Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 03, 2023 | 12:10 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 3 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತೃತೀಯಾ, ನಿತ್ಯನಕ್ಷತ್ರ: ರೇವತೀ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:10 ರಿಂದ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:32 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:37 ರಿಂದ 05:10ರ ವರೆಗೆ.

ಮೇಷ ರಾಶಿ: ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಪ್ರೇರಣೆಯನ್ನು ನೀಡದು. ಶತ್ರುಗಳ ಭಯದಿಂದ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ನಿಮ್ಮ ಒತ್ತಡಗಳನ್ನು ಎಲ್ಲವನ್ನು ಮರೆತು ನಿಶ್ಚಿಂತೆಯಿಂದ ಇಂದಿನ‌ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ತೊಂದರೆಯಾಗಬಹುದು. ‌ಸಂಗಾತಿಯನ್ನು ಕಡೆಗಣಿಸಿ ನಿಮಗೆ ಬೇಸರವಾಗಬಹುದು. ಧಾರ್ಮಿಕ ಸ್ಥಳಗಳಿಗೆ ಹೋಗಿ ಬರುವಿರಿ. ತಾಯಿಯ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿಚಾರಗಳು ತಪ್ಪಾಗಿ ಇರಬಹುದು. ಸಿಕ್ಕ ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳಲು ಆಲೋಚಿಸುವಿರಿ.

ವೃಷಭ ರಾಶಿ: ನಿಮ್ಮ ಸಲಹೆಯನ್ನು ಪಡೆಯದೇ ಇರುವುದಕ್ಕೆ ನಿಮಗೆ ಬೇಸರವಾಗುವುದು. ನೌಕರರು ನಿಮ್ಮ ಮೇಲೆ‌ ಮುನಿಸಿಕೊಂಡಾರು. ಸೌಕರ್ಯಕ್ಕೆ ತಕ್ಕ ಹಾಗೆ ದಿನಚರಿಯನ್ನು ಬದಲಿಸಿಕೊಳ್ಳುವಿರಿ. ಇಂದು ಜೀವನವು ಹೊಸ ತಿರುವನ್ನು ಪಡೆದುಕೊಳ್ಳುವುದು. ಹೊಸ ವ್ಯಕ್ತಿಗಳ ಪರಿಚಯವು ನಿಮಗೆ ಆಗುವುದು. ಇಂದು ನಿಮ್ಮ ಸಂಗಾತಿಯಿಂದ ಕೆಲವು ವಿಚಾರಗಳಿಗೆ ಸಲಹೆಯನ್ನು ಪಡೆಯುವಿರಿ. ನಿಮ್ಮ ಮನೆ ಕೆಲಸವು ಇಂದು ಅರ್ಧಕ್ಕೆ ನಿಲ್ಲಬಹುದು. ಪ್ರಭಾವಿ ವ್ಯಕ್ತಿಗಳ ಜೊತೆ ಸಾಮಾಜಿಕ‌ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಕಂಪ ಇರಲಿದೆ.

ಮಿಥುನ ರಾಶಿ: ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ‌ಫಲಿತಾಂಶವು ಸಿಗುವುದು. ಆಕಸ್ಮಿಕ ಧನಲಾಭದಿಂದ ನಿಮಗೆ ಸಂತೋಷವಾಗಲಿದೆ. ಹಿರಿಯರ ಬಗ್ಗೆ ನಿಮಗೆ ಪೂಜ್ಯ ಭಾವವು ಇರುವುದು. ನಿಮ್ಮವರ ಬಳಿ ಇಂದು ಧನ ಸಹಾಯವನ್ನು ಕೇಳುವಿರಿ. ಅನ್ಯ ಆಲೋಚನೆಯಿಂದ ನಿದ್ರೆಗೆ ತೊಂದರೆ ಆಗಬಹುದು. ಅನವಶ್ಯಕ ಮಾತುಗಳು ವಿವಾದಕ್ಕೆ ಕಾರಣವಾಗುವುದು. ಹಂಚಿಕೊಂಡು ಮಾಡುವ ಕೆಲಸವು ಸಂತೋಷವನ್ನು ನೀಡುವುದು ಹಾಗೂ ವೇಗವಾಗಿ ಕಾರ್ಯವು ಆಗುವುದು. ಧಾರ್ಮಿಕವಾದ ಆಚರಣೆಗಳಲ್ಲಿ ತೊಡಗುವಿರಿ.

ಕಟಕ ರಾಶಿ: ಹಣಕಾಸಿನ ವಿಚಾರದಲ್ಲಿ ನಿಮಗೆ ಮಿತ್ರರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವ ಇರಿ. ಸ್ತ್ರೀಯರಿಗೆ ಸಂತೋಷದ ದಿನವಾಗುವುದು. ಎಲ್ಲರೆದುರೂ ಕೋಪಗೊಂಡು ಕೂಗಾಡುವಿರಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅಗತ್ಯ. ನಿಮ್ಮ ಪ್ರಾಮಾಣಿಕ ಮಾತುಗಳು ಹಣವನ್ನು ಸಾಲವಾಗಿ ಕೊಟ್ಟವರಿಗೆ ನಂಬಿಕೆ ತರಲಿದೆ. ಅಪರಿಚಿತರಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೆರಮನೆಯರ ಜೊತೆ ಕಲಹವಾಗಲಿದೆ. ನಿಮ್ಮ ಮಾತುಗಳು ಸಂತೋಷವನ್ನು ಕೊಡದೇ ಇರಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ.