AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಬರಬಹುದು

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಬರಬಹುದು
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 28, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 28 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಆತುಷ್ಮಾನ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹುಕಾಲ ಬೆಳಿಗ್ಗೆ 07:54 ರಿಂದ 09:27ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:00 ರಿಂದ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 14:07 ರಿಂದ 15:40ರ ವರೆಗೆ.

ಮೇಷ ರಾಶಿ : ಅನ್ಯ ಮಾರ್ಗದಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸರ್ಕಾರದ ಕೆಲಸವನ್ನು ಒತ್ತಡದಿಂದ ಮಾಡಿಸಿಕೊಳ್ಳುವಿರಿ. ಸಾಲವಾಗಿ ಯಾರಿಗೂ ಹಣವನ್ನು ಕೊಡುವುದು ಬೇಡ. ದುರಭ್ಯಾಸವನ್ನು ರೂಢಿಸಿಕೊಳ್ಳಲಿದ್ದೀರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಇಂದು ಮಾಡಬೇಕು ಎಂದುಕೊಂಡ ಕೆಲಸವನ್ನು ಮುಂದೂಡುವಿರಿ. ಮಾತು ಉದ್ವೇಗದಿಂದ ಇರಲಿದೆ. ಬಂಧುಗಳ ಭೇಟಿಯು ಸಂತೋಷವನ್ನು ಕೊಡುವುದು. ಸ್ನೇಹವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾರಿರಿ. ಆರೋಗ್ಯವು ಮಧ್ಯಮ ಸ್ಥಿತಿಯಲ್ಲಿ ಇರಲಿದೆ. ಭಾವನಾತ್ಮಕ ವಿಚಾರಗಳಿಗೆ ಕರಗುವಿರಿ.

ವೃಷಭ ರಾಶಿ : ನಿಮ್ಮರೇ ಆದರೂ ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡುವರು. ಮನೆಯ ವಾತಾವರಣವು ಸಂತೋಷವನ್ನು ಕೊಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು.‌ ಇದು ಅಹಂಕಾರದಂತೆ ತೋರುವುದು. ಹಿತಶತ್ರುಗಳು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಮನಸ್ಸು ಬಹಳ ಚಂಚಲವಾಗುವುದು. ಕೇಳಿದವರಿಗೆ ಸಹಾಯವನ್ನು ಮಾಡುವಿರಿ. ಸಂಶೋಧನೆಯಲ್ಲಿ ನಿಮಗೆ ಆಸಕ್ತಿ ಬರಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇರಲಿದೆ. ಅರ್ಧವಾದ ಕಾರ್ಯವನ್ನು ಮುಂದುವರಿಸುವಿರಿ. ಅನಾರೋಗ್ಯದ ಕಾರಣ ವಿಶ್ರಾಂತಿಯ ಅವಶ್ಯಕತೆ ಇರಲಿದೆ.

ಮಿಥುನ ರಾಶಿ : ದಾಂಪತ್ಯದಲ್ಲಿ ಪ್ರೀತಿಯು ಕಡಿಮೆ ಆಗಬಹುದು. ಹೊಸ ಉದ್ಯೋಗದ ಸ್ಥಳವು ನಿಮಗೆ ಉತ್ಸಾಹವನ್ನು ಕೊಡುವುದು.‌ ಹೊಸ ಸ್ನೇಹ ಬಳಗವನ್ನೂ ಕಟ್ಟಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ನಿಮಗೆ ಸಿಗಲಿದೆ. ಸ್ವಭಾವದಲ್ಲಿ ಬದಲಾವಣೆಯಾಗಲಿದೆ. ನಿಮ್ಮ‌ ಮಾತಿಗೆ ಬೆಲೆಯು ಕಡಿಮೆ ಆಗಬಹುದು. ಯಾರನ್ನೂ ಅಪಹಾಸ್ಯ ಮಾಡುವುದು ಬೇಡ. ದೇವರ ಮೇಲೆ‌ ಶ್ರದ್ಧೆಯು ಅಧಿಕವಾಗುವುದು. ಮಾತುಗಾರರಾಗಿದ್ದರೆ ಉತ್ತಮ‌ ಅವಕಾಶಗಳು ಸಿಗಲಿವೆ. ಕೋಪವನ್ನು ತೋರಿಸುವುದು ಬೇಡ. ಮಾತಿನಲ್ಲಿ ಅಧಿಕಾರದ ಗತ್ತು ಕಾಣಿಸುವುದು.

ಕಟಕ ರಾಶಿ : ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಬರಬಹುದು. ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ. ಅಪರಿಚಿತರು ಆಪ್ತರೆಂದು ಬರಬಹುದು. ನಿಮ್ಮದೇ ಸತ್ಯವೆಂದು ವಾದಿಸುವುದು ಸರಿಯಾಗದು. ಬಂಧುಗಳ ಜೊತೆ ಔಚಿತ್ಯಪೂರ್ಣವಾದ ಮಾತುಗಳನ್ನು ಆಡಿ. ನಿಮ್ಮ ವೈಫಲ್ಯವನ್ನು ಸರಿ ಮಾಡಿಕೊಳ್ಳಿ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಗೌರವವು ಕಡಿಮೆ ಆಗಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮಿಸುವಿರಿ. ಸರಳತೆಯು ನಿಮಗೆ ಇಷ್ಟವಾಗದು. ನೇರ ನುಡಿಯಿಂದ ಬೇಸರವು ಉಂಟಾದೀತು.

ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ