Horoscope: ರಾಶಿಭವಿಷ್ಯ, ಈ ರಾಶಿಯವರು ಇತರರೊಂದಿಗೆ ಜಾಣ್ಮೆಯಿಂದ ವ್ಯವಹಾರಿ, ಲಾಭ ನಿಮ್ಮದಾಗಲಿದೆ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 01) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರು ಇತರರೊಂದಿಗೆ ಜಾಣ್ಮೆಯಿಂದ ವ್ಯವಹಾರಿ, ಲಾಭ ನಿಮ್ಮದಾಗಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 01, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 01 ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 21ಕ್ಕೆ, ರಾಹು ಕಾಲ ಸಂಜೆ 04:52 – 06:21ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:22 – 01:52ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:22 – 04:52ರ ವರೆಗೆ.

ಮೇಷ ರಾಶಿ: ಹಿರಿಯರ ಆರೋಗ್ಯದ ಬಗ್ಗೆ ಸಮಸ್ಯೆಯಿಂದಾಗಿ ಓಡಾಟವನ್ನು ಮಾಡಬೇಕಾದೀತು. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರವು ಸ್ಪಷ್ಟವಾಗಿ ಇರಲಿದೆ. ಬೇಕಾದಷ್ಟನ್ನೇ ಮಾತನಾಡಿ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬೇಡ. ಇಂದಿನ ಲೆಕ್ಕಾಚಾರದಿಂದ ಧನವ್ಯಯದ ಮಾಹಿತಿಯು ಸಿಗುವುದು. ಇದರಿಂದ ನೀವು ಅಚ್ಚರಿಗೊಳ್ಳುವಿರಿ.

ವೃಷಭ ರಾಶಿ: ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡಲಿದೆ. ನಿಮ್ಮನ್ನು ಅಪಹಾಸ್ಯ ಮಾಡಲಿದ್ದು ನಿಮಗೆ ಕೋಪ ಬರುವುದು. ಏನಾದರೂ ನೆಪ ಹೇಳಿ ಇಂದಿನ ಪ್ರಯಾಣವನ್ನು ಮಾಡಲಾರಿರಿ. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕಬೇಕಾದೀತು. ಉಪಕಾರದ ಸ್ಮರಣೆಯನ್ನು ಮರೆಯುವಿರಿ. ಇಂದು ಸಿಟ್ಟನ್ನು ನಿಮ್ಮ ಹಿಡಿತದಲ್ಲಿ ಇರಿಸಿಕೊಳ್ಳಿ. ಸುತ್ತಾಡುವ ಮನಸ್ಸಾದೀತು. ಏಕಾಂತ ನಿಮಗೆ ನೀವು ಇಷ್ಟವಾಗದು.

ಮಿಥುನ ರಾಶಿ: ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ನಿಮ್ಮ ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ‌ ಮೇಲೆ ಅನುಮಾನ‌ಪಡುವಿರಿ. ಸಾಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ. ಸ್ತ್ರೀಯರ ಮೇಲೆ ನಿಮಗೆ ದಯೆ ಕಡಿಮೆ ಆದೀತು. ಸಹೋದರನಿಗೆ ಧನದ ಸಹಾಯವನ್ನು ಮಾಡುವಿರಿ. ಅನಿರೀಕ್ಷಿತ ವಾರ್ತೆಗಳು ನಿಮಗೆ ದುಃಖವನ್ನು ಕೊಡಬಹುದು. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ.

ಕಟಕ ರಾಶಿ: ಇಂದು ನೀವು ಹೂಡಿಕೆಯ ಮುಖಾಂತರ ಆರ್ಥಿಕ ಸಬಲತೆಯನ್ನು ಪಡೆಯಲು ಯೋಚಿಸುವಿರಿ. ನಿಮ್ಮ ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಬಹಳ ಉತ್ಸಾಹದಿಂದ ಇರುವಿರಿ. ಅಪರಿಚಿತರಿಂದ ಅಗತ್ಯ ಸಹಕಾರವನ್ನು ಪಡೆಯುವಿರಿ. ನೀವು ಹೊಸ ವಾಹನವನ್ನು ಒತ್ತಾಯಕ್ಕೆ ಖರೀದಿ ಮಾಡುವಿರಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು. ಇಂದು ಹೆಚ್ಚು ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಆದಾಯವನ್ನು ಹೆಚ್ಚಿಸಲು ಮತ್ತೊಂದು ಉದ್ಯೋಗವನ್ನುಬದಲಾಯಿಸಲು ಪರಿಗಣಿಸಬಹುದು.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ