AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ ಮಂಗಳವಾರ ಪಿತ್ತದಿಂದ ರೋಗ, ಜಾಡ್ಯತೆಯ ನಿವಾರಣೆ, ತಂದೆಯಿಂದ ಅಕಾರಣ ನಿಂದನೆ, ಲಾಭ ಪಡೆಯಲು ಹಲವರಿಂದ ತಂತ್ರ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Aug 05, 2025 | 1:00 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಬ್ರಹ್ಮ, ಕರಣ: ವಣಿಜ, ಸೂರ್ಯೋದಯ – 06 : 18 am, ಸೂರ್ಯಾಸ್ತ – 06 : 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:49 – 17:24 ಗುಳಿಕ ಕಾಲ 12:39 – 14:14 ಯಮಗಂಡ ಕಾಲ 09:28 – 11:04

ಮೇಷ ರಾಶಿ: ಯಾವ ಒತ್ತಡವೂ ಇಲ್ಲದೇ ನಿಮ್ಮ ಕೆಲಸ ವೇಗಪಡೆಯದು. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವು ಮತ್ತೆ ಸಿಗುವುದು. ವಿವಾದಗಳಿಂದ ನೀವು ಆತಂಕದಲ್ಲಿ ಇರುವಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನಿಮ್ಮ ಕಾರ್ಯಗಳಿಗೆ ಇಂದು ಸಂಗಾತಿಯು ಬೆಂಬಲ ನೀಡಬಹುದು. ಕಛೇರಿಯಲ್ಲಿ ಉಳಿದ ಕೆಲಸಗಳನ್ನು ಮಾಡಲು ನೀವು ಇಂದು ಆದ್ಯತೆ ನೀಡುವಿರಿ. ಮಾಧ್ಯಮದವರ ಮೇಲೆ ನಿಮಗೆ ಭಯವುಂಟಾಗುವುದು. ಬೇಕಾದ ವಿಷಯದಲ್ಲಿ ಬೇಕಾದಷ್ಟನ್ನು ಮಾತ್ರ ಮಾತನಾಡಿ. ನಿಮ್ಮನ್ನು ನಂಬಿದವರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡಿಕೊಡುವಿರಿ. ನಿಮ್ಮ ಕಲ್ಪನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಯುಕ್ತಿಯಿಂದ ಕೆಲಸವನ್ನು ಮಾಡಿ. ವಾಹನ ಖರೀದಿಗೆ ನಿಮ್ಮ ಬಳಗದ ಸಹಕಾರ ಇರುವುದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ.

ಮಿಥುನ ರಾಶಿ: ದೂರ ಪ್ರಯಾಣ ಹೊರಟ ನಿಮಗೆ ವಾಹನಗಳು ಸರಿಯಾಗಿ ಸಿಗದೇಹೋಗುವುದು. ಕೌಟುಂಬಿಕ ತೊಂದರೆಯನ್ನು ಧಾರ್ಮಿಕ ವಿಧಾನದಿಂದ ಸರಿಮಾಡಿಕೊಳ್ಳುವುದು ಉತ್ತಮ. ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಪ್ರಯತ್ನದಲ್ಲಿ ಇರುವಿರಿ. ಗೃಹ ಕೃತ್ಯಗಳನ್ನು ಪೂರೈಸಲು ಇಂದು ಅನುಕೂಲ ದಿನ. ಯಾರೋ ಕೊಡುವ ದುಡ್ಡಿಗೆ ಕಾಯುವುದು ಬೇಸರವೆನಿಸುವುದು. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಿದ್ದು ನಿಮಗೆ ಗೊತ್ತಾಗಿ ನೀವು ಅವರನ್ನು ದೂರವಿಡುವಿರಿ. ಕೊನೆಯ ಹಂತದಲ್ಲಿ ಆತುರ ತೋರಿ ಎಲ್ಲ ಕಾರ್ಯವನ್ನೂ ವ್ಯತ್ಯಾಸ ಮಾಡುವಿರಿ. ಹೊರ ಬರಲು ಸಮಯವನ್ನು ಕಾಯಬೇಕಾಬಹುದು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ‌. ಹಳೆಯ ನೆನಪಿನಿಂದ ನಿಮಗೆ ಸಂಕಟವಾಗುವುದು. ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡುವುದು ನೆನಪಿನಲ್ಲಿ ಇರಲಿ. ಭೂಮಿಯ ವ್ಯವಹಾರವು ಸ್ವಲ್ಪ ಹಿಮ್ಮುಖವಾಗಿ ಹೋಗಬಹುದು. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ.

ಮಿಥುನ ರಾಶಿ: ಹೇಳಿದ ಸಮಯಕ್ಕೆ ಬರದ ಪ್ರೇಮಿಯ ಮೇಲೆ ಸಿಟ್ಟಾಗುವಿರಿ. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ನಿಮಗೆ ಇಂದು ಧೈರ್ಯವು ಕಡಿಮೆ ಆದಂತೆ ತೋರುತ್ತದೆ. ಸರ್ಕಾರದಿಂದ ಬರುವ ಹಣಕ್ಕೆ ಕಾನೂನು ಮೆಟ್ಟಿಲೇರುವ ಸಂದರ್ಭ ಬರಬಹುದು. ಯಾವ ಕೆಲಸವನ್ನೂ ನೀವು ಭಯಮುಕ್ತವಾಗಿ ಮಾಡಲಾರಿರಿ. ಆಸ್ತಿಯನ್ನು ಇನ್ನೊಬ್ಬರು ಒಡೆದುಕೊಳ್ಳಲು ಸಂಚು ರೂಪಿಸುತ್ತಿರುವರು. ಆಹಾರವು ನಿಮಗೆ ಸರಿಯಾದ ಸಮಯಕ್ಕೆ ಸಿಗದು. ನಿಮ್ಮ ಬೇಜವಾಬ್ದಾರಿಯ ಮಾತುಗಳು ನಿಮ್ಮ ಉದ್ಯೋಗಕ್ಕೆ ತೊಂದರೆಯಾಗುವುದು. ಹೇಳಿದ ಕೆಲಸವನ್ನು ನಿಮಗೆ ಮಾಡಲಾಗದೇ ಒರಟಾಗಿ ಮಾತನಾಡುವಿರಿ. ಆಲಸ್ಯದಿಂದ ಹೊರಬಂದರೆ ನಿಮಗೆ ಹತ್ತಾರು ದಾರಿಗಳು ಕಾಣಿಸಿಕೊಂಡಾವು. ಮಿತಿ ಮೀರಿದ ನಿಮ್ಮ ವರ್ತನೆಯು ಕಿರಿಕಿರಿಯನ್ನು ಉಂಟುಮಾಡೀತು. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಇಷ್ಟದವರನ್ನು ಭೇಟಿ ಮಾಡುವ ತವಕ.

ಕರ್ಕಾಟಕ ರಾಶಿ: ನಿಮ್ಮ ವಸ್ತುವನ್ನು ಮಾರಾಟ ಮಾಡಿಸಿಕೊಟ್ಟಿದ್ದಕ್ಕೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ‌ ಕಾಣಿಸುವುದು. ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದೂ ಮುಖ್ಯವಾಗಲಿದೆ. ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದು ಸಾಧಿಸುವಿರಿ. ನಿಮ್ಮ ಗೌಪ್ಯತೆಯನ್ನು ಕಾಪಾಡಲು ನೀವು ವಿಫಲರಾಗುವಿರಿ. ಉದ್ಯೋಗದಲ್ಲಿ ನೀವು ದಿಕ್ಕು ತೋಚದೆ ಬಹಳ ಆತಂಕ ಪಡುವಿರಿ. ನಿಮ್ಮದೇ ಆದ ಕೆಲಸಗಳು ನಿಮಗೆ ಬೇಕಾದಷ್ಟು ಇದ್ದರೂ ನೀವು ಅವುಗಳನ್ನು ಲೆಕ್ಕಿಸದೇ ನೀವು ಆರಾಮಾಗಿ ಇರುವಿರಿ. ಏಕಾಗ್ರತೆಯು ನಿಮ್ಮ ಕೆಲಸಕ್ಕೆ ಅತ್ಯುಪಕಾರಿಯಾಗಿದೆ. ವಿದೇಶಕ್ಕೆ ಹೋಗುವ ಸೂಚನೆ ಇಂದು ಸಿಗಬಹುದು. ಮಕ್ಕಳಿಂದ ಸ್ವಲ್ಪ ಕಿರಿಕಿರಿಯಾದೀತು. ಮಾತನಾಡದೇ ನಿಮ್ಮ ಕೆಲಸದಲ್ಲಿ ಮಗ್ನರಾಗಿರಿ. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಇನ್ನೊಬ್ಬರಿಂದ ನಿಮಗೆ ಉತ್ತೇಜನ ಸಿಗಲಿದೆ. ಸಹೋದ್ಯೋಗಿಗಳ ಬಗ್ಗೆ ನಿಮಗೆ ಅನಾದರ ಬರಬಹುದು.

ಸಿಂಹ ರಾಶಿ: ಮನೆಗೆ ಬಂದು ಹಣ ಕೇಳುವವರಿಗೆ ಏನನ್ನೂ ಕೊಡದೇ ಕಳುಹಿಸುವಿರಿ. ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು. ನಿಮ್ಮರ ಜೊತೆ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ನಿಮ್ಮ ಜೊತೆ ಕೆಲಸ ಮಾಡುವವರೂ ನಿಮ್ಮ ವರ್ತನೆಯನ್ನು ಸಹಿಸಲಾರದೇ ದೂರ ಉಳಿಯಬಹುದು. ನೀವು ಮಾಡಿಸಿದ ಮನೆಯ ಕೆಲಸವನ್ನು ಅಲ್ಲಗಳೆಯುವ ಕುಟುಂಬದವರಿಗೆ ಏನೂ ಉತ್ತರ ಕೊಡಲಾಗದು. ಹೂಡಿಕೆಯಿಂದ ನಿಮಗೆ ಆರ್ಥಿಕ ತೊಂದರೆ ಅನಿಸುವುದು. ಆಂತರಿಕ ಕಲಹವು ಅತಿಯಾದ ವ್ಯಥೆಯನ್ನು ಉಂಟುಮಾಡೀತು. ತುರ್ತು ಖರ್ಚಿಗೆ ಯಾರನ್ನಾದರೂ ಆಶ್ರಯಿಸುವಿರಿ. ಸೌಂದರ್ಯಕ್ಕೆ ಮನಸೋಲುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಮೇಲೆ ಆದಷ್ಟು ನಿಯಂತ್ರಣವಿರಲಿ. ಬೇಡದ್ದರ ಕಡೆಗೆ ಮನಸ್ಸನ್ನು ಹರಿಸುವುದು ಬೇಡ. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಮಕ್ಕಳಿಗೆ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತೆಯಿಂದ ಇರುವುದು ಸುಖವೆನಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು.

ಕನ್ಯಾ ರಾಶಿ: ನಿಮ್ಮ ಬಗೆಗಿನ ಅಭಿಮಾನವನ್ನು ದೂರವಾಗಿಸಿಕೊಳ್ಳುವುದು ಕಷ್ಟ. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ದೀರ್ಘ ಮಾಡಿಕೊಂಡು ದಿನವನ್ನು ಹಾಳುಮಾಡಿಕೊಳ್ಳಬೇಕಾಗುವುದು. ಅನೀಕ್ಷಿತ ತಿರುವುಗಳು ನಿಮಗೆ ಬಹಳ ಉದ್ವೇಗವನ್ನು ಉಂಟುಮಾಡೀತು. ಮುಂಗಡ ಕೊಟ್ಟು ಮೋಸ ಹೋಗುವ ಸ್ಥಿತಿ ಬರಲಿದೆ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಪಕ್ಷಪಾತಕ್ಕೆ ಸಂಬಂಧಿಸಿದಂತೆ ಅಪವಾದಗಳು ಕೇಳಿಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಸದಾ ಇಟ್ಟಕೊಳ್ಳಬೇಕಾದೀತು. ದೂರ ಪ್ರಯಾಣವನ್ನು ಮಾಡುವ ಉತ್ಸಾಹವಿಲ್ಲದಿದ್ದರೂ ಮಾಡಬೇಕಾಗುವುದು. ಮಕ್ಕಳ ಜೊತೆಗಿನ ಸಲುಗೆಯು ನಿಮಗೆ ಕಷ್ಟವಾದೀತು. ಕೆಟ್ಟ ಕೆಲಸಗಳು ನಿಮ್ಮನ್ನು ಆಕರ್ಷಿಸಬಹುದು. ಸ್ವಂತಿಕೆಯನ್ನು ಇಲ್ಲಿ ಉಪಯೋಗಿಸಿ ಕೆಲಸಮಾಡಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ಮಕ್ಕಳ ತೀರ್ಮಾನಕ್ಕೆ ನೀವು ಬದ್ಧರಾಗಬೇಕಾಗುವುದು.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!