AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಉದ್ಯೋಗದ ಸ್ಥಳದಲ್ಲಿ ನಿಮಗೆ ಮುಜುಗರ ಉಂಟಾಗಬಹುದು, ಧೈರ್ಯ ಕಳೆದುಕೊಳ್ಳಬೇಡಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 06) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಉದ್ಯೋಗದ ಸ್ಥಳದಲ್ಲಿ ನಿಮಗೆ ಮುಜುಗರ ಉಂಟಾಗಬಹುದು, ಧೈರ್ಯ ಕಳೆದುಕೊಳ್ಳಬೇಡಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 06, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 06 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:57 ರಿಂದ 09:23 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:50 ರಿಂದ ಮಧ್ಯಾಹ್ನ 12:16 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ.

ಮೇಷ ರಾಶಿ: ವೃತ್ತಿಯಲ್ಲಿ ಪ್ರಂಶಸೆ ಸಿಕ್ಕಿರುವುದು ನಿಮ್ಮ ಕಾರ್ಯದ ವೈಖರಿಯನ್ನು ತೋರಿಸುವುದು. ಶುಭ ಸಮಾರಂಭಕ್ಕೆ ಹೋಗುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ‌ ಸಹಾಯವು ಸಿಗಲಿದೆ.‌ ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು‌ ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ಸಹೋದ್ಯೋಗಿಗಳ ಮಾತಿನ ಬಗ್ಗೆ ಅಧಿಕವಾಗಿ ಪ್ರತಿಕ್ರಿಯೆ ಬೇಡ. ನೌಕರರ ಮೇಲೆ ನಿಮ್ಮದೊಂದು ಲಕ್ಷ್ಯ ಇರಬೇಕಾಗುವುದು. ಇಂದಿನ ಕೆಲವು ಸಂದರ್ಭದಲ್ಲಿ ಮೌನವಾಗಿ ಇರುವಿರಿ. ವ್ಯಾಪಾರವು ವಿದೇಶೀಯ ಸಂಪರ್ಕದಿಂದ ಹೆಚ್ಚು ಲಾಭದಾಯಕವಾದೀತು.

ವೃಷಭ ರಾಶಿ: ಸಾಲಗಾರರಿಂದ ನಿಮ್ಮ ಮಾನಸಿಕ ಸ್ಥಿತಿಯು ಕೆಡಬಹುದು. ಯಾರದೋ ತಪ್ಪಿಗೆ ನೀವು ತಲೆಕೊಡಬೇಕಾದೀತು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಿಗಬೇಕಾದ ಲಾಭದಿಂದ ವಂಚಿತರಾಗಲಿದ್ದೀರಿ. ಅನಪೇಕ್ಷಿತ ವಿಚಾರದಲ್ಲಿ ಹೆಚ್ಚು ಮನಸ್ಸು ಇರುವುದು. ಉಸಿರಾಟ ತೊಂದರೆಯು ಸ್ವಲ್ಪ ಕಾಣಿಸಿಕೊಳ್ಳಬಹುದು. ನೆರೆಹೊರೆಯ ವಿಚಾರದಲ್ಲಿ ಅಸಮಾಧಾನ ಇರಲಿದೆ. ಸಾಮಾಜಿಕ ಕಾರ್ಯಕ್ಕೆ ಇಂದು ಸಮಯವು ಸಿಗದು. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು.

ಮಿಥುನ ರಾಶಿ: ಉಸಿರಾಟದ ತೊಂದರೆಯು ಕಾಣಿಸಿಕೊಳ್ಳುವುದು. ಪ್ರಾಣಾಯಾಮವು ನಿಮಗೆ ಹಿತಕಾರಿಯಾದೀತು. ಹಣವು ವ್ಯಯವಾಗಬಹುದು. ಕಳ್ಳರ ಭೀತಿಯು ಇರಲಿದೆ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ‌ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ‌ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಕಲಹವಾಗಿ ಪರಿಣಮಿಸೀತು. ಒಬ್ಬರಾದರೂ ತಟಸ್ಥರಾಗಿರುವುದು ವಿವಾದವು ಆಗದಂತೆ ನೋಡಿಕಳ್ಳಬಹುದು. ಮಹಾವಿಷ್ಣುವಿನ ಆರಾಧನೆಯು ಸಂಕಷ್ಟವನ್ನು ಸಹಿಸುವ ಶಕ್ತಿಯನ್ನು ಕೊಡುವುದು.

ಕಟಕ ರಾಶಿ: ಉದ್ಯೋಗದ ಸ್ಥಳದಲ್ಲಿ ನಿಮಗೆ ಮುಜುಗರದ ಸಂದರ್ಭವು ಬರಬಹುದು. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ವ್ಯಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡಯಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ದೇವರ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ.‌ ಮಹಾಗೌರಿಯು ನಿಮ್ಮ ಇಷ್ಟಾರ್ಥವನ್ನು ಪೂರ್ಣಗೊಳಿಸುವಳು.

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು