Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2023 | 12:10 AM

ಶುಭೋದಯ ಓದುಗ ಗೆಳೆಯರೇ! ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03: 47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ.

ಮೇಷ: ಏನೇ ಅಂದರೂ ನಿಮ್ಮ ಮಾತನ್ನು ಕೇಳುವ ಮನಃಸ್ಥಿತಿಯು ಇರುವುದಿಲ್ಲ. ಎಂದಿನಂತೆ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮದಲ್ಲದ ವಿಚಾರವಾದರೂ ನಿಮ್ಮಲ್ಲಿಗೆ ಅದು ಬರಲಿದೆ. ಸಮಾರಂಭದಲ್ಲಿ ಉತ್ತಮ‌ಭೋಜನ ಸಿಗಲಿದೆ. ಮಾನಸಿಕ ಸಂತೋಷವನ್ನು ಹೆಚ್ಚು ಮಾಡಿಕೊಳ್ಳಲು ಏಕಾಂತವನ್ನು ಬಯಸಬಹುದು. ಸ್ನೇಹಿತರನ್ನು ಕಳೆದುಕೊಳ್ಳಲು ನೀವು ಕಷ್ಟಪಡುವಿರಿ. ಶುಭವಾರ್ತೆಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಪಂಚಮಾಧಿಪತಿಯಾದ ರವಿಯು ತೃತೀಯಸ್ಥಾನವನ್ನು ಪ್ರವೇಶಿಸುವನು.

ವೃಷಭ: ಸೋಲನ್ನು ಒಪ್ಪಿಕೊಳ್ಳಲು ನೀವು ತಯಾರಿರುವುದಿಲ್ಲ. ಸಂಗಾತಿಯನ್ನು ಸಂತೋಷಪಡಿಸಲು ಏನನ್ನಾದರೂ ಮಾಡಲಿದ್ದೀರಿ. ಸ್ನೇಹಿತರ ಸಹವಾಸವು ನಿನಗೆ ಸಾಕೆನಿಸಬಹುದು. ಕೋಪದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಇದೆ. ಮನೆಯಲ್ಲಿ ಇದ್ದು ಕುಟುಂಬದವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಕಷ್ಟವಾದರೂ ಇಂದು ಪ್ರಯಾಣವನ್ನು ಮಾಡಲೇ ಬೇಕಾಗಿಬರಲಿದೆ. ಎಲ್ಲರನ್ನೂ ಸಮಾಧಾನ ಮಾಡಲು ನಿಮ್ಮಿಂದ ಆಗದು. ಉದ್ಯೋಗವನ್ನು ಬಿಡುವ ಯೋಚನೆಯನ್ನು ಬಿಡುವುದು ಒಳ್ಳೆಯದು. ಚತುರ್ಥಾಧಿಪತಿಯು ದ್ವಿತೀಯಕ್ಕೆ ಮಾಡುವನು.

ಮಿಥುನ: ನಿಮ್ಮ ಬಳಿ ಕೆಲವರು ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ಬರಬಹುದು. ಖರ್ಚಿನ ಮೇಲೆ‌ ನೀವು ಹಿಡಿತ ಸಾಧಿಸಲು ಪ್ರಯತ್ನಿಸುವಿರಿ. ಸ್ವಾರಸ್ಯಕರ ಸಂಗತಿಗಳು ನಿಮಗೆ ಸಹಜದಂತೆ ಆಗಬಹುದು. ಶತ್ರುಗಳ ಮುಂದೆ ನಿಮ್ಮ ಉನ್ನತಿಯು ಬಹಳ ಅಸೂಯೆಯನ್ನು ತರಿಸಬಹುದು. ಮಕ್ಕಳ ಮಾತುಗಳು ನಿಮಗೆ ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಕರ್ತವ್ಯವನ್ನು ಲೋಪವಿಲ್ಲದಂತೆ ಮಾಡಿ. ನಿಮ್ಮದೇ ಸಮಸ್ಯೆಗಳ ನಡುವೆ ಮುಳುಗಿಹೋಗಿದ್ದೀರಿ. ನಿಮಗೆ ಸಹಾಯಹಸ್ತವನ್ನು ನೀಡುವ ಅವಶ್ಯಕತೆ ಇದೆ. ತೃತೀಯಾಧಿಪತಿಯು ನಿಮ್ಮ ಮನೆಗೇ ಬರಲಿದ್ದಾನೆ.

ಕರ್ಕ: ಶಿಕ್ಷಣವನ್ನು ನೀವು ಹೊಸ ರೀತಿಯಲ್ಲಿ ಕೊಡಲು ಪ್ರಾರಂಭಿಸಬಹುದು. ಸಂಗಾತಿಯ ಸಲಹೆಯನ್ನು ನೀವು ಸ್ವೀಕರಿಸುವಿರಿ. ಹೊಸ ಉದ್ಯಮವು ಬಹಳ ಸಂತೋಷದಿಂದ ನಡೆಯಲಿದೆ. ಶತ್ರುಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ತೊಂದರೆಯಾಗದಂತೆ ಸರಿ ಮಾಡಿಕೊಳ್ಳಿ. ಮಕ್ಕಳಿಂದ‌ ಸಂತೋಷವಾರ್ತೆಯನ್ನು ನೀವು ನಿರೀಕ್ಷಿಸಬಹುದು. ನಿಮ್ಮ ವಸ್ತುಗಳನ್ನು ಇನ್ನೊಬ್ಬರಿಗೆ ಕೊಟ್ಟು ಸಂತೋಷಪಡುವಿರಿ. ಕೆಲವು ಸಂದರ್ಭದಲ್ಲಿ ನಿಮ್ಮ ಬುದ್ಧಿಯು ಕೆಲಸಮಾಡದೇ ಇದ್ದೀತು. ಅಂದುಕೊಂಡ ಕಾರ್ಯವು ಸ್ವಲ್ಪ ಪೂರ್ಣವಾಯಿತು ಎಂಬ ಸಂತೃಪ್ತಿ ಇರಲಿದೆ. ದ್ವಿತೀಯಾಧಿಪತಿಯು ದ್ವಾದಶದಲ್ಲಿ ಇರುವನು.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ