಗಳ ವಿಚಾರದಲ್ಲಿ ನೀವು ಹಿಂದುಳಿಯಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಮೇಲಧಿಕಾರಿಗಳಿಗೆ ನಿಮ್ಮ ಕಾರ್ಯದ ಒತ್ತಡವನ್ನು ವಿವರಿಸುವಿರಿ.
ಧನು ರಾಶಿ: ವಿವಾಹಕ್ಕಾಗಿ ಹಣ ಕಳೆದುಕೊಳ್ಳುವಿರಿ. ಅಲ್ಪ ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಅಧಿಕವಾದ ಸಂಪತ್ತನ್ನು ಗಳಿಸಬೇಕು ಎನ್ನುವ ಹಂಬಲವಿದ್ದರೂ ಅದನ್ನು ಪಡೆಯಲು ದಾರಿ ಸುಲಭವಿಲ್ಲ ಎಂದು ಅನ್ನಿಸಬಹುದು. ನೀವಾಡುವ ಆಟವು ನಿಮ್ಮ ಮೈ ಮರೆಸಲಿದೆ. ವರ್ತಮಾನದ ಬಾಳಿಗಿಂತ ಭವಿಷ್ಯವು ನಿಮಗೆ ಬಹಳ ರೋಚಕತೆಯದ್ದಾಗಿ ಕಾಣಬಹುದು. ಹಳೆಯ ಸ್ನೇಹಿತೆಯ ನೆನಪು ಮರುಕಳಿಸಬಹುದು. ಇಂದಿನ ಖರ್ಚು ನಿಮ್ಮ ಆದಾಯವನ್ನು ಹೆಚ್ಚು ಮಾಡಲು ಬೇಕಾದ ಫಲವನ್ನು ಕೊಟ್ಟೀತು. ಉಪಯೋಗಿಸದ ವಸ್ತುಗಳನ್ನು ನೀವು ಖರೀದಿಸುವಿರಿ. ಎಲ್ಲರ ಜೊತೆ ವಸ್ತುವನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನಿಮಗೆ ಬೇಕಾದ ವಸ್ತುವು ಸರಿಯಾದ ಸಮಯಕ್ಕೆ ಬಂದೊದಗದು. ತಾಳ್ಮೆಯನ್ನು ಕಳೆದುಕೊಳ್ಳಬಹುದು ಇಂದು. ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಪ್ರೇರಿಸುವಿರಿ. ಅನಿರೀಕ್ಷಿತವಾಗಿ ಹಣವು ಖಾಲಿಯಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು.
ಮಕರ ರಾಶಿ: ವಿಶ್ವಾಸವನ್ನು ಗಳಿಸುವಲ್ಲಿ ಪೂರ್ಣ ಫಲ ನಿಮಗೆ ಸಿಗದು. ನಾಯಕರಾಗಿರುವವರಿಗೆ ಪ್ರಶಂಸೆ ಗೌರವಗಳು ಸಿಗಲಿವೆ. ಮನೆಯವರ ಜೊತೆ ಭವಿಷ್ಯದ ಚಿಂತನೆಯನ್ನು ಮಾಡಬಹುದು. ಕೆಲವು ಕಾಲದ ಚಿಂತನೆಯು ಇಂದು ನಿಮ್ಮಿಂದ ದೂರವಾಗಬಹುದು. ರಾಜಕೀಯವಾಗಿ ನೀವು ಹೊಸದಾರಿಯನ್ನು ಪ್ರಸಿದ್ಧರಾಗಲು ಆಯ್ಕೆ ಮಾಡಿಕೊಳ್ಳಬಹುದು. ಅಪರಿಚಿತ ಪ್ರದೇಶದಲ್ಲಿ ನಿಮಗೆ ದಾರಿ ತಪ್ಪುವುದು. ನಿಮ್ಮನ್ನು ಯಾವುದಾದರೂ ಖಾಸಗಿ ಸಂಸ್ಥೆಗೆ ಮುಖ್ಯಸ್ಥರನ್ನಾಗಿ ಮಾಡಬಹುದು. ಸಣ್ಣ ವಿಚಾರಗಳಿಗೆ ಕೋಪವು ಸಹಜವಾಗಿ ಬಂದರೂ ಅದನ್ನು ಹಿಡಿದಿಟ್ಟುಕೊಳ್ಳಬೇಕಾದೀತು. ಕಳೆದು ಹೋದಮೇಲೆ ಅದನ್ನು ಚಿಂತಿಸಿ ಉಪಯೋಗವಿಲ್ಲ. ನಿಮಗೆ ಏನೂ ಗೊತ್ತಾಗದೇ ಎಲ್ಲವೂ ನಡೆಯುತ್ತದೆ ಎಂವ ಕೋಪ ಇರಬಹುದು. ಪ್ರಮಾಣವಿಲ್ಲದೇ ಏನನ್ನೂ ಕೊಡಲಾರಿರಿ. ಸ್ತ್ರೀಯರಿಂದ ನಿಮ್ಮಬಗ್ಗೆ ಸುಳ್ಳು ಅಪವಾದಬರಬಹುದು. ಮನೆಯಲ್ಲಿ ನಿಮ್ಮ ಒಪ್ಪಿಗೆ ಸಿಗದೇ ಯಾವುದನ್ನೂ ಮಾಡಾರರು.
ಕುಂಭ ರಾಶಿ: ಕೊಟ್ಟು ಕೊಳ್ಳುವ ವಿಚಾರದಲ್ಲಿ ಸಮಾನತೆ ಇರಲಿ. ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಸ್ಥಳಕ್ಕೆ ಹೋಗುವಿರಿ. ಹಣವನ್ನು ನೀವು ಎಂದಿನಂತೆ ಖರ್ಚು ಮಾಡಬಾರದು. ನಿಮ್ಮ ಬೆಂಬಲಕ್ಕೆ ನಿಲ್ಲುವವರು ಯಾರು ಎಂಬ ಕುತೂಹಲವಿದ್ದರೂ ಸಣ್ಣ ಸುಳಿವು ಸಿಗಲಿದೆ. ಸೂಚನೆ ಬರದೇ ಯಾವ ಕಾರ್ಯವನ್ನೂ ಆರಂಭಿಸುವುದು ಬೇಡ. ನಿಮ್ಮ ಮೇಲಿನ ಅಪವಾದವನ್ನು ನೀವು ಕಳೆದುಕೊಳ್ಳಲು ಹೆಚ್ಚು ಮಾತನಾಡುವಿರಿ. ಸಂಗಾತಿಯ ಮೇಲಿನ ಮೋಹದಿಂದ ತಪ್ಪು ಮಾಡುವ ಸಾಧ್ಯತೆ ಇದೆ. ಉನ್ನತ ಸ್ಥಾನಕ್ಕೆ ಹೋಗಲು ಬೇಕಾದ ಅರ್ಹತೆ ಇದ್ದರೂ ನೀವು ಅದನ್ನು ಪಡೆಯಲು ಇಷ್ಟಪಡುವುದಿಲ್ಲ. ಕಷ್ಟವಾದ ಕಾರ್ಯವನ್ನು ಮೊದಲೇ ಮಾಡಿ. ಸಂಗಾತಿಯ ಮನೋಭಾವವನ್ನು ತಿಳಿಯಲು ನೀವು ಕೆಲವು ತಂತ್ರವನ್ನು ಬಳಸುವಿರಿ. ಅಸಹಾಯಕತೆ ಎಂದು ಮನಸಿಗೆ ಅನ್ನಿಸಬಹುದು. ಬಂಧುಗಳ ವಿಶ್ವಾಸವು ಇಂದು ಸಾಬೀತಾಗಬಹುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.
ಮೀನ ರಾಶಿ: ಎಲ್ಲವೂ ಮುಕ್ತಾಯವಾದಮೇಲೆ ಅದರಂತೆ ಇರಬೇಕಾಗುತ್ತದೆ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿ ರಿಂದಲೇ ನೋಡುವುದು ಕಷ್ಟ. ಮಾನವೀಯತೆಯನ್ನು ಕಿಂಚಿತ್ತಾದರೂ ಇರಿಸಿಕೊಳ್ಳಬಹುದು. ಸಂಗಾತಿಯ ಅನಿರೀಕ್ಷಿತ ಮಾತುಗಳು ನಿಮಗೆ ಆಶ್ಚರ್ಯಕರ ಎನಿಸಬಹುದು. ಆಯಾಸದಿಂದ ಇಂದು ಸುಖವಾದ ನಿದ್ರೆಯನ್ನು ಮಾಡುವಿರಿ. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು. ಹತ್ತಿರದವರ ವಿಯೋಗ ಉಂಟಾಗಲಿದೆ. ಲಾಭದಾಯಕವಾದ ಯೋಜನೆಗಳೂ ನಿಮ್ಮನ್ನು ನಷ್ಟದ ಕಡೆಗೆ ಕರೆದೊಯ್ಯುವುದು. ಊಹೆಯಲ್ಲಿ ದಿನ ಕಳೆಯುವುದನ್ನು ಕಡುಮೆ ಮಾಡಿ. ನೆಮ್ಮದಿಗೆ ಬೇರೆ ದಾರಿಯನ್ನು ಕಂಡುಕೊಳ್ಳಲಿದ್ದೀರಿ. ಅತಿಥಿಗಳಿಗೆ ಯೋಗ್ಯ ಸತ್ಕಾರವನ್ನು ಮಾಡಲಿದ್ದೀರಿ. ಅಶುಭವಾದ ಸಂಗತಿಯನ್ನು ಇಂದು ತರಲು ಹೋಗಬೇಡಿ. ಇನ್ನೊಬ್ಬರಿಂದ ನಿಮ್ಮ ಕಾರ್ಯವಾಗಲಿದೆ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣಮಾಡಬೇಡಿ. ದೈವಕೃಪೆ ಸ್ವಲ್ಪ ಕಡಿಮೆ ಇದ್ದು ಅದನ್ನು ಹೆಚ್ಚು ಮಾಡಿಕೊಳ್ಳಿ. ಮಾಡಲೇಬೇಕಾದ ಕಾರ್ಯಗಳ ಬಗ್ಗೆ ಹೆಚ್ಚು ಗಮನ ಅಗತ್ಯ.




